Vodafone Idea Disney+ Hotstar Plans: ಬೆಲೆ ಏರಿಕೆ ಶಾಕ್ ನೀಡಿದ್ದ ಏರ್ಟೆಲ್, ಜಿಯೋ, ವಿಯಿಂದ ಈಗ ಆಫರ್ ಮೇಲೆ ಆಫರ್ ಘೋಷಣೆ
Vi Hikes Prepaid Tariffs: ಕಳೆದ ತಿಂಗಳು ವೊಡಾಫೋನ್ ಐಡಿಯಾ ತನ್ನ ಪ್ರಿಪೇಯ್ಡ್ ಪ್ಲಾನ್‌ಗಳ ದರ ಪರಿಷ್ಕರಣೆ ಮಾಡಿ ನವೆಂಬರ್ 25ರಿಂದ ಬೆಲೆ ಏರಿಕೆ ಮಾಡಿತ್ತು. ಇದರ ಬೆನ್ನಲ್ಲೇ ಸದ್ಯ ವಿ ಟೆಲಿಕಾಂ ತನ್ನ ಗ್ರಾಹಕರಿಗೆ ಡಿಸ್ನಿ+ ಹಾಟ್‌ಸ್ಟಾರ್‌ಗೆ ಚಂದಾದಾರಿಕೆಯೊಂದಿಗೆ ಹೊಸದಾಗಿ ನಾಲ್ಕು ಪ್ರಿಪೇಯ್ಡ್ ಯೋಜನೆಗಳನ್ನು ಬಿಡುಗಡೆ ಮಾಡಿದೆ.
ದೇಶದ ನಂಬರ್ ಒನ್ ಟೆಲಿಕಾಂ ಕಂಪನಿ ರಿಲಯನ್ಸ್ ಜಿಯೋ (Reliance JIO), ಭಾರ್ತಿ ಏರ್ಟೆಲ್ (Airtel) ಹಾಗೂ ವೊಡಾಫೋನ್ ಐಡಿಯಾ (Vodafone Idea) ತನ್ನ ಪ್ರಿಪೇಯ್ಡ್ ಪ್ಲಾನ್‌ಗಳ ಯೋಜನೆಯಲ್ಲಿ ಬೆಲೆ ಏರಿಕೆ ಮಾಡಿದ್ದೇ ತಡ ಗ್ರಾಹಕರಿಂದ ಸಾಕಷ್ಟು ವಿರೋಧಗಳು ವ್ಯಕ್ತವಾಗುತ್ತಿವೆ. ಇದೀಗ ಬಳಕೆದಾರರನ್ನು ಕಳೆದುಕೊಳ್ಳುವ ಭೀತಿಯಲ್ಲಿರುವ ಪ್ರಸಿದ್ಧ ಟೆಲಿಕಾಂ ಕಂಪನಿಗಳು ಬೆಲೆ ಏರಿಕೆ ಬೆನ್ನಲ್ಲೇ ಭರ್ಜರಿ ಆಫರ್ಗಳನ್ನು ನೀಡುತ್ತಿದೆ. ಈಗಾಗಲೇ ಜಿಯೋ ತನ್ನ ಮೂರು ಪ್ರಿಪೇಯ್ಡ್ ಯೋಜನೆಗಳಲ್ಲಿ ಶೇ.20 ರಷ್ಟು ಕ್ಯಾಶ್‌ಬ್ಯಾಕ್ ನೀಡಲು ಮುಂದಾಗಿದೆ. ಇದರ ನಡುವೆ ಏರ್ಟೆಲ್ ಉಚಿತವಾಗಿ ಪ್ರತಿದಿನ 500MB ಡೇಟಾ, ಡಿಸ್ನಿ+ ಹಾಟ್‌ಸ್ಟಾರ್ (Disney+ Hot star) ಮತ್ತು ಅಮೆಜಾನ್ ಪ್ರೈಮ್ (Amazon Prime) ವಿಡಿಯೋ ಮೊಬೈಲ್ ಎಡಿಷನ್ ಫ್ರೀ ಟ್ರಯಲ್ ಆಫರ್ ಅನ್ನು ನೀಡಿದೆ. ಇದೀಗ ವೊಡಾಫೋನ್ ಐಡಿಯಾ (Vodafone Idea Prepaid Plans) ಸರದಿ. ಹಾಗಾದ್ರೆ ವಿ (Vi) ಟೆಲಿಕಾಂ ನೀಡಿರುವ ಹೊಸ ಆಫರ್ ಏನು?, ಇಲ್ಲಿದೆ ಮಾಹಿತಿ.
