AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Book Uber via WhatsApp: ಇನ್ಮುಂದೆ ವಾಟ್ಸ್​ಆ್ಯಪ್​ ಮೂಲಕ ಉಬರ್ ಕ್ಯಾಬ್ ಬುಕ್ ಮಾಡಿ: ಹೇಗೆ ಗೊತ್ತಾ?

How to book Uber on WhatsApp: ವಾಟ್ಸ್​ಆ್ಯಪ್​​ ಚಾಟ್‌ನಲ್ಲೇ ನೋಂದಣಿ, ರೈಡ್‌ ಬುಕಿಂಗ್‌, ಹಾಗೂ ಪ್ರಯಾಣದ ರಸೀದಿಯನ್ನು ಪಡೆದುಕೊಳ್ಳಬಹುದಾಗಿದೆ. ಉಬರ್‌ ಅನ್ನು ಬುಕಿಂಗ್‌ಗಾಗಿ ಇಂಗ್ಲೀಷ್‌ ಬಳಕೆ ಮಾಡಲಾಗುತ್ತಿದ್ದು, ಕೆಲವೇ ದಿನಗಳಲ್ಲಿ ಭಾರತೀಯ ಭಾಷೆಗಳಲ್ಲೂ ಬುಕಿಂಗ್‌ ಸೌಲಭ್ಯ ಒದಗಿಸಲಾಗುವುದು.

Book Uber via WhatsApp: ಇನ್ಮುಂದೆ ವಾಟ್ಸ್​ಆ್ಯಪ್​ ಮೂಲಕ ಉಬರ್ ಕ್ಯಾಬ್ ಬುಕ್ ಮಾಡಿ: ಹೇಗೆ ಗೊತ್ತಾ?
Ubar and WhatsApp
TV9 Web
| Updated By: Vinay Bhat|

Updated on: Dec 03, 2021 | 12:51 PM

Share

ಉಬರ್‌ (Ubar) ಹಾಗೂ ವಾಟ್ಸ್​ಆ್ಯಪ್​ (WhatsApp)​ ಸಹಭಾಗಿತ್ವವನ್ನು ಘೋಷಿಸಿಕೊಂಡಿದ್ದು,ಇನ್ನು ಗ್ರಾಹಕರು ಉಬರ್‌ ಆ್ಯಪ್‌ ಬದಲಾಗಿ ನೇರವಾಗಿ ವಾಟ್ಸ್​ಆ್ಯಪ್​​ ಮೂಲಕವೇ ಪ್ರಯಾಣಕ್ಕಾಗಿ ವಾಹನವನ್ನು ಬುಕ್‌ ಮಾಡಿಕೊಳ್ಳಬಹುದಾಗಿದೆ. ಪ್ರಖ್ಯಾತ ಆನ್‌ಲೈನ್ ಕ್ಯಾಬ್ ಬುಕ್ಕಿಂಗ್ ಸಂಸ್ಥೆ ಊಬರ್ ಮತ್ತು ವಾಟ್ಸ್ಆಪ್ ಒಡೆತನದ ಮೆಟಾ (Meta) ಸಂಸ್ಥೆಗಳು ಸೇರಿಕೊಂಡು ಇಂತಹದೊಂದು ಫೀಚರ್ ಅನ್ನು ಲಾಂಚ್ ಮಾಡಿದೆ. ಸದ್ಯಕ್ಕೆ ಲಕ್ನೊದಲ್ಲಿ ಆರಂಭವಾಗುತ್ತಿರುವ ಈ ಸೇವೆ ಭಾರತದ ಇತರ ಪ್ರಮುಖ ನಗರಗಳಿಗೆ ಶೀಘ್ರದಲ್ಲೇ ವಿಸ್ತರಣೆಯಾಗಲಿದೆ. ವಾಟ್ಸ್ಆ್ಯಪ್ ಮೆಸೆಂಜರ್ ಸೇವೆಯು ಭಾರತದಲ್ಲಿ ಅರ್ಧ ಶತಕೋಟಿಗಿಂತಲೂ ಹೆಚ್ಚು ಬಳಕೆದಾರರನ್ನು ಹೊಂದಿದೆ. ಬಹುತೇಕ ಜನರು ವಾಟ್ಸ್ಆ್ಯಪ್ ಅನ್ನು ಬಳಸುತ್ತಿದ್ದಾರೆ. ಹಾಗಾಗಿ ಉಬರ್ ಕೂಡ ಇದನ್ನು ಗಮನಿಸಿ ಆ್ಯಪ್ ಸಹಾಯವಿಲ್ಲದೆ ಬಳಕೆದಾರರಿಗೆ ಸುಲಭ ಸೇವೆಯನ್ನು ಒದಗಿಸುವ ನಿಟ್ಟಿನಲ್ಲಿ ವಾಟ್ಸ್ಆ್ಯಪ್ ಜೊತೆಗೆ ಕೈ ಜೋಡಿಸಿದೆ.

