Moto Edge 30: 50MP ಕ್ಯಾಮೆರಾ, ಭರ್ಜರಿ ಬ್ಯಾಟರಿ: ಅತ್ಯಂತ ಹಗುರವಾದ ಮೋಟೋ ಎಡ್ಜ್‌ 30 ಫೋನ್ ಮಾರಾಟ ಆರಂಭ

| Updated By: Vinay Bhat

Updated on: May 19, 2022 | 1:48 PM

Motorola Edge 30: ಮೋಟೋ ಕಂಪನಿ ಮೊನ್ನೆಯಷ್ಟೆ ಹೊಸ ಮೋಟೋರೊಲಾ ಎಡ್ಜ್ 30 ಸ್ಮಾರ್ಟ್‌ಫೋನ್ ಅನಾವರಣ ಮಾಡಿತ್ತು. ಇದೀಗ ಇಂದಿನಿಂದ ಈ ಫೋನ್ ಖರೀದಿಗೆ ಸಿಗುತ್ತಿದೆ. ಇದು ಭಾರತದ ಹಗುರವಾದ 5G ಸ್ಮಾರ್ಟ್‌ಫೋನ್ ಆಗಿದೆ.

Moto Edge 30: 50MP ಕ್ಯಾಮೆರಾ, ಭರ್ಜರಿ ಬ್ಯಾಟರಿ: ಅತ್ಯಂತ ಹಗುರವಾದ ಮೋಟೋ ಎಡ್ಜ್‌ 30 ಫೋನ್ ಮಾರಾಟ ಆರಂಭ
Motorola Edge 30
Follow us on

ವಿಶ್ವದಲ್ಲಿ ಶವೋಮಿ (Xiaomi), ಸ್ಯಾಮ್​ಸಂಗ್, ರಿಯಲ್ ಮಿ ಹಾಗೂ ಒನ್​ಪ್ಲಸ್​ ನಂತಹ ಘಟಾನುಘಟಿ ಸ್ಮಾರ್ಟ್​​ಫೋನ್ ಬ್ರ್ಯಾಂಡ್​​ಗಳು ತಲೆಯೆತ್ತಿ ಮೆರೆಯುತ್ತಿರುವಾಗ ಮೋಟೋರೊಲಾ (Motorola) ಸಂಸ್ಥೆ ತನ್ನದೆಯಾದ ವಿಶೇಷ ಫೋನ್ ಅನ್ನು ಮಾರುಕಟ್ಟೆಗೆ ಪರಿಚಯಿಸಿ ಯಶಸ್ಸು ಸಾಧಿಸುತ್ತಿದೆ. ಭಾರತದಲ್ಲಿ ಕೂಡ ಮೋಟೋ ಕಂಪನಿಯ ಫೋನ್​ಗಳಿಗೆ ಅತ್ಯುತ್ತಮ ಬೇಡಿಕೆಯಿದೆ. ತಿಂಗಳಿಗೆ ಒಂದಂರಂತೆ ತನ್ನ ಸ್ಮಾರ್ಟ್​​ಫೋನ್ ಅನ್ನು ದೇಶದಲ್ಲಿ ಬಿಡುಗಡೆ ಮಾಡುತ್ತದೆ. ಏಪ್ರಿಲ್​ನಲ್ಲಿ ಬಜೆಟ್ ಬೆಲೆಗೆ ಮೋಟೋ G52 ಸ್ಮಾರ್ಟ್‌ಫೋನ್‌ ಅನ್ನು ಲಾಂಚ್ ಮಾಡಿದ್ದ ಕಂಪನಿ ಮೊನ್ನೆಯಷ್ಟೆ ಹೊಸ ಮೋಟೋರೊಲಾ ಎಡ್ಜ್ 30 (Motorola Edge 30) ಸ್ಮಾರ್ಟ್‌ಫೋನ್ ಅನಾವರಣ ಮಾಡಿತ್ತು. ಇದೀಗ ಇಂದಿನಿಂದ ಈ ಫೋನ್ ಖರೀದಿಗೆ ಸಿಗುತ್ತಿದೆ. ಈ ಫೋನ್‌ ಕ್ವಾಲ್‌ಕಾಮ್‌ನ ಸ್ನಾಪ್‌ಡ್ರಾಗನ್ 778G+ SoC ಪ್ರೊಸೆಸರ್‌ ಬಲವನ್ನು ಪಡೆದಿದೆ. ಅಲ್ಲದೆ ಸಿಸ್ಟಮ್-ಆನ್-ಚಿಪ್‌ನೊಂದಿಗೆ ಭಾರತದಲ್ಲಿ ಬಿಡುಗಡೆಯಾದ ಚೊಚ್ಚಲ ಸ್ಮಾರ್ಟ್‌ಫೋನ್ ಇದಾಗಿದೆ. ಅಲ್ಲದೆ ಇದು ಭಾರತದ ಅತ್ಯಂತ ಹಗುರವಾಗ 5G ಫೋನ್ ಆಗಿದೆ. ಇದರ ಜೊತೆಗೆ ಇನ್ನೂ ಅನೇಕ ವಿಶೇಷತೆಗಳಿಂದ ಈ ಫೋನ್ ಕೂಡಿದೆ. ಹಾಗಾದ್ರೆ ಇದರ ಬೆಲೆ ಎಷ್ಟು?, ಏನು ವಿಶೇಷತೆ ಎಂಬುದನ್ನು ನೋಡೋಣ.

