Sundar Pichai: ಭಾರತದಲ್ಲಿ ಸ್ಟಾರ್ಟ್-ಅಪ್ ಸಂಸ್ಕೃತಿ ನೋಡಲು ಖುಷಿಯಾಗುತ್ತದೆ, ಇದನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುತ್ತಾರೆ: ಗೂಗಲ್ ಸಿಇಒ ಸುಂದರ್ ಪಿಚೈ

ಖಾಸಗಿ ವೆಬ್​ಸೈಟ್​ವೊಂದಕ್ಕೆ ನೀಡಿದ ಸಂದರ್ಶದಲ್ಲಿ ಮಾತನಾಡಿದ ಸುಂದರ್ ಪಿಚೈ, “ಜಾಗತಿಕ ಮಟ್ಟದಲ್ಲಿ ಭಾರತ ತಮ್ಮನ್ನು ತಾವು ಸಾಬೀತುಪಡಿಸುತ್ತಿದೆ. ಭಾರತದಲ್ಲಿ ಹಲವಾರು ಸ್ಟಾರ್ಟ್‌ಅಪ್‌ಗಳನ್ನು ನೋಡುವುದು ಖುಷಿಯಾಗುತ್ತದೆ ಎಂದು ಹೇಳಿದ್ದಾರೆ.

Sundar Pichai: ಭಾರತದಲ್ಲಿ ಸ್ಟಾರ್ಟ್-ಅಪ್ ಸಂಸ್ಕೃತಿ ನೋಡಲು ಖುಷಿಯಾಗುತ್ತದೆ, ಇದನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುತ್ತಾರೆ: ಗೂಗಲ್ ಸಿಇಒ ಸುಂದರ್ ಪಿಚೈ
Sundar Pichai, Google CEO
Follow us
TV9 Web
| Updated By: Vinay Bhat

Updated on: Dec 04, 2021 | 9:39 AM

ಸಾಮಾಜಿಕ ಜಾಲತಾಣದ (Social Media) ದಿಗ್ಗಜ ಸಂಸ್ಥೆಗಳಲ್ಲಿ, ಅದರಲ್ಲೂ ಅಮೆರಿಕದ ಹೆಸರಾಂತ ಕಂಪೆನಿಗಳಲ್ಲಿ ಭಾರತದ ಪ್ರತಿಭೆಗಳು ಮುಖ್ಯಸ್ಥರಾಗಿ ನೇಮಕವಾಗುತ್ತಿರುವುದು ಈಗೀಗ ಹೆಚ್ಚಾಗುತ್ತಿದೆ. ಇತ್ತೀಚೆಗಷ್ಟೆ ಟ್ವಿಟ್ಟರ್‌ನ (Twitter) ನೂತನ ಕಾರ್ಯನಿರ್ವಹಣಾ ಅಧಿಕಾರಿಯಾಗಿ ಭಾರತ ಮೂಲದ ಅಮೆರಿಕನ್ ಪರಾಗ್ ಅಗರ್ವಾಲ್ (Parag Agarwal) ಆಯ್ಕೆಯಾಗಿದ್ದರು. ಇದರ ನಡುವೆ ಸದ್ಯ ಆಲ್ಪಾಬೆಟ್ ಮತ್ತು ಗೂಗಲ್​ (Google) ಕಂಪನಿಯ ಸಿಇಒ ಸುಂದರ್ ಪಿಚೈ (Sundar Pichai) ಮಾತನಾಡಿದ್ದು, ಭಾರತದಲ್ಲಿ ಸ್ಟಾರ್ಟ್-ಅಪ್ ಸಂಸ್ಕೃತಿಯನ್ನು ನೋಡಲು ತುಂಬಾನೇ ಖುಷಿಯಾಗಿದೆ. ಭಾರತದಲ್ಲಿ ಸ್ಟಾರ್ಟ್‌ಅಪ್‌ಗಳನ್ನು ಸ್ಕೇಲ್ ಅಪ್ ಮಾಡಲು AI ರೂಪದಲ್ಲಿ ತಾಂತ್ರಿಕ ಬೆಂಬಲವನ್ನು ನೀಡಲು ಗೂಗಲ್ (Google) ಬಯಸುತ್ತದೆ ಎಂದು ಹೇಳಿದ್ದಾರೆ.

