WhatsApp: ವಾಟ್ಸ್​ಆ್ಯಪ್​ನಲ್ಲಿ ಬರುತ್ತಿದೆ ಅವತಾರ್ ಪ್ರೊಫೈಲ್ ಫೋಟೋ ಆಯ್ಕೆ: ಏನಿದು ಹೊಸ ಫೀಚರ್?

WhatsApp New Feature: ಪ್ರೊಫೈಲ್ ಫೋಟೋದಲ್ಲಿ (Profile Photo) ಅವತಾರ್ (Avatar) ಎಂಬ ಆಯ್ಕೆಯನ್ನು ವಾಟ್ಸ್​ಆ್ಯಪ್ ಅಭಿವೃದ್ದಿ ಪಡಿಸುತ್ತಿರುವ ಬಗ್ಗೆ ವಾಟ್ಸ್​ಆ್ಯಪ್ ಬೇಟಾಇನ್​ಫೋ ವರದಿ ಮಾಡಿದೆ.

WhatsApp: ವಾಟ್ಸ್​ಆ್ಯಪ್​ನಲ್ಲಿ ಬರುತ್ತಿದೆ ಅವತಾರ್ ಪ್ರೊಫೈಲ್ ಫೋಟೋ ಆಯ್ಕೆ: ಏನಿದು ಹೊಸ ಫೀಚರ್?
WhatsApp
Follow us
TV9 Web
| Updated By: Vinay Bhat

Updated on:Aug 16, 2022 | 3:15 PM

ವಿಶ್ವದಲ್ಲಿ ಕೋಟ್ಯಾಂತರ ಬಳಕೆದಾರರನ್ನು ಹೊಂದಿರುವ ಮೆಟಾ ಒಡೆತನದ ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಷನ್ ವಾಟ್ಸ್​ಆ್ಯಪ್​ (WhatsApp) ದಿಢೀರ್ ಆಗಿ ಕೆಲ ನೂತನ ಅಪ್ಡೇಟ್​ಗಳನ್ನು ಪರಿಚಯಿಸುತ್ತಿದೆ. ಅತ್ಯಂತ ಸುಲಭವಾಗಿ ಕಾರ್ಯನಿರ್ವಹಿಸುವಂತಹ ಆಯ್ಕೆಯನ್ನು ಒಂದರ ಹಿಂದೆ ಒಂದರಂತೆ ವಾಟ್ಸ್​ಆ್ಯಪ್ ನೀಡುತ್ತಿದೆ. ಈ ವರ್ಷವಂತು ಅನೇಕ ವಿನೂತನ ಅಪ್ಡೇಟ್​ಗಳನ್ನು ನೀಡಿ ಬಳಕೆದಾರರನ್ನು ಮತ್ತಷ್ಟು ಖುಷಿ ಪಡಿಸುತ್ತಿದೆ. ಇದೀಗ ವಾಟ್ಸ್​ಆ್ಯಪ್ ಮತ್ತೊಂದು ಪ್ರಮುಖ ಆಯ್ಕೆಯನ್ನು ನೀಡಲು ಮುಂದಾಗಿದೆ. ಪ್ರೊಫೈಲ್ ಫೋಟೋದಲ್ಲಿ (Profile Photo) ಅವತಾರ್ (Avatar) ಎಂಬ ಆಯ್ಕೆಯನ್ನು ವಾಟ್ಸ್​ಆ್ಯಪ್ ಅಭಿವೃದ್ದಿ ಪಡಿಸುತ್ತಿರುವ ಬಗ್ಗೆ ವಾಟ್ಸ್​ಆ್ಯಪ್ ಬೇಟಾಇನ್​ಫೋ ವರದಿ ಮಾಡಿದೆ.

ಈ ಅವತಾರ್ ಫೀಚರ್ ಅನ್ನು ಬಳಸಿ ನಿಮ್ಮ ಪ್ರೊಫೈಲ್ ಫೋಟೋವನ್ನು ಇನ್ನಷ್ಟು ಸುಂದರವಾಗಿ ಕಾಣುವಂತೆ ಮಾಡಬಹುದು. ಅಂದರೆ, ಇಲ್ಲಿ ನಿಮಗೆ ಬ್ಯಾಕ್​ಗ್ರೌಂಡ್ ಕಲರ್ ಆಯ್ಕೆ ಮಾಡಲು ಅವಕಾಶ ಕಲ್ಪಿಸಲಾಗುತ್ತಿದೆ. ಸದ್ಯಕ್ಕೆ ಪರೀಕ್ಷಾ ಹಂತದಲ್ಲಿರುವ ಈ ಫೀಚರ್ ಕೆಲವೇ ದಿನಗಳಲ್ಲಿ ಆಂಡ್ರಾಯ್ಡ್, ಐಒಎಸ್ ಹಾಗೂ ಡೆಸ್ಕ್ ಟಾಪ್ ಬಳಕೆದಾರರಿಗೆ ಸಿಗಲಿದೆಯಂತೆ.

