Sign In

By signing in or creating an account, you agree with Associated Broadcasting Company's Terms & Conditions and Privacy Policy.

Amazon Summer Sale: ಅಮೆಜಾನ್​ನಲ್ಲಿ ಮೇ 4 ರಿಂದ ಸಮ್ಮರ್ ಸೇಲ್‌: ಸಾವಿರಕ್ಕೂ ಅಧಿಕ ಪ್ರಾಡಕ್ಟ್ ಮೇಲೆ ಬಂಪರ್ ಆಫರ್

ಅಮೆಜಾನ್ ಸಮ್ಮರ್‌ ಸೇಲ್‌ನಲ್ಲಿ ಆಕರ್ಷಕ ಡೀಲ್‌ಗಳು ಮತ್ತು ಅದ್ಭುತ ಸೇವಿಂಗ್ಸ್‌ ಇರಲಿದ್ದು, ಇತ್ತೀಚಿನ ಸ್ಮಾರ್ಟ್‌ಫೋನ್‌ಗಳು ಮತ್ತು ಅಕ್ಸೆಸರಿಗಳು, ಮನೆ ಮತ್ತು ಅಡುಗೆಮನೆ ಅಪ್ಲೈಯನ್ಸ್‌ಗಳು, ಫ್ಯಾಷನ್ ಮತ್ತು ಬ್ಯೂಟಿ ಅಗತ್ಯ ಸಾಮಗ್ರಿಗಳು, ದಿನಸಿ ಐಟಂಗಳು ಸೇರಿದಂತೆ ಅನೇಕ ಪ್ಗರಾಡಕ್ಟ್ ಮೇಲೆ ಬಂಪರ್ ಆಫರ್ ಘೋಷಿಸಲಾಗಿದೆ.

Amazon Summer Sale: ಅಮೆಜಾನ್​ನಲ್ಲಿ ಮೇ 4 ರಿಂದ ಸಮ್ಮರ್ ಸೇಲ್‌: ಸಾವಿರಕ್ಕೂ ಅಧಿಕ ಪ್ರಾಡಕ್ಟ್ ಮೇಲೆ ಬಂಪರ್ ಆಫರ್
Amazon Summer Sale 2022
Follow us
TV9 Web
| Updated By: Vinay Bhat

Updated on:May 02, 2022 | 1:42 PM

ಭಾರತದಲ್ಲಿ ಸಮ್ಮರ್ ಸೀಸನ್‌ ಆರಂಭವಾಗುತ್ತಿದ್ದಂತೆಯೇ, ಮೇ 04, 2022 ರಿಂದ ‘ಸಮ್ಮರ್ ಸೇಲ್’ (Amazon Summer Sale) ಅನ್ನು ಪ್ರಸಿದ್ಧ ಇ ಕಾಮರ್ಸ್​ ತಾಣವಾದ ಅಮೆಜಾನ್ ಘೋಷಿಸಿದೆ. ಈ ಸಮ್ಮರ್ ಸೇಲ್‌ನಲ್ಲಿ ಒನ್‌ಪ್ಲಸ್‌ (OnePlus), ಎಲ್‌ಜಿ, ಇಂಟೆಲ್‌, ಟೆಕ್ನೋ, ಫುಜಿತ್ಸು, ರಿನೀ ಮತ್ತು ಶುಗರ್‌ ಸೇರಿದಂತೆ ಹಲವು ಬ್ರ್ಯಾಂಡ್‌ಗಳಿಂದ ಭಾರಿ ಉಳಿತಾಯವನ್ನು ಗ್ರಾಹಕರು ಪಡೆಯಬಹುದು. ಇದೇ ಮೊದಲ ಬಾರಿಗೆ ಕೌಂಟ್‌ಡೌನ್‌ ಡೀಲ್‌ಗಳನ್ನು ಅಮೆಜಾನ್‌ ಪರಿಚಯಿಸುತ್ತಿದೆ. ಇದು ಎಲ್ಲ ಗ್ರಾಹಕರಿಗೆ ಮುಕ್ತವಾಗಲಿದೆ ಮತ್ತು ಆಯ್ದ ಕೊಡುಗೆಗಳನ್ನು ಮೇ 3 ರ ವರೆಗೆ ವಿಶಾಲ ಉತ್ಪನ್ನಗಳ ಶ್ರೇಣಿಗಳಿಗೆ ಮೊದಲೇ ಆಕ್ಸೆಸ್‌ ನೀಡಲಾಗುತ್ತದೆ. ಈ ಕೊಡುಗೆಗಳು ರಿಯಲ್‌ಮಿ, ಆ್ಯಪಲ್‌, ಸ್ಯಾಮ್‌ಸಂಗ್‌ (Samsung), ಒಪ್ಪೊ, ಬೋಟ್‌, ನಾಯ್ಸ್‌, ಫಾಸಿಲ್‌, ಫಾಸ್ಟ್ರಾಕ್‌, ಟೈಮೆಕ್ಸ್‌, ಅಮೆರಿಕನ್‌ ಟೂರಿಸ್ಟರ್, ಸಫಾರಿ, ಸ್ಕ್ಯಾಬ್ಯಾಗ್ಸ್‌, ಯುರೇಕಾ ಫೋರ್ಬ್ಸ್‌, ಫಿಲಿಪ್ಸ್‌, ಹೀರೋ ಸೈಕಲ್ಸ್‌ ಇತ್ಯಾದಿ ಬ್ರ್ಯಾಂಡ್‌ಗಳಮೇಲೆ ಲಭ್ಯವಿವೆ.