ಖಾಸಗಿ ವೆಬ್​ಸೈಟ್​ವೊಂದಕ್ಕೆ ನೀಡಿದ ಸಂದರ್ಶದಲ್ಲಿ ಮಾತನಾಡಿದ ಸುಂದರ್ ಪಿಚೈ, “ಜಾಗತಿಕ ಮಟ್ಟದಲ್ಲಿ ಭಾರತ ತಮ್ಮನ್ನು ತಾವು ಸಾಬೀತುಪಡಿಸುತ್ತಿದೆ. ಭಾರತದಲ್ಲಿ ಹಲವಾರು ಸ್ಟಾರ್ಟ್‌ಅಪ್‌ಗಳನ್ನು ನೋಡುವುದು ಖುಷಿಯಾಗುತ್ತದೆ. ನಾವು ಭಾರತದಲ್ಲಿನ ಕಂಪನಿಗಳನ್ನು ಬೆಂಬಲಿಸಲು ಬಯಸುತ್ತೇವೆ. ಅವರಿಗೆ AI ಮತ್ತು ತಂತ್ರಜ್ಞಾನವನ್ನು ಒದಗಿಸಲು ಸಹಾಯ ಮಾಡುತ್ತೇವೆ ಇದರಿಂದ ಅವರು ತಮ್ಮ ಕಾರ್ಯವೈಖರಿಯನ್ನು ಹೆಚ್ಚಿಸಬಹುದು” ಎಂದು ಹೇಳಿದ್ದಾರೆ.

ಇದೇವೇಳೆ ದೇಶದಲ್ಲಿನ ಸ್ಟಾರ್ಟ್‌ಅಪ್ ಸಂಸ್ಕೃತಿಯ ಕುರಿತು ಮಾತನಾಡಿದ ಅವರು, “ಭಾರತೀಯರು ಒಂದು ವಸ್ತುಗಳನ್ನು ನಿರ್ಮಿಸುವ ಮತ್ತು ಅದನ್ನು ಜಾಗತಿಕವಾಗಿ ತೆರೆದಿಡುವ ಬಗ್ಗೆ ಗಮನಸುತ್ತಿದ್ದೇನೆ. ಅದಕ್ಕಾಗಿಯೇ ನಾವು ಗೂಗಲ್ ಪೇ ಪರಿಚಯಿಸಿದ್ದೇವೆ. ಜೊತೆಗೆ ಬೇರೆಬೇರೆ ಮಾರುಕಟ್ಟೆಗಳಲ್ಲಿಯೂ ಇದನ್ನು ಅಭಿವೃದ್ದಿ ಪಡಿಸುತ್ತಿದ್ದೇವೆ. ಕೆಲವು ಸಂಗತಿಗಳಿಗೆ ನಾವು ಇವತ್ತು ಅನುಸರಿಸುತ್ತಿರುವ ಕಂಪ್ಯೂಟಿಂಗ್ ಇನ್ನಷ್ಟು ಉತ್ತಮ ಆಗುವ ಸಾಧ್ಯತೆ ಇದೆ. ಆದರೆ ಕೆಲವು ಸಂಗತಿಗಳಿಗೆ ಕ್ವಾಂಟಮ್ ಕಂಪ್ಯೂಟಿಂಗ್ ಹೊಸ ರೇಂಜ್​ನ ಸಲ್ಯೂಷನ್ ತೆರೆದಿಡುತ್ತದೆ” ಎಂದರು.

ಮುಂದಿನ ಭವಿಷ್ಯದ ತಂತ್ರಜ್ಞಾನದ ಕುರಿತು ಪ್ರತಿಕ್ರಿಯಿಸಿದ ಪಿಚೈ, “ಭವಿಷ್ಯದಲ್ಲಿ AI ಮತ್ತು AR (ಆಗ್ಮೆಂಟೆಡ್ ರಿಯಾಲಿಟಿ) ಪ್ರಾಬಲ್ಯ ಸಾಧಿಸಲಿದೆ ಎಂದು ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಕಂಪ್ಯೂಟಿಂಗ್ ಜನರಿಗೆ ಸ್ವಾಭಾವಿಕವಾಗಿ ಹೊಂದಿಕೊಳ್ಳುತ್ತದೆ. ಅದು ಮೊಬೈಲ್ ಫೋನ್ ರೀತಿಯಲ್ಲ. ಭವಿಷ್ಯವು ಆಗ್ಮೆಂಟೆಡ್ ರಿಯಾಲಿಟಿ ಆಗಿರುತ್ತದೆ. ನಾವು ಇದರ ಮೇಲೆ ಈಗಾಗಲೇ ಕೆಲಸವನ್ನು ಪ್ರಾರಂಭಿಸಿದ್ದೇವೆ. ಗೂಗಲ್ ಲ್ಯಾಂಬ್ಡಾ ಅಂತಹ ಒಂದು ಉತ್ಪನ್ನವಾಗಿದೆ” ಎಂಬುದು ಅವರ ಅಭಿಪ್ರಾಯ.

“ಇಂದು ನೀವು AR ನ ಅಂಶಗಳನ್ನು ಹೊಂದಿದ್ದೀರಿ. ಆದರೆ ಇದು ಮುಂದಿನ ದಿನಗಳಲ್ಲಿ ಹೆಚ್ಚು ಸ್ವಾಭಾವಿಕವಾಗಿರುತ್ತದೆ. ನೀವು ನೈಜ್ಯ ಪ್ರಪಂಚದೊಂದಿಗೆ ಸಂವಹನ ನಡೆಸಲು ಅಡ್ಡಿಯಾಗುವುದಿಲ್ಲ. ಅಂದರೆ ನೀವು ಹೇಗೆ ನೋಡುತ್ತೀರಿ ಮತ್ತು ಮಾತನಾಡುತ್ತೀರಿ ಎಂಬುದೇಲ್ಲವೂ ಕಂಪ್ಯೂಟಿಂಗ್‌ನಲ್ಲಿಯೂ ಸಹ ಪ್ಲೇ ಆಗುತ್ತವೆ” ಎಂದು ಸುಂದರ್ ಪಿಚೈ ಹೇಳಿದ್ದಾರೆ.

ಪಿಚೈ ಸುಂದರರಾಜನ್, ಆಲ್ಫಾಬೆಟ್ ಹಾಗೂ ಅದರ ಅಂಗಸಂಸ್ಥೆ ಗೂಗಲ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ. 49 ವರ್ಷದ ಪಿಚೈ, ತಮಿಳುನಾಡಿನ ಚೆನ್ನೈನವರು. ಐಐಟಿ ಕಾನ್ಪುರದಲ್ಲಿ ಬಿ-ಟೆಕ್ ಪದವಿ ಪಡೆದ ಅವರು, ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದಲ್ಲಿ ಎಂಜಿನಿಯರಿಂಗ್ ಮತ್ತು ಮೆಟೀರಿಯಲ್ ಸೈನ್ಸ್‌ನಲ್ಲಿ ಎಂಎಸ್ ಮಾಡಿದ್ದಾರೆ. 2004ರಲ್ಲಿ ಗೂಗಲ್‌ನಲ್ಲಿ ವೃತ್ತಿ ಆರಂಭಿಸಿದ ಅವರು, 2015ರ ಆಗಸ್ಟ್ 10ರಂದು ಸಿಇಒ ಆಗಿ ನೇಮಕವಾದರು.

(Alphabet and Google CEO Sundar Pichai said that its heartening to see start-up culture in India)

ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