  1. ಮೋಟೋರೊಲಾ ಎಡ್ಜ್‌ 30 ಸ್ಮಾರ್ಟ್‌ಫೋನ್‌ ಭಾರತದಲ್ಲಿ ಎರಡು ಸ್ಟೋರೆಜ್ ಆಯ್ಕೆಯಲ್ಲಿ ಖರೀದಿಗೆ ಸಿಗಲಿದೆ. ಇದರ 6GB + 128GB ಸ್ಟೋರೇಜ್ ಮಾದರಿಗೆ 27,999 ರೂ. ನಿಗದಿ ಮಾಡಲಾಗಿದೆ. ಹಾಗೆಯೆ 8GB + 128GB ರೂಪಾಂತರದ ಬೆಲೆ 29,999 ರೂ.ಆಗಿದೆ. ಈ ಸ್ಮಾರ್ಟ್‌ಫೋನ್ ಅರೋರಾ ಗ್ರೀನ್ ಮತ್ತು ಮೆಟಿಯರ್ ಗ್ರೇ ಬಣ್ಣದ ಆಯ್ಕೆಗಳಲ್ಲಿ ಮಾರಾಟವಾಗಲಿದೆ.
  2. ಈ ಫೋನ್ ಅನ್ನು ಇ ಕಾಮರ್ಸ್ ತಾಣವಾದ ಫ್ಲಿಪ್‌ಕಾರ್ಟ್, ರಿಲಯನ್ಸ್ ಡಿಜಿಟಲ್ ಮತ್ತು ಇತರ ಪ್ರಮುಖ ಚಿಲ್ಲರೆ ಅಂಗಡಿಗಳ ಮೂಲಕ ಇಂದಿನಿಂದ ಖರೀದಿಸಬಹುದು. ಲಾಂಚ್‌ ಆಫರ್‌ನಲ್ಲಿ ಫ್ಲಿಪ್‌ಕಾರ್ಟ್ HDFC ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗಳ ಮೂಲಕ ಖರೀದಿಸಿದರೆ 2,000 ರೂಪಾಯಿಗಳ ತ್ವರಿತ ರಿಯಾಯಿತಿ ಪಡೆದುಕೊಳ್ಳಬಹುದು.
  3. ಮೋಟೋ ಎಡ್ಜ್ 30 ಸ್ಮಾರ್ಟ್‌ಫೋನ್‌ 1,080×2,400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.7-ಇಂಚಿನ FHD+ ಪೋಲ್ಡ್ 10-ಬಿಟ್ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 144Hz ರಿಫ್ರೆಶ್ ರೇಟ್‌ ಬೆಂಬಲಿಸಲಿದೆ. 360Hz ಟಚ್ ಸ್ಯಾಪ್ಲಿಂಗ್‌ ರೇಟ್‌ ಅನ್ನು ಒಳಗೊಂಡಿದೆ.
  4. ಸ್ನಾಪ್‌ಡ್ರಾಗನ್ 778G+ SoC ಪ್ರೊಸೆಸರ್‌ ಬಲವನ್ನು ಹೊಂದಿದೆ. ಇದು ಆಂಡ್ರಾಯ್ಡ್‌ 12 OS ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 6GB RAM ಮತ್ತು 128GB ಹಾಗೂ 8GB RAM ಮತ್ತು 128GB ಸ್ಟೋರೇಜ್‌ ಆಯ್ಕೆಯಲ್ಲಿ ಲಭ್ಯವಿದೆ. ಇದಲ್ಲದೆ ಈ ಫೋನ್‌ ಗೇಮಿಂಗ್‌ಗಾಗಿ, ಫೋನ್ ಮೋಟೋ ಗೇಮ್ ಟೈಮ್, ಕ್ವಾಲ್ಕಾಮ್ ಎಲೈಟ್ ಗೇಮಿಂಗ್ ಮತ್ತು ಕ್ವಾಲ್ಕಾಮ್ ಗೇಮ್ ಕ್ವಿಕ್ ಟಚ್ ಅನ್ನು ಹೊಂದಿರುವುದು ವಿಶೇಷ.
  5. ಇದನ್ನೂ ಓದಿ
