Kannada News Technology Mi 11X Pro A 108MP Camera smartphone has received a price cut of Rs 9000 in Amazon India
108MP ಕ್ಯಾಮೆರಾ ಫೋನ್ ಬೇಕೆ?: ಅತಿ ಕಡಿಮೆ ಬೆಲೆಗೆ ಮಾರಾಟ ಆಗುತ್ತಿದೆ ಎಂಐ 11X ಪ್ರೊ
ಇದೀಗ ಕ್ಯಾಮೆರಾ ಪ್ರಿಯರಿಗಾಗಿಯೇ ಶವೋಮಿ ಬಂಪರ್ ಆಫರ್ ಒಂದನ್ನು ನೀಡಿದೆ. ಈ ಹಿಂದೆ ಕ್ಯಾಮೆರಾ ಮಾತ್ರವಲ್ಲದೆ ತನ್ನೆಲ್ಲ ಫೀಚರ್ಗಳಿಂದ ಭರ್ಜರಿ ಸದ್ದು ಮಾಡಿದ್ದ ಎಂಐ 11ಎಕ್ಸ್ ಪ್ರೊ (Mi 11X Pro) ಸ್ಮಾರ್ಟ್‌ಫೋನ್ ಬೆಲೆಯಲ್ಲಿ ಆಕರ್ಷಕ ಡಿಸ್ಕೌಂಟ್ ಘೋಷಿಸಿದೆ.
Mi 11X Pro
Follow us on
ಶವೋಮಿ ಕಂಪನಿ 108 ಮೆಗಾಫಿಕ್ಸೆಲ್ ಕ್ಯಾಮೆರಾ ಸ್ಮಾರ್ಟ್ಫೋನ್ಗಳನ್ನು ಒಂದರ ಹಿಂದೆ ಒಂದರಂತೆ ಬಿಡುಗಡೆ ಮಾಡುತ್ತಿದೆ. ಇದರ ನಡುವೆ 200 ಮೆಗಾಫಿಕ್ಸೆಲ್ ಕ್ಯಾಮೆರಾ ಫೋನಿನ ಕೆಲಸ ಕೂಡ ನಡೆಯುತ್ತಿದೆ. ಇದೀಗ ಕ್ಯಾಮೆರಾ ಪ್ರಿಯರಿಗಾಗಿಯೇ ಶವೋಮಿ ಬಂಪರ್ ಆಫರ್ ಒಂದನ್ನು ನೀಡಿದೆ. ಈ ಹಿಂದೆ ಕ್ಯಾಮೆರಾ ಮಾತ್ರವಲ್ಲದೆ ತನ್ನೆಲ್ಲ ಫೀಚರ್ಗಳಿಂದ ಭರ್ಜರಿ ಸದ್ದು ಮಾಡಿದ್ದ ಎಂಐ 11ಎಕ್ಸ್ ಪ್ರೊ (Mi 11X Pro) ಸ್ಮಾರ್ಟ್‌ಫೋನ್ ಬೆಲೆಯಲ್ಲಿ ಆಕರ್ಷಕ ಡಿಸ್ಕೌಂಟ್ ಘೋಷಿಸಿದೆ. 108 ಮೆಗಾಫಿಕ್ಸೆಲ್ ಕ್ಯಾಮೆರಾ, ಭರ್ಜರಿ ಬ್ಯಾಟರಿ, ಅತ್ಯುತ್ತಮ ಪ್ರೊಸೆಸರ್ ಸೇರಿದಂತೆ ಅನೇಕ ಫೀಚರ್ಸ್ನಿಂದ ಕೂಡಿರುವ ಈ ಸ್ಮಾರ್ಟ್‌ಫೋನ್ (Smartphone) ಮೇಲೆ ಬರೋಬ್ಬರಿ 13,000 ರೂ. ವರೆಗೆ ರಿಯಾಯಿತಿ ಪಡೆದುಕೊಳ್ಳುವ ಅವಕಾಶ ನೀಡಿದೆ. ಪ್ರಸಿದ್ಧ ಇ ಕಾಮರ್ಸ್ ತಾಣವಾದ ಅಮೆಜಾನ್ನಲ್ಲಿ ಈ ಆಫರ್ ಅನ್ನು ನೀವು ಪಡೆಯಬಹುದು.
