ಮೋಟೋರೊಲಾ (Motorola) ಕಂಪನಿ ಹೊಸ ಸ್ಮಾರ್ಟ್‌ಫೋನ್ ಮೂಲಕ ಭಾರತದಲ್ಲಿ ಧೂಳೆಬ್ಬಿಸಲು ಬರುತ್ತಿದೆ. ಮುಂದಿನ ವಾರ ಭಾರತದ ಮಾರುಕಟ್ಟೆಯಲ್ಲಿ ಮೋಟೋ G24 ಪವರ್ ಫೋನ್ ಅನಾವರಣಗೊಳ್ಳಲಿದೆ. ಚೀನಾದ ಸ್ಮಾರ್ಟ್‌ಫೋನ್ ಮಾರಾಟಗಾರರು ತನ್ನ ಅಧಿಕೃತ ಸಾಮಾಜಿಕ ಮಾಧ್ಯಮದಲ್ಲಿ ಹೊಸ ಮೋಟೋ ಜಿ ಸರಣಿಯ ಸ್ಮಾರ್ಟ್‌ಫೋನ್ ಬಿಡುಗಡೆ ಬಗ್ಗೆ ಮಾಹಿತಿ ಹಂಚಿಕೊಂಡಿದೆ. ಮೋಟೋರೊಲಾ ತನ್ನ ಭಾರತದ ವೆಬ್‌ಸೈಟ್‌ನಲ್ಲಿ ಹೊಸ ಫೋನಿನ ವಿನ್ಯಾಸ ಮತ್ತು ಕೆಲ ಫೀಚರ್ಸ್ ಬಗ್ಗೆ ಬಹಿರಂಗ ಪಡಿಸಿದೆ. ಇದು ಬರೋಬ್ಬರಿ 6,000mAh ಬ್ಯಾಟರಿಯೊಂದಿಗೆ ಬರುತ್ತದೆ.
ಮೋಟೋರೊಲಾ ತನ್ನ ಅಧಿಕೃತ X ಖಾತೆಯಲ್ಲಿ ಮೋಟೋ G24 ಪವರ್ ಭಾರತದಲ್ಲಿ ಜನವರಿ 30 ರಂದು ಬಿಡುಗಡೆಯಾಗಲಿದೆ ಎಂದು ಹೇಳಿದೆ. ಇದು ಕಂಪನಿಯ ಅಧಿಕೃತ ವೆಬ್‌ಸೈಟ್, ಫ್ಲಿಪ್‌ಕಾರ್ಟ್ ಮತ್ತು ಇತರ ಪ್ರಮುಖ ಚಿಲ್ಲರೆ ಅಂಗಡಿಗಳ ಮೂಲಕ ಮಾರಾಟವಾಗಲಿದೆ ಎಂದು ಖಚಿತಪಡಿಸಿದೆ. ಲೆನೊವೊ ಅಂಗಸಂಸ್ಥೆ ಮತ್ತು ಫ್ಲಿಪ್‌ಕಾರ್ಟ್ ಈ ಸ್ಮಾರ್ಟ್‌ಫೋನ್‌ನ ಪ್ರಮುಖ ಫೀಚರ್ಗೆ ಮೀಸಲಾದ ಮೈಕ್ರೋಸೈಟ್ ಮೂಲಕ ತಿಳಿಸಿದೆ.
Mobile Data Saver: ಮೊಬೈಲ್ ಇಂಟರ್ನೆಟ್ ಬೇಗ ಖಾಲಿ ಆಗ್ತಾ ಇದ್ಯಾ? ಈ ಟ್ರಿಕ್ಸ್ ನೋಡಿ
ಮೋಟೋ G24 ಪವರ್ ಅನ್ನು ಗ್ಲೇಸಿಯರ್ ಬ್ಲೂ ಮತ್ತು ಇಂಕ್ ಬ್ಲೂ ಬಣ್ಣಗಳಲ್ಲಿ ನೀಡಲಾಗುವುದು ಎಂದು ದೃಢಪಡಿಸಲಾಗಿದೆ. ಇದು ಆಂಡ್ರಾಯ್ಡ್ 14 ಮೂಲಕ ರನ್ ಆಗುತ್ತದೆ. 90Hz ರಿಫ್ರೆಶ್ ದರದೊಂದಿಗೆ 6.56-ಇಂಚಿನ HD+ ಡಿಸ್ಪ್ಲೇಯನ್ನು ಹೊಂದಿದೆ. ಹ್ಯಾಂಡ್‌ಸೆಟ್ ಮೀಡಿಯಾಟೆಕ್ ಹಿಲಿಯೊ G85 SoC ನಿಂದ ಚಾಲಿತವಾಗಿದೆ, ಜೊತೆಗೆ 8GB ಯ RAM ಮತ್ತು 128GB ಸಂಗ್ರಹಣೆಯನ್ನು ಹೊಂದಿರುತ್ತದೆ.
ಕ್ಯಾಮೆರಾ ವಿಚಾರಕ್ಕೆ ಬಂದರೆ, ಮೋಟೋ G24 ಪವರ್ ಡ್ಯುಯಲ್ ರಿಯರ್ ಕ್ಯಾಮೆರಾ ಘಟಕವನ್ನು ಹೊಂದಿದೆ. ಇದು 2-ಮೆಗಾಪಿಕ್ಸೆಲ್ ಮ್ಯಾಕ್ರೋ ಶೂಟರ್ ಜೊತೆಗೆ ಕ್ವಾಡ್ ಪಿಕ್ಸೆಲ್ ತಂತ್ರಜ್ಞಾನದೊಂದಿಗೆ 50-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾವನ್ನು ಒಳಗೊಂಡಿರುವ ಸಾಧ್ಯತೆ ಇದೆ. ಸೆಲ್ಫಿಗಳು ಮತ್ತು ವಿಡಿಯೋ ಚಾಟ್‌ಗಳಿಗಾಗಿ 16-ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾ ನೀಡಲಾಗಿದೆ.
ಡಾಲ್ಬಿ ಅಟ್ಮಾಸ್‌ನಿಂದ ಬೆಂಬಲಿತವಾದ ಸ್ಟಿರಿಯೊ ಸ್ಪೀಕರ್‌ಗಳು ಇವೆ. ದೃಢೀಕರಣಕ್ಕಾಗಿ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅನ್ನು ಅಳವಡಿಸಲಾಗಿದೆ. 33W ವೇಗದ ಚಾರ್ಜಿಂಗ್‌ಗೆ ಬೆಂಬಲದೊಂದಿಗೆ 6,000mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ. ಮೋಟೋ G24 ಪವರ್ ಬೆಲೆ ವಿವರಗಳು ಸದ್ಯಕ್ಕೆ ತಿಳಿದಿಲ್ಲ. ಆದಾಗ್ಯೂ, ಹ್ಯಾಂಡ್‌ಸೆಟ್‌ನ ಬೆಲೆ ಸುಮಾರು 10,000 ರೂ. ಎಂದು ನಾವು ನಿರೀಕ್ಷಿಸಬಹುದು.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