ಬೇಕರಿ ಶಟರ್ ಬೀಗ ಮುರಿದು ಕಳುವು ಮಾಡುವ ಯುವಕಳ್ಳ ನಿಸ್ಸಂದೇಹವಾಗಿ ಕಸುಬಿನಲ್ಲಿ ನುರಿತವನಂತೆ ಗೋಚರಿಸುತ್ತಾನೆ!
ಬೇಕರಿ ಒಳಗೂ ಕ್ಯಾಶ್ ಕೌಂಟರ್ಗಳು ಎಲ್ಲಿವೆ ಅಂತ ತಿಳಿದುಕೊಂಡಿದ್ದಾನೆ. ಒಳಗೆ ಪ್ರವೇಶಿಸಿದ ನಂತರ ಅವನು ತನ್ನ ಎಡಭಾಗಕ್ಕೆ ಹೋಗಿ ಅಲ್ಲಿಂದ ಏನೆಲ್ಲ ಹೆಕ್ಕಿಕೊಳ್ಳುತ್ತಾನೆ.
ನುರಿತ ಅಥವಾ ವೃತ್ತಿಪರ ಕಳ್ಳ ಮತ್ತು ಅಪ್ರಬುದ್ಧ ಕಳ್ಳನೊಬ್ಬನ ನಡುವೆ ಇರುವ ವ್ಯತ್ಯಾಸವನ್ನು ನೀವು ಗುರುತಿಸಬಲ್ಲಿರಾ? ಈ ವಿಡಿಯೋವನ್ನು ಗಮನವಿಟ್ಟು ವೀಕ್ಷಿಸಿ. ಫ್ರೇಜರ್ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಜೀವನಹಳ್ಳಿಯ ಬಸ್ ನಿಲ್ದಾಣಕ್ಕೆ ಹತ್ತಿರದ ಬೇಕರಿಯೊಂದರಲ್ಲಿ ನವೆಂಬರ್ 21 ರಂದು ಕಳ್ಳತನ ನಡೆದಿದ್ದು ಬೇಕರಿ ಹೊರಗಡೆ ಮತ್ತು ಒಳಗೆ ಅಳವಡಿಸಿರುವ ಕೆಮೆರಾಗಳು ಕಳ್ಳತನದ ಇಡೀ ಸನ್ನಿವೇಶವನ್ನು ಸೆರೆಹಿಡಿದಿವೆ. ಇಲ್ಲಿ ಕಳುವು ಮಾಡುತ್ತಿರುವ ಯುವ ಕಳ್ಳ ನಿಸ್ಸಂದೇಹವಾಗಿ ಕಸುಬಿನಲ್ಲಿ ಪಳಗಿದ್ದಾನೆ. ಕಳ್ಳತನದ ಪ್ರತಿಯೊಂದು ಅಯಾಮವನ್ನು ಅವನು ಕರಾರುವಕ್ಕಾಗಿ ಮಾಡುತ್ತಾನೆ. ಕೊಂಚ ಧಾವಂತ ಪ್ರದರ್ಶಿಸುತ್ತಾನಾದರೂ ತನ್ನ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿ ಮುಗಿಸುತ್ತಾನೆ.
ಅವನು ಈ ಬೇಕರಿಯನ್ನು ಱಂಡೋಮ್ ಆಗಿ ಆಯ್ಕೆ ಮಾಡಿಕೊಂಡಿಲ್ಲ. ಅದರ ಬಗ್ಗೆ ಮೊದಲೇ ಅವನು ಹೋಮ್ ವರ್ಕ್ ಮಾಡಿದ್ದಾನೆ. ಕಬ್ಬಿಣದ ಸರಳನ್ನು ಬೀಗ ಮುರಿಯಲು ಜೊತೆಯಲ್ಲಿ ತಂದಿದ್ದಾನೆ. ಅವನಿಗೆ ಕೆಮೆರಾ ಎಲ್ಲೆಲ್ಲಿವೆ ಅಂತ ಚೆನ್ನಾಗಿ ಗೊತ್ತಿದೆ. ಅದರಲ್ಲಿ ಮುಖ ಕ್ಯಾಪ್ಚರ್ ಆಗದಂತಿರಲು ಎಚ್ಚರ ವಹಿಸುತ್ತಾನೆ.
ಶಟರ್ ಬೀಗವನ್ನು ಅದೆಷ್ಟು ಸಲೀಸಾಗಿ ಮುರಿಯುತ್ತಾನೆ ಅನ್ನುವುದನ್ನು ಗಮನಿಸಿ. ಬೇಕರಿ ಒಳಗೂ ಕ್ಯಾಶ್ ಕೌಂಟರ್ಗಳು ಎಲ್ಲಿವೆ ಅಂತ ತಿಳಿದುಕೊಂಡಿದ್ದಾನೆ. ಒಳಗೆ ಪ್ರವೇಶಿಸಿದ ನಂತರ ಅವನು ತನ್ನ ಎಡಭಾಗಕ್ಕೆ ಹೋಗಿ ಅಲ್ಲಿಂದ ಏನೆಲ್ಲ ಹೆಕ್ಕಿಕೊಳ್ಳುತ್ತಾನೆ. ಅಲ್ಲಿ ಸಿಕ್ಕವುಗಳನ್ನೆಲ್ಲ ಕ್ಯಾರಿ ಮಾಡಲು ಹೊರಗಡೆ ಹೋಗಿ ಒಂದು ಚಿಕ್ಕ ಖಾಲಿ ಕಾರ್ಟನ್ ಎತ್ತಿಕೊಂಡು ಬರುತ್ತಾನೆ.
ಅದಾದ ಮೇಲೆ ಬಲಭಾಗದಲ್ಲಿರುವ ಕ್ಯಾಶ್ ಕೌಂಟರ್ ಗಳ ಬಳಿ ಬರುತ್ತಾನೆ. ಒಂದು ಬ್ಯಾಗನಲ್ಲಿ ಅಲ್ಲಿದ್ದ ಹಣವನ್ನೆಲ್ಲ ತುಂಬಿಕೊಂಡು ಅಲ್ಲಿಂದ ಹೊರಡುತ್ತಾನೆ. ಬೇಕರಿ ಮುಂದೆಯೇ ನಿಲ್ಲಿಸಿದ್ದ ಬೈಕಲ್ಲಿ ಕದ್ದ ಹಣ ಮತ್ತು ಮಾಲಿನೊಂದಿಗೆ ಪರಾರಿಯಾಗುತ್ತಾನೆ. ಅವನು ವೃತ್ತಿಪರ ಕಳ್ಳ ಅಲ್ಲ ಅಂತೀರಾ?
ಇದನ್ನೂ ಓದಿ: Viral Video: ಚಳಿಯಿಂದ ನಡುಗುತ್ತಿದ್ದ ಮಗಳು ದುಪಟ್ಟಾ ಎಳೆದುಕೊಂಡಿದ್ದಕ್ಕೆ ಗದರಿದ ಅಮ್ಮ; ವಿಡಿಯೋ ವೈರಲ್