ಕಳೆದ ತಿಂಗಳು ವೊಡಾಫೋನ್ ಐಡಿಯಾ ತನ್ನ ಪ್ರಿಪೇಯ್ಡ್ ಪ್ಲಾನ್‌ಗಳ ದರ ಪರಿಷ್ಕರಣೆ ಮಾಡಿ ನವೆಂಬರ್ 25ರಿಂದ ಬೆಲೆ ಏರಿಕೆ ಮಾಡಿತ್ತು. ಉದ್ಯಮ ವೆಚ್ಚ ಮತ್ತು ಲಾಭಕ್ಕೆ ಅನುಗುಣವಾಗಿ ದರ ಪರಿಷ್ಕರಿಸಲಾಗಿದೆ ಎಂದು ದರ ಏರಿಕೆಗೆ ಏರ್ಟೆಲ್ ನೀಡಿರುವ ಕಾರಣವನ್ನೇ ವೊಡಾಫೋನ್ ಕೂಡ ನೀಡಿ ಕೈ ತೊಳೆದುಕೊಂಡಿತ್ತು. ಇದರ ಬೆನ್ನಲ್ಲೇ ಸದ್ಯ ಒಂದರ ಹಿಂದೆ ಒಂದರಂತೆ ಆಕರ್ಷಕ ಆಫರ್ಗಳು ಪ್ರಸಿದ್ಧ ಟೆಲಿಕಾಂ ಸಂಸ್ಥೆಗಳು ಘೋಷಿಸುತ್ತಿವೆ. ಈ ಪೈಕಿ ವಿ ಟೆಲಿಕಾಂ ತನ್ನ ಗ್ರಾಹಕರಿಗೆ ಡಿಸ್ನಿ+ ಹಾಟ್‌ಸ್ಟಾರ್‌ಗೆ ಚಂದಾದಾರಿಕೆಯೊಂದಿಗೆ ಹೊಸದಾಗಿ ನಾಲ್ಕು ಪ್ರಿಪೇಯ್ಡ್ ಯೋಜನೆಗಳನ್ನು ಬಿಡುಗಡೆ ಮಾಡಿದೆ.
ಮನರಂಜನಾ ವಲಯದಲ್ಲಿ OTT ಪ್ಲಾಟ್‌ಫಾರ್ಮ್‌ಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ವೊಡಾಫೋನ್ ಐಡಿಯಾ ತನ್ನ ಪ್ರಿಪೇಯ್ಡ್ ಯೋಜನೆಗಳೊಂದಿಗೆ ಹಲವು OTT ಪ್ಲಾನ್ ಗಳನ್ನು ಬಿಡುಗಡೆ ಮಾಡಿದೆ. ಈ ಯೋಜನೆಯು 501 ರೂ. .ಗಳಿಂದ ಆರಂಭವಾಗಿದೆ. ಇದರಲ್ಲಿ ದಿನಕ್ಕೆ 100 SMSಗಳನ್ನು ಉಚಿತವಾಗಿ ನೀಡುತ್ತಿದೆ. 28 ದಿನಗಳ ಮಾನ್ಯತೆಯನ್ನು ಹೊಂದಿರುವ ಈ ಯೋಜನೆಯು ದೈನಂದಿಕ 3GB ಇಂಟರ್ನೆಟ್ ಡೇಟಾವನ್ನು ಒದಗಿಸುತ್ತದೆ. ಒಂದು ವರ್ಷದವರೆಗೆ ಡಿಸ್ನಿ+ ಹಾಟ್‌ಸ್ಟಾರ್ ಮೊಬೈಲ್‌ಗೆ ಚಂದಾದಾರಿಕೆಯನ್ನು ಒಳಗೊಂಡಿರುತ್ತದೆ ಮತ್ತು 16GB ಹೆಚ್ಚುವರಿ ಡೇಟಾವನ್ನು ಸಹ ನೀಡಲಾಗಿದೆ.