ಐಸಿಐಸಿಐ ಬ್ಯಾಂಕ್‌, ಕೊಟಕ್ ಮತ್ತು ಆರ್‌ಬಿಎಲ್‌ ಕ್ರೆಡಿಟ್‌/ಡೆಬಿಟ್ ಕಾರ್ಡ್‌ಗಳು, ಕ್ರೆಡಿಟ್/ಡೆಬಿಟ್‌ ಇಎಂಐ ವಹಿವಾಟುಗಳ ಮೇಲೆ ಹೆಚ್ಚುವರಿ 10% ತಕ್ಷಣದ ಬ್ಯಾಂಕ್‌ ರಿಯಾಯಿತಿಯನ್ನು ಗ್ರಾಹಕರು ಪಡೆಯಬಹುದು. ಹಾಗೆಯೆ ಡೆಬಿಟ್ ಮತ್ತು ಕ್ರೆಡಿಟ್‌ ಕಾರ್ಡ್‌ಗಳ ಮೇಲೆ ನೋ ಕಾಸ್ಟ್‌ ಇಎಂಐ ಮತ್ತು ಬಜಾಜ್‌ ಫಿನ್‌ಸರ್ವ್‌, ಎಕ್ಸ್‌ಚೇಂಜ್‌ ಕೊಡುಗೆಗಳು, ಇತರ ಪ್ರಮುಖ ಕ್ರೆಡಿಟ್‌/ಡೆಬಿಟ್‌ ಕಾರ್ಡ್‌ಗಳ ಮೇಲೆ ಆಕರ್ಷಕ ಕೊಡುಗೆಗಳು ಲಭ್ಯದ್ದು ಗ್ರಾಹಕರು ಹೆಚ್ಚು ಉಳಿತಾಯ ಮಾಡಬಹುದು. ಅಮೆಜಾನ್‌ ಪೇ ಐಸಿಐಸಿಐ ಬ್ಯಾಂಕ್‌ ಕ್ರೆಡಿಟ್ ಕಾರ್ಡ್‌ ಮೂಲಕ ಗ್ರಾಹಕರು ಶಾಪಿಂಗ್‌ ಮೇಲೆ 5% ವರೆಗೆ ಉಳಿತಾಯ ಮಾಡಬಹುದು.

