Jio Cashback Offer: ಬೆಲೆ ಏರಿಕೆ ಬೆನ್ನಲ್ಲೇ ಆಫರ್​ಗಳ ಸುರಿಮಳೆ: ಏರ್ಟೆಲ್ ಬಳಿಕ ಜಿಯೋದಿಂದ ಬಂಪರ್ ಆಫರ್ ಘೋಷಣೆ

Jio recharge price hike: ಜಿಯೋ ಟೆಲಿಕಾಂ ಸಂಸ್ಥೆಯ ಹೊಸ ಆಫರ್ ಏನಂದ್ರೆ, ತನ್ನ ಮೂರು ಪ್ರಿಪೇಯ್ಡ್ ಯೋಜನೆಗಳಲ್ಲಿ ಶೇ.20 ರಷ್ಟು ಕ್ಯಾಶ್‌ಬ್ಯಾಕ್ ನೀಡಲು ಮುಂದಾಗಿದೆ. ಜಿಯೋವಿನ 719 ರೂ., 666 ರೂ. ಮತ್ತು 299 ರೂ. ಗಳ ಮೂರು ಪ್ರಿಪೇಯ್ಡ್ ಪ್ಲಾನ್​ಗಳ ಮೇಲೆ ಹೊಸದಾಗಿ ಕ್ಯಾಶ್‌ಬ್ಯಾಕ್ ಅನ್ನು ಘೋಷಿಸಿದೆ.

Jio Cashback Offer: ಬೆಲೆ ಏರಿಕೆ ಬೆನ್ನಲ್ಲೇ ಆಫರ್​ಗಳ ಸುರಿಮಳೆ: ಏರ್ಟೆಲ್ ಬಳಿಕ ಜಿಯೋದಿಂದ ಬಂಪರ್ ಆಫರ್ ಘೋಷಣೆ
Reliance Jio
Follow us
TV9 Web
| Updated By: Vinay Bhat

Updated on: Dec 04, 2021 | 3:33 PM

ದೇಶದ ಟೆಲಿಕಾಂ ವಲಯದಲ್ಲಿ ಕಳೆದೆರಡು ವಾರದಿಂದ ಸಾಕಷ್ಟು ಬೆಳವಣಿಗೆಗಳು ನಡೆಯುತ್ತಿವೆ. ಜಿಯೋ  (JIO), ಏರ್ಟೆಲ್ (Airtel) ಮತ್ತು ವೊಡಾಫೋನ್ ಐಡಿಯಾ (Vodafone Idea) ತನ್ನ ಪ್ರಿಪೇಯ್ಡ್ ಪ್ಲಾನ್​ಗಳ ಬೆಲೆಯಲ್ಲಿ ಏರಿಕೆ ಮಾಡಿದ್ದಕ್ಕೆ ಸಾಕಷ್ಟು ವಿರೋಧಗಳು ಕೇಳಿಬಂದವು. ಇದರ ಬೆನ್ನಲ್ಲೆ ಏರ್ಟೆಲ್ ತನ್ನ ಬಳಕೆದಾರರನ್ನು ಸಮಾಧಾನ ಪಡಿಸಲು ಉಚಿತವಾಗಿ ಪ್ರತಿದಿನ 500MB ಡೇಟಾ, ಡಿಸ್ನಿ+ ಹಾಟ್‌ಸ್ಟಾರ್ (Disney+ Hot star) ಮತ್ತು ಅಮೆಜಾನ್ ಪ್ರೈಮ್ (Amazon Prime) ವಿಡಿಯೋ ಮೊಬೈಲ್ ಎಡಿಷನ್ ಫ್ರೀ ಟ್ರಯಲ್ ಆಫರ್ ಅನ್ನು ನೀಡಿತು. ಇದೀಗ ರಿಲಯನ್ಸ್ ಜಿಯೋ ಸರದಿ. ಡಿಸೆಂಬರ್ 1 ರಿಂದ ತನ್ನ ಪ್ರಿಪೇಯ್ಡ್ (Jio Prepaid Plan) ದರಗಳಲ್ಲಿ ಜಿಯೋ ಶೇಕಡಾ 21 ರಷ್ಟು ಹೆಚ್ಚಳ ಮಾಡಿದೆ. ಇದರ ಬೆನ್ನಲ್ಲೆ ಜಿಯೋ ಇದೀಗ ಬಂಪರ್ ಆಫರ್​ವೊಂದನ್ನು ಘೋಷಿಸಿದ್ದು ತನ್ನ ಬಳಕೆದಾರರನ್ನು ಉಳಿಸಿಕೊಳ್ಳಲು ಹೊಸ ಪ್ಲಾನ್ ಮಾಡಿದೆ.

