Kannada News Technology Moto E32s has been launched as the latest entrant in Motorola Moto E series
ಸದ್ದಿಲ್ಲದೆ ಮಾರುಕಟ್ಟೆಗೆ ಲಗ್ಗೆಯಿಟ್ಟ ಮೋಟೋ E32s: ಏನು ವಿಶೇಷತೆ?, ಬೆಲೆ ಎಷ್ಟು?
ಇತ್ತೀಚೆಗಷ್ಟೆ ಮೋಟೋರೊಲಾ ಎಡ್ಜ್ 30 (Motorola Edge 30) ಸ್ಮಾರ್ಟ್‌ಫೋನ್ ಅನಾವರಣ ಮಾಡಿ ಭರ್ಜರಿ ಸುದ್ದಿ ಮಾಡಿತ್ತು. ಇದೀಗ ಸದ್ದಿಲ್ಲದೆ ಕಂಪನಿ ಮೋಟೋ ಇ 32ಎಸ್ (Moto E32s) ಸ್ಮಾರ್ಟ್‌ಫೋನ್ ಲಾಂಚ್ ಮಾಡಿದೆ.
ವಿಶ್ವದಲ್ಲಿ ಶವೋಮಿ (Xiaomi), ಸ್ಯಾಮ್ಸಂಗ್, ರಿಯಲ್ ಮಿ ಹಾಗೂ ಒನ್ಪ್ಲಸ್ ನಂತಹ ಘಟಾನುಘಟಿ ಸ್ಮಾರ್ಟ್‌ಫೋನ್ ಬ್ರ್ಯಾಂಡ್ಗಳು ತಲೆಯೆತ್ತಿ ಮೆರೆಯುತ್ತಿರುವಾಗ ಮೋಟೋರೊಲಾ (Motorola) ಸಂಸ್ಥೆ ತನ್ನದೆಯಾದ ವಿಶೇಷ ಫೋನ್ ಅನ್ನು ಮಾರುಕಟ್ಟೆಗೆ ಪರಿಚಯಿಸಿ ಯಶಸ್ಸು ಸಾಧಿಸುತ್ತಿದೆ. ಭಾರತದಲ್ಲಿ ಕೂಡ ಮೋಟೋಕಂಪನಿಯ ಫೋನ್ಗಳಿಗೆ ಅತ್ಯುತ್ತಮ ಬೇಡಿಕೆಯಿದೆ. ಇತ್ತೀಚೆಗಷ್ಟೆ ಮೋಟೋರೊಲಾ ಎಡ್ಜ್ 30 (Motorola Edge 30) ಸ್ಮಾರ್ಟ್‌ಫೋನ್ ಅನಾವರಣ ಮಾಡಿ ಭರ್ಜರಿ ಸುದ್ದಿ ಮಾಡಿತ್ತು. ಇದೀಗ ಸದ್ದಿಲ್ಲದೆ ಕಂಪನಿ ಮೋಟೋ ಇ 32ಎಸ್ (Moto E32s) ಸ್ಮಾರ್ಟ್‌ಫೋನ್ ಲಾಂಚ್ ಮಾಡಿದೆ. ಈ ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದ್ದು ಆಂಡ್ರಾಯ್ಡ್ 12 ಔಟ್-ಆಫ್-ದಿ ಬಾಕ್ಸ್‌ನೊಂದಿಗೆ ಬರುತ್ತದೆ. ಇದರಲ್ಲಿ ಕ್ಯಾಮೆರಾ ಕೂಡ ಅದ್ಭುತವಾಗಿದ್ದು ಬಲಿಷ್ಠ ಬ್ಯಾಟರಿಯನ್ನು ಕೂಡ ಅಳವಡಿಸಲಾಗಿದೆ. ಇಲ್ಲಿದೆ ನೋಡಿ ಈ ಫೋನಿನ ಬೆಲೆ ಮತ್ತು ಫೀಚರ್ಸ್ ಬಗೆಗಿನ ಮಾಹಿತಿ.