ಹೊಸ ಬಳಕೆದಾರರು ಅಮೆಜಾನ್‌ ಪೇ ಯುಪಿಐ ಗೆ ಸೈನಪ್‌ ಮಾಡಿ ಖರೀದಿ ಮಾಡಬಹದು ಮತ್ತು ರೂ. 100 ಅಥವಾ 10% ವರೆಗೆ ಉಳಿತಾಯ ಮಾಡಬಹುದು. ರಿವಾರ್ಡ್ಸ್‌ ಹಬ್ಬದ ಅವಧಿಯಲ್ಲಿ ಹಣ ಕಳುಹಿಸುವುದು, ಬಿಲ್‌ ಪಾವತಿ ಮಾಡುವುದು ಹಾಗೂ ಇನ್ನಷ್ಟನ್ನು ಪ್ರತಿ ದಿನ ಮಾಡುವುದರ ಮೂಲಕ ಗ್ರಾಹಕರು ರೂ. 5,000 ವರೆಗೆ ಶಾಪಿಂಗ್‌ನಲ್ಲಿ ಉಳಿತಾಯ ಮಾಡಬಹುದು. ಮತ್ತು ಆಕರ್ಷಕ ಶಾಪಿಂಗ್‌ ರಿವಾರ್ಡ್‌ಗಳನ್ನೂ ಅನ್‌ಲಾಕ್‌ ಮಾಡಿಕೊಳ್ಳಬಹುದು ಹಾಗೂ ಇದನ್ನು ಸೇಲ್ ಅವಧಿಯಲ್ಲಿ ರಿಡೀಮ್ ಮಾಡಬಹುದು. ಅಮೆಜಾನ್‌ ಪೇ ಲೇಟರ್‌ ಬಳಸಿ ಬಳಕೆದಾರರು ಆಕ್ಟಿವೇಶನ್‌ ಮಾಡಿದಾಗ ರೂ. 150 ರ ಜೊತೆಗೆ ರೂ. 60,000 ವರೆಗೆ ತಕ್ಷಣದ ಕ್ರೆಡಿಟ್ ಪಡೆಯಬಹುದು.

Xiaomi 12 Pro 5G: 120W ಹೈಪರ್‌ ಚಾರ್ಜ್, 50MP ಕ್ಯಾಮೆರಾದ ಶವೋಮಿ 12 ಪ್ರೊ ಫೋನ್ ಮಾರಾಟ ಆರಂಭ: ಬೆಲೆ?

ಈ ಸಮ್ಮರ್ ಸೇಲ್‌ನಲ್ಲಿ ಒನ್‌ಪ್ಲಸ್‌, ಶವೋಮಿ, ಸ್ಯಾಮ್‌ಸಂಗ್‌, ರೆಡ್ಮಿ, ರಿಯಲ್‌ಮಿ, ಐಕ್ಯೂ, ಆ್ಯಪಲ್‌, ಟೆಕ್ನೋ, ಒಪ್ಪೊ ಸ್ಮಾರ್ಟ್​​ಫೋನ್​ಗಳಿಗೆ ಆಕರ್ಷಕ ಆಫರ್ ಘೋಷಿಸಲಾಗಿದೆ. ಹಾಗೆಯೆ ಇಂಟೆಲ್, ಸ್ಯಾಮ್‌ಸಂಗ್‌, ಆ್ಯಪಲ್‌, ಬೋಟ್‌, ಎಚ್‌ಪಿ, ಸೋನಿ ಸೇರಿದಂತೆ ಅಗ್ರ ಬ್ರ್ಯಾಂಡ್‌ಗಳ ಅಕ್ಸೆಸರಿಗಳು ಮತ್ತು ಎಲೆಕ್ಟ್ರಾನಿಕ್ಸ್‌ ಮೇಲೆ 70% ವರೆಗೆ ರಿಯಾಯಿತಿ ನೀಡಲಾಗಿದೆ. ಎಲ್‌ಜಿ, ಒನ್‌ಪ್ಲಸ್‌, ರೆಡ್ಮಿ, ಸ್ಯಾಮ್‌ಸಂಗ್‌, ಎಂಐ, ಸೋನಿ, ವು ಅಗ್ರ ಬ್ರ್ಯಾಂಡ್‌ಗಳ ಟಿವಿಗಳ ಮೇಲೆ 50% ವರೆಗೆ ರಿಯಾಯಿತಿ ಪಡೆಯಬಹುದು. ಅಮೆಜಾನ್ ಫ್ಯಾಷನ್‌ ಮೇಲೆ 70% ವರೆಗೆ ರಿಯಾಯಿತಿ, ಅಮೆಜಾನ್‌ ಫ್ರೆಶ್‌ನಿಂದ ದಿನಸಿ ಮೇಲೆ 50% ವರೆಗೆ ರಿಯಾಯಿತಿ, ಬಾಂಬೇ ಶೇವಿಂಗ್‌ ಕಂಪನಿ, ಎನ್‌ಶೂರ್‌, ಕ್ಯಾಪಿವಾ, ಆಪ್ಟಿಮಮ್‌ ನ್ಯೂಟ್ರಿಶನ್‌, ಸಿರೋನಾ ಬ್ರ್ಯಾಂಡ್‌ಗಳ ಆರೋಗ್ಯ ಮತ್ತು ವೈಯಕ್ತಿಕ ಆರೈಕೆ ಉತ್ಪನ್ನಗಳ ಮೇಲೆ 60% ವರೆಗೆ ರಿಯಾಯಿತಿ ನೀಡಲಾಗಿದೆ.

