WhatsApp Tips: ವಾಟ್ಸ್​ಆ್ಯಪ್ ಸ್ಟೇಟಸ್​ನಲ್ಲಿ ಬಂದಿದೆ ಹೊಸ ಆಕರ್ಷಕ ​ಫೀಚರ್: ಬಳಸುವ ಮುನ್ನ ಇಲ್ಲಿ ಗಮನಿಸಿ

WhatsApp undo feature: ವಾಟ್ಸ್​ಆ್ಯಪ್​ನಲ್ಲಿ ನೀವು ಸ್ಟೇಟಸ್ ಹಾಕಿದ ಸಂದರ್ಭ ಈ ಅಂಡೂ ಆಯ್ಕೆ ಕಾಣಸಿಗಲಿದೆ. ಈ ಮೂಲಕ ನೀವು ಯಾವುದಾದರು ಫೋಟೋ ಅಥವಾ ವಿಡಿಯೋವನ್ನು ಸ್ಟೇಟಸ್​ಗೆ ತಪ್ಪಿ ಹಾಕಿದರೆ ತಕ್ಷಣ ಅಂಡೂ ಬಟ್ ಒತ್ತಿದರೆ ಆಗಲೇ ಅದು ಡಿಲೀಟ್ ಆಗಲಿದೆ.

WhatsApp Tips: ವಾಟ್ಸ್​ಆ್ಯಪ್ ಸ್ಟೇಟಸ್​ನಲ್ಲಿ ಬಂದಿದೆ ಹೊಸ ಆಕರ್ಷಕ ​ಫೀಚರ್: ಬಳಸುವ ಮುನ್ನ ಇಲ್ಲಿ ಗಮನಿಸಿ
WhatsApp
Follow us
TV9 Web
| Updated By: Vinay Bhat

Updated on: Dec 02, 2021 | 2:02 PM

ವಿಶ್ವದಲ್ಲಿ ಕೋಟ್ಯಾಂತರ ಬಳಕೆದಾರರನ್ನು ಹೊಂದಿರುವ ಫೇಸ್​ಬುಕ್ (facebook) ಒಡೆತನದ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸ್​ಆ್ಯಪ್ (WhatsApp) ಅನೇಕ ಫೀಚರ್​ಗಳನ್ನು ಬಿಡುಗಡೆ ಮಾಡುವುದರಲ್ಲಿದೆ. ಸಾಲು ಸಾಲು ಅಪ್ಡೇಟ್​ಗಳನ್ನು ನೀಡಲು ವಾಟ್ಸ್​ಆ್ಯಪ್​ ತುದಿಗಾಲಿನಲ್ಲಿ ನಿಂತಿದೆ.​ ಇತ್ತೀಚೆಗೆಷ್ಟೆ ಬಳಕೆದಾರರಿಗೆ ಉತ್ತಮ ಅನುಭವವನ್ನು ನೀಡಲು ಚಾಟ್ ಬಾಕ್ಸ್‌ನಲ್ಲಿ ಡೌನ್‌ಲೋಡ್ ಮಾಡದೆ ಸ್ಟಿಕ್ಕರ್‌ಗಳನ್ನು ಫಾರ್ವರ್ಡ್ ಮಾಡಬಹುದಾದ ಆಯ್ಕೆಯ ಬಗ್ಗೆ ಮಾಹಿತಿ ನೀಡಿತ್ತು. ಇದೀಗ ಹೊಸದಾಗಿ ಮತ್ತೊಂದು ಅಪ್ಡೇಟ್ ನೀಡಿದ್ದು ಸ್ಟೇಟಸ್​ನಲ್ಲಿ ಅಂಡೂ (WhatsApp undo status updates) ಆಯ್ಕೆಯನ್ನು ನೀಡಲು ಮುಂದಾಗಿದೆ. ಈಗಾಗಲೇ ಇದು ಬೇಟಾ ಬಳಕೆದಾರರಿಗೆ ಲಭ್ಯವಾಗುತ್ತಿದೆ.

ವಾಟ್ಸ್​ಆ್ಯಪ್​ನಲ್ಲಿ ನೀವು ಸ್ಟೇಟಸ್ ಹಾಕಿದ ಸಂದರ್ಭ ಈ ಅಂಡೂ ಆಯ್ಕೆ ಕಾಣಸಿಗಲಿದೆ. ಈ ಮೂಲಕ ನೀವು ಯಾವುದಾದರು ಫೋಟೋ ಅಥವಾ ವಿಡಿಯೋವನ್ನು ಸ್ಟೇಟಸ್​ಗೆ ತಪ್ಪಿ ಹಾಕಿದರೆ ತಕ್ಷಣ ಅಂಡೂ ಬಟ್ ಒತ್ತಿದರೆ ಆಗಲೇ ಅದು ಡಿಲೀಟ್ ಆಗಲಿದೆ. ಈಗಿರುವ ಆಯ್ಕೆಯ ಪ್ರಕ್ರಿಯೆ ತುಸು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಹಾಕಿರುವ ಸ್ಟೇಟಸ್​ನ ಬಲ ಬದಿಯಲ್ಲಿ ಮೂರು ಡಾಟ್ ಮೇಲೆ ಕ್ಲಿಕ್ ಮಾಡಿ ನಂತರ ಡಿಲೀಟ್ ಮಾಡಬೇಕು. ಆದರೆ, ಅಂಡೂ ಆಯ್ಕೆಯಲ್ಲಿ ಈರೀತಿ ಮಾಡುವ ಅವಶ್ಯತೆಯಿಲ್ಲ. ಸ್ಟೇಟಸ್ ಅಪ್ಲೋಡ್ ಮಾಡುವ ಜೊತೆಯಲ್ಲೇ ಈ ಹೊಸ ಫೀಚರ್ ಕೂಡ ಕಾಣಸಿಗುತ್ತದೆ.