ಮೋಟೋ E32s ಸ್ಮಾರ್ಟ್‌ಫೋನ್ 720 x 1600 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.5-ಇಂಚಿನ HD+ ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ 90Hz ರಿಫ್ರೆಶ್ ರೇಟ್ ಅನ್ನು ಒಳಗೊಂಡಿದೆ.
ಇದು ಆಕ್ಟಾ-ಕೋರ್ ಮೀಡಿಯಾಟೆಕ್ ಹಿಲಿಯೋ G37 SoC ಪ್ರೊಸೆಸರ್ ಸಾಮರ್ಥ್ಯವನ್ನು ಹೊಂದಿದ್ದು, ಆಂಡ್ರಾಯ್ಡ್ 12 ಔಟ್-ಆಫ್-ದಿ ಬಾಕ್ಸ್ ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ.
ಮೋಟೋ E32s ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 16 ಮೆಗಾಪಿಕ್ಸೆಲ್ ಸೆನ್ಸಾರ್ನಿಂದ ಕೂಡಿದೆ.
ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಶೂಟರ್ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್ ಅನ್ನು ಹೊಂದಿದೆ. ಇದಲ್ಲದೆ 16 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಅಳವಡಿಸಲಾಗಿದೆ.
ಇದನ್ನೂ ಓದಿ
108MP ಕ್ಯಾಮೆರಾದ Mi 11X Pro ಸ್ಮಾರ್ಟ್‌ಫೋನ್ ಬೆಲೆಯಲ್ಲಿ ಭರ್ಜರಿ ಇಳಿಕೆ: ಮಿಸ್ ಮಾಡ್ಬೇಡಿ
Redmi Note 11SE: ಬಜೆಟ್ ಬೆಲೆಗೆ ಬಂಪರ್ ಸ್ಮಾರ್ಟ್‌ಫೋನ್: ಶವೋಮಿಯಿಂದ ರೆಡ್ಮಿ ನೋಟ್ 11SE ಬಿಡುಗಡೆ
Realme Narzo 50 5G: ಭಾರತದಲ್ಲಿ ರಿಯಲ್ ಮಿ ನಾರ್ಜೊ 50 5G ಮಾರಾಟ ಆರಂಭ: ಹೇಗಿದೆ?, ಖರೀದಿಸಬಹುದೇ?
Oppo Reno 8 Series: ಒಪ್ಪೋ ರೆನೋ 8 ಸರಣಿಯ ಮೂರೂ ಫೋನ್ಗೆ ಕ್ಯಾಮೆರಾ ಪ್ರಿಯರು ಕ್ಲೀನ್ ಬೌಲ್ಡ್: ಬೆಲೆ ಎಷ್ಟು?
ಈ ಸ್ಮಾರ್ಟ್ಫೋನ್ಗೆ 5,000mAh ಸಾಮರ್ಥ್ಯದ ಬಿಗ್ ಬ್ಯಾಟರಿಯನ್ನು ಅಳವಡಿಸಲಾಗಿದೆ. 18W ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಕೂಡ ನೀಡಲಾಗಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 4G LTE, ವೈಫೈ, ಬ್ಲೂಟೂತ್, GPS/ A-GPS, ಮತ್ತು USB ಟೈಪ್-C ಪೋರ್ಟ್ ಬೆಂಬಲಿಸಲಿದೆ.
ಮೋಟೋ E32s ಸ್ಮಾರ್ಟ್‌ಫೋನ್ ಸದ್ಯಕ್ಕೆ ಯುರೋಪಿಯನ್ ಮಾರುಕಟ್ಟೆಯಲ್ಲಿ ಲಾಂಚ್ ಆಗಿದ್ದು ಭಾರತಕ್ಕೂ ಕಾಲಿಡಲಿದೆಯಂತೆ. ಈ ಸ್ಮಾರ್ಟ್‌ಫೋನ್ ಬೆಲೆ EUR 149.99, ಅಂದರೆ ಭಾರತದಲ್ಲಿ ಸುಮಾರು 12,400 ರೂ. ಎನ್ನಬಹುದು.