ಇಂಟರ್‌ನೆಟ್‌ ಸೇವೆಗೆ ಟಾಟಾ ಸಜ್ಜು: ನೆಟ್​ವರ್ಕ್ ಇಲ್ಲದೆಯೂ ಸಿಗಲಿದೆ ಅಂತರ್ಜಾಲ ಸೇವೆ

ಈಗಾಗಲೇ ಟೆಲಿಕಾಂ ಕಂಪೆನಿಗಳಾದ ಏರ್​ಟೆಲ್, ಜಿಯೋ ಕೂಡ ತಮ್ಮ ಬಳಕೆದಾರರಿಗೆ ಯಾವುದೇ ಅಡೆತಡೆ ಇಲ್ಲದೆ ಇಂತಹದೊಂದು ಸೇವೆ ನೀಡಲು ಕೂಡ ಉತ್ಸುಕವಾಗಿದೆ.

ಇಂಟರ್‌ನೆಟ್‌ ಸೇವೆಗೆ ಟಾಟಾ ಸಜ್ಜು: ನೆಟ್​ವರ್ಕ್ ಇಲ್ಲದೆಯೂ ಸಿಗಲಿದೆ ಅಂತರ್ಜಾಲ ಸೇವೆ
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಝಾಹಿರ್ ಯೂಸುಫ್

Updated on: Aug 12, 2021 | 7:19 PM

ಪ್ರಸ್ತುತ ಡಿಜಿಟಲ್ ಯುಗದಲ್ಲಿ ಇಂಟರ್​ನೆಟ್ ಸಮಸ್ಯೆಯನ್ನು ಎದುರಿಸದವರು ಯಾರು ಇಲ್ಲ ಅನ್ನಬಹುದು. ಅದರಲ್ಲೂ ಮೊಬೈಲ್ ನೆಟ್​ವರ್ಕ್​ ಸಿಗದೇ ಇಂಟರ್​ನೆಟ್​ಗಾಗಿ ಪರಿಪಾಟಲು ಪಟ್ಟವರೇ ಹೆಚ್ಚು. ಆದರೆ ಈ ಎಲ್ಲಾ ಸಮಸ್ಯೆಗಳಿಗೆ ಇತಿಶ್ರೀ ಹಾಡಲು ಮುಂದಾಗುತ್ತಿದೆ ವಿಶ್ವದ ಪ್ರಮುಖ ಕಂಪೆನಿಗಳು. ಹೌದು, ಇಂಟರ್​ನೆಟ್ ಸಮಸ್ಯೆಗೆ ಮುಕ್ತಿ ನೀಡಲು ಸ್ಯಾಟಲೈಟ್​ ಇಂಟರ್​ನೆಟ್ ವ್ಯವಸ್ಥೆ ರೂಪಿಸಲು ಪ್ರಮುಖ ಕಂಪೆನಿಗಳು ಸಜ್ಜಾಗಿ ನಿಂತಿದೆ. ಇದರಲ್ಲಿ ಟಾಟಾ ಗ್ರೂಪ್ ಕೂಡ ಇರುವುದು ವಿಶೇಷ. ಈಗಾಗಲೇ ಭಾರತದಲ್ಲಿ ಸ್ಯಾಟಲೈಟ್ ಇಂಟರ್​ನೆಟ್ ವ್ಯವಸ್ಥೆ ಕಲ್ಪಿಸಲು ಟಾಟಾ ಗ್ರೂಪ್​ ನೆಲ್ಕಾ ಕಂಪೆನಿ ಕೆನಡಾದ ಟೆಲಿಸ್ಯಾಟ್ ಕಂಪೆನಿ ಜೊತೆ ಮಾತುಕತೆ ನಡೆಸಿದೆ. ಈ ಎರಡು ಕಂಪೆನಿಗಳು ಪಾಲುದಾರಿಕೆ ಮೂಲಕ ಭಾರತದಲ್ಲಿ ಸ್ಯಾಟ್​ಲೈಟ್ ಇಂಟರ್​ನೆಟ್ ವ್ಯವಸ್ಥೆ ಮಾಡುವ ವಿಶ್ವಾಸದಲ್ಲಿದೆ.

