Flipkart TV Days Sale: ಫ್ಲಿಪ್​ಕಾರ್ಟ್​ನಿಂದ ಹಿಂದೆಂದೂ ನೀಡದ ಆಫರ್: ಸ್ಮಾರ್ಟ್​ ಟಿವಿ ಖರೀದಿಗೆ ಇದೇ ಬೆಸ್ಟ್​ ಟೈಮ್

TV9 Digital Desk

| Edited By: Vinay Bhat

Updated on: Dec 03, 2021 | 2:20 PM

ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್​ಕಾರ್ಟ್ (Flipkart)​ ಇದೀಗ ಟಿವಿ ಡೇಸ್ ಸೇಲ್ (TV Days Sale) ಹಮ್ಮಿಕೊಂಡಿದೆ. Mi, Samsung, Realme ಮತ್ತು ಇತರ ಬ್ರ್ಯಾಂಡೆಡ್​ ಟಿವಿಗಳು ಭಾರಿ ರಿಯಾಯಿತಿ ದರದಲ್ಲಿ ಸೇಲ್​ ಮಾಡುತ್ತಿದೆ.

Flipkart TV Days Sale: ಫ್ಲಿಪ್​ಕಾರ್ಟ್​ನಿಂದ ಹಿಂದೆಂದೂ ನೀಡದ ಆಫರ್: ಸ್ಮಾರ್ಟ್​ ಟಿವಿ ಖರೀದಿಗೆ ಇದೇ ಬೆಸ್ಟ್​ ಟೈಮ್
Flipkart TV Days Sale

ಗ್ರಾಹಕರಿಗೆ ಭರ್ಜರಿ ಆಫರ್​ಗಳನ್ನು ನೀಡುವ ಮೂಲಕ ಮನೆಮಾತಾಗಿರುವ ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್​ಕಾರ್ಟ್ (Flipkart)​ ಇದೀಗ ಟಿವಿ ಡೇಸ್ ಸೇಲ್ (TV Days Sale) ಹಮ್ಮಿಕೊಂಡಿದೆ. ಖರೀದಿದಾರರಿಗೆ ಸ್ಮಾರ್ಟ್ ಟಿವಿಗಳಲ್ಲಿ ಭಾರಿ ರಿಯಾಯಿತಿಯನ್ನು ಪಡೆಯುವ ಅವಕಾಶವನ್ನು ನೀಡುತ್ತದೆ. ಬಜೆಟ್ ಕಡಿಮೆಯಿದ್ದು, ದೊಡ್ಡ ಪರದೆಯ ಸ್ಮಾರ್ಟ್ ಟಿವಿಯನ್ನು ಹುಡುಕುತ್ತಿದ್ದರೆ ಇದು ಸರಿಯಾದ ಸಮಯವಾಗಿದೆ. ಮಾರಾಟದ ಸಮಯದಲ್ಲಿ, Mi, Samsung, Realme ಮತ್ತು ಇತರ ಬ್ರ್ಯಾಂಡೆಡ್​ ಟಿವಿಗಳು ಭಾರಿ ರಿಯಾಯಿತಿ ದರದಲ್ಲಿ ಸೇಲ್​ ಮಾಡುತ್ತಿದೆ. ಪ್ರಮುಖವಾಗಿ ಸೇಲ್‌ನಲ್ಲಿ ಎಲ್‌ಜಿ ಹೆಚ್‌ಡಿ ಸ್ಮಾರ್ಟ್‌ಟಿವಿ ಶೇ. 20 ರಷ್ಟು ರಿಯಾಯಿತಿ ಪಡೆದಿದೆ. ಹಾಗಾದ್ರೆ ನೀವು ಸ್ಮಾರ್ಟ್​ ಟಿವಿ ಕೊಂಡುಕೊಳ್ಳುವ ಪ್ಲಾನ್​ನಲ್ಲಿದ್ದರೆ ಒಮ್ಮೆ ಇಲ್ಲಿ ಗಮನಿಸಿ.

ರಿಯಲ್‌ ಮಿ HD ರೆಡಿ LED ಸ್ಮಾರ್ಟ್ ಆಂಡ್ರಾಯ್ಡ್ ಟಿವಿ (TV 32): ರಿಯಲ್‌ಮಿ HD ರೆಡಿ LED ಸ್ಮಾರ್ಟ್ ಆಂಡ್ರಾಯ್ಡ್ ಟಿವಿ ಫ್ಲಿಪ್‌ಕಾರ್ಟ್ ಮಾರಾಟದ ಸಮಯದಲ್ಲಿ 11% ರಿಯಾಯಿತಿಯಲ್ಲಿ ಲಭ್ಯವಿದೆ. ನೀವು ಈ ಆಂಡ್ರಾಯ್ಡ್ ಟಿವಿಯನ್ನು ಮಾರಾಟದ ಸಮಯದಲ್ಲಿ 15,999 ರೂ. ಖರೀದಿಸಬಹುದು. ಇದರ ಮೂಲಬೆಲೆ 17,999 ರೂ. ಆಗಿದೆ.

