ಒಂದು ವರ್ಷದಿಂದ ಕಲ್ಲಳ್ಳಿ ಗ್ರಾಮಸ್ಥರಿಗೆ ಕಂಟಕವಾಗಿದ್ದ ಚಿರತೆಯನ್ನು ಅರಣ್ಯ ಸಿಬ್ಬಂದಿ ಅರವಳಿಕೆ ಮದ್ದು ಪ್ರಯೋಗಿಸಿ ಸೆರೆಹಿಡಿದರು

ಒಂದು ವರ್ಷದಿಂದ ಕಲ್ಲಳ್ಳಿ ಗ್ರಾಮಸ್ಥರಿಗೆ ಕಂಟಕವಾಗಿದ್ದ ಚಿರತೆಯನ್ನು ಅರಣ್ಯ ಸಿಬ್ಬಂದಿ ಅರವಳಿಕೆ ಮದ್ದು ಪ್ರಯೋಗಿಸಿ ಸೆರೆಹಿಡಿದರು

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Dec 01, 2021 | 9:51 PM

ಚಿರತೆ ಸೆರೆ ಸಿಕ್ಕಿರುವುದು ಕಲ್ಲಳ್ಳಿ ಗ್ರಾಮಸ್ಥರಲ್ಲಿ ನಿರಾತಂಕ ಭಾವನೆ ಮೂಡಿದ್ದು ಅವರು ಸಂತೋಷವಾಗಿದ್ದಾರೆ. ಅದನ್ನು ಸೆರೆ ಹಿಡಿದ ಫಾರೆಸ್ಟ್ ಇಲಖೆಯ ಸಿಬ್ಬಂದಿಗೆ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.

ಬೋನಲ್ಲಿ ಹೊರಳಾಡುತ್ತಿರುವ ಚಿರತೆ ಸಾಮಾನ್ಯವಾದದ್ದೇನೂ ಅಲ್ಲ ಮಾರಾಯ್ರೇ. ಕಳೆದೊಂದು ವರ್ಷದಿಂದ ಹಾಸನದ ಬೇಲೂರು ತಾಲೂಕಿನ ಕಲ್ಲಳ್ಳಿ ಗ್ರಾಮದ ಜನರು ಇದರ ಕಾಟದಿಂದ ಬೇಸತ್ತಿದ್ದರು. ಅವರಿಗೆ ಕಂಟಕವಾಗಿ ಕಾಡುತ್ತಿದ್ದ ವ್ಯಾಘ್ರ ಪದೇಪದೆ ಗ್ರಾಮದೊಳಗೆ ನುಗ್ಗಿ, ಹಸು, ಕುರಿ, ನಾಯಿಗಳನ್ನು ಎತ್ತಿಕೊಂಡು ಹೋಗಿ ತಿನ್ನುತ್ತಿತ್ತು. ಅದನ್ನು ಸೆರೆ ಹಿಡಿಯುವ ಪ್ರಯತ್ನಗಳೆಲ್ಲ ವಿಫಲವಾಗುತ್ತಿದ್ದವು. ಅರಣ್ಯ ಇಲಾಖೆ ಸಿಬ್ಬಂದಿ ಹಲವಾರು ಬಾರಿ ಕಲ್ಲಳ್ಳಿಯಲ್ಲಿ ಬೋನು ಸಹ ಇಟ್ಟಿದ್ದರು. ಆದರೆ ಒಮ್ಮೆಯೂ ಚಿರತೆ ಸೆರೆ ಸಿಕ್ಕಿರಲಿಲ್ಲ.

ಆದರೆ ಮಂಗಳವಾರ ಅರಣ್ಯ ಸಿಬ್ಬಂದಿ ಒಂದು ಚಿರತೆ ಸೆರೆ ಹಿಡಿಯಲು ಹೊಸ ವಿಧಾನ ಬಳಸಿ ಅದರಲ್ಲಿ ಯಶ ಕೂಡ ಕಂಡಿದ್ದಾರೆ. ಊರೊಳಗೆ ನುಗ್ಗುವ ಚಿರತೆಗಳನ್ನು ಸೆರೆ ಹಿಡಿಯಲು ಅರವಳಿಕೆ ಪ್ರೊಜೆಕ್ಟೈಲ್ ಗಳನ್ನು ಸಹ ಬಳಸುತ್ತಾರೆ. ಹಿಂಸ್ರಪಶು ಬರುವ ಜಾಗದಲ್ಲಿ ಅವಿತಿಟ್ಟುಕೊಂಡು ಅದರ ದೇಹಕ್ಕೆ ಚುಚ್ಚುವ ಹಾಗೆ ಅರವಳಿಕೆ ಮದ್ದಿರುವ ಒಂದು ಸೂಜಿಯನ್ನು ಶೂಟ್ ಮಾಡಿದ ಸ್ವಲ್ಪ ಸಮಯದ ನಂತರ ಅದು ಮೂರ್ಛೆ ಹೋಗುತ್ತದೆ. ಅದನ್ನು ಖಾತ್ರಿಪಡಿಸಿಕೊಂಡ ಬಳಿಕ ಅರಣ್ಯ ಸಿಬ್ಬಂದಿ ಅದನ್ನು ಎತ್ತಿ ಬೋನಲ್ಲಿ ಹಾಕುತ್ತಾರೆ.

ಚಿರತೆ ಸೆರೆ ಸಿಕ್ಕಿರುವುದು ಕಲ್ಲಳ್ಳಿ ಗ್ರಾಮಸ್ಥರಲ್ಲಿ ನಿರಾತಂಕ ಭಾವನೆ ಮೂಡಿದ್ದು ಅವರು ಸಂತೋಷವಾಗಿದ್ದಾರೆ. ಅದನ್ನು ಸೆರೆ ಹಿಡಿದ ಫಾರೆಸ್ಟ್ ಇಲಖೆಯ ಸಿಬ್ಬಂದಿಗೆ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ. ಸಿಬ್ಬಂದಿಯ ಪ್ರಕಾರ ಸೆರೆ ಸಿಕ್ಕಿರುವುದು ಒಂದು ಗಂಡು ಚಿರತೆಯಾಗಿದ್ದು ಅದರ ಪ್ರಾಯ ಎಂಟು ವರ್ಷಗಳಂತೆ.

ಇದನ್ನೂ ಓದಿ:   Viral Video: ಹೇರ್ ಡ್ರೈಯರ್ ಬದಲು ಕುಕ್ಕರ್​ ಬಳಸಿದ ಯುವಕ; ಅಪರೂಪದ ವಿಡಿಯೋ ನೋಡಿ ಅಚ್ಚರಿಗೊಂಡ ನೆಟ್ಟಿಗರು!