ಏನಿದು ಸ್ಯಾಟಲೈಟ್ ಇಂಟರ್​ನೆಟ್ ವ್ಯವಸ್ಥೆ ಎಂಬ ಪ್ರಶ್ನೆ ನಿಮ್ಮಲ್ಲೂ ಮೂಡಿರಬಹುದು. ಸಿಂಪಲ್ ಆಗಿ ಹೇಳಬೇಕೆಂದರೆ ಸ್ಯಾಟ್​ಲೈಟ್​ ಅಥವಾ ಉಪಗ್ರಹಗಳ ಮೂಲಕ ಇಂಟರ್​ನೆಟ್​ ನೀಡುವುದು. ಅಂದರೆ ಇಲ್ಲಿ ನಿಮಗೆ ಯಾವುದೇ ಮೊಬೈಲ್ ನೆಟ್​ವರ್ಕ್​ ಅವಶ್ಯಕತೆ ಇರುವುದಿಲ್ಲ. ಅಥವಾ ಇಂಟರ್​ನೆಟ್ ಸಿಗುವ ಜಾಗದಲ್ಲೇ ಇರಬೇಕೆಂದಿಲ್ಲ. ಸ್ಯಾಟ್​ಲೈಟ್ ಕಕ್ಷೆಯ ಅನುಸಾರ ನಿಮಗೆ ಮೂಲೆ ಮೂಲೆಯಲ್ಲೂ ಒಂದೇ ವೇಗದಲ್ಲಿ ಇಂಟರ್​ನೆಟ್​ ಸಿಗಲಿದೆ. ಇನ್ನೂ ಸರಳವಾಗಿ ಹೇಳಬೇಕೆಂದರೆ ನೀವು ಆಕಾಶದ ಕೆಳಗಿದ್ದರೆ ಸಾಕು ಇಂಟರ್​ನೆಟ್ ಸಿಗುತ್ತದೆ. ಅದು ವಿಮಾನದಲ್ಲಿ ಆಗಿರಬಹುದು ಅಥವಾ ಯಾವುದೇ ದೂರ ಕಡಲಿನಲ್ಲಿ ಹಡಗಿನಲ್ಲಿ ಆಗಿರಬಹುದು. ಇಲ್ಲ ಬೆಟ್ಟ ಗುಡ್ಡಗಳ ನಡುವೆ ಆಗಿರಬಹುದು. ಎಲ್ಲಾ ಕಡೆಯು ಸ್ಯಾಟ್​ಲೈಟ್ ಮೂಲಕ ಇಂಟರ್​ನೆಟ್ ಸಿಗಲಿದೆ.

ಇದೀಗ ಇಂತಹದೊಂದು ಯೋಜನೆಯನ್ನು ಭಾರತದಲ್ಲಿ ಪರಿಚಯಿಸಲು ಟೆಲಿಸ್ಯಾಟ್ ಕಂಪೆನಿಯೊಂದಿಗೆ ಟಾಟಾ ನೆಲ್ಕಾ ಮಾತುಕತೆ ನಡೆಸುತ್ತಿದೆ. ಈ ಒಪ್ಪಂದವು ಯಶಸ್ವಿಯಾದರೆ ಭಾರತದಲ್ಲಿ ಸ್ಯಾಟ್​ಲೈಟ್ ಮೂಲಕ ಬ್ರಾಡ್​ಬ್ಯಾಂಡ್ ಸೇವೆ ಆರಂಭವಾಗಲಿದೆ. ಅದು ಕೂಡ ಕಡಿಮೆ ದರದಲ್ಲಿ ಬ್ರಾಡ್​ಬ್ಯಾಂಡ್ ಸೇವೆ ಸಿಗಲಿದೆ ಎಂದು ಹೇಳಲಾಗಿದೆ.

