WhatsApp: ವಾಟ್ಸ್​ಆ್ಯಪ್​ನಿಂದ ಮತ್ತೆ 2 ಮಿಲಿಯನ್ ಭಾರತೀಯರ ಖಾತೆ ಬ್ಯಾನ್: ತಪ್ಪಿಯೂ ಹೀಗೆ ಮಾಡದಿರಿ

WhatsApp Banned 2.069 Million Accounts in India: ಅಕ್ಟೋಬರ್ (October) ತಿಂಗಳಿನಲ್ಲಿ ವಾಟ್ಸ್​ಆ್ಯಪ್ ತನ್ನ 2 ಮಿಲಿಯನ್​ ಭಾರತೀಯರ ಖಾತೆಗಳನ್ನು ಬ್ಯಾನ್​ ಮಾಡಿದೆಯಂತೆ. ಈ ಹಿಂದೆ ಸೆಪ್ಟೆಂಬರ್​ನಲ್ಲೂ ಇದೇರೀತಿ ಮಾಡಿತ್ತು. ನಿಷೇಧಕ್ಕೊಳಗಾದ ಎಲ್ಲ ವಾಟ್ಸ್​ಆ್ಯಪ್​ ಖಾತೆಗಳು ನಿಯಮಗಳನ್ನು ಉಲ್ಲಂಘಿಸಿದೆ.

WhatsApp: ವಾಟ್ಸ್​ಆ್ಯಪ್​ನಿಂದ ಮತ್ತೆ 2 ಮಿಲಿಯನ್ ಭಾರತೀಯರ ಖಾತೆ ಬ್ಯಾನ್: ತಪ್ಪಿಯೂ ಹೀಗೆ ಮಾಡದಿರಿ
WhatsApp Banned Indian Accounts
Follow us
TV9 Web
| Updated By: Vinay Bhat

Updated on: Dec 02, 2021 | 12:58 PM

ಕಳೆದ ತಿಂಗಳಷ್ಟೆ ಸೆಪ್ಟೆಂಬರ್​ನಲ್ಲಿ ಎರಡು ಮಿಲಿಯನ್ ಭಾರತೀಯರ ಖಾತೆಯನ್ನು ನಿಷೇಧ ಮಾಡಿದ್ದೇವೆ ಎಂಬ ಆಘಾತಕಾರಿ ಸುದ್ದಿಯನ್ನು ವಾಟ್ಸ್​ಆ್ಯಪ್ (WhatsApp) ನೀಡಿತ್ತು. ಇದೀಗ ಅಕ್ಟೋಬರ್​​​ ತಿಂಗಳಿನಲ್ಲಿ ಮತ್ತೆ 2 ಮಿಲಿಯನ್​ ಭಾರತೀಯರ ವಾಟ್ಸ್​ಆ್ಯಪ್ ಖಾತೆಗಳನ್ನು (WhatsApp Banned) ಬ್ಯಾನ್​ ಮಾಡಿದೆ. ಕಂಪನಿಯು ಅಕ್ಟೋಬರ್ (October) ತಿಂಗಳಿನಲ್ಲಿ ಭಾರತೀಯ ಅಧಿಕಾರಿಗಳಿಗೆ ಅನುಸರಣೆ ವರದಿಯ ಸಲ್ಲಿಸಿದ್ದು, ಇದರ ಪ್ರಕಾರ ಅನೇಕ ಭಾರತೀಯರ ವಾಟ್ಸ್​ಆ್ಯಪ್ ಖಾತೆಗಳನ್ನು (WhatsApp Account) ಬ್ಯಾನ್​​ ಮಾಡಲಾಗಿದೆ ಎಂದು ತಿಳಿದುಬಂದಿದೆ. ನಿಷೇಧಕ್ಕೊಳಗಾದ ಎಲ್ಲ ವಾಟ್ಸ್​ಆ್ಯಪ್​ ಖಾತೆಗಳು ನಿಯಮಗಳನ್ನು ಉಲ್ಲಂಘಿಸಿದೆ. ಹೀಗಾಗಿ ವಾಟ್ಸ್​ಆ್ಯಪ್ ಈ ಕ್ರಮಗಳನ್ನು ಕೈಗೊಂಡಿದೆಯಂತೆ. ಒಟ್ಟಾರೆಯಾಗಿ ಇತ್ತೀಚಿನ ವರದಿಯ ಪ್ರಕಾರ 2,069,000 ಭಾರತೀಯರ ವಾಟ್ಸ್​ಆ್ಯಪ್ ಖಾತೆಗಳನ್ನು ನಿಷೇಧಿಸಲಾಗಿದೆ ಎಂದು ಕಂಪನಿ ಹೇಳಿದೆ.

ವಾಟ್ಸ್​ಆ್ಯಪ್​ ಪ್ಲಾಟ್‌ಫಾರ್ಮ್‌ನಲ್ಲಿನ ಸಂದೇಶಗಳು ಎಂಡ್-ಟು-ಎಂಡ್ ಎನ್‌ಕ್ರಿಪ್ಟ್ ಆಗಿವೆ. ಆದರೆ ಇದು ಬಳಕೆದಾರರ ವರದಿಗಳು, ಪ್ರೊಫೈಲ್ ಫೋಟೋಗಳು, ಗುಂಪು ಫೋಟೋಗಳು ಸೇರಿದಂತೆ ಲಭ್ಯವಿರುವ ಎನ್‌ಕ್ರಿಪ್ಟ್ ಮಾಡದ ಮಾಹಿತಿಯನ್ನು ಅವಲಂಬಿಸಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ವರದಿ ತಿಳಿಸಿದೆ. ಜತೆಗೆ ಅದರ ಪ್ಲಾಟ್‌ಫಾರ್ಮ್‌ನಲ್ಲಿ ದುರ್ಬಳಕೆಯನ್ನು ಪತ್ತೆಹಚ್ಚಲು ಮತ್ತು ತಡೆಯಲು ವಿವಿಧ ರಿಪೋರ್ಟ್ ಮತ್ತು ಸುಧಾರಿತ AI ಪರಿಕರಗಳು (AI tools) ಮತ್ತು ಸಂಪನ್ಮೂಲಗಳು‌ ಬಳಸಿದೆ ಎಂದು ಅದು ಹೇಳಿದೆ.

