ಮೋಟೋರೊಲಾ ಕಂಪನಿ ತನ್ನ ಬಜೆಟ್-ಕೇಂದ್ರಿತ ಮೋಟೋ G-ಸರಣಿಯ ಅಡಿಯಲ್ಲಿ ಹೊಸ ಮೋಟೋ ಜಿ84 5ಜಿ (Moto G84 5G) ಸ್ಮಾರ್ಟ್‌ಫೋನ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ಫೋನ್‌ನ ಬೆಲೆ 20,000ರೂ. ಗಿಂತ ಕಡಿಮೆ ಇದೆ. ಈ ಫೋನನ್ನು ಯುವ ಗ್ರಾಹಕರಿಗೆ ವಿಶೇಷವಾಗಿ ಕಾಲೇಜು ವಿದ್ಯಾರ್ಥಿಗಳಿಗೆ ವಿನ್ಯಾಸಗೊಳಿಸಲಾಗಿದೆ ಎಂದು ಕಂಪನಿ ಹೇಳಿದೆ. ಈ ಫೋನ್ ಆಕರ್ಷಕ ಕ್ಯಾಮೆರಾ, ವೇಗದ ಚಾರ್ಜಿಂಗ್ ಮತ್ತು ಟ್ರೆಂಡಿ ವಿನ್ಯಾಸವನ್ನು ಒಳಗೊಂಡಿವೆ. ಮೋಟೋ G84 ಫೋನ್ G-ಸರಣಿ ಶ್ರೇಣಿಯಲ್ಲಿ Pantone ಬಣ್ಣದ ಆವೃತ್ತಿಯಲ್ಲಿ ರಿಲೀಸ್ ಆದ ಮೊದಲ ಸ್ಮಾರ್ಟ್‌ಫೋನ್ ಆಗಿದೆ. ಈ ಫೋನಿನ ಬೆಲೆ, ಫೀಚರ್ಸ್ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
ಮೋಟೋ G84 5G ಸ್ಮಾರ್ಟ್‌ಫೋನ್ ಸದ್ಯಕ್ಕೆ ಭಾರತದಲ್ಲಿ ಕೇವಲ ಒಂದು ಸಂಗ್ರಹಣೆಯಲ್ಲಿ ಮಾತ್ರ ಅನಾವರಣಗೊಂಡಿದೆ. ಇದರ 12GB RAM + 256GB ಸ್ಟೋರೇಜ್ ಸಾಮರ್ಥ್ಯಕ್ಕೆ 19,999 ರೂ. ನಿಗದಿ ಮಾಡಲಾಗಿದೆ. ಬ್ಯಾಂಕ್ ಅಥವಾ ವಿನಿಮಯ ಕೊಡುಗೆಗಳೊಂದಿಗೆ, ಗ್ರಾಹಕರು ಬೆಲೆಯನ್ನು 18,999 ರೂ. ಗೆ ಇಳಿಸಬಹುದು. ಈ ಫೋನಿನ ವಿವಾ ಮೆಜೆಂಟಾ ಮತ್ತು ಮಾರ್ಷ್‌ಮ್ಯಾಲೋ ಬ್ಲೂ ಆಯ್ಕೆಗಳು ಲೆದರ್ ಫಿನಿಶ್ ಹೊಂದಿದ್ದರೆ, ಮಿಡ್‌ನೈಟ್ ಬ್ಲೂ ರೂಪಾಂತರವು ಗಾಜಿನಂತಹ PMMA ವಸ್ತುವನ್ನು ಹೊಂದಿದೆ.
ಐಫೋನ್ 15 ಸರಣಿ ಬಿಡುಗಡೆ ದಿನಾಂಕ ಘೋಷಿಸಿದ ಆ್ಯಪಲ್: ಯಾವಾಗ?
ಮೋಟೋ G84 5G ಫೋನಿನ ಮೊದಲ ಮಾರಾಟವು ಸೆಪ್ಟೆಂಬರ್ 8 ರಂದು ನಡೆಯಲಿದೆ. ಈ ಸ್ಮಾರ್ಟ್‌ಫೋನ್ ಫ್ಲಿಪ್‌ಕಾರ್ಟ್, ರಿಲಯನ್ಸ್ ಡಿಜಿಟಲ್ ಮತ್ತು ಆಫ್‌ಲೈನ್ ಸ್ಟೋರ್‌ಗಳಲ್ಲಿ ಲಭ್ಯವಿರುತ್ತದೆ. ಐಸಿಐಸಿಐ ಬ್ಯಾಂಕ್ ಕೊಡುಗೆಯೊಂದಿಗೆ, ಫೋನ್ ಅನ್ನು 1,000 ರೂ. ರಿಯಾಯಿತಿ ದರದೊಂದಿಗೆ ಖರೀದಿಸಬಹುದು.