    ಭಾರತೀಯ ಮಾರುಕಟ್ಟೆಗೆ ಬಂದಿದೆ Vivo ಕಂಪನಿಯ ಹೊಸ ಮೊಬೈಲ್, Vivo X80 Pro
    iPhone 14 Max: ಭಾರತದಲ್ಲಿ ಯಾವಾಗ ರಿಲೀಸ್ ಆಗಲಿದೆ ಐಫೋನ್ 14 ಮ್ಯಾಕ್ಸ್?: ಇದರ ಬೆಲೆ ಎಷ್ಟಿರಬಹುದು?
    Vivo Y01: ಸದ್ದಿಲ್ಲದೆ ಕೇವಲ 8,999 ರೂಪಾಯಿಗೆ ಆಕರ್ಷಕ ಸ್ಮಾರ್ಟ್​​ಫೋನ್ ರಿಲೀಸ್ ಮಾಡಿದ ವಿವೋ
    Mega Summer Days Sale: ಸಮ್ಮರ್ ಸೇಲ್ ಮುಗಿದ ಬೆನ್ನಲ್ಲೇ ಮೆಗಾ ಸಮ್ಮರ್ ಡೇಸ್: ಅಮೆಜಾನ್​ನಿಂದ ಆಫರ್ ಮೇಲೆ ಆಫರ್
  6. ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್‌ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್‌, ಎರಡನೇ ಕ್ಯಾಮೆರಾ 50 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಆಂಗಲ್ ಸೆನ್ಸಾರ್‌ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್‌ ಡೆಪ್ತ್‌ ಸೆನ್ಸಾರ್‌ ಅನ್ನು ಹೊಂದಿದೆ.
  7. ಇನ್ನು ರಿಯರ್‌ ಕ್ಯಾಮೆರಾ ಸೆಟಪ್‌ ಆಪ್ಟಿಕಲ್ ಇಮೇಜ್ ಸ್ಟೆಬಲೈಸೇಶನ್ ಟೆಕ್ನಾಲಜಿಯನ್ನು ಹೊಂದಿದೆ. ಇದಲ್ಲದೆ ಕ್ವಾಡ್-ಪಿಕ್ಸೆಲ್ ತಂತ್ರಜ್ಞಾನದೊಂದಿಗೆ 32 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಅಳವಡಿಸಲಾಗಿದೆ.
  8. ಮೋಟೋ ಎಡ್ಜ್ 30 ಸ್ಮಾರ್ಟ್‌ಫೋನ್‌ 4,020mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 33W ಟರ್ಬೋಪವರ್ ಚಾರ್ಜಿಂಗ್ ತಂತ್ರಜ್ಞಾನ ಬೆಂಬಲಿಸಲಿದೆ. ಈ ಫೋನಿನ ಕನೆಕ್ಟಿವಿಟಿ ಆಯ್ಕೆಗಳಲ್ಲಿ ಡಾಲ್ಬಿ ಅಟ್ಮಾಸ್‌ನೊಂದಿಗೆ ಸ್ಟಿರಿಯೊ ಸ್ಪೀಕರ್‌ಗಳು, 13 5G ಬ್ಯಾಂಡ್‌ಗಳಿಗೆ ಬೆಂಬಲ ಮತ್ತು ವೈಫೈ 6E ಸೇರಿದೆ.

ತಂತ್ರಜ್ಞಾನ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:47 pm, Thu, 19 May 22