ಅಕ್ಟೋಬರ್‌ನಲ್ಲಿ ಖಾತೆ ಬೆಂಬಲ (146), ಬ್ಯಾನ್ ಮೇಲ್ಮನವಿ (248), ಇತರ ಬೆಂಬಲ (42), ಉತ್ಪನ್ನ ಬೆಂಬಲ (53), ಮತ್ತು ಸುರಕ್ಷತೆ (11) ಮೂಲಕ 500 ಬಳಕೆದಾರರ ವರದಿಗಳನ್ನು ಸ್ವೀಕರಿಸಿದೆ ಎಂದು ಹೇಳಿದೆ. ಈ ಅವಧಿಯಲ್ಲಿ, ಸ್ವೀಕರಿಸಿದ ವರದಿಗಳ ಆಧಾರದ ಮೇಲೆ ನಿಷೇಧ ಮೇಲ್ಮನವಿ ವರ್ಗದ ಅಡಿಯಲ್ಲಿ 18 ವಿವಿಧ ವಿಚಾರಗಳ ಖಾತೆಗಳ ಮೇಲೆ ಬ್ಯಾನ್ ಮಾಡಲಾಗಿದೆ. ವಾಟ್ಸ್​ಆ್ಯಪ್​ ಐಟಿ ನಿಯಮಗಳು, 2021ಕ್ಕೆ ಅನುಗುಣವಾಗಿ ಅಪ್ಲಿಕೇಶನ್ ಜುಲೈನಿಂದ ಈ ಮಾಸಿಕ ವರದಿಗಳನ್ನು ಪ್ರಕಟಿಸುತ್ತಿದೆ. ನಿಯಮಗಳ ಪ್ರಕಾರ, ದೊಡ್ಡ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳು (5 ಮಿಲಿಯನ್‌ಗಿಂತಲೂ ಹೆಚ್ಚು ಬಳಕೆದಾರರನ್ನು ಹೊಂದಿರುವ) ಪ್ರತಿ ತಿಂಗಳು ಅನುಸರಣೆ ವರದಿಗಳನ್ನು‌ ಪ್ರಕಟಿಸಬೇಕು.

ಶೇ. 95 ಕ್ಕಿಂತ ಹೆಚ್ಚು ನಿಷೇಧಗಳು, ಸ್ವಯಂಚಾಲಿತ ಅಥವಾ ಸ್ಪ್ಯಾಮ್ ಬಳಕೆಯಿಂದಾಗಿ ಅಥವಾ ಇನ್ನಿತರ ವಾಟ್ಸ್​ಆ್ಯಪ್​ ಬಳಕೆದಾರರಿಗೆ ಸಂಕಷ್ಟ ಎದುರಾಗುರುವುದರಿಂದ ಆಗಿರುತ್ತದೆ. ವಾಟ್ಸ್​ಆ್ಯಪ್ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ನಿಂದನೆಯನ್ನು ತಡೆಯಲು ನಿಷೇಧಿಸುವ ಜಾಗತಿಕ ಸರಾಸರಿ ಖಾತೆಗಳ ಸಂಖ್ಯೆಯು ತಿಂಗಳಿಗೆ ಸುಮಾರು 8 ಮಿಲಿಯನ್ ಖಾತೆಗಳನ್ನು ಹೊಂದಿದೆ ಎಂದು ತಿಳಿದುಬಂದಿದೆ.

ವಾಟ್ಸ್‌ಆ್ಯಪ್ ನಿಯಮಗಳು ಮತ್ತು ಷರತ್ತುಗಳ ಪ್ರಕಾರ, ಕಾನೂನು ಬಾಹಿರ, ಅಶ್ಲೀಲ, ಮಾನಹಾನಿಕರ, ಬೆದರಿಕೆಯ, ಕಿರುಕುಳದ, ದ್ವೇಷಪೂರಿತ ಸಂದೇಶಗಳನ್ನು ಕಳುಹಿಸಿದರೆ ನಿಮ್ಮನ್ನು ವಾಟ್ಸ್‌ಆ್ಯಪ್ ಬ್ಯಾನ್ ಮಾಡುತ್ತದೆ. ಹಿಂಸಾತ್ಮಕ ಅಪರಾಧಗಳನ್ನು ಪ್ರಚೋದಿಸುವ ಅಥವಾ ಉತ್ತೇಜಿಸುವ ಸಂದೇಶಗಳನ್ನು ಕಳುಹಿಸಿದರೂ ವಾಟ್ಸ್‌ಆ್ಯಪ್ ನಿಮ್ಮನ್ನು ಬ್ಯಾನ್ ಮಾಡಬಹುದು. ಹೀಗಾಗಿ ಎಚ್ಚರದಿಂದಿರಿ.

Fast Charging: ಫಾಸ್ಟ್​ ಚಾರ್ಜರ್​ಗಿಂತ ಫಾಸ್ಟ್ ಆಗಿ ನಿಮ್ಮ ಮೊಬೈಲ್ ಚಾರ್ಜ್ ಆಗಬೇಕೆ?: ಇಲ್ಲಿದೆ ನೋಡಿ ಟ್ರಿಕ್

(WhatsApp again banned over 2 million accounts in India in the month of October)

ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