OnePlus 10T: ಬರೋಬ್ಬರಿ 16GB RAM ನ ಒನ್‌ಪ್ಲಸ್ 10T ಫೋನ್ ಮಾರಾಟ ಶುರು: 5,000 ರೂ. ಡಿಸ್ಕೌಂಟ್
ಸಾಕಷ್ಟು ಬಲಿಷ್ಠವಾಗಿರುವ ಒನ್‌ಪ್ಲಸ್ 10T ಸ್ಮಾರ್ಟ್‌ಫೋನ್ 16GB RAM ಹೊಂದಿರುವುದು ವಿಶೇಷ. ಈ ಸ್ಟೋರೇಜ್ ಆಯ್ಕೆಯ ಫೋನ್ ಈಗ ಅಮೆಜಾನ್ನಲ್ಲಿ (Amazon) ಖರೀದಿಗೆ ಸಿಗುತ್ತಿದ್ದು, ಬಂಪರ್ ಆಫರ್ ಕೂಡ ನೀಡಲಾಗಿದೆ.
ಈ ತಿಂಗಳು ಭಾರತದಲ್ಲಿ ಒಂದರ ಹಿಂದೆ ಒಂದರಂತೆ ಆಕರ್ಷಕ ಸ್ಮಾರ್ಟ್ಫೋನ್ಗಳು ಬಿಡುಗಡೆ ಆಗುತ್ತಿದೆ. ಒನ್‌ಪ್ಲಸ್ ಕಂಪನಿ ಮೊನ್ನೆಯಷ್ಟೆ ಒನ್‌ಪ್ಲಸ್ 10ಟಿ 5ಜಿ (OnePlus Nord 10T 5G) ಫೋನನ್ನು ರಿಲೀಸ್ ಮಾಡಿತ್ತು. ಸಾಕಷ್ಟು ಬಲಿಷ್ಠವಾಗಿರುವ ಈ ಸ್ಮಾರ್ಟ್‌ಫೋನ್ 16GB RAM ಹೊಂದಿರುವುದು ವಿಶೇಷ. ಈ ಸ್ಟೋರೇಜ್ ಆಯ್ಕೆಯ ಫೋನ್ ಈಗ ಸೇಲ್ ಕಾಣುತ್ತಿದೆ. ಪ್ರಸಿದ್ಧ ಇ ಕಾಮರ್ಸ್ ತಾಣವಾದ ಅಮೆಜಾನ್ನಲ್ಲಿ (Amazon) ಖರೀದಿಗೆ ಸಿಗುತ್ತಿದ್ದು, ಬಂಪರ್ ಆಫರ್ ಕೂಡ ನೀಡಲಾಗಿದೆ. ಈ ಫೋನ್ ಕ್ವಾಲ್ಕಾಮ್‌ನ ಸ್ನಾಪ್‌ಡ್ರಾಗನ್ 8+ Gen 1 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುತ್ತಿದೆ. ಜೊತೆಗೆ 150W ವೇಗದ ಚಾರ್ಜಿಂಗ್ (150W Fast Charging) ಬೆಂಬಲವನ್ನು ಪಡೆದುಕೊಂಡಿದೆ.
- ಭಾರತದಲ್ಲಿ ಒನ್‌ಪ್ಲಸ್ 10T ಸ್ಮಾರ್ಟ್‌ಫೋನ್ ಮೂರು ಆಯ್ಕೆಯಲ್ಲಿ ಖರೀದಿಗೆ ಸಿಗುತ್ತಿದೆ. ಇದರ 8GB RAM ಮತ್ತು 128GB ಇಂಟರ್ ಸ್ಟೋರೇಜ್ ಮಾದರಿಗೆ 49,999ರೂ. ಬೆಲೆಯಲ್ಲಿ ಪ್ರಾರಂಭವಾಗುತ್ತದೆ.
- ಅಂತೆಯೆ 12GB RAM + 256GB ಸ್ಟೋರೇಜ್ ಮಾದರಿಗೆ 54,999ರೂ. ಮತ್ತು 16GB RAM + 256GB ಸ್ಟೋರೇಜ್ ರೂಪಾಂತರದ ಆಯ್ಕೆಯು 55,999ರೂ. ಬೆಲೆ ನಿಗದಿ ಮಾಡಲಾಗಿದೆ.
