ನವದೆಹಲಿ: ಭಾರತದಲ್ಲಿ ಇದೀಗ 5-G ಯುಗಾರಂಭವಾಗಿದೆ. ಮೊನ್ನೇ ಅಷ್ಟೇ ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದ್ದಾರೆ. ಇದೀಗ ಅದು ಹೇಗೆ ವರ್ಕ್ ಆಗುತ್ತೆ? ಯಾವ ಫೋನ್ಗಳಿಗೆ ಸಪೋರ್ಟ್ ಮಾಡಿತ್ತೆ? ಅಂತೆಲ್ಲಾ ಮೊಬೈಲ್ ಬಳಕೆದಾರರಲ್ಲಿ ಚರ್ಚೆ ಶುರುವಾಗಿವೆ. ಇದರ ಬೆನ್ನಲ್ಲೇ ಇದೀಗ ಕೇಂದ್ರ ಟೆಲಿಕಾಂ ಮತ್ತು ಐಟಿ ಸಚಿವ ‘ಅಶ್ವಿನಿ ವೈಷ್ಣವ್ ಅವರು ವಿಶಿಷ್ಟ ತಂತ್ರಜ್ಞಾನದೊಂದಿಗೆ ನಿರ್ಮಿಸಲಾಗಿರುವ ಸ್ಮಾರ್ಟ್ ಫೋನ್ವೊಂದನ್ನು ನೆಲಕ್ಕೆ ಬೀಳಿಸಿ ಅದರ ಗುಣಮಟ್ಟವನ್ನು ಪರೀಕ್ಷಿಸಿದ್ದಾರೆ.
ಹೌದು…..ಒಂದು ಸ್ಮಾರ್ಟ್ಫೋನ್ ಖರೀದಿಸುತ್ತಿದ್ರೆ, ಅದರ ಆಳ ಅಗಲದ ಬಗ್ಗೆ ಪರೀಕ್ಷಿಸುತ್ತಾರೆ. ಅದರಂತೆ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರು ಇಂಡಿಯನ್ ಮೊಬೈಲ್ ಕಾಂಗ್ರೆಸ್‌ನ ಆರನೇ ಆವೃತ್ತಿಯ ಕಾರ್ಯಕ್ರದಮಲ್ಲಿ ಭಾಗವಹಿಸಿ ಮೊಬೈಲ್ವೊಂದನ್ನು ಮೇಲಿಂದ ಕೆಳಕ್ಕೆ ಬಿಸಾಡಿ ಪರೀಕ್ಷೆ ಮಾಡಿದ್ದಾರೆ.
ಭಾರತದಲ್ಲಿ ವಿನ್ಯಾಸಗೊಳಿಸಲಾದ ಈ ಹೊಸ ಹಾಗೂ ವಿಶಿಷ್ಟ ಹ್ಯಾಂಡ್‌ಸೆಟ್‌ನ್ನು ತಮ್ಮ ಎದೆ ಮಟ್ಟದ ಎತ್ತದದಿಂದ ಕೆಳಕ್ಕೆ ಬೀಳಿಸಿ ಅದರ ಸಾಮರ್ಥ್ಯ ಹಾಗೂ ಅದರ ಗುಣಮಟ್ಟವನ್ನು ಟೆಸ್ಟ್ ಮಾಡಿದರು. ಇದೀಗ ಈ ವಿಡಿಯೋ ಫುಲ್ ವೈರಲ್ ಆಗಿದೆ.
ಇದನ್ನೂ ಓದಿ: 5G ಸೇವೆಗಳ ನಂತರ ಇದೀಗ 6G ವಿಭಾಗದಲ್ಲಿ ಮುನ್ನಡೆ ಸಾಧಿಸಲಿರುವ ಭಾರತ
ವಿಡಿಯೋದಲ್ಲಿ ಸ್ಮಾರ್ಟ್ಫೋನ್ಅನ್ನು ಸಚಿವರು ಮೇಲಿಂದ ಕೆಳಕ್ಕೆ ಬಿಟ್ಟಿದ್ದಾರೆ. ಆದ್ರೆ, ಈ ಫೋನ್ಗೆ ಯಾವುದೇ ಹಾನಿಯಾಗಿಲ್ಲ. ಹಾಗೇ ಅದರ ಡಿಸ್ಪ್ಲೇ ಪರಿಪೂರ್ಣ ಸ್ಥಿತಿಯಲ್ಲಿಯಲ್ಲಿರುವುದು ಕಾಣಬಹುದು. ಸಾಮಾನ್ಯವಾಗಿ ಜನರ ಎದೆ ಮಟ್ಟದಿಂದ ಫೋನ್ಗಳು ಕೆಳಕ್ಕೆ ಬೀಳುತ್ತವೆ. ಅದರಂತೆ ಈ ಹೊಸ ತಂತ್ರಜ್ಞಾನದ ಸ್ಮಾರ್ಟ್ ಫೋನ್ ಅನ್ನು ಸಹ ಎದೆಮಟ್ಟದ ಎತ್ತರಿಂದ ಕೆಳಕ್ಕೆ ಬೀಳಿಸಿ ಟೆಸ್ಟ್ ಮಾಡಿರುವುದು ವಿಶೇಷ.
ಕೆಲವೊಮ್ಮೆ ಸ್ಮಾರ್ಟ್ಫೋನ್ ಖರೀದಿಸುವ ಗೋಜಿನಲ್ಲಿ ಅದರ ವಿಶೇಷತೆ? ಬಗೆಗೆ ತಿಳಿದೇ ಇರುವುದಿಲ್ಲ. ನಂತರ ತಲೆಕೆಡಿಸಿಕೊಳ್ಳುವ ಪ್ರಸಂಗಗಳು ಎದರುರಾಗುತ್ತದೆ. ಹಾಗಾಗಿ, ಸ್ಮಾರ್ಟ್ಫೋನ್ ಖರೀದಿಗೂ ಮುನ್ನ ಅದರಲ್ಲಿ ಅಳವಡಿಸಿಕೊಂಡಿರುವ ಪ್ರೊಸೆಸರ್, ಬ್ಯಾಟರಿ, ಕ್ಯಾಮೆರಾ, ಸ್ಟೊರೇಜ್ ಮುಂತಾದವುಗಳ ಕುರಿತು ತಿಳಿದುಕೊಳ್ಳುತ್ತಾರೆ. ಅಷ್ಟೇ ಅಲ್ಲ ಡೆಮೋ ಮೊಬೈಲ್ ಕೈಯಲ್ಲಿ ಹಿಡಿದುಕೊಂಡು ಪರೀಕ್ಷೆ ಮಾಡುವುದು ಉಂಟು.
Published On - 5:49 pm, Tue, 4 October 22