Google Smartwatch: ಶೀಘ್ರದಲ್ಲೇ ಬರಲಿದೆ ಗೂಗಲ್ ಪಿಕ್ಸೆಲ್ ಸ್ಮಾರ್ಟ್‌ವಾಚ್
Google pixel smartwatch launch: ಆಂಡ್ರಾಯ್ಡ್ ಸೆಂಟ್ರಲ್ ಹಂಚಿಕೊಂಡ ಫೋಟೋವನ್ನು ಆಧರಿಸಿ, ಕಂಪನಿಯು ಪಿಕ್ಸೆಲ್ ವಾಚ್‌ನಲ್ಲಿ ಆ್ಯಪಲ್ ವಾಚ್‌ನಂತಹ ಕೆಲವು ಬಟನ್‌ಗಳನ್ನು ಸಹ ನೀಡಬಹುದು. ಇದರೊಂದಿಗೆ ಸ್ಮಾರ್ಟ್ ಬ್ಯಾಂಡ್ ಅನ್ನು ಸಹ ನೋಡಬಹುದಾಗಿದೆ.
Google pixel smartwatch: ಗೂಗಲ್ ಪಿಕ್ಸೆಲ್ ಸ್ಮಾರ್ಟ್ ವಾಚ್ ಕಳೆದ ಹಲವು ವಾರಗಳಿಂದ ಚರ್ಚೆಯಲ್ಲಿದೆ. ಹೀಗಾಗಿಯೇ ಗೂಗಲ್ ತನ್ನ ಹೊಸ ಸ್ಮಾರ್ಟ್ ವಾಚ್ ಅನ್ನು ಪಿಕ್ಸೆಲ್ ಹೆಸರಿನಲ್ಲಿ ಶೀಘ್ರದಲ್ಲೇ ಬಿಡುಗಡೆ ಮಾಡಬಹುದು ಎಂಬ ವರದಿಗಳಾಗಿವೆ. ಗೂಗಲ್ ಪ್ರಸ್ತುತ ಪಡಿಸಲಿರುವ ಹೊಸ ಸ್ಮಾರ್ಟ್ ವಾಚ್‌ನ ಕೆಲವು ಫೋಟೋಗಳು ಇದೀಗ ಸೋರಿಕೆಯಾಗಿದ್ದು, ಭಾರೀ ಕುತೂಹಲವನ್ನು ಹುಟ್ಟುಹಾಕಿದೆ. ಸೋರಿಕೆಯಾದ ಫೋಟೋದಲ್ಲಿ, ಈ ಸ್ಮಾರ್ಟ್‌ವಾಚ್‌ನ ಕೆಲವು ವೈಶಿಷ್ಟ್ಯಗಳು ಆ್ಯಪಲ್‌ನ ಸ್ಮಾರ್ಟ್‌ವಾಚ್‌ನಂತೆ ಕಂಡು ಬರುತ್ತಿವೆ .
ಪಿಕ್ಸೆಲ್ ಸ್ಮಾರ್ಟ್ ವಾಚ್ ವಿನ್ಯಾಸ: ಸೋರಿಕೆಯಾದ ಫೋಟೋದ ಬಗ್ಗೆ ಹೇಳುವುದಾದರೆ, ಮುಂಬರುವ ಸ್ಮಾರ್ಟ್ ವಾಚ್ ಅತ್ಯುತ್ತಮ ವಿನ್ಯಾಸವನ್ನು ಹೊಂದಿದೆ. ಆಂಡ್ರಾಯ್ಡ್ ಸೆಂಟ್ರಲ್ ಹಂಚಿಕೊಂಡ ಫೋಟೋವನ್ನು ಆಧರಿಸಿ, ಕಂಪನಿಯು ಪಿಕ್ಸೆಲ್ ವಾಚ್‌ನಲ್ಲಿ ಆ್ಯಪಲ್ ವಾಚ್‌ನಂತಹ ಕೆಲವು ಬಟನ್‌ಗಳನ್ನು ಸಹ ನೀಡಬಹುದು. ಇದರೊಂದಿಗೆ ಸ್ಮಾರ್ಟ್ ಬ್ಯಾಂಡ್ ಅನ್ನು ಸಹ ನೋಡಬಹುದಾಗಿದೆ. ಹಾಗೆಯೇ ಈ ಸ್ಮಾರ್ಟ್‌ವಾಚ್ ಮೂಲಕ ಗೂಗಲ್ನ ಹಲವು ಫೀಚರ್ಗಳನ್ನು ನಿರಾಯಾಸವಾಗಿ ಬಳಸಬಹುದು ಎಂದು ಹೇಳಲಾಗಿದೆ.
ಬಿಡುಗಡೆ ಯಾವಾಗ? ಪಿಕ್ಸೆಲ್ ಸ್ಮಾರ್ಟ್ ವಾಚ್ ಅನ್ನು ‘ರೋಹನ್’ ಕೋಡ್ನೇಮ್ನಿಂದ ಕರೆಯಲಾಗುತ್ತಿದೆ. ಪ್ರಸಿದ್ಧ ಟಿಪ್‌ಸ್ಟರ್ ಇವಾನ್ ಬ್ಲಾಸ್ ಅವರ ಟ್ವೀಟ್ ಪ್ರಕಾರ, ಪಿಕ್ಸೆಲ್ ರೋಹನ್ ಅನ್ನು ಶೀಘ್ರದಲ್ಲೇ ಬಿಡುಗಡೆ ಮಾಡಬಹಹುದು. ಅದೇ ಸಮಯದಲ್ಲಿ, ಇನ್ನೊಬ್ಬ ಪ್ರಸಿದ್ಧ ಟಿಪ್‌ಸ್ಟರ್ ಜಾನ್ ಪ್ರಾಸ್ಸರ್ ಅವರು ಸಹ ಹೊಸ ಸ್ಮಾರ್ಟ್‌ವಾಚ್ ಅನ್ನು ಗೂಗಲ್ 2022 ನಲ್ಲಿ ಬಿಡುಗಡೆ ಮಾಡಲಿದೆ ಎಂದಿದ್ದಾರೆ. ಹೀಗಾಗಿ ಅತೀ ಶೀಘ್ರದಲ್ಲೇ ಹೊಸ ಸ್ಮಾರ್ಟ್‌ವಾಚ್ ಬಿಡುಗಡೆಯಾಗುವ ಸಾಧ್ಯತೆಯಿದೆ.
ಇದನ್ನೂ ಓದಿ: IPL 2022 VIDEO: ಏನೋ ಮಾಡ್ತೀಯಾ..? ಮೈದಾನದಲ್ಲೇ ಜಗಳಕ್ಕಿಳಿದ ಹರ್ಷಲ್-ಪರಾಗ್
ಇದನ್ನೂ ಓದಿ: KL Rahul: ಶತಕದ ಪಂದ್ಯದಲ್ಲಿ ಸೆಂಚುರಿ ಸಿಡಿಸಿ ದಾಖಲೆ ಬರೆದ ಕೆಎಲ್ ರಾಹುಲ್