AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

OnePlus 10T: ಮೊದಲ ಸೇಲ್​ನಲ್ಲೇ ಬಂಪರ್ ಆಫರ್: ಹೊಸ ಒನ್‌ಪ್ಲಸ್‌ 10T ಮೇಲೆ 5,000 ರೂ. ಡಿಸ್ಕೌಂಟ್

OnePlus 10T First Sale: ಸಾಕಷ್ಟು ಬಲಿಷ್ಠವಾಗಿರುವ ಒನ್​ಪ್ಲಸ್ 10ಟಿ 5ಜಿ (OnePlus Nord 10T 5G) ಇಂದು ಮೊದಲ ಸೇಲ್ ಕಾಣುತ್ತಿದೆ. ಪ್ರಸಿದ್ಧ ಇ ಕಾಮರ್ಸ್​ ತಾಣವಾದ ಅಮೆಜಾನ್​ನಲ್ಲಿ ಖರೀದಿಗೆ ಸಿಗುತ್ತಿದ್ದು, ಬಂಪರ್ ಆಫರ್ ಕೂಡ ನೀಡಲಾಗಿದೆ.

OnePlus 10T: ಮೊದಲ ಸೇಲ್​ನಲ್ಲೇ ಬಂಪರ್ ಆಫರ್: ಹೊಸ ಒನ್‌ಪ್ಲಸ್‌ 10T ಮೇಲೆ 5,000 ರೂ. ಡಿಸ್ಕೌಂಟ್
OnePlus 10T
TV9 Web
| Edited By: |

Updated on:Aug 06, 2022 | 2:22 PM

Share

ಆಗಸ್ಟ್ ತಿಂಗಳ ಮೊದಲ ವಾರದಲ್ಲೇ ಸ್ಮಾರ್ಟ್​ಫೋನ್ ಮಾರುಕಟ್ಟೆಗೆ ಅನೇಕ ಮೊಬೈಲ್​ಗಳು ಲಗ್ಗೆಯಿಟ್ಟಿವೆ. ಇದರಲ್ಲಿ ಒನ್​ಪ್ಲಸ್ ಕಂಪನಿಯ ಫೋನ್ ಕೂಡ ಇದೆ. ಭಾರತದಲ್ಲಿ ದೇಶದಲ್ಲಿ ಒಂದರ ಹಿಂದೆ ಒಂದರಂತೆ ವಿಶೇಷವಾದ ಆಕರ್ಷಕ ಸ್ಮಾರ್ಟ್​​ಫೋನ್​ಗಳನ್ನು ಬಿಡುಗಡೆ ಮಾಡುತ್ತಿರುವ ಒನ್​ಪ್ಲಸ್ ಕಂಪನಿ ಮೊನ್ನೆಯಷ್ಟೆ ಒನ್​ಪ್ಲಸ್ 10ಟಿ 5ಜಿ (OnePlus Nord 10T 5G) ಫೋನನ್ನು ರಿಲೀಸ್ ಮಾಡಿತ್ತು. ಸಾಕಷ್ಟು ಬಲಿಷ್ಠವಾಗಿರುವ ಈ ಸ್ಮಾರ್ಟ್​​ಫೋನ್ ಇಂದು ಮೊದಲ ಸೇಲ್ ಕಾಣುತ್ತಿದೆ. ಪ್ರಸಿದ್ಧ ಇ ಕಾಮರ್ಸ್​ ತಾಣವಾದ ಅಮೆಜಾನ್​ನಲ್ಲಿ (Amazon) ಖರೀದಿಗೆ ಸಿಗುತ್ತಿದ್ದು, ಬಂಪರ್ ಆಫರ್ ಕೂಡ ನೀಡಲಾಗಿದೆ. ಈ ಫೋನ್ ಕ್ವಾಲ್ಕಾಮ್‌ನ ಸ್ನಾಪ್‌ಡ್ರಾಗನ್ 8+ Gen 1 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುತ್ತಿದೆ. ಜೊತೆಗೆ 150W ವೇಗದ ಚಾರ್ಜಿಂಗ್ (150W Fast Charging) ಬೆಂಬಲವನ್ನು ಪಡೆದುಕೊಂಡಿದೆ.