ವಾಟ್ಸ್​ಆ್ಯಪ್​​ ಚಾಟ್‌ನಲ್ಲೇ ನೋಂದಣಿ, ರೈಡ್‌ ಬುಕಿಂಗ್‌, ಹಾಗೂ ಪ್ರಯಾಣದ ರಸೀದಿಯನ್ನು ಪಡೆದುಕೊಳ್ಳಬಹುದಾಗಿದೆ. ಉಬರ್‌ ಅನ್ನು ಬುಕಿಂಗ್‌ಗಾಗಿ ಇಂಗ್ಲೀಷ್‌ ಬಳಕೆ ಮಾಡಲಾಗುತ್ತಿದ್ದು, ಕೆಲವೇ ದಿನಗಳಲ್ಲಿ ಭಾರತೀಯ ಭಾಷೆಗಳಲ್ಲೂ ಬುಕಿಂಗ್‌ ಸೌಲಭ್ಯ ಒದಗಿಸಲಾಗುವುದು. ವಾಟ್ಸ್​ಆ್ಯಪ್​​ನಲ್ಲಿ ಉಬರ್ ಚಾಟ್‌ಬಾಟ್ ಮೂಲಕ ಒಮ್ಮೆ ರೈಡ್ ಬುಕ್ ಮಾಡಿದ ನಂತರ ಗ್ರಾಹಕರು ಚಾಲಕನ ಹೆಸರು, ವಾಹನದ ಲೈಸೆನ್ಸ್ ಪ್ಲೇಟ್ ಸಂಖ್ಯೆ ಮತ್ತು ಪಿಕಪ್ ಪಾಯಿಂಟ್‌ಗೆ ಹೋಗುವ ಸ್ಥಳ ಸೇರಿದಂತೆ ಎಲ್ಲಾ ವಿವರಗಳನ್ನು ವಾಟ್ಸ್​ಆ್ಯಪ್​​ ಸಂದೇಶದ ಮೂಲಕ ಪಡೆಯುತ್ತಾರೆ ಎಂದು ಉಬರ್ ಹೇಳಿದೆ.

“ಎಲ್ಲಾ ಭಾರತೀಯರಿಗೆ ಉಬರ್ ಸೇವೆ ಬಳಕೆಗೆ ಸಿಗುವಂತೆ ಮಾಡಲು ನಾವು ಬಯಸುತ್ತೇವೆ ಮತ್ತು ಅವರಿಗೆ ಅನುಕೂಲಕರವಾದ ವೇದಿಕೆಗಳಲ್ಲಿ ಸಿಗುವ ಮೂಲಕ ಸೇವೆಯನ್ನು ನೀಡಲಿದ್ದೇವೆ ” ಎಂದು ಉಬರ್​​ನ ವ್ಯಾಪಾರ ಅಭಿವೃದ್ಧಿಯ ಹಿರಿಯ ನಿರ್ದೇಶಕಿ ನಂದಿನಿ ಮಹೇಶ್ವರಿ ಹೇಳಿದರು.

