ಟೆಸ್ಲಾ ಸಿಇಒ ಎಲಾನ್ ಮಸ್ಕ್ (Elon Musk) ಅವರು ಟ್ವಿಟ್ಟರ್ ಅನ್ನು ತಮ್ಮ ತೆಕ್ಕೆಗೆ ಪಡೆದುಕೊಂಡ ಬಳಿಕ ಮೆಟಾ ಒಡೆತನದ ಫೇಸ್ಬುಕ್, ಇನ್ಸ್ಟಾಗ್ರಾಮ್ನಂತಹ ಇತರೆ ಪ್ರಸಿದ್ಧ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಬದಲಾವಣೆಗಳು ಆಗುತ್ತಿದೆ. ಹೊಸ ಹೊಸ ಫೀಚರ್ಗಳಿಂದ ಹಿಡಿದು ಉದ್ಯೋಗಿಗಳ ವಜಾದ ವರೆಗೆ ಅನೇಕ ಕಂಪನಿಗಳು ಟ್ವಿಟ್ಟರ್ ದಾರಿಯನ್ನೇ ಹಿಡಿಯುತ್ತಿದೆ. ಇದರಲ್ಲಿ ದೊಡ್ಡಮಟ್ಟದಲ್ಲಿ ಸದ್ದು ಮಾಡಿದ್ದು ಬ್ಲೂ ಟಿಕ್ ಚಂದಾದಾರಿಕೆ. ಟ್ವಿಟ್ಟರ್‌ನಲ್ಲಿ ಈಗ ಹಣ ಕೊಟ್ಟು ವೆರಿಫೈಡ್ ಅನ್ನು ಪಡೆದುಕೊಳ್ಳಬಹುದು. ಇದೀಗ ಇದೇ ಹಣ ಕೊಟ್ಟು ಬ್ಲೂ ಟಿಕ್ ಪಡೆದುಕೊಳ್ಳಿ ಎಂಬ ನಿಯಮವನ್ನು ಮೆಟಾ (Meta) ಕಂಪನಿಯೂ ಪ್ರಾರಂಭಿಸಿದೆ. ಟ್ವಿಟರ್ ಅನ್ನೇ ಅನುಸರಿಸಿರುವ ಮೆಟಾ ಈಗ ಹಣ ಪಾವತಿ ಮಾಡಿದರೆ ಬ್ಲೂ ಟಿಕ್ (Blue Tick) ನೀಡುವ ವ್ಯವಸ್ಥೆಯನ್ನು ಜಾರಿಗೆ ತಂದಿದೆ.
ಮೆಟಾ ಪ್ರಸ್ತುತ ಯುನೈಟೆಡ್ ಸ್ಟೇಟ್ನಲ್ಲಿ ಈ ಸೇವೆಗಳನ್ನು ಹೊರತಂದಿದೆ. ನೀವು ವೆಬ್‌ನಲ್ಲಿ ಸೈನ್ ಅಪ್ ಮಾಡಿದರೆ ತಿಂಗಳಿಗೆ $11.99 (989 ರೂ.) ನಿಗದಿ ಮಾಡಲಾಗಿದೆ. ಅದೇ ಮೊಬೈಲ್ ಆ್ಯಪ್ ಸ್ಟೋರ್ ಮೂಲಕ ಸೈನ್ ಅಪ್ ಮಾಡಿದರೆ $14.99 (1237 ರೂ.) ಇದೆ. ನೀವು ವೆಬ್‌ನಲ್ಲಿ ಸೈನ್ ಅಪ್ ಮಾಡಿದರೆ ಬ್ಲೂ ಟಿಕ್ ಅನ್ನು ಫೇಸ್‌ಬುಕ್‌ನಲ್ಲಿ ಮಾತ್ರ ಸ್ವೀಕರಿಸುತ್ತೀರಿ. ಆ್ಯಪ್ ಸ್ಟೋರ್ ಆಯ್ಕೆಯು ಫೇಸ್ಬುಕ್ ಮತ್ತು ಇನ್‌ಸ್ಟಾಗ್ರಾಮ್ ಎರಡಕ್ಕೂ ವೆರಿಫೈ ಅನ್ನು ಒಳಗೊಂಡಿದೆ. “ಈ ಹೊಸ ಫೀಚರ್ ಜೊತೆಗೆ ನಾವು ಕೆಲ ಸೇವೆಗಳನ್ನು ನೀಡುತ್ತೇವೆ. ಜೊತೆಗೆ ಸುರಕ್ಷತೆಯನ್ನು ಹೆಚ್ಚಿಸುತ್ತೇವೆ,” ಎಂದು ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್ ಹೇಳಿದ್ದಾರೆ.
