WhatsApp Tips: ನಂಬರ್ ಸೇವ್ ಮಾಡದೇ ವಾಟ್ಸ್​ಆ್ಯಪ್​ನಲ್ಲಿ ಮೆಸೇಜ್ ಕಳುಹಿಸುವ ಟ್ರಿಕ್ ನಿಮಗೆ ಗೊತ್ತಾ?

ವಾಟ್ಸ್​ಆ್ಯಪ್​​ನಲ್ಲಿ ಯಾರಿಗಾದರೂ ಮೆಸೇಜ್ ಕಳುಹಿಸಲು ಬಯಸಿದರೆ ಅವರ ನಂಬರ್ ಸೇವ್ ಮಾಡುವುದು ಅವಶ್ಯಕ. ಆದರೆ, ಈ ಟ್ರಿಕ್ ಮೂಲಕ ನಂಬರ್ ಸೇವ್ ಮಾಡದೆ, ವಾಟ್ಸ್​ಆ್ಯಪ್​​ನಲ್ಲಿ ಸುಲಭವಾಗಿ ಮೆಸೇಜ್ ಮಾಡುವುದು ಸಾಧ್ಯವಾಗುತ್ತದೆ.

WhatsApp Tips: ನಂಬರ್ ಸೇವ್ ಮಾಡದೇ ವಾಟ್ಸ್​ಆ್ಯಪ್​ನಲ್ಲಿ ಮೆಸೇಜ್ ಕಳುಹಿಸುವ ಟ್ರಿಕ್ ನಿಮಗೆ ಗೊತ್ತಾ?
WhatsApp

ವಾಟ್ಸ್​ಆ್ಯಪ್​ (Whatsapp) ತನ್ನ ಬಳಕೆದಾರರಿಗೆ ಕಾಲಕಾಲಕ್ಕೆ ಹೊಸ ವೈಶಿಷ್ಟ್ಯಗಳನ್ನು ತರುತ್ತಲೇ ಇರುತ್ತದೆ. ಮುಂದಿನ ದಿನಗಳಲ್ಲಿ ಸಾಲು ಸಾಲು ಹೊಸ ಫೀಚರ್​ಗಳು ವಾಟ್ಸ್​ಆ್ಯಪ್​ನಲ್ಲಿ ಬರಲು ಕ್ಯೂ ನಿಂತಿದೆ. ಇದಕ್ಕೆ ಪ್ರಮುಖವಾಗಿ ವಾಟ್ಸ್ಆ್ಯಪ್ ಬಳಕೆದಾರರ ಸಂಖ್ಯೆ ತೀವ್ರಗತಿಯಲ್ಲಿ ಏರುತ್ತಿರುವುದು ಕಾರಣ ಎನ್ನಬಹುದು. ಉದ್ಯೋಗದಲ್ಲಿರುವವರು ತಮ್ಮ ಕಾರ್ಯಕ್ಷೇತ್ರದ ಗುಂಪುಗಳನ್ನು ಮಾಡಿಕೊಂಡು, ಸಂದೇಶಗಳ ವಿನಿಮಯದ ಮೂಲಕ ಕ್ಷಿಪ್ರಗತಿಯಲ್ಲಿ ಕೆಲಸ ಕಾರ್ಯಗಳನ್ನು ಮುಗಿಸುವ ಧನಾತ್ಮಕ ವಿಷಯಗಳಿಗೆ ಬಳಸಿದರೆ, ಇನ್ನು ಕೆಲವರು ವಿಭಿನ್ನ ಗುಂಪುಗಳಲ್ಲಿ ಸಕ್ರಿಯವಾಗಿ ಮಾಹಿತಿ ವಿನಿಮಯ ಮಾಡಿಕೊಳ್ಳುತ್ತಿರುತ್ತಾರೆ. ಸಾಮಾನ್ಯವಾಗಿ ಎಲ್ಲರಿಗು ತಿಳಿದಿರುವಂತೆ ವಾಟ್ಸ್​ಆ್ಯಪ್​​ನಲ್ಲಿ ಯಾರಿಗಾದರೂ ಮೆಸೇಜ್ (Whatsapp Message) ಕಳುಹಿಸಲು ಬಯಸಿದರೆ ಅವರ ನಂಬರ್ ಸೇವ್ ಮಾಡುವುದು ಅವಶ್ಯಕ. ಆದರೆ, ಈ ಟ್ರಿಕ್ ಮೂಲಕ ನಂಬರ್ ಸೇವ್ ಮಾಡದೆ, ವಾಟ್ಸ್​ಆ್ಯಪ್​​ನಲ್ಲಿ ಸುಲಭವಾಗಿ ಮೆಸೇಜ್ ಮಾಡುವುದು ಸಾಧ್ಯವಾಗುತ್ತದೆ.