ಒನ್‌ಪ್ಲಸ್‌ Y ಸರಣಿ (43 ಇಂಚು) HD LED ಸ್ಮಾರ್ಟ್ ಆಂಡ್ರಾಯ್ಡ್ ಟಿವಿ: ಒನ್‌ಪ್ಲಸ್‌ Y ಸರಣಿ 108 cm (43 ಇಂಚು) ಪೂರ್ಣ HD LED ಸ್ಮಾರ್ಟ್ ಆಂಡ್ರಾಯ್ಡ್‌ ಟಿವಿ ಫ್ಲಿಪ್‌ಕಾರ್ಟ್ ಮಾರಾಟದ ಸಮಯದಲ್ಲಿ 10% ರಿಯಾಯಿತಿಯಲ್ಲಿ ಲಭ್ಯವಿದೆ. ನೀವು ಈ ಆಂಡ್ರಾಯ್ಡ್ ಟಿವಿಯನ್ನು ಮಾರಾಟದ ಸಮಯದಲ್ಲಿ 26,999 ರೂ. ಲಭ್ಯವಾಗುತ್ತಿದೆ. ಇದರ ಮೂಲಬೆಲೆ 29,999 ರೂ. ಆಗಿದೆ.

ಎಲ್‌ಜಿ HD ರೆಡಿ LED ಸ್ಮಾರ್ಟ್ ಟಿವಿ (32 ಇಂಚು): ಇನ್ನು ಎಲ್‌ಜಿ HD ರೆಡಿ LED ಸ್ಮಾರ್ಟ್ ಟಿವಿ ಫ್ಲಿಪ್‌ಕಾರ್ಟ್ ಮಾರಾಟದ ಸಮಯದಲ್ಲಿ 20% ರಿಯಾಯಿತಿಯಲ್ಲಿ ಲಭ್ಯವಿದೆ. ನೀವು ಈ ಆಂಡ್ರಾಯ್ಡ್ ಟಿವಿಯನ್ನು ಮಾರಾಟದ ಸಮಯದಲ್ಲಿ ಕೇವಲ 17,499 ರೂ. ಖರೀದಿಸಬಹುದು.

ಒನ್‌ಪ್ಲಸ್‌ Y ಸರಣಿ HD ರೆಡಿ LED ಸ್ಮಾರ್ಟ್ ಆಂಡ್ರಾಯ್ಡ್ ಟಿವಿ (32 ಇಂಚು): ಒನ್‌ಪ್ಲಸ್‌ Y ಸರಣಿ HD ರೆಡಿ LED ಸ್ಮಾರ್ಟ್ ಆಂಡ್ರಾಯ್ಡ್ ಟಿವಿ (32 ಇಂಚು) ಫ್ಲಿಪ್‌ಕಾರ್ಟ್ ಮಾರಾಟದ ಸಮಯದಲ್ಲಿ 10% ರಿಯಾಯಿತಿಯಲ್ಲಿ ಲಭ್ಯವಿದೆ. ನೀವು ಈ ಆಂಡ್ರಾಯ್ಡ್ ಟಿವಿಯನ್ನು ಮಾರಾಟದ ಸಮಯದಲ್ಲಿ 17,999 ರೂ. ಖರೀದಿ ಮಾಡಬಹುದು. ಇದರ ಮೂಲ ಬೆಲೆ 19,999 ರೂ. ಆಗಿದೆ.

ಇನ್‌ಫಿನಿಕ್ಸ್‌ X1 HD ರೆಡಿ LED ಸ್ಮಾರ್ಟ್ ಆಂಡ್ರಾಯ್ಡ್ ಟಿವಿ: ಇನ್‌ಫಿನಿಕ್ಸ್‌ X1 HD ರೆಡಿ LED ಸ್ಮಾರ್ಟ್ ಆಂಡ್ರಾಯ್ಡ್ ಟಿವಿ ಫ್ಲಿಪ್‌ಕಾರ್ಟ್ ಮಾರಾಟದ ಸಮಯದಲ್ಲಿ 25% ರಿಯಾಯಿತಿಯಲ್ಲಿ ಲಭ್ಯವಿದೆ. ನೀವು ಈ ಆಂಡ್ರಾಯ್ಡ್ ಟಿವಿಯನ್ನು ಮಾರಾಟದ ಸಮಯದಲ್ಲಿ 13,499 ರೂ. ಲಭ್ಯ. ಈ ಸ್ಮಾರ್ಟ್​ ಟಿವಿಯ ಮೂಲ ಬೆಲೆ 17,999 ರೂ. ಆಗಿದೆ.

Book Uber via WhatsApp: ಇನ್ಮುಂದೆ ವಾಟ್ಸ್​ಆ್ಯಪ್​ ಮೂಲಕ ಉಬರ್ ಕ್ಯಾಬ್ ಬುಕ್ ಮಾಡಿ: ಹೇಗೆ ಗೊತ್ತಾ?

(Flipkart TV Days Sale is going on giving buyers a chance to get a massive discount on smart TVs)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada