Airtel New Prepaid Plans: ಬೆಲೆ ಏರಿಕೆಯನ್ನೇ ಮರೆಸುತ್ತದೆ ಏರ್ಟೆಲ್‌ನ ಈ ಹೊಸ ಆಫರ್: ಬಳಕೆದಾರರು ಫುಲ್ ಖುಷ್
Airtel recharge price hike: ಆರಂಭದಲ್ಲಿ ಬೆಲೆ ಏರಿಕೆ ನಂತರ 500MB ಉಚಿತ ಡೇಟಾ ಬಳಿಕ ಇದೀಗ ಏರ್ಟೆಲ್ ತನ್ನ ಬಳಕೆದಾರರಿಗೆ ಡಿಸ್ನಿ+ ಹಾಟ್‌ಸ್ಟಾರ್ ಮತ್ತು ಅಮೆಜಾನ್ ಪ್ರೈಮ್ ವಿಡಿಯೋ ಮೊಬೈಲ್ ಎಡಿಷನ್ ಫ್ರೀ ಟ್ರಯಲ್ ಲಾಭಗಳನ್ನು ಹೊಂದಿರುವ ಯೋಜನೆಗಳನ್ನು ಪರಿಚಯಿಸಿದೆ.
ದೇಶದ ಟೆಲಿಕಾಂ ವಲಯದಲ್ಲಿ ಮುಂಚೂಣಿಯಲ್ಲಿರುವ ಜಿಯೋ (JIO), ಏರ್ಟೆಲ್ (Airtel) ಮತ್ತು ವೊಡಾಫೋನ್ ಐಡಿಯಾ (Vodafone Idea) ತನ್ನ ಗ್ರಾಹಕರಿಗೆ ಒಂದು ವಾರದ ಅವಧಿಯಲ್ಲಿ ಶಾಕ್ ಮೇಲೆ ಶಾಕ್ ನೀಡಿತು. ಮೂರು ಟೆಲಿಕಾಂ ಕಂಪೆನಿಗಳು ಕೂಡ ತಮ್ಮ ಪ್ರಿಪೇಯ್ಡ್ ಪ್ಲಾನ್‌ಗಳ (Prepaid Plans) ಬೆಲೆಯನ್ನು ಹೆಚ್ಚಳ ಮಾಡಿತು. ಇದರ ನಡುವೆ ಭಾರ್ತಿ ಏರ್ಟೆಲ್ ಇತ್ತೀಚೆಗಷ್ಟೆ ಬೆಲೆ ಏರಿಕೆ ನಡುವೆ ಬಂಪರ್ ಆಫರ್ ಒಂದನ್ನು ಪರಿಚಿಯಿಸಿತ್ತು. ತನ್ನ ಗ್ರಾಹಕರಿಗೆ ಉಚಿತವಾಗಿ ಪ್ರತಿದಿನ ಹೆಚ್ಚುವರಿ 500MB ಡೇಟಾವನ್ನು ಪಡೆಯಬಹುದಾದ ಆಯ್ಕೆ ನೀಡಿತು. ಇದರಿಂದ ಬಳಕೆದಾರರು ಕೊಂಚ ನೆಮ್ಮದಿಯಾದರು. ಇದರ ಬೆನ್ನಲ್ಲೇ ಸದ್ಯ ಏರ್ಟೆಲ್ (Airtel Offer) ಮತ್ತೊಂದು ಆಫರ್ ಪ್ರಕಟಿಸಿದೆ. ಇದರಿಂದ ಬೆಲೆ ಏರಿಕೆಯನ್ನೇ ಮರೆಯುವಂತಾಗಿದೆ. ಹಾಗಾದ್ರೆ ಆಫರ್ ಯಾವುದು, ಏನು ಆ ಪ್ಲಾನ್ (Airtel New Plan)?, ಇಲ್ಲಿದೆ ನೋಡಿ.
ಆರಂಭದಲ್ಲಿ ಬೆಲೆ ಏರಿಕೆ ನಂತರ 500MB ಉಚಿತ ಡೇಟಾ ಬಳಿಕ ಇದೀಗ ಏರ್ಟೆಲ್ ತನ್ನ ಬಳಕೆದಾರರಿಗೆ ಡಿಸ್ನಿ+ ಹಾಟ್‌ಸ್ಟಾರ್ ಮತ್ತು ಅಮೆಜಾನ್ ಪ್ರೈಮ್ ವಿಡಿಯೋ ಮೊಬೈಲ್ ಎಡಿಷನ್ ಫ್ರೀ ಟ್ರಯಲ್ ಲಾಭಗಳನ್ನು ಹೊಂದಿರುವ ಯೋಜನೆಗಳನ್ನು ಪರಿಚಯಿಸಿದೆ. ಹೌದು, ಏರ್ಟೆಲ್ ತನ್ನ ಮೂರು ಯೋಜನೆಗಳಲ್ಲಿ ಓಟಿಟಿ ನೋಡಬಹುದಾದ ಸೌಲಭ್ಯವನ್ನು ನೀಡಿದೆ. ಡಿಸ್ನಿ+ ಹಾಟ್‌ಸ್ಟಾರ್ ಮೊಬೈಲ್‌ನ ಪ್ರಯೋಜನ ಮತ್ತು ಒಂದು ವರ್ಷದ ಮಾನ್ಯತೆಯೊಂದಿಗೆ ಏರ್ಟೆಲ್‌ನ ರೂ. 599, ರೂ. 838 ಮತ್ತು ರೂ. 3359 ಪ್ಲಾನ್‌ಗಳು ವಿಭಿನ್ನ ವ್ಯಾಲಿಡಿಟಿಗಳು ಮತ್ತು ವಿಭಿನ್ನ ಪ್ರಯೋಜನಗಳೊಂದಿಗೆ ಬಳಕೆದಾರರಿಗೆ ಲಭ್ಯವಿವೆ.
