Amazon Summer Sale: ಭರ್ಜರಿ ಆಫರ್​ನೊಂದಿಗೆ ಮತ್ತೆ ಬರಲಿದೆ ಅಮೆಜಾನ್ ಸಮ್ಮರ್ ಸೇಲ್​

Amazon Summer Sale: ಭರ್ಜರಿ ಆಫರ್​ನೊಂದಿಗೆ ಮತ್ತೆ ಬರಲಿದೆ ಅಮೆಜಾನ್ ಸಮ್ಮರ್ ಸೇಲ್​

Amazon Summer Sale: ವೆಲ್ಕಮ್ ಆಫರ್ ಅಡಿಯಲ್ಲಿ ಗ್ರಾಹಕರಿಗೆ 10% ಕ್ಯಾಶ್‌ಬ್ಯಾಕ್ ಕೂಡ ನೀಡಲಾಗುತ್ತದೆ. ಈ ಮೂಲಕ ಮೊದಲ ಖರೀದಿಯ ಮೇಲೆ 250 ರೂ.ವರೆಗೆ ರಿಯಾಯಿತಿ ಪಡೆಯಬಹುದು.

TV9kannada Web Team

| Edited By: Zahir PY

Apr 27, 2022 | 5:15 PM

ಭರ್ಜರಿ ಕೊಡುಗೆಗಳೊಂದಿಗೆ ಅಮೆಜಾನ್ ಸಮ್ಮರ್ ಸೇಲ್ ಶೀಘ್ರದಲ್ಲೇ ಶುರುವಾಗಲಿದೆ. ಈ ಆಫರ್​ ಮೂಲಕ ಗ್ರಾಹಕರು ಕೋಟಾಕ್, ಐಸಿಐಸಿಐ, ಆರ್‌ಬಿಎಲ್‌ನ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್‌ಗಳ ಮೂಲಕ 10% ಡಿಸ್ಕೌಂಟ್ ಪಡೆಯಬಹುದು. ಇನ್ನು ನೀವು ಅಮೆಜಾನ್ ಪ್ರೈಮ್ ಸದಸ್ಯರಾಗಿದ್ದರೆ, ನೀವು 1,000 ಕ್ಕೂ ಹೆಚ್ಚು ವಿಶೇಷ ಕೊಡುಗೆಗಳು, ಹೆಚ್ಚುವರಿ ರಿವಾರ್ಡ್ ಪಾಯಿಂಟ್‌ಗಳು, ಅಮೆಜಾನ್ ಪೇ ಐಸಿಐಸಿಐ ಕಾರ್ಡ್ ಜೊತೆಗೆ ಲಾಭದ ಕೊಡುಗೆಗಳನ್ನು ಪಡೆಯುತ್ತೀರಿ ಎಂದು ಅಮೆಜಾನ್ ತಿಳಿಸಿದೆ.

ಇದಲ್ಲದೇ, ವೆಲ್ಕಮ್ ಆಫರ್ ಅಡಿಯಲ್ಲಿ ಗ್ರಾಹಕರಿಗೆ 10% ಕ್ಯಾಶ್‌ಬ್ಯಾಕ್ ಕೂಡ ನೀಡಲಾಗುತ್ತದೆ. ಈ ಮೂಲಕ ಮೊದಲ ಖರೀದಿಯ ಮೇಲೆ 250 ರೂ.ವರೆಗೆ ರಿಯಾಯಿತಿ ಪಡೆಯಬಹುದು. ಇದರ ಜೊತೆಗೆ ಗ್ಯಾಜೆಟ್‌ಗಳು, ಟಿವಿಗಳು, ಸ್ಮಾರ್ಟ್‌ಫೋನ್‌ಗಳಂತಹ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳ ಮೇಲೆ ಕೂಡ ಆಫರ್ ಸಿಗಲಿದೆ.