ಮೋಟೋ G84 ಸ್ಮಾರ್ಟ್‌ಫೋನ್ 120Hz ರಿಫ್ರೆಶ್ ರೇಟ್ ಮತ್ತು 1300 nits ಗರಿಷ್ಠ ಬ್ರೈಟ್ನೆಸ್ ಹೊಂದಿರುವ 10-ಬಿಟ್ 6.5-ಇಂಚಿನ pOLED ಡಿಸ್ ಪ್ಲೇಯನ್ನು ಹೊಂದಿದೆ. ಭದ್ರತೆಗಾಗಿ, ಆನ್-ಸ್ಕ್ರೀನ್ ಫಿಂಗರ್‌ಪ್ರಿಂಟ್ ಸಂವೇದಕವನ್ನು ಹೊಂದಿದೆ. ಬಲಿಷ್ಠವಾದ ಸ್ನಾಪ್‌ಡ್ರಾಗನ್ 695 ಪ್ರೊಸೆಸರ್ ಮೂಲಕ ಕಾರ್ಯನಿರ್ವಹಿಸುತ್ತಿದ್ದು, 256GB UFS 2.2 ಸಂಗ್ರಹಣೆಯೊಂದಿಗೆ ಬರುತ್ತದೆ. ಆಂಡ್ರಾಯ್ಡ್ 13 ನೊಂದಿಗೆ ರನ್ ಆಗುತ್ತದೆ. ಆದರೂ ಇದು ಆಂಡ್ರಾಯ್ಡ್ 14 ಅಪ್ಡೇಟ್ ಸ್ವೀಕರಿಸಲಿದೆಯಂತೆ. ಆದರೆ, ಇದು ಇತರೆ ಸ್ಮಾರ್ಟ್ಫೋನ್ಗಳಿಗೆ ಹೋಲಿಸಿದರೆ ಕೊಂಚ ತಡವಾಗಿ ಅಪ್ಡೇಟ್ ನೀಡಲಿದೆ.
Own the spotlight with the chic #motog84_5G, designed to turn heads your way. Immerse yourself in the mesmerizing Pantone™ shades, complemented by the luxurious touch of Vegan Leather. Launching tomorrow on @flipkart, https://t.co/azcEfy2uaW, and leading retail stores.
— Motorola India (@motorolaindia) August 31, 2023
ಹಿಂಭಾಗವು ಎರಡು ಕ್ಯಾಮೆರಾಗಳನ್ನು ಒಳಗೊಂಡಿದೆ 50-ಮೆಗಾಪಿಕ್ಸೆಲ್ OIS ಕ್ಯಾಮೆರಾ ಮತ್ತು 8-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಕ್ಯಾಮೆರಾ ನೀಡಲಾಗಿದೆ. ಹೆಚ್ಚುವರಿಯಾಗಿ ಮ್ಯಾಕ್ರೋ ಅಥವಾ ಡೆಪ್ತ್ ಕ್ಯಾಮೆರಾಗಳ ಆಯ್ಕೆ ನೀಡಲಾಗಿಲ್ಲ. ಬದಲಿಗೆ, ಸೆಕೆಂಡರಿ ಕ್ಯಾಮೆರಾದಲ್ಲಿ ಮ್ಯಾಕ್ರೋ ಫೋಟೋಗಳನ್ನು ತೆಗೆಯಬಹುದು. ಮುಂಭಾಗ ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ 16-ಮೆಗಾಪಿಕ್ಸೆಲ್ ಕ್ಯಾಮೆರಾ ಅಳವಡಿಸಲಾಗಿದೆ.
ಮೋಟೋ G84 ಸ್ಮಾರ್ಟ್‌ಫೋನ್ 30W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುವ 5,000mAh ಬ್ಯಾಟರಿಯಿಂದ ಚಾಲಿತವಾಗಿದೆ. ಈ ಫೋನ್ ಮೋಟೋ Spatial ಆಡಿಯೋ ಬೆಂಬಲದೊಂದಿಗೆ ಡಾಲ್ಬಿ ಅಟ್ಮಾಸ್ ಸ್ಪೀಕರ್‌ಗಳನ್ನು ಹೊಂದಿದೆ. ಡ್ಯುಯಲ್ ಸಿಮ್, 5G, Wi-Fi 802.11ax, ಬ್ಲೂಟೂತ್ 5.1, GPS, NFC, USB ಟೈಪ್-C ಪೋರ್ಟ್, Dolby Atmos ಮತ್ತು Moto ಸ್ಪಾಟಿಯಲ್ ಸೌಂಡ್ ಬೆಂಬಲದೊಂದಿಗೆ ಡ್ಯುಯಲ್ ಸ್ಟಿರಿಯೊ ಸ್ಪೀಕರ್‌ಗಳು, 3.5mm ಆಡಿಯೋದಂತಹ ಇತರ ವೈಶಿಷ್ಟ್ಯಗಳೊಂದಿಗೆ ಬರುತ್ತದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