Mega Summer Days Sale: ಸಮ್ಮರ್ ಸೇಲ್ ಮುಗಿದ ಬೆನ್ನಲ್ಲೇ ಮೆಗಾ ಸಮ್ಮರ್ ಡೇಸ್: ಅಮೆಜಾನ್​ನಿಂದ ಆಫರ್ ಮೇಲೆ ಆಫರ್

Amazon Mega Summer Days Sale 2022: ಸಮ್ಮರ್ ಸೇಲ್‌ ಮುಕ್ತಾಯವಾದ ಬೆನ್ನಲ್ಲೇ ಅಮೆಜಾನ್ ಮೆಗಾ ಸಮ್ಮರ್ ಸೇಲ್ ಹಮ್ಮಿಕೊಂಡಿದೆ. ಈಗಾಗಲೇ ಈ ಸೇಲ್ ಲೈವ್ ಆಗಿದ್ದು, ಮೇ. 18ರ ವರೆಗೆ ನಡೆಯಲಿದೆ.

Mega Summer Days Sale: ಸಮ್ಮರ್ ಸೇಲ್ ಮುಗಿದ ಬೆನ್ನಲ್ಲೇ ಮೆಗಾ ಸಮ್ಮರ್ ಡೇಸ್: ಅಮೆಜಾನ್​ನಿಂದ ಆಫರ್ ಮೇಲೆ ಆಫರ್
Amazon Great Freedom Festival 2022 Sale
Follow us
| Updated By: Vinay Bhat

Updated on:May 17, 2022 | 1:50 PM

ಭಾರತದಲ್ಲಿ ಸಮ್ಮರ್ ಸೀಸನ್‌ ಆರಂಭವಾಗುತ್ತಿದ್ದಂತೆಯೇ ‘ಸಮ್ಮರ್ ಸೇಲ್’ (Amazon Summer Sale) ಅನ್ನು ಪ್ರಸಿದ್ಧ ಇ ಕಾಮರ್ಸ್​ ತಾಣವಾದ ಅಮೆಜಾನ್ ಘೋಷಿಸಿತ್ತು. ಈ ಸಮ್ಮರ್ ಸೇಲ್‌ ಮುಕ್ತಾಯವಾದ ಬೆನ್ನಲ್ಲೇ ಅಮೆಜಾನ್ ಮೆಗಾ ಸಮ್ಮರ್ ಸೇಲ್ (Amazon Mega Summer Days Sale 2022) ಹಮ್ಮಿಕೊಂಡಿದೆ. ಈಗಾಗಲೇ ಈ ಸೇಲ್ ಲೈವ್ ಆಗಿದ್ದು, ಮೇ. 18ರ ವರೆಗೆ ನಡೆಯಲಿದೆ. ಪ್ರಮುಖವಾಗಿ ಎಸಿ (AC), ಫ್ರಿಡ್ಜ್​ಗಳ ಮೇಲೆ ಬಂಪರ್ ಡಿಸ್ಕೌಂಟ್ ಘೋಷಿಸಲಾಗಿದೆ. ಇವುಗಳ ಮೇಲೆ ನೋ ಕಾಸ್ಟ್ ಇಎಂಐ ಆಯ್ಕೆಯನ್ನು ಸಹ ನೀವು ಪಡೆಯುತ್ತೀರಿ. ನೀವು ಎಲೆಕ್ಟ್ರಾನಿಕ್ ಸಾಧನವನ್ನು ತೆಗೆದುಕೊಳ್ಳುವ ಬಗ್ಗೆ ಯೋಚಿಸುತ್ತಿದ್ದರೆ, ಖಂಡಿತವಾಗಿಯೂ ಈ ಕೊಡುಗೆಯ ಲಾಭವನ್ನು ಪಡೆದುಕೊಳ್ಳಿ.