ಡಿಸ್ನಿ+ ಹಾಟ್‌ಸ್ಟಾರ್ ಮೊಬೈಲ್ ಚಂದಾದಾರಿಕೆ OTT ಪ್ರಯೋಜನವನ್ನು ನೀಡುವ ಏರ್ಟೆಲ್‌ನ ಮೊದಲ ಯೋಜನೆಯು ರೂ. 599 ಬೆಲೆಯನ್ನು ಹೊಂದಿದೆ. ಈ ಯೋಜನೆಯು 28 ದಿನಗಳ ವ್ಯಾಲಿಡಿಟಿಯೊಂದಿಗೆ ಬರುತ್ತದೆ. ಪ್ರತಿದಿನ 3GB ಡೇಟಾ, ಅನಿಯಮಿತ ಧ್ವನಿ ಕರೆ, 100 SMS ಜೊತೆಗೆ ಏರ್ಟೆಲ್‌ನ ಕೆಲ ಆಫರ್ಗಳಿಂದ ಕೂಡಿದೆ. ಅಂತೆಯೆ ರೂ. 838 ಯೋಜನೆಯು 2GB ದೈನಂದಿನ ಡೇಟಾವನ್ನು ನೀಡುತ್ತದೆ. ಆದರೆ 56 ದಿನಗಳ ದೀರ್ಘಾವಧಿಯ ಮಾನ್ಯತೆ ಹೊಂದಿದೆ. ಇದರಲ್ಲೂ ಅನಿಯಮಿತ ಕರೆ ಸೇರಿದಂತೆ ಹಿಂದಿನ ಪ್ಲಾನ್ನ ಎಲ್ಲ ಸೌಲಭ್ಯ ನೀಡಲಾಗಿದೆ. ಕೊನೇಯದಾಗಿ 3359 ರೂ. ಯೋಜನೆಯು 365 ದಿನಗಳು ಮಾನ್ಯತೆ ಹೊಂದಿದೆ. ಪ್ರತಿ ದಿನ 2GB ಡೇಟಾ ನೀಡಲಾಗಿದ್ದು, ಅನಿಯಮಿತ ಧ್ವನಿ ಕರೆ, 100 SMS/ದಿನ ಮತ್ತು ಏರ್ಟೆಲ್ ಥ್ಯಾಂಕ್ಸ್ ಪ್ರಯೋಜನಗಳೊಂದಿಗೆ ಎರಡೂ ಯೋಜನೆಗಳು Wynk Music, Shaw Academy, FASTag ನಲ್ಲಿ ರೂ. 100 ಕ್ಯಾಶ್‌ಬ್ಯಾಕ್ ಆಫರ್ನಿಂದ ಕೂಡಿದೆ.
ಇತ್ತೀಚೆಗಷ್ಟೆ ಏರ್ಟೆಲ್ ತನ್ನ ನಾಲ್ಕು ಪ್ರಿಪೇಯ್ಡ್ ಯೋಜನೆಗಳ ಡೇಟಾ ಪ್ರಯೋಜನಗಳನ್ನು 500MB ಉಚಿತ ಡೇಟಾದೊಂದಿಗೆ ನವೀಕರಿಸಿತ್ತು. ಅಂದರೆ, ಏರ್ಟೆಲ್‌ನ ರೂ. 719, ರೂ. 299, ರೂ. 265 ಮತ್ತು ರೂ. 839 ಪ್ಲಾನ್‌ಗಳೊಂದಿಗೆ ರೀಚಾರ್ಜ್ ಮಾಡುವ ಬಳಕೆದಾರರು ಪ್ರತಿದಿನ 500MB ಡೇಟಾವನ್ನು ಕಂಪನಿಯಿಂದ ಉಚಿತವಾಗಿ ಪಡೆಯಲು ಸಾಧ್ಯವಾಗುತ್ತದೆ. ಆದರೆ, ಈ 500MB ಡೇಟಾ ಆಫರ್ ಅನ್ನು ಗ್ರಾಹಕರು ರಿಡೀಮ್ ಮಾಡಿಕೊಳ್ಳಬೇಕಿದೆ. ಅಂದರೆ ಈ ನಾಲ್ಕು ಯೋಜನೆಗಳಲ್ಲಿ ಒಂದು ಯೋಜನೆಯನ್ನು ರೀಚಾರ್ಜ್ ಮಾಡಿಕೊಂಡ ನಂತರ ಏರ್ಟೆಲ್ ಥ್ಯಾಂಕ್ಸ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು.
Book Uber via WhatsApp: ಇನ್ಮುಂದೆ ವಾಟ್ಸ್ಆ್ಯಪ್ ಮೂಲಕ ಉಬರ್ ಕ್ಯಾಬ್ ಬುಕ್ ಮಾಡಿ: ಹೇಗೆ ಗೊತ್ತಾ?
(airtel tariff hike Bharti Airtel has reintroduced Disney Plus Hotstar new prepaid plans for the users)