WhatsApp New Feature: ವಾಟ್ಸ್ಆ್ಯಪ್ ಸ್ಟೇಟಸ್ನಲ್ಲಿ ಮಹತ್ವದ ಬದಲಾವಣೆ: ಬಂದಿದೆ ಹೊಸ ಫೀಚರ್
ಇನ್‌ಸ್ಟಾಗ್ರಾಮ್‌ನಲ್ಲಿ ಬ್ಲೂ ಟಿಕ್ ಅನ್ನು ಖರೀದಿಸಲು 18 ವರ್ಷ ವಯಸ್ಸಿನವರಾಗಿರಬೇಕು. ಇದಕ್ಕಾಗಿ ನಿಮ್ಮ ಫೋಟೋ ಐಡಿಯನ್ನು ಸಲ್ಲಿಸಬೇಕು. ಬಳಿಕವಷ್ಟೆ ನಿಮ್ಮ ಹೆಸರಿನ ಪಕ್ಕದಲ್ಲಿ ನೀಲಿ ಟಿಕ್ ಅನ್ನು ಪಡೆಯಲು ಅನುಮತಿ ಕಳುಹಿಸಬಹುದು. ಟ್ವಿಟ್ಟರ್‌ನಲ್ಲಿ ಬ್ಲೂಟಿಕ್ ಹೊಂದಿರುವ ಖಾತೆಯನ್ನು ಅಧಿಕೃತ ಎಂದು ಪರಿಗಣಿಸಲಾಗುತ್ತದೆಯೋ ಅದೇ ರೀತಿಯಲ್ಲಿ ಇನ್‌ಸ್ಟಾಗ್ರಾಮ್‌ನಲ್ಲಿ ಪರಿಶೀಲಿಸಿದ ಬ್ಯಾಡ್ಜ್ ಹೊಂದಿರುವ ಖಾತೆಯನ್ನು ಅಧಿಕೃತ ಎಂದು ಪರಿಗಣಿಸಲಾಗುತ್ತದೆ. ಇದರಲ್ಲಿ ಪೋಸ್ಟ್ ಮಾಡಲಾದ ಯಾವುದೇ ಮಾಹಿತಿಯನ್ನು ಜನರು ಸುಲಭವಾಗಿ ನಂಬಬಹುದಾಗಿದೆ. ಹಾಗೂ ಅವರಿಗೆ ವಿಶೇಷ ಸ್ಥಾನಮಾನ ಸಹ ಸಾಮಾಜಿಕ ವಲಯದಲ್ಲಿ ಇರುತ್ತದೆ.
ಫೆಸ್ಬುಕ್ ಹಾಗೂ ಇನ್‌ಸ್ಟಾಗ್ರಾಮ್‌ನಲ್ಲಿ ಈ ಹಿಂದೆ ಪ್ರಸಿದ್ಧ ವ್ಯಕ್ತಿಗಳಿಗೆ ಮಾತ್ರ ಬ್ಲೂ ಬ್ಯಾಡ್ಜ್ ಇರುವ ವೆರಿಫೈಡ್ ಅಕೌಂಟ್ ನೀಡಲಾಗುತ್ತಿತ್ತು. ಇದೀಗ ಟ್ವಿಟ್ವರ್‌ನಂತೆಯೇ ಹಣ ಪಾವತಿಸಿದ ಖಾತೆದಾರರಿಗೆ ಬ್ಲೂ ಟಿಕ್ ನೀಡಲಿದೆ. ಟ್ವಿಟ್ಟರ್ ಬ್ಲೂ ಟಿಕ್ ಪಡೆದುಕೊಳ್ಳಲು ತಿಂಗಳಿಗೆ 650 ರೂ. ವೆಬ್ ಬಳಕೆದಾರರಿಗೆ, 900 ರೂ. ಮೊಬೈಲ್ ಬಳಕೆದಾರರಿಗೆ ನಿಗದಿ ಮಾಡಲಾಗಿದೆ. ಅಂತೆಯೆ ವರ್ಷಕ್ಕೆ 6,800 ರೂ. ಪಾವತಿಸಬೇಕು. ಫೇಸ್ಬುಕ್, ಇನ್ಸ್ಟಾ ಬ್ಲೂ ಟಿಕ್ಗೆ ಭಾರತದಲ್ಲಿ ಎಷ್ಟು ಹಣ ಎಂಬುದು ಇನ್ನಷ್ಟೆ ಬಹಿರಂಗವಾಗಬೇಕಿದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