ಸದ್ಯಕ್ಕೆ ಈ ಹೊಸ ಆಯ್ಕೆ ವಾಟ್ಸ್​ಆ್ಯಪ್​​ ಆಂಡ್ರಾಯ್ಡ್​ನ ಬೇಟಾ ಬಳಕೆದಾರರಿಗೆ ಮಾತ್ರ ಲಭ್ಯವಾಗುತ್ತಿದೆ. ಕೆಲವೇ ದಿನಗಳಲ್ಲಿ ಐಒಎಸ್ ಮತ್ತು ಆಂಡ್ರಾಯ್ಡ್ ಎಲ್ಲ ಬಳಕೆದಾರರಿಗೆ ಇದು ಸಿಗಲಿದೆಯಂತೆ.

ಇತ್ತೀಚೆಗಷ್ಟೆ ವಾಟ್ಸ್​ಆ್ಯಪ್​ನ PC ಮತ್ತು Mac ಬಳಕೆದಾರರಿಗೆ ಸ್ಟಿಕ್ಕರ್ ತಯಾರಕ ಸಾಧನದ ಆಗಮನವನ್ನು ಪ್ರಕಟಿಸಿತ್ತು. ವಾಟ್ಸ್​ಆ್ಯಪ್ ವೆಬ್ ಬಳಕೆದಾರರು ತಮ್ಮದೇ ಆದ ಕಸ್ಟಮ್ ಸ್ಟಿಕ್ಕರ್‌ಗಳನ್ನು ರಚಿಸಲು ಹೊಸ ಫೀಚರ್ ಒಂದನ್ನು ಪರಿಚಯಿಸಿ, ಮ್ಯಾಕ್ ಮತ್ತು ಪಿಸಿ ಪ್ಲಾಟ್‌ಫಾರ್ಮ್ ಬಳಕೆದಾರರಿಗೆ ಈ ವೈಶಿಷ್ಟ್ಯವನ್ನು ಲಭ್ಯವಾಗುವಂತೆ ಮಾಡಿದೆ. ಡೆಸ್ಕ್‌ಟಾಪ್ ಬಳಕೆದಾರರಿಗಾಗಿ ಮುಂಬರುವ ವಾರದಲ್ಲಿ ಈ ಫೀಚರ್ ಲಭ್ಯವಾಗಬಹುದು ಎಂದು ವರದಿಗಳು ತಿಳಿಸಿವೆ. ಈ ಮೂಲಕ ವಾಟ್ಸ್​ಆ್ಯಪ್​ ಬಳಕೆದಾರರು ಕಸ್ಟಮ್ ಸ್ಟಿಕ್ಕರ್‌ಗಳನ್ನು ಪರಿಚಯಿಸಲು ಮೂರನೇ ವ್ಯಕ್ತಿಯ ಅಪ್ಲಿಕೇಶನ್‌ಗಳನ್ನು ಬಳಸಬೇಕಾದ ಅಗತ್ಯತೆಗೆ ಕೊನೆಹಾಡಲಾಗಿದೆ.

ಇನ್ನು ವಾಟ್ಸ್​ಆ್ಯಪ್​ ಶೀಘ್ರದಲ್ಲೇ ಫೇಸ್​ಬುಕ್​ನಲ್ಲಿರುವಂತೆಯೆ ಮೆಸೇಜ್‌ ರಿಯಾಕ್ಷನ್‌ ಫೀಚರ್ಸ್‌ ಅನ್ನು ಪರಿಚಯಿಸಲಿದೆ. ಈಗಾಗಲೇ ಇದರ ಪರೀಕ್ಷಾ ಹಂತಕೂಡ ಮುಕ್ತಾಯಗೊಂಡಿದ್ದು, ಮುಂದಿನ ಅಪ್ಡೇಟ್​ನಲ್ಲಿ ಬಳಕೆದಾರರಿಗೆ ಸಿಗುವ ಅಂದಾಜಿದೆ. ಈಗಾಗಲೇ ಇನ್​ಸ್ಟಾಗ್ರಾಮ್, ಫೇಸ್​ಬುಕ್, ಐಮೆಸೇಜ್ ಮತ್ತು ಲಿಂಕ್ಡಿನ್​ನಲ್ಲಿ ಇರುವಂತಹ ಜನಪ್ರಿಯ ಅಪ್ಲಿಕೇಶನ್‌ಗಳು ಬಳಕೆದಾರರಿಗೆ ಮೆಸೇಜ್‌ ರಿಯಾಕ್ಷನ್‌ ಫೀಚರ್ಸ್‌ಗಳನ್ನು ನೀಡುತ್ತಿವೆ. ಇದೇ ಕಾರಣಕ್ಕೆ ವಾಟ್ಸ್​ಆ್ಯಪ್​ ಕೂಡ ಸದ್ಯದಲ್ಲೇ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಮೆಸೇಜ್‌ ರಿಯಾಕ್ಷನ್‌ ಸೇರಿಸಲು ಸಿದ್ಧತೆ ನಡೆಸಿದೆ.

WhatsApp: ವಾಟ್ಸ್​ಆ್ಯಪ್​ನಿಂದ ಮತ್ತೆ 2 ಮಿಲಿಯನ್ ಭಾರತೀಯರ ಖಾತೆ ಬ್ಯಾನ್: ತಪ್ಪಿಯೂ ಹೀಗೆ ಮಾಡದಿರಿ

(WhatsApp was spotted testing the undo status updates for the beta users)