- 16GB RAM ಸ್ಟೋರೇಜ್ ಆಯ್ಕೆಯ ಫೋನಿಗೆ ಆಕರ್ಷಕ ಆಫರ್ ಕೂಡ ನೀಡಲಾಗಿದ್ದು, ICICI ಬ್ಯಾಂಕ್ ಡೆಬಿಡ್ ಅಥವಾ ಕ್ರೆಡಿಟ್ ಕಾರ್ಡ್ ಮೂಲಕ ಖರೀದಿ ಮಾಡಿದರೆ 5000 ರೂ. ಗಳ ಡಿಸ್ಕೌಂಟ್ ಸಿಗಲಿದೆ. 3000 ರೂ. ವರೆಗೆ ಎಕ್ಸ್ಚೇಂಜ್ ಆಫರ್ ನೀಡಲಾಗಿದೆ.
- ಈ ಸ್ಮಾರ್ಟ್‌ಫೋನ್ 2,412*1,080 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಬಲವನ್ನು ಪಡೆದುಕೊಂಡಿರುವ 6.7 ಇಂಚಿನ ಹೆಚ್‌ಡಿ ಪ್ಲಸ್ ಅಮೋಲೆಡ್ ಡಿಸ್‌ಪ್ಲೇಯನ್ನು ಹೊಂದಿದೆ. ಇದು 120hz ಸ್ಕ್ರೀನ್ ರಿಫ್ರೆಶ್ ರೇಟ್ ಅನ್ನು ಸಹ ನೀಡಲಿದೆ.
- ಕ್ವಾಲ್‌ಕಾಮ್ ಸ್ನಾಪ್‌ಡ್ರಾಗನ್ 8+ Gen 1 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದು ಆಕ್ಸಿಜನ್ OS 12.1 ಜೊತೆಗೆ ಆಂಡ್ರಾಯ್ಡ್ 12 ಬೆಂಬಲದೊಂದಿಗೆ ರನ್ ಆಗಲಿದೆ. ಅಲ್ಲದೆ ಈ ವರ್ಷದ ಅಂತ್ಯದ ವೇಳೆಗೆ ಈ ಫೋನ್ OxygenOS 13 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ ಎಂದು ಹೇಳಿದೆ.
- ಒನ್‌ಪ್ಲಸ್ 10T ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೋನಿ IMX766 ಸೆನ್ಸಾರ್ ಹೊಂದಿದೆ.
- ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಅಲ್ಟ್ರಾ–ವೈಡ್ ಲೆನ್ಸ್ ಹೊಂದಿದ್ದು, ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಲೆನ್ಸ್ ಅನ್ನು ಒಳಗೊಂಡಿದೆ. ಇದಲ್ಲದೆ ಸೆಲ್ಫಿಗಳು ಮತ್ತು ವೀಡಿಯೊ ಕರೆಗಳಿಗಾಗಿ 16MP ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿರುತ್ತದೆ.
- 4800mAh ಸಾಮರ್ಥ್ಯದ ಬ್ಯಾಟರಿಯನ್ನು ನೀಡಲಾಗಿದ್ದು ಇದು 150W SUPERVOOC ವೇಗದ ಚಾರ್ಜಿಂಗ್ ಬೆಂಬಲಿಸಲಿದೆ. ಕೇವಲ 19 ನಿಮಿಷಗಳಲ್ಲಿ ಫೋನ್ ಅನ್ನು ಸಂಪೂರ್ಣವಾಗಿ ಚಾರ್ಜ್ ಮಾಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.
- ಕನೆಕ್ಟಿವಿಟಿ ಆಯ್ಕೆಗಳಲ್ಲಿ ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, Wi-Fi 6, ಬ್ಲೂಟೂತ್ v5.3, GPS/ A-GPS, NFC, ಮತ್ತು USB ಟೈಪ್-C ಪೋರ್ಟ್ ಸೇರಿದೆ. ಇನ್–ಡಿಸ್‌ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸಾರ್ ಮತ್ತು ಫೇಸ್ ಅನ್‌ಲಾಕ್ ಫೀಚರ್ ನೀಡಲಾಗಿದೆ.
ಇದನ್ನೂ ಓದಿ