ನವದೆಹಲಿ: ಎಂಜಿ ಮೋಟಾರ್ಸ್ನಿಂದ ಎರಡು ಬಾಗಿಲಿನ ಎಲೆಕ್ಟ್ರಿಕ್ ಸ್ಪೋರ್ಟ್ಸ್ ಕಾರು ಮಾರ್ಚ್ 31, 2021ರಂದು ಜಾಗತಿಕ ಮಟ್ಟದಲ್ಲಿ ಬಿಡುಗಡೆ ಆಗಲಿರುವ ಹಿನ್ನೆಲೆಯಲ್ಲಿ ಕಳೆದ ಶನಿವಾರದಂದು ಕಾರಿನ ಚಿತ್ರಗಳನ್ನು ಬಿಡುಗಡೆ ಮಾಡಲಾಗಿದೆ. ಎಂಜಿ ಸೈಬರ್ಸ್ಟರ್ ಹೆಸರಿನ ಈ ಕಾರು ಮುಂಭಾಗದಿಂದ, ಪಕ್ಕದಿಂದ ಹೇಗೆ ಕಾಣಿಸುತ್ತದೆ ಮತ್ತು ಟೇಲ್ ಲ್ಯಾಂಪ್ ಹೇಗಿರಲಿದೆ ಎಂಬುದನ್ನು ಬಹಿರಂಗಪಡಿಸಿದೆ. ಆಧುನಿಕ ಕಾಲ ಘಟ್ಟದ ಅತ್ಯಂತ ವೇಗದ ಎಲೆಕ್ಟ್ರಿಕ್ ಸ್ಪೋರ್ಟ್ಸ್ ಕಾರು ಅಭಿವೃದ್ಧಿ ಮಾಡುವ ಗುರಿ ಎಂಜಿ ಮೋಟಾರ್ಸ್ ಸಂಸ್ಥೆಯದಾಗಿತ್ತು. ಅಂದಹಾಗೆ ಇದು ವಿಶ್ವದ ಮೊದಲ ಸೂಪರ್ ಕಾರು ಆಗಿದ್ದು, ಗೇಮಿಂಗ್ ಕಾಕ್ಪಿಟ್ ಹೊಂದಿದೆ. ಯುವಜನರನ್ನು ಗುರಿ ಮಾಡಿಕೊಂಡು ಎಂಜಿ ಗ್ಲೋಬಲ್ ತಂಡದಿಂದ ಈ ಕಾರನ್ನು ರಚನೆ ಮಾಡಲಾಗಿದೆ. ಎಂಜಿಬಿ ರೋಡ್ಸ್ಟರ್ನ ಕ್ಲಾಸಿಕ್ ಮಾರ್ಪಾಟಿನ ಆಕಾರವನ್ನೇ ಇದು ಹೊಂದಿದೆ.
ಒಂದು ಸಲ ಪೂರ್ತಿಯಾಗಿ ಚಾರ್ಜ್ ಮಾಡಿದರೆ 800 ಕಿಲೋಮೀಟರ್ ವ್ಯಾಪ್ತಿಯನ್ನು ಕ್ರಮಿಸುವ ಸಾಮರ್ಥ್ಯ ಇರುವ ಈ ಸೈಬರ್ಸ್ಟರ್ನಲ್ಲಿ ಶುದ್ಧಾನುಶುದ್ಧ ಎಲೆಕ್ಟ್ರಿಕ್ ಸಂರಚನೆ ಇದೆ. ಮತ್ತು 5G ಸಂಪರ್ಕದ ಸಾಮರ್ಥ್ಯ ಇದೆ. 0ಯಿಂದ 100 ಕಿ.ಮೀ. ವೇಗವನ್ನು 3 ಸೆಕೆಂಡ್ನಲ್ಲಿ ಪಡೆಯಬಲ್ಲದಾಗಿದೆ. ಎಂಜಿ ಸೈಬರ್ಸ್ಟರ್ ರೇರ್ ರಚನೆಯು “Kammaback” ಸ್ಟೈಲಿಂಗ್ ಬಳಸಿದೆ. ರೇರ್ ಸ್ಪಾಯಲರ್ ಅನ್ನು ಇದರಲ್ಲಿರುವ ಟೇಲ್ ಚೆನ್ನಾಗಿ ಮಾಡಬಲ್ಲದು ಮತ್ತು ಏರೋಡೈನಮಿಕ್ ಕಾರ್ಯನಿರ್ವಹಣೆಯನ್ನು ಉತ್ತಮಗೊಳಿಸಬಲ್ಲದು. ಇನ್ನು ಇದರ ಥ್ರೂ- ಟೈಪ್ ಎಲ್ಇಡಿ ಟೇಲ್ ಲೈಟ್ Kammaback ಆಕಾರದಲ್ಲೇ ಇದೆ. ಇನ್ನು ಮುಂಭಾಗವು ಎಂಜಿಯ ಕ್ಲಾಸಿಕ್ ಗುಂಡಾದ ಹೆಡ್ಲೈಟ್ ಆಕಾರದಲ್ಲಿದೆ. ಜತೆಗೆ ಸಣ್ಣದಾದ ಗ್ರಿಲ್ ರಚನೆಯು ಎಂಜಿ ಸ್ಪೋರ್ಟ್ಸ್ ಅನ್ನು ನೆನಪಿಸುತ್ತದೆ.