ಎರಡನೇ ಯೋಜನೆಯು 701 ರೂ. ಗಳದ್ದು. ಇದು 56 ದಿನಗಳ ಮಾನ್ಯತೆಯನ್ನು ಹೊಂದಿದೆ. ಪ್ರತಿದಿನ 3GB ಡೇಟಾ, ಡಿಸ್ನಿ+ ಹಾಟ್‌ಸ್ಟಾರ್ ಮೊಬೈಲ್‌ಗೆ 1-ವರ್ಷದ ಪ್ರವೇಶವನ್ನು ನೀಡುತ್ತದೆ ಮತ್ತು ಹೆಚ್ಚುವರಿ 32GB ಹೆಚ್ಚುವರಿ ಡೇಟಾವನ್ನು ಸಹ ಒದಗಿಸುತ್ತದೆ. ಮೂರನೇ ಯೋಜನೆಯು 901 ರೂ. ಗಳಿಗೆ ಲಭ್ಯವಿದೆ. 84 ದಿನಗಳ ಮಾನ್ಯತೆಯನ್ನು ಹೊಂದಿರುವ ಈ ಯೋಜನೆಯಲ್ಲಿ ಹಿಂದಿನ ಆಫರ್ನಂತೆ ಅನಿಯಮಿತ ಕರೆ, ಪ್ರತಿದಿನ 100 SMS ಉಚಿತ, ಪ್ರತಿದಿನ 3GB ಡೇಟಾವನ್ನು ಹೊಂದಿದೆ. ಜೊತೆಗೆ ಡಿಸ್ನಿ+ ಹಾಟ್‌ಸ್ಟಾರ್ ಮೊಬೈಲ್‌ಗೆ 1-ವರ್ಷದ ಪ್ರವೇಶವನ್ನು ನೀಡುತ್ತದೆ. ಇದರಲ್ಲಿ ಹೆಚ್ಚುವರಿಯಾಗಿ ಬರೋಬ್ಬರಿ 48GB ಡೇಟಾವನ್ನು ಪಡೆಯಬಹುದು. ಕೊನೇಯದಾಗಿ 56 ದಿನಗಳ ಮಾನ್ಯತೆಯ ಅವಧಿಗೆ 601 ರೂ. ಆಫರ್ ಇದ್ದು, ಇದು ಒಟ್ಟು 75GB ಡೇಟಾವನ್ನು ನೀಡುತ್ತದೆ. ಡಿಸ್ನಿ+ ಹಾಟ್‌ಸ್ಟಾರ್ ಒಂದು ವರ್ಷದ ಚಂದಾದಾರಿಕೆಗೆ ಇದೆ. ಆದರೆ, ಅನಿಯಮಿತ ಕರೆ ಮಾಡುವ ಪ್ಲಾನ್ ಅಲ್ಲ.
Infinix Note 11: ಇನ್ಫಿನಿಕ್ಸ್ ಕಂಪನಿಯಿಂದ ಬರುತ್ತಿದೆ ಬಜೆಟ್ ಬೆಲೆಯ ಮತ್ತೊಂದು ಸ್ಮಾರ್ಟ್ಫೋನ್
Jio Cashback Offer: ಬೆಲೆ ಏರಿಕೆ ಬೆನ್ನಲ್ಲೇ ಆಫರ್ಗಳ ಸುರಿಮಳೆ: ಏರ್ಟೆಲ್ ಬಳಿಕ ಜಿಯೋದಿಂದ ಬಂಪರ್ ಆಫರ್ ಘೋಷಣೆ
(Vodafone Idea After Jio and Airtel Vi Offering Most Attractive Disney Plus Hotstar Plans check here new prepaid plans)