ಹೌದು, ವಾಸ್ತವವಾಗಿ ಯಾರಿಗಾದರೂ ವಾಟ್ಸ್ಆ್ಯಪ್ ಸಂದೇಶ ಕಳುಹಿಸಬೇಕಿದ್ದರೆ, ಮೊದಲನೆಯ ಮಾನದಂಡ ಎಂದರೆ ಅವರು ಕೂಡ ವಾಟ್ಸ್ಆ್ಯಪ್ ಖಾತೆ ಹೊಂದಿರಬೇಕು. ಮೂಲತಃ ಅವರ ಫೋನ್ ಸಂಖ್ಯೆಯನ್ನು ನಮ್ಮ ಫೋನ್‌ನಲ್ಲಿ ಸೇವ್ ಮಾಡಿಕೊಂಡರಬೇಕು. ಇದು ಮೆಸೇಜ್ ಕಳಿಸುವ ತುಂಬಾ ಸುಲಭ ಮತ್ತು ಸರಳ ವಿಧಾನ. ಆದರೆ ಈ ಸರಳ ವಿಧಾನ ಕಠಿಣವಾಗುವುದು ಮತ್ತು ಕಾಂಟ್ಯಾಕ್ಟ್​ನಲ್ಲಿ ಅನವಶ್ಯಕ ನಂಬರ್ ಗಳನ್ನು ಸೇವ್ ಮಾಡಿಕೊಳ್ಳುವಂತೆ ಮಾಡುವುದು ಯಾವಾಗವೆಂದರೆ, ಯಾರಿಗೂ ಅಪರಿಚಿತ ವ್ಯಕ್ತಿಯೊಬ್ಬರು ಮೊದಲ ಬಾರಿಗೆ ಪರಿಚಿತವಾಗಿ ಯಾವುದೋ ಪ್ರಮುಖ ಮೆಸೇಜ್ ಒಂದನ್ನು ಕಳುಹಿಸಬೇಕು ಎಂದಾಗ. ಆಗ ಏನ ಮಾಡಬೇಕು.

ವ್ಯಕ್ತಿಯೊಬ್ಬರ ನಂಬರ್ ನಮಗೆ ಮುಂದೆಂದೂ ಅಗತ್ಯ ಬೀಳುವುದಿಲ್ಲ ಅಥವಾ ಅನಗತ್ಯ ಎಂದಾದರೆ, ಆ ಸಂಖ್ಯೆಯನ್ನು ಫೋನ್‌ನಲ್ಲಿ ಸೇವ್ ಮಾಡದೆಯೇ ಅವರಿಗೆ ಸಂದೇಶ ಕಳುಹಿಸಬಹುದು. ಇದು ತೀರಾ ಸುಲಭವಿದೆ.

ಇದಕ್ಕಾಗಿ ಮೊದಲು ನೀವು ಮೊಬೈಲ್ ಫೋನ್‌ನಲ್ಲಿ ಇಂಟರ್ನೆಟ್ ಸಂಪರ್ಕ (ಡೇಟಾ) ಆನ್ ಮಾಡಿ. ಅದರಲ್ಲಿರುವ ಬ್ರೌಸರ್ ಆ್ಯಪ್‌ನ (ಉದಾ. ಕ್ರೋಮ್) ಅಡ್ರೆಸ್ ಬಾರ್‌ನಲ್ಲಿ https://wa.me/91 ಅಂತ ಬರೆದು, ಬಳಿಕ ಆ ವ್ಯಕ್ತಿಯ 10 ಅಂಕಿಗಳ ಮೊಬೈಲ್ ಸಂಖ್ಯೆಯನ್ನು (ಸ್ಪೇಸ್ ಇಲ್ಲದೆ) ದಾಖಲಿಸಿ.

ಇಷ್ಟಾಗಿ ಎಂಟರ್ ಕೊಟ್ಟ ನಂತರ ಅದು ನೇರವಾಗಿ ಫೋನ್‌ನಲ್ಲಿರುವ ವಾಟ್ಸ್ಆ್ಯಪ್‌ಗೆ ಸಂಪರ್ಕಗೊಳ್ಳುತ್ತದೆ ಮತ್ತು ಈ ನಂಬರಿಗೆ ವಾಟ್ಸ್ಆ್ಯಪ್ ಸಂದೇಶ ಕಳುಹಿಸಬೇಕೇ ಅಂತ ಕೇಳುತ್ತದೆ. ‘ಮೆಸೇಜ್’ ಎಂಬುದನ್ನು ಕ್ಲಿಕ್ ಮಾಡಿದರೆ ವಾಟ್ಸ್ಆ್ಯಪ್ ವಿಂಡೋ ತೆರೆದುಕೊಳ್ಳುತ್ತದೆ ಮತ್ತು ಸಂದೇಶವನ್ನು ಅಲ್ಲೇ ಟೈಪ್ ಮಾಡಿ ಕಳುಹಿಸಬಹುದು ಇಲ್ಲವೇ ಯಾವುದೇ ಫೋಟೋ, ವಿಡಿಯೋ, ಡಾಕ್ಯುಮೆಂಟ್ ಶೇರ್ ಮಾಡಬಹುದು.

WhatsApp Tips: ವಾಟ್ಸ್​ಆ್ಯಪ್ ಸ್ಟೇಟಸ್​ನಲ್ಲಿ ಬಂದಿದೆ ಹೊಸ ಆಕರ್ಷಕ ​ಫೀಚರ್: ಬಳಸುವ ಮುನ್ನ ಇಲ್ಲಿ ಗಮನಿಸಿ

WhatsApp: ವಾಟ್ಸ್​ಆ್ಯಪ್​ನಿಂದ ಮತ್ತೆ 2 ಮಿಲಿಯನ್ ಭಾರತೀಯರ ಖಾತೆ ಬ್ಯಾನ್: ತಪ್ಪಿಯೂ ಹೀಗೆ ಮಾಡದಿರಿ

(WhatsApp Tips Here is the tricks to send WhatsApp messages without saving a number)

Click on your DTH Provider to Add TV9 Kannada