ಇನ್ನು ಐಸಿಐಸಿಐ ಬ್ಯಾಂಕ್‌, ಕೊಟಕ್ ಮತ್ತು ಆರ್‌ಬಿಎಲ್‌ ಕ್ರೆಡಿಟ್‌/ಡೆಬಿಟ್ ಕಾರ್ಡ್‌ಗಳು, ಕ್ರೆಡಿಟ್/ಡೆಬಿಟ್‌ ಇಎಂಐ ವಹಿವಾಟುಗಳ ಮೇಲೆ ಹೆಚ್ಚುವರಿ 10% ತಕ್ಷಣದ ಬ್ಯಾಂಕ್‌ ರಿಯಾಯಿತಿಯನ್ನು ಗ್ರಾಹಕರು ಪಡೆಯಬಹುದು. ಹಾಗೆಯೆ ಡೆಬಿಟ್ ಮತ್ತು ಕ್ರೆಡಿಟ್‌ ಕಾರ್ಡ್‌ಗಳ ಮೇಲೆ ನೋ ಕಾಸ್ಟ್‌ ಇಎಂಐ ಮತ್ತು ಬಜಾಜ್‌ ಫಿನ್‌ಸರ್ವ್‌, ಎಕ್ಸ್‌ಚೇಂಜ್‌ ಕೊಡುಗೆಗಳು, ಇತರ ಪ್ರಮುಖ ಕ್ರೆಡಿಟ್‌/ಡೆಬಿಟ್‌ ಕಾರ್ಡ್‌ಗಳ ಮೇಲೆ ಆಕರ್ಷಕ ಕೊಡುಗೆಗಳು ಲಭ್ಯದ್ದು ಗ್ರಾಹಕರು ಹೆಚ್ಚು ಉಳಿತಾಯ ಮಾಡಬಹುದು. ಅಮೆಜಾನ್‌ ಪೇ ಐಸಿಐಸಿಐ ಬ್ಯಾಂಕ್‌ ಕ್ರೆಡಿಟ್ ಕಾರ್ಡ್‌ ಮೂಲಕ ಗ್ರಾಹಕರು ಶಾಪಿಂಗ್‌ ಮೇಲೆ 5% ವರೆಗೆ ಉಳಿತಾಯ ಮಾಡಬಹುದು.

ಈ ಸಮ್ಮರ್ ಸೇಲ್‌ನಲ್ಲಿ ಒನ್‌ಪ್ಲಸ್‌, ಶವೋಮಿ, ಸ್ಯಾಮ್‌ಸಂಗ್‌, ರೆಡ್ಮಿ, ರಿಯಲ್‌ಮಿ, ಐಕ್ಯೂ, ಆ್ಯಪಲ್‌, ಟೆಕ್ನೋ, ಒಪ್ಪೊ ಸ್ಮಾರ್ಟ್​​ಫೋನ್​ಗಳಿಗೆ ಆಕರ್ಷಕ ಆಫರ್ ಘೋಷಿಸಲಾಗಿದೆ. ಹಾಗೆಯೆ ಇಂಟೆಲ್, ಸ್ಯಾಮ್‌ಸಂಗ್‌, ಆ್ಯಪಲ್‌, ಬೋಟ್‌, ಎಚ್‌ಪಿ, ಸೋನಿ ಸೇರಿದಂತೆ ಅಗ್ರ ಬ್ರ್ಯಾಂಡ್‌ಗಳ ಅಕ್ಸೆಸರಿಗಳು ಮತ್ತು ಎಲೆಕ್ಟ್ರಾನಿಕ್ಸ್‌ ಮೇಲೆ 70% ವರೆಗೆ ರಿಯಾಯಿತಿ ನೀಡಲಾಗಿದೆ. ಎಲ್‌ಜಿ, ಒನ್‌ಪ್ಲಸ್‌, ರೆಡ್ಮಿ, ಸ್ಯಾಮ್‌ಸಂಗ್‌, ಎಂಐ, ಸೋನಿ, ವು ಅಗ್ರ ಬ್ರ್ಯಾಂಡ್‌ಗಳ ಟಿವಿಗಳ ಮೇಲೆ 50% ವರೆಗೆ ರಿಯಾಯಿತಿ ಪಡೆಯಬಹುದು. ಅಮೆಜಾನ್ ಫ್ಯಾಷನ್‌ ಮೇಲೆ 70% ವರೆಗೆ ರಿಯಾಯಿತಿ, ಅಮೆಜಾನ್‌ ಫ್ರೆಶ್‌ನಿಂದ ದಿನಸಿ ಮೇಲೆ 50% ವರೆಗೆ ರಿಯಾಯಿತಿ, ಬಾಂಬೇ ಶೇವಿಂಗ್‌ ಕಂಪನಿ, ಎನ್‌ಶೂರ್‌, ಕ್ಯಾಪಿವಾ, ಆಪ್ಟಿಮಮ್‌ ನ್ಯೂಟ್ರಿಶನ್‌, ಸಿರೋನಾ ಬ್ರ್ಯಾಂಡ್‌ಗಳ ಆರೋಗ್ಯ ಮತ್ತು ವೈಯಕ್ತಿಕ ಆರೈಕೆ ಉತ್ಪನ್ನಗಳ ಮೇಲೆ 60% ವರೆಗೆ ರಿಯಾಯಿತಿ ನೀಡಲಾಗಿದೆ.