ಎಂಐ 11X ಪ್ರೊ ಸ್ಮಾರ್ಟ್‌ಫೋನಿನ ಮೇಲೆ 13,000 ರೂ. ಡಿಸ್ಕೌಂಟ್ ಘೋಷಿಸಲಾಗಿದೆ. ಈ ಫೋನ್ 39,999 ರೂ. ಗಳ ಪ್ರೈಸ್ ಟ್ಯಾಗ್‌ನಲ್ಲಿ ಬಿಡುಗಡೆ ಆಗಿತ್ತು. ಇದೀಗ ಅಮೆಜಾನ್ನಲ್ಲಿ ಇದು ಕೇವಲ 26,999 ರೂ. ಬೆಲೆಯಲ್ಲಿ ಕಾಣಿಸಿಕೊಂಡಿದೆ.
ಈ ಸ್ಮಾರ್ಟ್‌ಫೋನ್ 1,080×2,400 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.67 ಇಂಚಿನ ಫುಲ್ ಹೆಚ್‌ಡಿ + ಡಿಸ್‌ಪ್ಲೇಯನ್ನು ಹೊಂದಿದೆ. ಜೊತೆಗೆ ಈ ಡಿಸ್‌ಪ್ಲೇ ಹೆಚ್‌ಡಿಆರ್ 10 + ಬೆಂಬಲ ನೀಡಲಾಗಿದೆ. ಸಿನಿಮಾ, ಯೂಟ್ಯೂಬ್ ವೀಡಿಯೊಗಳು ವೀಕ್ಷಣೆ ಮಾಡಲು ಪೂರಕವೆನಿಸಿದೆ.
ಬಲಿಷ್ಠವಾಗಿರುವ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 888 SoC ಪ್ರೊಸೆಸರ್ ಸಾಮರ್ಥ್ಯವನ್ನು ಹೊಂದಿದೆ. ಇದು ಆಂಡ್ರಾಯ್ಡ್ 11 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ.
ಇನ್ನು ಇದು ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 108 ಮೆಗಾ ಪಿಕ್ಸೆಲ್ ಸೆನ್ಸಾರ್, ಎರಡನೇ ಕ್ಯಾಮೆರಾ 48 ಮೆಗಾ ಪಿಕ್ಸೆಲ್ ಸೆನ್ಸಾರ್, ಮೂರನೇ ಕ್ಯಾಮೆರಾ 5 ಮೆಗಾ ಪಿಕ್ಸೆಲ್ ಸೆನ್ಸಾರ್ ಹೊಂದಿದೆ.
ಇದಲ್ಲದೆ 20 ಮೆಗಾ ಪಿಕ್ಸೆಲ್ ಸೆನ್ಸಾರ್ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಪೋರ್ಟ್ರೇಟ್ ಮೋಡ್, ನೈಟ್ ಮೋಡ್, 30 ಎಫ್‌ಪಿಎಸ್‌ನಲ್ಲಿ 4 ಕೆ ವೀಡಿಯೊಗಳು, ಬ್ಯೂಟಿ ಮೋಡ್, ವ್ಲಾಗ್ ಮೋಡ್ ಆಯ್ಕೆಗಳನ್ನು ನೀಡಲಾಗಿದೆ.
ಎಂಐ 11X ಪ್ರೊ ಸ್ಮಾರ್ಟ್‌ಫೋನ್ 4,520mAh ಸಾಮರ್ಥ್ಯದ ಅತ್ಯುತ್ತಮ ಬ್ಯಾಟರಿ ಬ್ಯಾಕಪ್ ಅನ್ನು ಹೊಂದಿದೆ. ಇದು 33W ವೇಗದ ಚಾರ್ಜಿಂಗ್ ಮತ್ತು 2.5W ನಲ್ಲಿ ವೈರ್ಡ್ ರಿವರ್ಸ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.
ಈ ಸ್ಮಾರ್ಟ್‌ಫೋನ್ ಡಾಲ್ಬಿ ಅಟ್ಮೋಸ್ ಬೆಂಬಲದೊಂದಿಗೆ ಡ್ಯುಯಲ್ ಸ್ಪೀಕರ್‌ಗಳನ್ನು ಹೊಂದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, ಡ್ಯುಯಲ್-ಬ್ಯಾಂಡ್ ವೈ-ಫೈ, ವೈ-ಫೈ 6, ಜಿಪಿಎಸ್, ಎಜಿಪಿಎಸ್, ನ್ಯಾವಿಕ್ ಬೆಂಬಲ, ಮತ್ತು ಯುಎಸ್‌ಬಿ ಟೈಪ್-ಸಿ ಪೋರ್ಟ್ ಬೆಂಬಲ ಪಡೆದುಕೊಂಡರೆ, ಡ್ಯುಯಲ್ ಸ್ಟಿರಿಯೊ ಸ್ಪೀಕರ್‌ಗಳು, ಹೈ-ರೆಸ್ ಆಡಿಯೋ ನೀಡಲಾಗಿದೆ.