ಇನ್ನು ಮನೆ ಮತ್ತು ಅಡುಗೆಮನೆ ಸಾಮಗ್ರಿಗಳ ಮೇಲೆ 70% ವರೆಗೆ ರಿಯಾಯಿತಿ ಘೋಷಿಸಲಾಗಿದೆ. ಪ್ರಮುಖ ಬ್ರ್ಯಾಂಡ್‌ಗಳ ಆಟಿಕೆಗಳು ಮತ್ತು ಗೇಮ್‌ಗಳ ಮೇಲೆ 70% ವರೆಗೆ ಡಿಸ್ಕೌಂಟ್, ಅಮೆಜಾನ್‌ ಎಕೋ, ಫೈರ್‌ ಟಿವಿ ಮತ್ತು ಕಿಂಡಲ್‌ ಸಾಧನಗಳ ಮೇಲೆ 50% ವರೆಗೆ ರಿಯಾಯಿತಿ, ಮೊಬೈಲ್‌ ಫೋನ್‌ಗಳು, ಎಲೆಕ್ಟ್ರಾನಿಕ್ಸ್‌, ಪಿಸಿ ಮತ್ತು ಇನ್ನಷ್ಟು ಸೇರಿದಂತೆ ರಿಫರ್ಬಿಶ್ ಮಾಡಿದ ಉತ್ಪನ್ನಗಳ ಮೇಲೆ 70% ವರೆಗೆ ರಿಯಾಯಿತಿ ಘೋಷಿಸಲಾಗಿದೆ.

ಉಚಿತವಾಗಿ ಅಮೆಜಾನ್‌ ಮಿನಿಟಿವಿ ಮೂಲಕ ನಿರಂತರ ಮನರಂಜನೆ:

ಈ ಸಮ್ಮರ್ ಸೇಲ್‌ನಲ್ಲಿ, ಪಾವತಿ ಸಹಿತ ಚಂದಾದಾರಿಕೆ ಇಲ್ಲದೇ ಅಮೆಜಾನ್‌ ಶಾಪಿಂಗ್‌ ಆ್ಯಪ್‌ನೊಳಗೆ ಅಮೆಜಾನ್‌ ಮಿನಿಟಿವಿ ಉಚಿತವಾಗಿ ಪಡೆದು ನಿರಂತರ ಮನರಂಜನೆ ಪಡೆಯಿರಿ! ಭಾರತದ ಪ್ರಮುಖ ಕಾಮಿಡಿಯನ್ನರಾದ ಆಶಿಶ್‌ ಚಂಚ್ಲಾನಿ, ಬೀ ಯೌನಿಕ್, ಪ್ರಜಕ್ತಾ ಕೋಹ್ಲಿ ಮತ್ತು ಇನ್ನಿತರರ ವೀಡಿಯೋಗಳನ್ನು ವೀಕ್ಷಿಸಿ ಅಥವಾ ಮರ್ಡರ್‌ ಇನ್‌ ಅಗೊಂಡಾದಂತಹ ವೆಬ್‌ ಸಿರೀಸ್‌ಗಳನ್ನು ವೀಕ್ಷಿಸಿ, ಯಾತ್ರಿ ಕೃಪಯಾ ಧ್ಯಾನ್‌ ದೇ, 1800 ಲೈಫ್‌ ಮತ್ತು ಇತರ ಶಾರ್ಟ್‌ ಫಿಲಂಗಳನ್ನು ವೀಕ್ಷಿಸಿ. ಸಮ್ಮರ್ ಸೇಲ್‌ ಅವಧಿಯಲ್ಲಿ ನಿಮಗೆ ಖರೀದಿ ಮಾಡಲು ಸಹಾಯವಾಗುವ ಹೊಸ ಸ್ಮಾರ್ಟ್‌ಫೋನ್‌ ಮತ್ತು ಗ್ಯಾಜೆಟ್‌ಗಳನ್ನು ರಿವ್ಯೂ ಮಾಡುವ ಅಗ್ರ ಟೆಕ್‌ ಗುರುಗಳನ್ನೂ ನೀವು ನೋಡಬಹುದು.