  1. ಭಾರತದಲ್ಲಿ ಒನ್‌ಪ್ಲಸ್‌ 10T ಸ್ಮಾರ್ಟ್‌ಫೋನ್‌ ಮೂರು ಆಯ್ಕೆಯಲ್ಲಿ ಖರೀದಿಗೆ ಸಿಗುತ್ತಿದೆ. ಇದರ 8GB RAM ಮತ್ತು 128GB ಇಂಟರ್‌ ಸ್ಟೋರೇಜ್ ಮಾದರಿಗೆ 49,999ರೂ. ಬೆಲೆಯಲ್ಲಿ ಪ್ರಾರಂಭವಾಗುತ್ತದೆ.
  2. ಅಂತೆಯೆ 12GB RAM + 256GB ಸ್ಟೋರೇಜ್ ಮಾದರಿಗೆ 54,999ರೂ. ಮತ್ತು 16GB RAM + 256GB ಸ್ಟೋರೇಜ್ ರೂಪಾಂತರದ ಆಯ್ಕೆಯು 55,999ರೂ. ಬೆಲೆ ನಿಗದಿ ಮಾಡಲಾಗಿದೆ.
  3. ಆಕರ್ಷಕ ಆಫರ್ ಕೂಡ ನೀಡಲಾಗಿದ್ದು, ICICI ಬ್ಯಾಂಕ್ ಡೆಬಿಡ್ ಅಥವಾ ಕ್ರೆಡಿಟ್ ಕಾರ್ಡ್ ಮೂಲಕ ಖರೀದಿ ಮಾಡಿದರೆ 5000 ರೂ. ಗಳ ಡಿಸ್ಕೌಂಟ್ ಸಿಗಲಿದೆ. 3000 ರೂ. ವರೆಗೆ ಎಕ್ಸ್​ಚೇಂಜ್ ಆಫರ್ ನೀಡಲಾಗಿದೆ.
  4. ಈ ಸ್ಮಾರ್ಟ್​​ಫೋನ್ 2,412×1,080 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಬಲವನ್ನು ಪಡೆದುಕೊಂಡಿರುವ 6.7 ಇಂಚಿನ ಹೆಚ್‌ಡಿ ಪ್ಲಸ್‌ ಅಮೋಲೆಡ್‌ ಡಿಸ್‌ಪ್ಲೇಯನ್ನು ಹೊಂದಿದೆ. ಇದು 120hz ಸ್ಕ್ರೀನ್ ರಿಫ್ರೆಶ್ ರೇಟ್‌ ಅನ್ನು ಸಹ ನೀಡಲಿದೆ.
  5. ಕ್ವಾಲ್‌ಕಾಮ್‌ ಸ್ನಾಪ್‌ಡ್ರಾಗನ್ 8+ Gen 1 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದು ಆಕ್ಸಿಜನ್ OS 12.1 ಜೊತೆಗೆ ಆಂಡ್ರಾಯ್ಡ್‌ 12 ಬೆಂಬಲದೊಂದಿಗೆ ರನ್‌ ಆಗಲಿದೆ. ಅಲ್ಲದೆ ಈ ವರ್ಷದ ಅಂತ್ಯದ ವೇಳೆಗೆ ಈ ಫೋನ್‌ OxygenOS 13 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ ಎಂದು ಹೇಳಿದೆ.
  6. ಒನ್‌ಪ್ಲಸ್‌ 10T ಸ್ಮಾರ್ಟ್‌ಫೋನ್‌ ಟ್ರಿಪಲ್ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೋನಿ IMX766 ಸೆನ್ಸಾರ್‌ ಹೊಂದಿದೆ.
  7. ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಅಲ್ಟ್ರಾ–ವೈಡ್ ಲೆನ್ಸ್‌ ಹೊಂದಿದ್ದು, ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಲೆನ್ಸ್‌ ಅನ್ನು ಒಳಗೊಂಡಿದೆ. ಇದಲ್ಲದೆ ಸೆಲ್ಫಿಗಳು ಮತ್ತು ವೀಡಿಯೊ ಕರೆಗಳಿಗಾಗಿ 16MP ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿರುತ್ತದೆ.
  8. 4800mAh ಸಾಮರ್ಥ್ಯದ ಬ್ಯಾಟರಿಯನ್ನು ನೀಡಲಾಗಿದ್ದು ಇದು 150W SUPERVOOC ವೇಗದ ಚಾರ್ಜಿಂಗ್ ಬೆಂಬಲಿಸಲಿದೆ. ಕೇವಲ 19 ನಿಮಿಷಗಳಲ್ಲಿ ಫೋನ್ ಅನ್ನು ಸಂಪೂರ್ಣವಾಗಿ ಚಾರ್ಜ್ ಮಾಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.
  9. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, Wi-Fi 6, ಬ್ಲೂಟೂತ್ v5.3, GPS/ A-GPS, NFC, ಮತ್ತು USB ಟೈಪ್-C ಪೋರ್ಟ್ ಸೇರಿದೆ. ಇನ್–ಡಿಸ್‌ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸಾರ್‌ ಮತ್ತು ಫೇಸ್ ಅನ್‌ಲಾಕ್ ಫೀಚರ್ ನೀಡಲಾಗಿದೆ.