ಇದನ್ನೂ ಓದಿ
Image
Galaxy F23 5G: ಬೆಲೆ ಕೇವಲ 15,000 ರೂ.: ಹೊಸ ಕಲರ್​ನಲ್ಲಿ ಗ್ಯಾಲಕ್ಸಿ F23 5G: ಬಂಪರ್ ಆಫರ್ ಮೂಲಕ ಖರೀದಿಸಿ
Image
iPhone SE 2022: ಐಫೋನ್ ಖರೀದಿಗೆ ಕ್ಯೂ ನಿಂತ ಜನರು: ಕೇವಲ 18,599 ರೂ. ಗೆ ಸಿಗುತ್ತಿದೆ ಆ್ಯಪಲ್ ಫೋನ್
Image
Smart TV: ಕೇವಲ 26 ಸಾವಿರಕ್ಕೆ 43 ಇಂಚಿನ ಸ್ಮಾರ್ಟ್ ಟಿವಿ: ಫೀಚರ್ಸ್ ನೋಡಿದ್ರೆ ಖರೀದಿಸದೆ ಇರಲ್ಲ
Image
ಐಫೋನ್ ಬಳಕೆದಾರರಿಗೆ ಸಿಹಿ ಸುದ್ದಿ, ಐಫೋನ್ಗಳಿಗು ಯುಎಸ್‌ಬಿ ಟೈಪ್-ಸಿ ಚಾರ್ಜರ್ ಅಳವಡಿಸಲು ಚಿಂತನೆ

ಇನ್ನು ಮನೆ ಮತ್ತು ಅಡುಗೆಮನೆ ಸಾಮಗ್ರಿಗಳ ಮೇಲೆ 70% ವರೆಗೆ ರಿಯಾಯಿತಿ ಘೋಷಿಸಲಾಗಿದೆ. ಪ್ರಮುಖ ಬ್ರ್ಯಾಂಡ್‌ಗಳ ಆಟಿಕೆಗಳು ಮತ್ತು ಗೇಮ್‌ಗಳ ಮೇಲೆ 70% ವರೆಗೆ ಡಿಸ್ಕೌಂಟ್, ಅಮೆಜಾನ್‌ ಎಕೋ, ಫೈರ್‌ ಟಿವಿ ಮತ್ತು ಕಿಂಡಲ್‌ ಸಾಧನಗಳ ಮೇಲೆ 50% ವರೆಗೆ ರಿಯಾಯಿತಿ, ಮೊಬೈಲ್‌ ಫೋನ್‌ಗಳು, ಎಲೆಕ್ಟ್ರಾನಿಕ್ಸ್‌, ಪಿಸಿ ಮತ್ತು ಇನ್ನಷ್ಟು ಸೇರಿದಂತೆ ರಿಫರ್ಬಿಶ್ ಮಾಡಿದ ಉತ್ಪನ್ನಗಳ ಮೇಲೆ 70% ವರೆಗೆ ರಿಯಾಯಿತಿ ಘೋಷಿಸಲಾಗಿದೆ.

ತಂತ್ರಜ್ಞಾನ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:49 pm, Tue, 17 May 22

ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