ಬ್ಯುಸಿನೆಸ್ ಗ್ರಾಹಕರಿಗೆ ಭಾರಿ ಉಳಿತಾಯ:

ಬ್ಯುಸಿನೆಸ್ ಪೂರೈಕೆಗಳು ಮತ್ತು ಸಗಟು ಖರೀದಿಗೆ ಕೂಡ ಭಾರಿ ಉಳಿತಾಯವನ್ನು ಸಮ್ಮರ್ ಸೇಲ್‌ನಲ್ಲಿ ಮಾಡಬಹುದು. ಜಿಎಸ್‌ಟಿ ಇನ್ವಾಯ್ಸ್‌ ಸಹಿತ 28% ವರೆಗೆ ಹೆಚ್ಚುವರಿ ಉಳಿತಾಯ ಮತ್ತು ಬಲ್ಕ್‌ ಖರೀದಿ ರಿಯಾಯಿತಿಗಳೊಂದಿಗೆ 40% ವರೆಗೆ ಹೆಚ್ಚು ಉಳಿತಾಯವನ್ನು ಅಮೆಜಾನ್‌ ಬ್ಯುಸಿನೆಸ್ ಗ್ರಾಹಕರು ಮಾಡಬಹುದು. ಲೆನೊವೊ, ಕ್ಯಾನನ್‌, ಗೋದ್ರೇಜ್‌, ಬೋಟ್‌, ಬಾಷ್‌ ಮತ್ತು ಇತರೆ ಬ್ರ್ಯಾಂಡ್‌ಗಳಿಂದ ಲ್ಯಾಪ್‌ಟಾಪ್‌ಗಳು, ಹೆಡ್‌ಫೋನ್‌ಗಳು, ನೆಟ್‌ವರ್ಕಿಂಗ್ ಸಾಧನಗಳು, ಪಿಸಿ ಕಾಂಪೊನೆಂಟ್‌ಗಳು, ವೈಯಕ್ತಿ ಮತ್ತು ವರ್ಕ್‌ಪ್ಲೇಸ್‌ ಸುರಕ್ಷತೆ ಪ್ರಾಡಕ್ಟ್‌ಗಳು, ಪವರ್ ಟೂಲ್‌ಗಳು, ಪೀಠೋಪಕರಣ, ಸ್ಟೇಷನರಿ ಪ್ರಾಡಕ್ಟ್‌ಗಳಂತಹ 10 ಸಾವಿರಕ್ಕೂ ಹೆಚ್ಚು ಪ್ರಾಡಕ್ಟ್‌ಗಳ ಮೇಲೆ ಎಕ್ಸ್‌ಕ್ಲೂಸಿವ್ ಡೀಲ್‌ಗಳನ್ನು ಬ್ಯುಸಿನೆಸ್ ಗ್ರಾಹಕರು ಪಡೆಯಬಹುದು.

ತಂತ್ರಜ್ಞಾನ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:39 pm, Mon, 2 May 22

