Kannada News Technology Mi 11X Pro A 108MP Camera smartphone has received a price cut of Rs 3000 in Amazon India
108MP ಕ್ಯಾಮೆರಾದ Mi 11X Pro ಸ್ಮಾರ್ಟ್‌ಫೋನ್ ಬೆಲೆಯಲ್ಲಿ ಭರ್ಜರಿ ಇಳಿಕೆ: ಮಿಸ್ ಮಾಡ್ಬೇಡಿ
Mi 11X Pro Price Cut: ಎಂಐ 11X ಪ್ರೊ ಸ್ಮಾರ್ಟ್‌ಫೋನಿನ ಮೇಲೆ 3,000 ರೂ. ಡಿಸ್ಕೌಂಟ್ ಘೋಷಿಸಲಾಗಿದೆ. ಇದರ 8GB RAM ಮತ್ತು 128GB ಸ್ಟೋರೇಜ್ ವೇರಿಯಂಟ್ ಈಗ ಕೇವಲ 36,999 ರೂ. ಗಳಿಗೆ ಲಭ್ಯ ಆಗುತ್ತಿದೆ.
ಹಬ್ಬಗಳು ಬಂತೆಂದರೆ ಸಾಕು ಪ್ರಸಿದ್ಧ ಇ ಕಾಮರ್ಸ್ ಸೈಟ್ಗಳಲ್ಲಿ ಆಫರ್ಗಳ ಮಳೆವೇ ಸುರಿಯುತ್ತದೆ. ಆದರೆ, ಸದ್ಯಕ್ಕೆ ಯಾವುದೇ ಹಬ್ಬವಿಲ್ಲ, ಇ ಕಾಮರ್ಸ್ ತಾಣಗಳಲ್ಲಿ ಯಾವುದೇ ಸೇಲ್ ಕೂಡ ನಡೆಯುತ್ತಿಲ್ಲ. ಹೀಗಿದ್ದರೂ ಪ್ರಸಿದ್ಧ ಶವೋಮಿ (Xiaomi) ಕಂಪನಿಯ ಎಂಐ 11ಎಕ್ಸ್ ಪ್ರೊ (Mi 11X Pro) ಸ್ಮಾರ್ಟ್‌ಫೋನ್ ಸದ್ಯ ಬಂಪರ್ ಡಿಸ್ಕೌಂಟ್ನಲ್ಲಿ ಸಿಗುತ್ತಿದೆ. 108 ಮೆಗಾಫಿಕ್ಸೆಲ್ ಕ್ಯಾಮೆರಾ, ಭರ್ಜರಿ ಬ್ಯಾಟರಿ, ಅತ್ಯುತ್ತಮ ಪ್ರೊಸೆಸರ್ ಸೇರಿದಂತೆ ಅನೇಕ ಫೀಚರ್ಸ್ನಿಂದ ಕೂಡಿರುವ ಈ ಸ್ಮಾರ್ಟ್‌ಫೋನ್ (Smartphone) ಮೇಲೆ ಆಕರ್ಷಕ ರಿಯಾಯಿತಿ ಘೋಷಿಸಲಾಗಿದೆ. ಹಾಗಾದ್ರೆ ಏನಿದೆ ಆಫರ್?, ಇದರ ಫೀಚರ್ಸ್ನಲ್ಲಿ ಏನೇನಿದೆ ಎಂಬುದನ್ನು ನೋಡೋಣ.
ಎಂಐ 11X ಪ್ರೊ ಸ್ಮಾರ್ಟ್‌ಫೋನಿನ ಮೇಲೆ 3,000 ರೂ. ಡಿಸ್ಕೌಂಟ್ ಘೋಷಿಸಲಾಗಿದೆ. ಇದರ 8GB RAM ಮತ್ತು 128GB ಸ್ಟೋರೇಜ್ ವೇರಿಯಂಟ್ ಈಗ ಕೇವಲ 36,999 ರೂ. ಗಳಿಗೆ ಲಭ್ಯ ಆಗುತ್ತಿದೆ. ಹಾಗೆಯೇ 8GB RAM ಮತ್ತು 256GB ಸ್ಟೋರೇಜ್ ವೇರಿಯಂಟ್ ಬೆಲೆ 38,999 ರೂ. ಆಗಿದೆ. ಇ ಕಾಮರ್ಸ್ ತಾಣವಾದ ಅಮೆಜಾನ್ನಲ್ಲಿ ಈ ಫೋನನ್ನು ನೀವು ಖರೀದಿಸಬಹುದು.
ಈ ಸ್ಮಾರ್ಟ್‌ಫೋನ್ 1,080×2,400 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.67 ಇಂಚಿನ ಫುಲ್ ಹೆಚ್‌ಡಿ + ಡಿಸ್‌ಪ್ಲೇಯನ್ನು ಹೊಂದಿದೆ. ಜೊತೆಗೆ ಈ ಡಿಸ್‌ಪ್ಲೇ ಹೆಚ್‌ಡಿಆರ್ 10 + ಬೆಂಬಲ ನೀಡಲಾಗಿದೆ. ಸಿನಿಮಾ, ಯೂಟ್ಯೂಬ್ ವೀಡಿಯೊಗಳು ವೀಕ್ಷಣೆ ಮಾಡಲು ಪೂರಕವೆನಿಸಿದೆ.
