AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಥರ್ ಎನರ್ಜಿ ಕಂಪನಿ ತನ್ನ ಇಲೆಕ್ಟ್ರಿಕ್ ಸ್ಕೂಟರ್​ಗಳ ಉತ್ಪಾದನೆ ಹೆಚ್ಚಿಸಲು ಹೊಸೂರಿನಲ್ಲಿ ಎರಡನೇ ಘಟಕ ಆರಂಭಿಸಿದೆ

ಎಥರ್ ಎನರ್ಜಿ ಕಂಪನಿ ತನ್ನ ಇಲೆಕ್ಟ್ರಿಕ್ ಸ್ಕೂಟರ್​ಗಳ ಉತ್ಪಾದನೆ ಹೆಚ್ಚಿಸಲು ಹೊಸೂರಿನಲ್ಲಿ ಎರಡನೇ ಘಟಕ ಆರಂಭಿಸಿದೆ

TV9 Web
| Edited By: |

Updated on: Dec 02, 2021 | 8:48 AM

Share

ಎರಡನೇ ಘಟಕದಲ್ಲಿ ಸ್ಕೂಟರ್​ಗಳ ಉತ್ಪಾದನೆ ಯಾವಾಗ ಆರಂಭಗೊಳ್ಳುತ್ತದೆ ಅಂತ ಕಂಪನಿಯು ಹೇಳಿಲ್ಲವಾದರೂ 2022 ಗಾಗಿ ತಯಾರಾಗಲಿದೆ ಎಂದು ಅದು ಸೂಚ್ಯವಾಗಿ ಹೇಳಿದೆ.

ಇಲೆಕ್ಟ್ರಿಕ್ ಸ್ಕೂಟರ್​ಗಳು ತಮ್ಮ ಪ್ರಸ್ತುತತೆ ಮತ್ತು ಮಹತ್ವವನ್ನು ಸಾಬೀತು ಮಾಡುತ್ತಿವೆ. ಪೆಟ್ರೋಲ್ ಅವೃತ್ತಿಯ ವಾಹನಗಳನ್ನು ತಯಾರಿಸುತ್ತಿದ್ದ ಕಂಪನಿಗಳೆಲ್ಲ ಈಗ ಇಲೆಕ್ಟ್ರಿಕ್ ಆವೃತ್ತಿಗಳತ್ತ ವಾಲುತ್ತಿವೆ. ಕೆಲ ಕಂಪನಿಗಳು ಈಗಾಗಲೇ ಉತ್ಪಾದನೆಯನ್ನು ಆರಂಭಿಸಿವೆ. ಅದರೆ, ಪೆಟ್ರೋಲ್ ಆವೃತ್ತಿಗಳು ತಯಾರಾಗುವ ಘಟಕಗಳಲ್ಲೇ ಇಲೆಕ್ಟ್ರಿಕ್ ಸ್ಕೂಟರ್ಗಳನ್ನು ತಯಾರಿಸಲಾಗದು. ಎರಡಕ್ಕೆ ಭಿನ್ನವಾದ ಮಶೀನ್, ಮೆಕ್ಯಾನಿಸಂ ಮತ್ತು ತಂತ್ರಜ್ಞರು ಬೇಕು. ಹಾಗಾಗಿ, ಇಲೆಕ್ಟ್ರಿಕ್ ವಾಹನಗಳಿಗೆ ಪ್ರತ್ಯೇಕವಾದ ಘಟಕಗಳೇ ಬೇಕು. ಕಂಪನಿಗಳು ಒಂದು ಘಟಕವನ್ನು ಸ್ಥಾಪಿಸಲು ಹೆಣಗುತ್ತಿರಬೇಕಾದರೆ ಎಥರ್ ಎನರ್ಜಿ ಕಂಪನಿಯು ತನ್ನ 450 X ಮತ್ತು 450 ಪ್ಲಸ್ ಇಲೆಕ್ಟ್ರಿಕ್ ಸ್ಕೂಟರ್ಗಳ ಉತ್ಪಾದನೆಗಾಗಿ ಎರಡನೇ ಪ್ಲ್ಯಾಂಟ್ ಅನ್ನು ತಮಿಳುನಾಡಿನಲ್ಲಿ ಸ್ಥಾಪಿಸಿರುವುದಾಗಿ ಸೋಮವಾರ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಿದೆ.

ಈ ವರ್ಷದ ಆರಂಭದಲ್ಲಿ ಸಂಸ್ಥೆಯು ತನ್ನ ಮೊದಲ ಉತ್ಪಾದನಾ ಘಟಕವನ್ನು ತಮಿಳುನಾಡಿನ ಹೊಸೂರಲ್ಲಿ ಸ್ಥಾಪಿಸಿತ್ತು. ಎರಡನೇ ಘಟಕದಲ್ಲಿ ಸ್ಕೂಟರ್​ಗಳ ಉತ್ಪಾದನೆ ಯಾವಾಗ ಆರಂಭಗೊಳ್ಳುತ್ತದೆ ಅಂತ ಕಂಪನಿಯು ಹೇಳಿಲ್ಲವಾದರೂ 2022 ಗಾಗಿ ತಯಾರಾಗಲಿದೆ ಎಂದು ಅದು ಸೂಚ್ಯವಾಗಿ ಹೇಳಿದೆ. ಹೊಸ ಘಟಕ ಒಮ್ಮೆ ಕಾರ್ಯಾರಂಭಗೊಂಡಿತು ಅಂತಾದರೆ, ಕಂಪನಿಯ ಉತ್ಪದನಾ ಸಾಮರ್ಥ್ಯ ಪ್ರಸ್ತುತ ವಾರ್ಷಿಕ 1,20,000 ಯುನಿಟ್ಗಳಿಂದ 4,00,000 ಯುನಿಟ್ಗಳಿಗೆ ಹೆಚ್ಚಲಿದೆ.

ಇಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಸಿಕ್ಕಾಪಟ್ಟೆ ಹೆಚ್ಚುತ್ತಿರುವುರಿಂದ ಕಂಪನಿಯ ಉತ್ಪದನಾ ಸಾಮರ್ಥ್ಯ ಮತ್ತು ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಮುಂದಿನ 5 ವರ್ಷಗಳ ಅವಧಿಯಲ್ಲಿ ರೂ. 650 ಕೋಟಿ ಹೂಡಿಕೆ ಮಾಡುವುದಾಗಿ ಎಥರ್ ಎನರ್ಜಿ ಸಂಸ್ಥೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಇದನ್ನೂ ಓದಿ:   ವಿಡಿಯೋದಲ್ಲಿ ಇರುವ ಶೇ.80ರಷ್ಟು ಭಾಗ ಫೇಕ್: ಎಸ್​ಆರ್ ವಿಶ್ವನಾಥ್ ಹತ್ಯೆಗೆ ಸ್ಕೆಚ್ ಆರೋಪದ ಬಗ್ಗೆ ಗೋಪಾಲಕೃಷ್ಣ ಪ್ರತಿಕ್ರಿಯೆ