ಜಿಯೋ ಹೊಸ ಆಫರ್ ಏನು?:

ಜಿಯೋ ಟೆಲಿಕಾಂ ಸಂಸ್ಥೆಯ ಹೊಸ ಆಫರ್ ಏನಂದ್ರೆ, ತನ್ನ ಮೂರು ಪ್ರಿಪೇಯ್ಡ್ ಯೋಜನೆಗಳಲ್ಲಿ ಶೇ.20 ರಷ್ಟು ಕ್ಯಾಶ್‌ಬ್ಯಾಕ್ ನೀಡಲು ಮುಂದಾಗಿದೆ. ಜಿಯೋವಿನ 719 ರೂ., 666 ರೂ. ಮತ್ತು 299 ರೂ. ಗಳ ಮೂರು ಪ್ರಿಪೇಯ್ಡ್ ಪ್ಲಾನ್​ಗಳ ಮೇಲೆ ಹೊಸದಾಗಿ ಕ್ಯಾಶ್‌ಬ್ಯಾಕ್ ಅನ್ನು ಘೋಷಿಸಿದೆ. ವಿಶೇಷ ಎಂದರೆ ಈ ಎಲ್ಲಾ ಕ್ಯಾಶ್​ಬ್ಯಾಕ್ ಆಫರ್ ಅನ್ನು ಗ್ರಾಹಕರು ರಿಲಯನ್ಸ್ ರಿಟೇಲ್ ಸ್ಟೋರ್‌ಗಳು ಮತ್ತು ರಿಲಯನ್ಸ್ ಆನ್‌ಲೈನ್ ತಾಣ ಅಂದರೆ, ಜಿಯೋಮಾರ್ಟ್, ರಿಲಯನ್ಸ್ ಸ್ಮಾರ್ಟ್, ಅಜಿಯೋ, ರಿಲಯನ್ಸ್ ಟ್ರೆಂಡ್‌ಗಳು, ರಿಲಯನ್ಸ್ ಡಿಜಿಟಲ್ ಮತ್ತು ನೆಟ್‌ಮೆಡ್ಸ್ ಗಳಲ್ಲಿ ಉಪಯೋಗಿಸಬಹುದಾಗಿದೆ.