ಬಲಿಷ್ಠವಾಗಿರುವ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 888 SoC ಪ್ರೊಸೆಸರ್ ಸಾಮರ್ಥ್ಯವನ್ನು ಹೊಂದಿದೆ. ಇದು ಆಂಡ್ರಾಯ್ಡ್ 11 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ.
ಇನ್ನು ಇದು ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 108 ಮೆಗಾ ಪಿಕ್ಸೆಲ್ ಸೆನ್ಸಾರ್, ಎರಡನೇ ಕ್ಯಾಮೆರಾ 48 ಮೆಗಾ ಪಿಕ್ಸೆಲ್ ಸೆನ್ಸಾರ್, ಮೂರನೇ ಕ್ಯಾಮೆರಾ 5 ಮೆಗಾ ಪಿಕ್ಸೆಲ್ ಸೆನ್ಸಾರ್ ಹೊಂದಿದೆ.
ಇದನ್ನೂ ಓದಿ
Redmi Note 11SE: ಬಜೆಟ್ ಬೆಲೆಗೆ ಬಂಪರ್ ಸ್ಮಾರ್ಟ್‌ಫೋನ್: ಶವೋಮಿಯಿಂದ ರೆಡ್ಮಿ ನೋಟ್ 11SE ಬಿಡುಗಡೆ
Realme Narzo 50 5G: ಭಾರತದಲ್ಲಿ ರಿಯಲ್ ಮಿ ನಾರ್ಜೊ 50 5G ಮಾರಾಟ ಆರಂಭ: ಹೇಗಿದೆ?, ಖರೀದಿಸಬಹುದೇ?
Oppo Reno 8 Series: ಒಪ್ಪೋ ರೆನೋ 8 ಸರಣಿಯ ಮೂರೂ ಫೋನ್ಗೆ ಕ್ಯಾಮೆರಾ ಪ್ರಿಯರು ಕ್ಲೀನ್ ಬೌಲ್ಡ್: ಬೆಲೆ ಎಷ್ಟು?
Best Smartphone: 20,000 ರೂ. ಒಳಗೆ ಅತ್ಯುತ್ತಮ ಕ್ಯಾಮೆರಾ, ಬ್ಯಾಟರಿ ಇರುವ ಸ್ಮಾರ್ಟ್‌ಫೋನ್ ಬೇಕೇ: ಇಲ್ಲಿದೆ ನೋಡಿ
ಇದಲ್ಲದೆ 20 ಮೆಗಾ ಪಿಕ್ಸೆಲ್ ಸೆನ್ಸಾರ್ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಪೋರ್ಟ್ರೇಟ್ ಮೋಡ್, ನೈಟ್ ಮೋಡ್, 30 ಎಫ್‌ಪಿಎಸ್‌ನಲ್ಲಿ 4 ಕೆ ವೀಡಿಯೊಗಳು, ಬ್ಯೂಟಿ ಮೋಡ್, ವ್ಲಾಗ್ ಮೋಡ್ ಆಯ್ಕೆಗಳನ್ನು ನೀಡಲಾಗಿದೆ.
ಎಂಐ 11X ಪ್ರೊ ಸ್ಮಾರ್ಟ್‌ಫೋನ್ 4,520mAh ಸಾಮರ್ಥ್ಯದ ಅತ್ಯುತ್ತಮ ಬ್ಯಾಟರಿ ಬ್ಯಾಕಪ್ ಅನ್ನು ಹೊಂದಿದೆ. ಇದು 33W ವೇಗದ ಚಾರ್ಜಿಂಗ್ ಮತ್ತು 2.5W ನಲ್ಲಿ ವೈರ್ಡ್ ರಿವರ್ಸ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.
ಈ ಸ್ಮಾರ್ಟ್‌ಫೋನ್ ಡಾಲ್ಬಿ ಅಟ್ಮೋಸ್ ಬೆಂಬಲದೊಂದಿಗೆ ಡ್ಯುಯಲ್ ಸ್ಪೀಕರ್‌ಗಳನ್ನು ಹೊಂದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, ಡ್ಯುಯಲ್-ಬ್ಯಾಂಡ್ ವೈ-ಫೈ, ವೈ-ಫೈ 6, ಜಿಪಿಎಸ್, ಎಜಿಪಿಎಸ್, ನ್ಯಾವಿಕ್ ಬೆಂಬಲ, ಮತ್ತು ಯುಎಸ್‌ಬಿ ಟೈಪ್-ಸಿ ಪೋರ್ಟ್ ಬೆಂಬಲ ಪಡೆದುಕೊಂಡರೆ, ಡ್ಯುಯಲ್ ಸ್ಟಿರಿಯೊ ಸ್ಪೀಕರ್‌ಗಳು, ಹೈ-ರೆಸ್ ಆಡಿಯೋ ನೀಡಲಾಗಿದೆ.