“ಮ್ಯಾಜಿಕ್ ಐ” ಇಂಟಱಕ್ಟಿವ್ ಹೆಡ್ಲೈಟ್ಗಳು ಗ್ರಿಲ್ಗಿಂತ ಪ್ರತ್ಯೇಕ ಪದರವಾಗಿದೆ. ಇನ್ನು ಮುಂಭಾಗದಲ್ಲಿ ಕಣ್ಸೆಳೆಯುವಂತಿರುವ ವಿಶಿಷ್ಟ ರಚನೆಯು ಏರೋಡೈನಮಿಕ್ ಅದ್ಭುತ ಪ್ರದರ್ಶನಕ್ಕೆ ಸಹಕಾರಿಯಾಗಿದೆ. ಪಕ್ಕದಿಂದ ನೀಡುವುದಕ್ಕೆ ಎಂಜಿ ಸೈಬರ್ಸ್ಟರ್ನ ಲೇಸರ್ ಬೆಲ್ಟ್ ಕಣ್ಸೆಳೆಯುತ್ತದೆ. ಎಲ್ಇಡಿ ದೀಪವನ್ನು ಒಳಗೊಂಡ ಈ ಪಟ್ಟಿಯು ದೇಹದ ಬದಿಯಿಂದ ಶಕ್ತಿಶಾಲಿ ಲೇಸರ್ ಹೊಳಪಿನ ಮೂಲಕ ಮೆರುಗು ನೀಡುತ್ತದೆ. ಆ ಮೂಲಕ ಏರೋಡೈನಮಿಕ್ ರಚನೆ ಇರುವ ಹೊಸ ಕಾಲಘಟ್ಟದ ಇಂಟೆಲಿಜೆಂಟ್ (ಬುದ್ಧಿಮತ್ತೆಯ) ಸ್ಪೋರ್ಟ್ಸ್ ಕಾರು ಎನಿಸಿಕೊಂಡಿದೆ. ಇದರ ಹೈ ಪರ್ಫಾರ್ಮೆನ್ಸ್ ಚಕ್ರಗಳು ತಿರುಗುವ ಸ್ಪೋಕ್ಸ್ ಜತೆಗೆ ಹಾಗೂ ಸೆಂಟ್ರಲ್ ಲಾಕಿಂಗ್ ವ್ಯವಸ್ಥೆಯನ್ನು ಒಳಗೊಂಡಂತೆ ಬರುತ್ತದೆ. ಸಾಮಾನ್ಯವಾಗಿ ಇದು ಹೈ ಪರ್ಫಾರ್ಮೆನ್ಸ್ ಮಾಡೆಲ್ಗಳಲ್ಲಿ ಕಂಡುಬರುತ್ತದೆ.
ಇದನ್ನೂ ಓದಿ: ಕನಸಿನ ಕಾರು ಖರೀದಿಗೆ ದುಡ್ಡು ಕೊಟ್ಟರೂ ಕಾಯುವುದು ಕಡ್ಡಾಯ; ಜಾಗತಿಕ ಸಮಸ್ಯೆ ಜಗುಲಿಗೂ ಬಂತು