ಮೊಬೈಲ್ ಮಾರುಕಟ್ಟೆಯಲ್ಲಿ ಸಾಕಷ್ಟು ಹೆಸರು ಮಾಡಿರುವ ಮೋಟೋರೊಲಾ (Motorola) ಕಂಪನಿ ಈಗೀಗ ಬಜೆಟ್ ಬೆಲೆಗೆ ಆಕರ್ಷಕ ಸ್ಮಾರ್ಟ್ಫೋನ್ಗಳನ್ನು (Smartphone) ಪರಿಚಯಿಸಿ ಭದ್ರವಾಗಿ ನೆಲೆಯೂರಲು ಪ್ರಯತ್ನ ಪಡುತ್ತಿದೆ. ಹೆಚ್ಚಾಗಿ ಕಡಿಮೆ ಬೆಲೆಯ ಸ್ಮಾರ್ಟ್ಫೋನ್ಗಳಿಂದಲೇ ಭರ್ಜರಿ ಸುದ್ದಿಯಲ್ಲಿರುವ ಮೋಟೋ (Moto) ಕಂಪನಿ ಕಳೆದ ವಾರವಷ್ಟೆ ಭಾರತದಲ್ಲಿ ಹೊಸದಾಗಿ ಬಿಡುಗಡೆ ಆಗಿರುವ ಮೋಟೋ ಜಿ31 (Moto G31) ಸ್ಮಾರ್ಟ್‌ಫೋನ್ ಇಂದು ಮೊದಲ ಸೇಲ್ ಕಾಣುತ್ತಿದೆ. ಇಂದು ಮಧ್ಯಾಹ್ನ 12 ಗಂಟೆಯಿಂದ ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್‌ಕಾರ್ಟ್ (Flipkart) ತಾಣದಲ್ಲಿ ಮಾರಾಟ ಪ್ರಾರಂಭಿಸಿದೆ. ಮೀಡಿಯಾ ಟೆಕ್ ಹಿಲಿಯೋ ಪ್ರೊಸೆಸರ್, ಅತ್ಯುತ್ತಮ ಬ್ಯಾಟರಿ, ಕ್ಯಾಮೆರಾ ಇರುವ ಈ ಸ್ಮಾರ್ಟ್ಫೋನಿನ ಫೀಚರ್ಸ್‌ಗಳು ಹೇಗಿವೆ ಎಂಬುದನ್ನು ನೋಡುವುದಾದರೆ…
ಮೋಟೋ G31 ಸ್ಮಾರ್ಟ್‌ಫೋನ್ 1080 x 2400 ಪಿಕ್ಸಲ್ ರೆಸಲ್ಯೂಶನ್ ಸಫೋರ್ಟ್ ಪಡೆದಿದ್ದು, 6.4 ಇಂಚಿನ ಪೂರ್ಣ ಹೆಚ್‌ಡಿ OLED ಡಿಸ್‌ಪ್ಲೇ ಪಡೆದಿದೆ. ಮೀಡಿಯಾ ಟೆಕ್ ಹಿಲಿಯೋ G85 ಪ್ರೊಸೆಸರ್ ವೇಗವನ್ನು ಹೊಂದಿದೆ. ಅಲ್ಲದೆ ಆಂಡ್ರಾಯ್ಡ್ 11 ಓಎಸ್ ಬೆಂಬಲದೊಂದಿಗೆ ಕಾರ್ಯ ನಿರ್ವಹಿಸಲಿದೆ. ಹಾಗೇಯೇ ಈ ಸ್ಮಾರ್ಟ್‌ಫೋನ್ 4GB RAM + 64GB ಮತ್ತು 6GB RAM + 128GB ಸ್ಟೋರೇಜ್ ವೇರಿಯಂಟ್ ಆಯ್ಕೆಗಳನ್ನು ಹೊಂದಿದೆ.
ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾ ಪಿಕ್ಸಲ್ ಸೆನ್ಸಾರ್‌ನಲ್ಲಿದೆ. ಎರಡನೇ ಕ್ಯಾಮೆರಾ 8 ಮೆಗಾ ಪಿಕ್ಸೆಲ್ ಸೆನ್ಸಾರ್ ನಲ್ಲಿದೆ. ಮೂರನೇ ಕ್ಯಾಮೆರಾ 2 ಮೆಗಾ ಪಿಕ್ಸೆಲ್ ಸೆನ್ಸಾರ್ ಕ್ಯಾಮೆರಾ ಅನ್ನು ಹೊಂದಿದೆ. ಇದರೊಂದಿಗೆ ಸೆಲ್ಫಿ ಕ್ಯಾಮೆರಾ 13 ಮೆಗಾ ಪಿಕ್ಸಲ್ ಸೆನ್ಸಾರ್‌ನಲ್ಲಿದೆ. ಇದರೊಂದಿಗೆ ಫೊಟೊ ಎಡಿಟಿಂಗ್ ಆಯ್ಕೆಗಳನ್ನು ಪಡೆದಿದೆ.
ಈ ಸ್ಮಾರ್ಟ್‌ಫೋನ್ 5,000mAh ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ಅಪ್ ಅನ್ನು ಹೊಂದಿದೆ. ಹಾಗೆಯೇ 20W ಸಾಮರ್ಥ್ಯದ ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ಪಡೆದಿದೆ. ಹಾಗೆಯೇ ಈ ಫೋನ್ 4G LTE, ಎಫ್‌ಎಮ್ ರೇಡಿಯೋ, 3.5mm ಆಡಿಯೋ ಜ್ಯಾಕ್, ಬ್ಲೂಟೂತ್ v5, ಡ್ಯುಯಲ್ ಬ್ಯಾಂಡ್ ವೈ-ಫೈ 802.11 ac, ಮತ್ತು ಯುಎಸ್‌ಬಿ ಟೈಪ್-ಸಿ ಪೋರ್ಟ್‌ನಂತಹ ಸಾಮಾನ್ಯ ಸಂಪರ್ಕ ಆಯ್ಕೆಗಳನ್ನು ಒಳಗೊಂಡಿದೆ.
ಬೆಲೆ ಎಷ್ಟು?:
ಮೋಟೋ G31 ಸ್ಮಾರ್ಟ್‌ಫೋನ್ 4GB RAM ಮತ್ತು 64GB ಹಾಗೂ 6GB RAM + 128GB ಸ್ಟೋರೇಜ್‌ನ ಎರಡು ವೇರಿಯಂಟ್ ಆಯ್ಕೆಗಳನ್ನು ಹೊಂದಿದೆ. ಈ ಪೈಕಿ 4GB RAM + 64GB ಸ್ಟೋರೇಜ್ ವೇರಿಯಂಟ್‌ನ ಬೆಲೆಯು 12,999 ರೂ. ಆಗಿದೆ. 6GB RAM + 128GB ಸ್ಟೋರೇಜ್ ವೇರಿಯಂಟ್ ದರವು 14,999 ರೂ. ಆಗಿದೆ. ಗ್ರೇ ಮತ್ತು ಬ್ಲೂ ಬಣ್ಣಗಳ ಆಯ್ಕೆಯನ್ನು ಪಡೆದಿದೆ.
(Moto G31 will go on sale in India today for the first time on Flipkart)