ಇನ್ನು ಟೆಕ್ ದೈತ್ಯ ಎಲಾನ್ ಮಸ್ಕ್ ಅವರ ಟೆಸ್ಲಾ ಕಂಪೆನಿ ಕೂಡ ಇಂತಹದ್ದೇ ಪ್ರಯತ್ನಕ್ಕೆ ಕೈಹಾಕಿದೆ. ಈಗಾಗಲೇ ಅದರ ಪ್ರಯೋಗಿಕ ಪರೀಕ್ಷೆಗಳು ಪೂರ್ಣಗೊಂಡಿವೆ. ಅದರಂತೆ ಮಸ್ಕ್ ಅವರ ಸ್ಟಾರ್ ಲಿಂಕ್ ಸ್ಯಾಟ್​ಲೈಟ್ ಇಂಟರ್​ನೆಟ್ ಸೇವೆ 2022 ರ ವೇಳೆಗೆ ಸಿಗಲಿದೆ. ಹಾಗೆಯೇ ಅಮೆಜಾನ್ ಕಂಪೆನಿ ಕೂಡ ಉಪಗ್ರಹ ಇಂಟರ್​ನೆಟ್ ಸೇವೆ ಒದಗಿಸಲು ಮುಂದಾಗಿದ್ದು, ಅದರಂತೆ ಅಮೆಜಾನ್ ಬ್ರಾಡ್​ಬ್ಯಾಂಡ್ ಸೇವೆ ಕೂಡ ಶೀಘ್ರದಲ್ಲೇ ಆರಂಭವಾಗಲಿದೆ ಎಂದು ವರದಿಯಾಗಿದೆ.

ವಿಶ್ವದಲ್ಲೇ ಅತೀ ಹೆಚ್ಚು ಇಂಟರ್​ನೆಟ್​ ಬಳಕೆದಾರರನ್ನು ಹೊಂದಿರುವ ಭಾರತದಲ್ಲಿ ಸ್ಯಾಟ್​ಲೈಟ್ ಬ್ರಾಡ್​ಬ್ಯಾಂಡ್ ಸೇವೆಯು ಹೊಸ ಕ್ರಾಂತಿ ಹುಟ್ಟುಹಾಕಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಹಾಗೆಯೇ ಈಗಾಗಲೇ ಟೆಲಿಕಾಂ ಕಂಪೆನಿಗಳಾದ ಏರ್​ಟೆಲ್, ಜಿಯೋ ಕೂಡ ತಮ್ಮ ಬಳಕೆದಾರರಿಗೆ ಯಾವುದೇ ಅಡೆತಡೆ ಇಲ್ಲದೆ ಇಂತಹದೊಂದು ಸೇವೆ ನೀಡಲು ಕೂಡ ಉತ್ಸುಕವಾಗಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಭಾರತದಲ್ಲಿ ಸ್ಯಾಟ್​ಲೈಟ್ ಬ್ರಾಡ್​ಬ್ಯಾಂಡ್ ಇಂಟರ್​ನೆಟ್ ಹೊಸ ಸಂಚಲನ ಸೃಷ್ಟಿಸುವುದರಲ್ಲಿ ಅನುಮಾನವೇ ಇಲ್ಲ ಎನ್ನಬಹುದು.

ಇದನ್ನೂ ಓದಿ: Health Tips : ಇದು ನಿಮಗೆ ಗೊತ್ತೇ? ಬೆಳ್ಳುಳ್ಳಿ ಸಿಪ್ಪೆಯಿಂದ ಸಿಗುತ್ತೆ ಹಲವು ಪ್ರಯೋಜನಗಳು

ಇದನ್ನೂ ಓದಿ: Toyota Cars: ಜೋಳ ನೀಡಿ ಟೊಯೋಟಾ ಕಾರು ಖರೀದಿಸುವ ಅವಕಾಶ

(Tata group to enter sat broadband market with Telesat)

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