ಹೇಗೆ ಕಾರ್ಯನಿರ್ವಹಿಸುತ್ತದೆ?:

ಉಬರ್ ಆ್ಯಪ್ ಅವಶ್ಯಕತೆಯಿಲ್ಲದೆಯೇ, ವಾಟ್ಸ್​ಆ್ಯಪ್​​ ಮೂಲಕ ಚಾಟ್ ಇಂಟರ್ಫೇಸ್​ನಲ್ಲಿ ನೋಂದಾಯಿಸಿಕೊಳ್ಳಬಹುದು ಮತ್ತು ರೈಡ್​ಗಳನ್ನು ಬುಕ್ ಮಾಡಬಹುದು ಮತ್ತು ಟ್ರಿಪ್ ರಸೀದಿಗಳನ್ನು ಪಡೆಯಬಹುದಾಗಿದೆ. QR ಕೋಡ್ ಅನ್ನು ಸ್ಕ್ಯಾನ್ ಮಾಡುವುದು ಅಥವಾ ಉಬರ್ ವಾಟ್ಸ್​ಆ್ಯಪ್​​ ಚಾಟ್ ತೆರೆಯಲು ನೇರವಾಗಿ ಲಿಂಕ್ ಅನ್ನು ಕ್ಲಿಕ್ ಮಾಡುವುದು. ಚಾಟ್‌ಬಾಟ್ ನಂತರ ಪಿಕಪ್ ಮತ್ತು ಡ್ರಾಪ್ ಆಫ್ ಸ್ಥಳಗಳನ್ನು ನೀಡಲು ಬಳಕೆದಾರರನ್ನು ಕೇಳುತ್ತದೆ. ಅವರು ಬುಕ್ ಮಾಡಲು ಬಯಸುವ ರೀತಿಯ ರೈಡ್ ಅನ್ನು ಆಯ್ಕೆ ಮಾಡುತ್ತದೆ. ಚಾಟ್‌ಬಾಟ್ ಮುಂಗಡ ದರದ ಮಾಹಿತಿಯನ್ನು ನೀಡುತ್ತದೆ ಮತ್ತು ಚಾಲಕನ ಆಗಮನದ ನಿರೀಕ್ಷಿತ ಸಮಯವನ್ನು ಸಹ ನೀಡುತ್ತದೆ. ಉಬರ್​ನಲ್ಲಿ ಕೇವಲ ಒಂದು ಫೋನ್ ಸಂಖ್ಯೆಯೊಂದಿಗೆ ನೋಂದಾಯಿಸಿದ ಹೊಸ ಮತ್ತು ಅಸ್ತಿತ್ವದಲ್ಲಿರುವ ಬಳಕೆದಾರರಿಗೆ ಸೇವೆಯು ಲಭ್ಯವಿದೆ ಎಂದು ವಾಟ್ಸ್​ಆ್ಯಪ್​​ ದೃಢಪಡಿಸುತ್ತದೆ. ಈ ಟೆಕ್ನಾಲಜಿಯಿಂದಾಗಿ ಇನ್ನು ಪ್ರಯಾಣಿಕರು ಉಬರ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡುವ ಅಥವಾ ಬಳಸುವ ಅಗತ್ಯವಿಲ್ಲ.

WhatsApp Tips: ನಂಬರ್ ಸೇವ್ ಮಾಡದೇ ವಾಟ್ಸ್​ಆ್ಯಪ್​ನಲ್ಲಿ ಮೆಸೇಜ್ ಕಳುಹಿಸುವ ಟ್ರಿಕ್ ನಿಮಗೆ ಗೊತ್ತಾ?

(Uber will soon allow users in India to book a cab via WhatsApp Here is how to book Uber on WhatsApp)

ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಒಂದು ಆಧಾರ್ ಕಾರ್ಡ್​ಗೆ 2 ಚೀಲ ಯೂರಿಯಾ
ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಒಂದು ಆಧಾರ್ ಕಾರ್ಡ್​ಗೆ 2 ಚೀಲ ಯೂರಿಯಾ
ಪೂಜೆ ಮಾಡಿದರೆ ಇಷ್ಟಾರ್ಥಗಳು ನೆರವೇರುತ್ತವೆ ಎನ್ನುವ ಗೃಹಿಣಿಯರು
ಪೂಜೆ ಮಾಡಿದರೆ ಇಷ್ಟಾರ್ಥಗಳು ನೆರವೇರುತ್ತವೆ ಎನ್ನುವ ಗೃಹಿಣಿಯರು
‘ನಮ್ಮ ಮನೆ ಹತ್ತಿರವೇ ಅಟ್ಯಾಕ್ ಆಗಿದೆ’: ಪೊಲೀಸ್ ಎದುರು ಪ್ರಥಮ್ ಅಳಲು
‘ನಮ್ಮ ಮನೆ ಹತ್ತಿರವೇ ಅಟ್ಯಾಕ್ ಆಗಿದೆ’: ಪೊಲೀಸ್ ಎದುರು ಪ್ರಥಮ್ ಅಳಲು
ಹುಲಿರಾಯನ ಫೋಸ್​ ಕಂಡು ಹೌದು ಹುಲಿಯಾ ಎಂದ ಪ್ರವಾಸಿಗರು
ಹುಲಿರಾಯನ ಫೋಸ್​ ಕಂಡು ಹೌದು ಹುಲಿಯಾ ಎಂದ ಪ್ರವಾಸಿಗರು
PM Modi Speech Live: ಪ್ರಧಾನಿ ನರೇಂದ್ರ ಮೋದಿ ಲೋಕಸಭಾ ಭಾಷಣದ ನೇರಪ್ರಸಾರ
PM Modi Speech Live: ಪ್ರಧಾನಿ ನರೇಂದ್ರ ಮೋದಿ ಲೋಕಸಭಾ ಭಾಷಣದ ನೇರಪ್ರಸಾರ
ದರ್ಶನ್ ವಿಗ್ ಧರಿಸುತ್ತಾರೆ, ಅದನ್ನು ಹೇಗೆ ಕಿತ್ತುಕೊಳ್ಳಲಾದೀತು? ಪ್ರಥಮ್
ದರ್ಶನ್ ವಿಗ್ ಧರಿಸುತ್ತಾರೆ, ಅದನ್ನು ಹೇಗೆ ಕಿತ್ತುಕೊಳ್ಳಲಾದೀತು? ಪ್ರಥಮ್
ಹಿಮಾಚಲ ಪ್ರದೇಶದ ಮಂಡಿಯಲ್ಲಿ ಮೇಘಸ್ಫೋಟ; ದಿಢೀರ್ ಪ್ರವಾಹದಿಂದ ಮೂವರು ಸಾವು
ಹಿಮಾಚಲ ಪ್ರದೇಶದ ಮಂಡಿಯಲ್ಲಿ ಮೇಘಸ್ಫೋಟ; ದಿಢೀರ್ ಪ್ರವಾಹದಿಂದ ಮೂವರು ಸಾವು
ಪಹಲ್ಗಾಮ್ ದಾಳಿಗೆ ಭದ್ರತಾ ಲೋಪವೇ ಕಾರಣ: ಖರ್ಗೆ
ಪಹಲ್ಗಾಮ್ ದಾಳಿಗೆ ಭದ್ರತಾ ಲೋಪವೇ ಕಾರಣ: ಖರ್ಗೆ
ಕಾಂಗ್ರೆಸ್​ನ ದಲಿತ ವಿರೋಧಿ ನೀತಿಯಿಂದ ಖರ್ಗೆ ಸಿಎಂ ಆಗಲಿಲ್ಲ: ಜ್ಞಾನೇಂದ್ರ
ಕಾಂಗ್ರೆಸ್​ನ ದಲಿತ ವಿರೋಧಿ ನೀತಿಯಿಂದ ಖರ್ಗೆ ಸಿಎಂ ಆಗಲಿಲ್ಲ: ಜ್ಞಾನೇಂದ್ರ
ಅವಮಾನಗಳ ಹೊರತಾಗಿಯೂ ಸಿಎಂ ವಿರುದ್ಧ ಮಾತಾಡದ ಶಿವಕುಮಾರ್
ಅವಮಾನಗಳ ಹೊರತಾಗಿಯೂ ಸಿಎಂ ವಿರುದ್ಧ ಮಾತಾಡದ ಶಿವಕುಮಾರ್