ಕಂದಾಯ ಮತ್ತು ಸರ್ವೇ ಇಲಾಖೆ ಅಧಿಕಾರಿಗಳಿಂದ ಮಾರ್ಕಿಂಗ್ ಕೆಲಸ ಶುರುವಾಗಿದೆ
ಕಂದಾಯ ಮತ್ತು ಸರ್ವೇ ಇಲಾಖೆ ಅಧಿಕಾರಿಗಳಿಂದ ಮಾರ್ಕಿಂಗ್ ಕೆಲಸ ಶುರುವಾಗಿದೆ
ತೆರವು ಕಾರ್ಯಾಚರಣೆ ಆರಂಭಿಸುವ ಮೊದಲು ನೋಟೀಸ್ ನೀಡಿಲ್ಲ: ಕುಮಾರಸ್ವಾಮಿ
ತೆರವು ಕಾರ್ಯಾಚರಣೆ ಆರಂಭಿಸುವ ಮೊದಲು ನೋಟೀಸ್ ನೀಡಿಲ್ಲ: ಕುಮಾರಸ್ವಾಮಿ
ನಮಗಾದರೋ ಕುಮಾರಸ್ವಾಮಿ ಎಲ್ಲದಕ್ಕೂ ರಾಜೀನಾಮೆ ಕೇಳುತ್ತಿದ್ದರಲ್ಲ? ಸಚಿವ
ನಮಗಾದರೋ ಕುಮಾರಸ್ವಾಮಿ ಎಲ್ಲದಕ್ಕೂ ರಾಜೀನಾಮೆ ಕೇಳುತ್ತಿದ್ದರಲ್ಲ? ಸಚಿವ
ತೋಟದ ಮನೆ ಸುತ್ತ ಸರ್ಕಾರಿ ಒತ್ತುವರಿ ಭೂಮಿ ತೆರವು: ಎಚ್​ಡಿಕೆ ಹೇಳಿದ್ದಿಷ್ಟು
ತೋಟದ ಮನೆ ಸುತ್ತ ಸರ್ಕಾರಿ ಒತ್ತುವರಿ ಭೂಮಿ ತೆರವು: ಎಚ್​ಡಿಕೆ ಹೇಳಿದ್ದಿಷ್ಟು
ಭಾರತೀಯ ಸಂಸ್ಕೃತಿಯ ರಾಯಭಾರಿ; ಅಂಧ ಯುವತಿಯ ಸ್ಫೂರ್ತಿಯ ಕತೆ ಹೇಳಿದ ಮೋದಿ
ಭಾರತೀಯ ಸಂಸ್ಕೃತಿಯ ರಾಯಭಾರಿ; ಅಂಧ ಯುವತಿಯ ಸ್ಫೂರ್ತಿಯ ಕತೆ ಹೇಳಿದ ಮೋದಿ
RCB ಅನ್​ಬಾಕ್ಸ್ ಕಾರ್ಯಕ್ರಮ ಮಿಸ್ ಮಾಡಿಕೊಂಡಿದ್ದೀರಾ? ಇಲ್ಲಿದೆ ವಿಡಿಯೋ
RCB ಅನ್​ಬಾಕ್ಸ್ ಕಾರ್ಯಕ್ರಮ ಮಿಸ್ ಮಾಡಿಕೊಂಡಿದ್ದೀರಾ? ಇಲ್ಲಿದೆ ವಿಡಿಯೋ
ಎಚ್​ಡಿಕೆ ತೋಟದ ಮನೆ ಸುತ್ತ ಎಷ್ಟು ಎಕರೆ ಒತ್ತುವರಿ?ಸ್ಫೋಟಕ ಮಾಹಿತಿ ಇಲ್ಲಿದೆ
ಎಚ್​ಡಿಕೆ ತೋಟದ ಮನೆ ಸುತ್ತ ಎಷ್ಟು ಎಕರೆ ಒತ್ತುವರಿ?ಸ್ಫೋಟಕ ಮಾಹಿತಿ ಇಲ್ಲಿದೆ
ಕೇಂದ್ರ ಸಚಿವರೊಬ್ಬರ ವಿರುದ್ಧ ಒತ್ತುವರಿ ಕಾರ್ಯಾಚರಣೆ ನಡೆದ ಪ್ರಕರಣಗಳು ವಿರಳ
ಕೇಂದ್ರ ಸಚಿವರೊಬ್ಬರ ವಿರುದ್ಧ ಒತ್ತುವರಿ ಕಾರ್ಯಾಚರಣೆ ನಡೆದ ಪ್ರಕರಣಗಳು ವಿರಳ
ಮುಸ್ಲಿಮರಿಗೆ ಶೇ 4 ಮೀಸಲಾತಿ ಸುಪ್ರೀಂ​ನಲ್ಲಿ ಪ್ರಶ್ನಿಸಲಾಗ್ತಿದೆ: ಬೊಮ್ಮಾಯಿ
ಮುಸ್ಲಿಮರಿಗೆ ಶೇ 4 ಮೀಸಲಾತಿ ಸುಪ್ರೀಂ​ನಲ್ಲಿ ಪ್ರಶ್ನಿಸಲಾಗ್ತಿದೆ: ಬೊಮ್ಮಾಯಿ
ತುಮಕೂರು: ಓರ್ವ ವಿದ್ಯಾರ್ಥಿನಿಗಾಗಿ ಒಂದು ಸರ್ಕಾರಿ ಶಾಲೆ, ಓರ್ವ ಶಿಕ್ಷಕಿ
ತುಮಕೂರು: ಓರ್ವ ವಿದ್ಯಾರ್ಥಿನಿಗಾಗಿ ಒಂದು ಸರ್ಕಾರಿ ಶಾಲೆ, ಓರ್ವ ಶಿಕ್ಷಕಿ