Published On - 2:22 pm, Sat, 6 August 22

Follow Us
TV9 Web
TV9 Web

TV9 Kannada

Read More
ಇಲ್ಲಿ ಇಂದಿಗೂ ಹಚ್ಚಲ್ಲ ದೀಪ, ಸಿಡಿಸಲ್ಲ ಪಟಾಕಿ
ಇಲ್ಲಿ ಇಂದಿಗೂ ಹಚ್ಚಲ್ಲ ದೀಪ, ಸಿಡಿಸಲ್ಲ ಪಟಾಕಿ
ಪಟಾಕಿ ಸಿಡಿಸಿದರೆ ಕಾಯಿಲೆ ಗುಣವಾಗುತ್ತವೆ ಎಂದ ಬಂಗಾಳದ ಬಿಜೆಪಿ ಶಾಸಕಿ
ಪಟಾಕಿ ಸಿಡಿಸಿದರೆ ಕಾಯಿಲೆ ಗುಣವಾಗುತ್ತವೆ ಎಂದ ಬಂಗಾಳದ ಬಿಜೆಪಿ ಶಾಸಕಿ
ಮಗುವಿನ ಪ್ರಾಣಾಪಾಯ ತಪ್ಪಿದೆ, ಉಚಿತ ಚಿಕಿತ್ಸೆ ನೀಡುತ್ತೇವೆ ಎಂದು ಆಸ್ಪತ್ರೆ
ಮಗುವಿನ ಪ್ರಾಣಾಪಾಯ ತಪ್ಪಿದೆ, ಉಚಿತ ಚಿಕಿತ್ಸೆ ನೀಡುತ್ತೇವೆ ಎಂದು ಆಸ್ಪತ್ರೆ
ಎಥೆನಾಲ್​​ ಹೆಸರಲ್ಲಿ 1.68 ಲಕ್ಷ ಕೋಟಿ ಲೂಟಿ? ಲಕ್ಷ್ಮಣ್ ಗಂಭೀರ ಆರೋಪ
ಎಥೆನಾಲ್​​ ಹೆಸರಲ್ಲಿ 1.68 ಲಕ್ಷ ಕೋಟಿ ಲೂಟಿ? ಲಕ್ಷ್ಮಣ್ ಗಂಭೀರ ಆರೋಪ
ನಿರ್ದೇಶಕನ ಮೇಲೆ ಕಾನೂನು ಕ್ರಮ ಕೈಗೋಳ್ಳುತ್ತೇವೆ: ಪ್ರಿಯಾಂಕಾ ಎಚ್ಚರಿಕೆ
ನಿರ್ದೇಶಕನ ಮೇಲೆ ಕಾನೂನು ಕ್ರಮ ಕೈಗೋಳ್ಳುತ್ತೇವೆ: ಪ್ರಿಯಾಂಕಾ ಎಚ್ಚರಿಕೆ
ಮರಿ ನೀರಾನೆಗೆ 'ಡಾ. ಸಮೀಕ್ಷಾ ರೆಡ್ಡಿ' ಹೆಸರು ನಾಮಕರಣ
ಮರಿ ನೀರಾನೆಗೆ 'ಡಾ. ಸಮೀಕ್ಷಾ ರೆಡ್ಡಿ' ಹೆಸರು ನಾಮಕರಣ
ಬಿಜೆಪಿ ಡಿಕ್ಷನರಿ ಓದಲಿ; ಖರ್ಗೆಯ ದೀಪಾವಳಿ ಶುಭಾಶಯಕ್ಕೆ ಕಾಂಗ್ರೆಸ್ ಸಮರ್ಥನೆ
ಬಿಜೆಪಿ ಡಿಕ್ಷನರಿ ಓದಲಿ; ಖರ್ಗೆಯ ದೀಪಾವಳಿ ಶುಭಾಶಯಕ್ಕೆ ಕಾಂಗ್ರೆಸ್ ಸಮರ್ಥನೆ
ಚೌಡೇಶ್ವರಿ ದೇವಾಲಯಕ್ಕೆ ವಿಜಯಲಕ್ಷ್ಮಿ ಭೇಟಿ, ದರ್ಶನ್​​ಗಾಗಿ ವಿಶೇಷ ಪೂಜೆ
ಚೌಡೇಶ್ವರಿ ದೇವಾಲಯಕ್ಕೆ ವಿಜಯಲಕ್ಷ್ಮಿ ಭೇಟಿ, ದರ್ಶನ್​​ಗಾಗಿ ವಿಶೇಷ ಪೂಜೆ
ಸಿದ್ದರಾಮಯ್ಯರೊಂದಿಗೆ ಡಿಕೆಶಿ ಚರ್ಚೆ: ಕೆಲ ವಿಚಾರ ತಿಳಿಸಿದ್ದೇನೆ; ಸಿಎಂ
ಸಿದ್ದರಾಮಯ್ಯರೊಂದಿಗೆ ಡಿಕೆಶಿ ಚರ್ಚೆ: ಕೆಲ ವಿಚಾರ ತಿಳಿಸಿದ್ದೇನೆ; ಸಿಎಂ
ಇಡೀ ರಾಜ್ಯದ ಮಹಿಳೆಯರಿಗಿದೆ 'ಉಚಿತ ಬಸ್', ನಮಗೇಕಿಲ್ಲ?
ಇಡೀ ರಾಜ್ಯದ ಮಹಿಳೆಯರಿಗಿದೆ 'ಉಚಿತ ಬಸ್', ನಮಗೇಕಿಲ್ಲ?