ಹಾಗೆಯೇ ಈ ಆಫರ್​ ಅಡಿಯಲ್ಲಿ ಬ್ಲಾಕ್‌ಬಸ್ಟರ್ ಡೀಲ್‌ಗಳು, ರೂ.499 ಕ್ಕಿಂತ ಕಡಿಮೆ ಡೀಲ್‌ಗಳು, Amazon ಕಾಂಬೊದಲ್ಲಿ 40% ರಿಯಾಯಿತಿ, ಅಮೆಜಾನ್ ಕೂಪನ್‌ಗಳ ಮೂಲಕವೂ ಅನೇಕ ಉಳಿತಾಯಗಳನ್ನು ಮಾಡಬಹುದು. ಇನ್ನು Tecno ಕಂಪೆನಿಯ ಫೋನ್‌ಗಳಲ್ಲಿ 28% ವರೆಗೆ ರಿಯಾಯಿತಿ, LG ಉತ್ಪನ್ನಗಳ ಮೇಲೆ 35% ರಿಯಾಯಿತಿ, ಇಂಟೆಲ್‌ನಲ್ಲಿ 40% ರಿಯಾಯಿತಿ ಕೂಡ ಸಿಗಲಿದೆ.

ಇನ್ನು ಮೊದಲ ಫ್ಯಾಷನ್ ಆರ್ಡರ್‌ನಲ್ಲಿ 200 ಕ್ಯಾಶ್‌ಬ್ಯಾಕ್ ನೀಡಲಾಗುತ್ತಿದೆ. ವಿಶೇಷ ಎಂದರೆ ಈ ಉತ್ಪನ್ನಗಳ ಮೇಲೆ 30-ದಿನಗಳ ರಿಟರ್ನ್ ಪಾಲಿಸಿಯನ್ನು ಒಳಗೊಂಡಿದೆ. ಎಲೆಕ್ಟ್ರಾನಿಕ್ ಉತ್ಪನ್ನಗಳು ರೂ.99 ರ ಆರಂಭಿಕ ಬೆಲೆಯಲ್ಲಿ ಲಭ್ಯ ಇರಲಿದ್ದು, ಇದರಲ್ಲಿ ರೂ 899 ರಿಂದ ಪ್ರಾರಂಭವಾಗುವ ಹೆಡ್‌ಫೋನ್‌ಗಳು, ರೂ 299 ರಿಂದ ಪ್ರಾರಂಭವಾಗುವ ಕ್ಯಾಮೆರಾ ಆಕ್ಸೆಸರೀಸ್, ರೂ 1,499 ರಿಂದ ಪ್ರಾರಂಭವಾಗುವ ಫಿಟ್‌ನೆಸ್ ಟ್ರ್ಯಾಕ್‌ಗಳು ಕೂಡ ಇರಲಿದೆ. ಹಾಗೆಯೇ ಗ್ರಾಹಕರು ಮೊಬೈಲ್ ಉತ್ಪನ್ನಗಳ ಮೇಲೆ 40% ರಿಯಾಯಿತಿಯನ್ನು ಪಡೆಯಲಿದ್ದಾರೆ. ಈ ಆಫರ್ ಅಡಿಯಲ್ಲಿ ರೂ.6,599 ರ ಆರಂಭಿಕ ಬೆಲೆಯಲ್ಲಿ ಬಜೆಟ್ ಸ್ಮಾರ್ಟ್​ಫೋನ್​ಗಳನ್ನು ಕೂಡ ಖರೀದಿಸಬಹುದಾಗಿದೆ.

ಇದನ್ನೂ ಓದಿ: IPL 2022 VIDEO: ಏನೋ ಮಾಡ್ತೀಯಾ..? ಮೈದಾನದಲ್ಲೇ ಜಗಳಕ್ಕಿಳಿದ ಹರ್ಷಲ್-ಪರಾಗ್

ಇದನ್ನೂ ಓದಿ: KL Rahul: ಶತಕದ ಪಂದ್ಯದಲ್ಲಿ ಸೆಂಚುರಿ ಸಿಡಿಸಿ ದಾಖಲೆ ಬರೆದ ಕೆಎಲ್ ರಾಹುಲ್

Follow us on

Related Stories

Most Read Stories

Click on your DTH Provider to Add TV9 Kannada