Kannada News Technology Moto G32 the company's latest smartphone in the G-series first sale start today via Flipkart
Moto G32: ಇಂದು ಮೋಟೋ G32 ಫಸ್ಟ್ ಸೇಲ್: ಫ್ಲಿಪ್ಕಾರ್ಟ್ ನೀಡಿದೆ ಆಫರ್ಗಳ ಸುರಿ ಮಳೆ
ಮೋಟೋ ಜಿ32 (Moto G32) ಸ್ಮಾರ್ಟ್‌ಫೋನ್ ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್ಕಾರ್ಟ್ನಲ್ಲಿ ಇಂದು ಮಧ್ಯಾಹ್ನ 12 ಗಂಟೆಯಿಂದ ಖರೀದಿಗೆ ಸಿಗಲಿದೆ. ಮೊದಲ ಸೇಲ್ ಪ್ರಯುಕ್ತ ಆಫರ್ ಕೂಡ ನೀಡಲಾಗಿದ್ದು, HDFC ಬ್ಯಾಂಕ್ ಕಾರ್ಡ್ ಮೂಲಕ ಪಡೆದುಕೊಂಡರೆ ಶೇ. 10 ರಷ್ಟು ರಿಯಾಯಿತಿ ಸಿಗಲಿದೆ.
Moto G32
Follow us on
ಮೋಟೋರೊಲಾ (Motorola) ಕಂಪನಿಯ ಸ್ಮಾರ್ಟ್ಫೋನ್ಗಳಿಗೆ ಈಗ ಬೇಡಿಕೆ ಹೆಚ್ಚಾಗುತ್ತಿದೆ. ಕಳೆದ ಎರಡು ವರ್ಷಗಳಿಂದ ಬಜೆಟ್ ಬೆಲೆಯ ಜೊತೆಗೆ ಹೈರೇಂಜ್ ಮಾದರಿಯಲ್ಲಿ ಆಕರ್ಷಕ ಸ್ಮಾರ್ಟ್ಫೋನ್ಗಳನ್ನು (Smartphone) ಬಿಡುತ್ತಿರುವುದು ಇದಕ್ಕೆ ಕಾರಣ ಎನ್ನಬಹುದು. ಮೊನ್ನೆಯಷ್ಟೆ200 ಮೆಗಾಫಿಕ್ಸೆಲ್ ಕ್ಯಾಮೆರಾ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿ ಭರ್ಜರಿ ಸದ್ದು ಮಾಡಿತ್ತು. ಇದರ ನಡುವೆ ಮೋಟೋರೊಲಾಕಂಪನಿ ಕಳೆದ ವಾರ ಭಾರತದ ಮಾರುಕಟ್ಟೆಯಲ್ಲಿ ಅನಾವರಣ ಮಾಡಿದ್ದ ತನ್ನ ಹೊಸ ಮೋಟೋ ಜಿ32 (Moto G32) ಸ್ಮಾರ್ಟ್‌ಫೋನ್ ಅನ್ನು ಇಂದು ಸೇಲ್ ಮಾಡುತ್ತಿದೆ. ಇದು ಬಲಿಷ್ಠವಾದ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಆಕರ್ಷಕ ಕ್ಯಾಮೆರಾ, ಬ್ಯಾಟರಿ ಕೂಡ ನೀಡಲಾಗಿದೆ. ಹಾಗಾದರೆ ಈ ಫೋನಿನ ಬೆಲೆ ಎಷ್ಟು? ಏನೆಲ್ಲ ಫೀಚರ್ಸ್ ಇದೆ ಎಂಬುದನ್ನು ನೋಡೋಣ.
ಮೋಟೋ G32 ಸ್ಮಾರ್ಟ್‌ಫೋನ್ ಸದ್ಯಕ್ಕೆ ಭಾರತದ ಮಾರುಕಟ್ಟೆಯಲ್ಲಿ ಒಂದು ಸ್ಟೋರೆಜ್ ಆಯ್ಕೆಯಲ್ಲಷ್ಟೆ ಅನಾವರಣಗೊಂಡಿದೆ. ಇದರ 4GB RAM ಮತ್ತು 64GB ಸ್ಟೋರೇಜ್ ಆಯ್ಕೆಗೆ 12,999 ರೂ. ನಿಗದಿ ಮಾಡಲಾಗಿದೆ.
ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್ಕಾರ್ಟ್ನಲ್ಲಿ ಈ ಫೋನ್ ಇಂದು ಮಧ್ಯಾಹ್ನ 12 ಗಂಟೆಯಿಂದ ಖರೀದಿಗೆ ಸಿಗಲಿದೆ. ಮೊದಲ ಸೇಲ್ ಪ್ರಯುಕ್ತ ಆಫರ್ ಕೂಡ ನೀಡಲಾಗಿದ್ದು, HDFC ಬ್ಯಾಂಕ್ ಕಾರ್ಡ್ ಮೂಲಕ ಪಡೆದುಕೊಂಡರೆ ಶೇ. 10 ರಷ್ಟು ರಿಯಾಯಿತಿ ಸಿಗಲಿದೆ.
ಈ ಫೋನ್ 6.5 ಇಂಚಿನ ಫುಲ್‌ಹೆಚ್‌ಡಿ ಪ್ಲಸ್ ಎಲ್‌ಸಿಡಿ ಡಿಸ್‌ಪ್ಲೇಯನ್ನು ಹೊಂದಿದೆ. ಇದು 1,080×2,400 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ದ ಜೊತೆಗೆ 90Hz ಸ್ಕ್ರೀನ್ ರಿಫ್ರೆಶ್ ರೇಟ್ ಅನ್ನು ಒಳಗೊಂಡಿದೆ.
ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 680 ಪ್ರೊಸೆಸರ್ ಬಲವನ್ನು ಪಡೆದುಕೊಂಡಿದೆ. ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 12 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ.
ಮೋಟೋ G32 ಸ್ಮಾರ್ಟ್‌ಫೋನ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್ F1.8 ಲೆನ್ಸ್ ಅನ್ನು ಹೊಂದಿದೆ. ಎರಡನೇ ಕ್ಯಾಮೆರಾ F2.2 ಲೆನ್ಸ್ ಹೊಂದಿರುವ 8 ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಸೆನ್ಸಾರ್ ಹೊಂದಿದೆ.
ಈ ಫೋನ್ನಲ್ಲಿರುವ ಮೂರನೇ ಕ್ಯಾಮೆರಾ F2 ಜೊತೆಗೆ 2-ಮೆಗಾಪಿಕ್ಸೆಲ್ ಮ್ಯಾಕ್ರೋ ಸೆನ್ಸಾರ್ ಅನ್ನು ಒಳಗೊಂಡಿದೆ. ಇದಲ್ಲದೆ 16 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ.
ಬಲಿಷ್ಠವಾದ 5000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 33W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಯುಎಸ್ಬಿ-C ಪೋರ್ಟ್ ಅನ್ನು ಅಳವಡಿಸಲಾಗಿದೆ.