ಜಿಯೋ ಕ್ಯಾಶ್​ಬ್ಯಾಕ್ ಆಫರ್ ನೀಡಿರುವ ಈ ಮೂರು ಯೋಜನೆಗಳ ಮಾನ್ಯತೆಯು 28 ದಿನಗಳಿಂದ 84 ದಿನಗಳವರೆಗೆ ಲಭ್ಯವಿದೆ. ಮೊದಲನೆಯ 299 ರೂ. ಪ್ರಿಪೇಯ್ಡ್ ಯೋಜನೆಯು 28 ದಿನಗಳ ವ್ಯಾಲಿಡಿಟಿಯೊಂದಿಗೆ 2GB ದೈನಂದಿನ ಹೈಸ್ಪೀಡ್ ಡೇಟಾ, ಅನಿಯಮಿತ ಧ್ವನಿ ಕರೆ, ದಿನಕ್ಕೆ 100 SMSಗಳನ್ನು ನೀಡುತ್ತದೆ. 666 ರೂ. ಪ್ಲಾನ್ 84 ದಿನಗಳ ಮಾನ್ಯತೆಯೊಂದಿಗೆ 1.5GB ದೈನಂದಿನ ಡೇಟಾ, ಅನಿಯಮಿತ ಧ್ವನಿ ಕರೆಗಳು ಹಾಗೂ ದಿನಕ್ಕೆ 100 SMSಗಳನ್ನು ನೀಡುತ್ತದೆ. ಇನ್ನು 719 ರೂ. ಪ್ರಿಪೇಯ್ಡ್ ಯೋಜನೆಯು ದಿನಕ್ಕೆ 2GB ಡೇಟಾದೊಂದಿಗೆ ಬರುತ್ತದೆ. ಈ ಯೋಜನೆಯು ಅನಿಯಮಿತ ಧ್ವನಿ ಕರೆ ಮತ್ತು ದಿನಕ್ಕೆ 100 SMS ಸಂದೇಶಗಳನ್ನು ಸಹ ನೀಡುತ್ತದೆ. ಈ ಮೂರೂ ಯೋಜನೆಯಿಂದ 20 ಪ್ರತಿಶತ JioMart ಕ್ಯಾಶ್‌ಬ್ಯಾಕ್ ಮತ್ತು JioTV, JioCinema, JioSecurity ಮತ್ತು JioCloud ನಂತಹ ಅಪ್ಲಿಕೇಶನ್‌ಗಳ Jio ಸೂಟ್‌ಗೆ ಉಚಿತ ಚಂದಾದಾರಿಕೆಯನ್ನು ಪಡೆಯಬಹುದು.

ಇತ್ತೀಚೆಗಷ್ಟೆ ಜಿಯೋ ತನ್ನ ಪ್ರಿಪೇಯ್ಡ್ ಯೋಜನೆಯ ಬೆಲೆಯನ್ನು ಏರಿಕೆ ಮಾಡಿತ್ತು. ಇದರ ಪ್ರಕಾರ ಜಿಯೋದ ಅನಿಯಮಿತ ಕರೆಗಳ ಆರಂಭಿಕ ಪ್ಲಾನ್‌ ಈಗ ಇರುವ 78 ರೂ. ಗಳಿಂದ 91 ರೂ. ಗಳಿಗೆ ಏರಿಕೆಯಾಗಿದೆ. 129 ರೂ. ಯೋಜನೆಯು ಬೆಲೆ ಇದೀಗ 155 ರೂ., 199 ರೂ. ಪ್ರಿಪೇಯ್ಡ್‌ ಯೋಜನೆಯು ಇದೀಗ 239 ರೂ. ಆಗಿದೆ. ಅಂತೆಯೆ 399 ರೂ. ಬೆಲೆಯ ಪ್ರಿಪೇಯ್ಡ್‌ ಯೋಜನೆಯು 479 ರೂ. ದರದಲ್ಲಿ ಕಾಣಿಸಿಕೊಂಡಿದೆ. 599 ರೂ. ಬೆಲೆಯ ಪ್ರಿಪೇಯ್ಟ್‌ ಯೋಜನೆ 719 ರೂ., 2399ರೂ. ಬೆಲೆಯ ವಾರ್ಷಿಕ ಪ್ರಿಪೇಯ್ಡ್‌ ಯೋಜನೆ 2879 ರೂಪಾಯಿಗೆ ಏರಿಕೆ ಮಾಡಲಾಗಿದೆ.

Best Smartphones: ಡಿಸೆಂಬರ್​ನಲ್ಲಿ 30,000 ರೂ. ಒಳಗೆ ಖರೀದಿಸಬಹುದಾದ ಬೆಸ್ಟ್ ಸ್ಮಾರ್ಟ್​ಫೋನ್​ಗಳು ಇಲ್ಲಿದೆ ನೋಡಿ

(Reliance Jio offering 20 percent cashback on three of its prepaid plans starting from Rs 299)