ವಾಟ್ಸ್​ಆ್ಯಪ್ ಇತ್ತೀಚೆಗಷ್ಟೆ ಎಲ್ಲ ಬಳಕೆದಾರರು ಉಪಯೋಗಿಸುತ್ತಿರುವ ಡಿಲೀಟ್‌ ಫಾರ್‌ ಎವರಿಒನ್‌ ಫೀಚರ್​​ನಲ್ಲಿ ಹೊಸ ಅಪ್ಡೇಟ್ ಒಂದನ್ನು ನೀಡಿತ್ತು. ಈ ಹಿಂದೆ ತಾವು ಸೆಂಡ್‌ ಮಾಡಿದ ಸಂದೇಶವನ್ನು ಹಂಚಿಕೊಂಡ ಸಮಯದಿಂದ ಒಂದು ಗಂಟೆ ಎಂಟು ನಿಮಿಷಗಳು ಮತ್ತು 16 ಸೆಕೆಂಡುಗಳ ಅವಧಿಯಲ್ಲಿ ಡಿಲೀಟ್‌ ಮಾಡಬಹುತ್ತು. ಇದೀಗ ಇದರ ಟೈಂ ಲಿಮಿಟ್‌ ಹೆಚ್ಚಿಸಲಾಗಿದೆ. ಈ ಸಮಯವನ್ನು ಎರಡು ದಿನಗಳಿಗೆ ವಿಸ್ತರಣೆ ಮಾಡಿದೆ. ಇದರ ಜೊತೆಗೆ ಯಾರಿಗೂ ತಿಳಿಯದಂತೆ ಗ್ರೂಪ್​ನಿಂದ ಹಿಂದೆ ಸರಿಯಬಹುದಾದ ಆಯ್ಕೆ ನೀಡಲಾಗಿದೆ.

ಇದನ್ನೂ ಓದಿ
Image
Airtel: ಏರ್ಟೆಲ್​ನಿಂದ ಫ್ರೀ ಅಮೆಜಾನ್ ಪ್ರೈಮ್ ಚಂದಾದಾರಿಕೆ: ಈ ಆಫರ್ ಮಿಸ್​ ಮಾಡ್ಬೇಡಿ
Image
OnePlus 10T: ಬರೋಬ್ಬರಿ 16GB RAM ನ ಒನ್‌ಪ್ಲಸ್‌ 10T ಫೋನ್‌ ಮಾರಾಟ ಶುರು: 5,000 ರೂ. ಡಿಸ್ಕೌಂಟ್
Image
Android 13: ಇಂದಿನಿಂದ ಗೂಗಲ್ ಪಿಕ್ಸೆಲ್​ನಲ್ಲಿ ಆಂಡ್ರಾಯ್ಡ್ 13 ಲಭ್ಯ: ಇತರೆ ಸ್ಮಾರ್ಟ್​​ಫೋನ್​ಗಳಲ್ಲಿ ಯಾವಾಗ?
Image
Moto G32: ಇಂದು ಮೋಟೋ G32 ಫಸ್ಟ್ ಸೇಲ್: ಫ್ಲಿಪ್​ಕಾರ್ಟ್​ ನೀಡಿದೆ ಆಫರ್​ಗಳ ಸುರಿ ಮಳೆ

ಈ ಹಿಂದೆ ಒಬ್ಬರು ಗ್ರೂಪ್​ನಿಂದ ಎಕ್ಸಿಟ್ ಆದರೆ ಎಲ್ಲರಿಗೂ ಆ ನೋಟಿಫಿಕೇಶನ್ ಕಾಣುತ್ತಿತ್ತು. ಈಗ ನೀವು ಗ್ರೂಪ್​ನಿಂದ ಹಿಂದೆ ಸರಿದರೆ ಆ ನೋಟಿಫಿಕೇಶನ್ ಕೇವಲ ಅಡ್ಮಿನ್​ಗೆ ಮಾತ್ರ ಕಾಣುತ್ತದೆ. ಇನ್ನು ವಾಟ್ಸ್​ಆ್ಯಪ್​ನಲ್ಲಿ ವ್ಯೂವ್ ಒನ್ಸ್ ಫೀಚರ್ ನಲ್ಲಿ ಸ್ಕ್ರೀನ್ ಶಾಟ್ ತೆಗೆಯುವ ಆಯ್ಕೆಯನ್ನು ನಿರ್ಬಂಧಿಸಿದೆ. ಹಾಗೆಯೆ ಆಯ್ದ ಜನರಿಗೆ ನೀವು ಆನ್​ಲೈನ್​ನಲ್ಲಿದ್ದರೂ ಆಫ್​ಲೈನ್​ ಇರುವಂತೆ ಮಾಡುವ ಆಯ್ಕೆ ನೀಡಲಾಗಿದೆ.

Published On - 3:14 pm, Tue, 16 August 22