ಮೋಟೋರೊಲಾ ಕಂಪನಿಯ ಸ್ಮಾರ್ಟ್ಫೋನ್ಗಳಿಗೆ ವಿಶ್ವದಲ್ಲಿ ದೊಡ್ಡ ಮಟ್ಟದ ಬೇಡಿಕೆ ಇದೆ. ಈ ಕಂಪನಿಯಿಂದ ಬಜೆಟ್ ಬೆಲೆಯಿಂದ ಹಿಡಿದು ಹೈ-ರೇಂಜ್ ಮಾದರಿಯ ಫೋನ್ಗಳು ಬಿಡುಗಡೆ ಆಗುತ್ತವೆ. ಮೋಟೋ ಕಂಪನಿಯ ಎಡ್ಜ್ ಸರಣಿಯ ಸ್ಮಾರ್ಟ್ಫೋನ್ಗಳು ಮಾರುಕಟ್ಟೆಯಲ್ಲಿ ವಿಶೇಷ ಸ್ಥಾನ ಸಂಪಾದಿಸಿದೆ. ಕಳೆದ ಮೇ ತಿಂಗಳಲ್ಲಿ ಮೋಟೋರೊಲಾ ಎಡ್ಜ್ 40 (Moto Edge 40) ಸ್ಮಾರ್ಟ್‌ಫೋನ್ ಭಾರತದಲ್ಲಿ ಬಿಡುಗಡೆ ಆಗಿತ್ತು. ಇದಕ್ಕೆ ಉತ್ತಮ ಪ್ರತಿಕ್ರಿಯೆ ಕೂಡ ಕೇಳಿಬಂದಿತ್ತು.
ಎಡ್ಜ್ 40 ಸ್ಮಾರ್ಟ್‌ಫೋನ್ ಯಶಸ್ವಿಯಾದ ಬೆನ್ನಲ್ಲೇ ಜೂನ್‌ನಲ್ಲಿ ಮೋಟೋ ಎಡ್ಜ್ ಹೊಸ ‘ವಿವಾ ಮೆಜೆಂಟಾ’ ಬಣ್ಣದ ರೂಪಾಂತರವನ್ನು ಪರಿಚಯಿಸಿತ್ತು. ಇದೀಗ ಕಂಪನಿಯು ಈ ಫೋನ್ ಅನ್ನು ‘ನಿಯೋ’ ಮಾದರಿಯಲ್ಲಿ ಬಿಡುಗಡೆ ಮಾಡಲು ತಯಾರಿ ನಡೆಸುತ್ತಿದೆ. ಸದ್ಯದಲ್ಲೇ ಭಾರತದಲ್ಲಿ ಮೋಟೋ ಎಡ್ಜ್ 40 ನಿಯೋ ಫೋನ್ ಅನಾವರಣಗೊಳ್ಳಲಿದೆ. ವಿಶೇಷ ಎಂದರೆ ಈ ಮೊಬೈಲ್ ಕೈಗೆಟಕುವ ಬೆಲೆಗೆ ಲಭ್ಯವಾಗಲಿದೆಯಂತೆ.
ಜಿಯೋ ಬಳಕೆದಾರರಿಗೆ ಬಿಗ್ ಶಾಕ್: ಟ್ರೆಂಡಿಂಗ್ ಪ್ಲಾನ್ ಅನ್ನು ದಿಢೀರ್ ಸ್ಥಗಿತಗೊಳಿಸಿದ ಕಂಪನಿ
ಮೋಟೋ ಎಡ್ಜ್ 40 ನಿಯೋ ಸ್ಮಾರ್ಟ್‌ಫೋನ್ ಅನ್ನು Geekbench ನಲ್ಲಿ ಪಟ್ಟಿ ಮಾಡಲಾಗಿದೆ. ಇಲ್ಲಿ, ಚಿಪ್‌ಸೆಟ್ ಯಾವುದು ಎಂಬುದನ್ನು ಸ್ಪಷ್ಟವಾಗಿ ಹೇಳಲಾಗಿಲ್ಲ. ಆದರೆ ಇದು ARM v8 ಆಕ್ಟಾ-ಕೋರ್ ಪ್ರೊಸೆಸರ್ ಆಗಿದ್ದು ಗರಿಷ್ಠ ವೇಗ 2.50GHz, ಮತ್ತು Mali-G610 MC3 GPU ನೊಂದಿಗೆ ರಿಲೀಸ್ ಆಗಲಿದೆ ಎಂಬುದು ತಿಳಿದುಬಂದಿದೆ. ಈ ಮಾಹಿತಿಯ ಆಧಾರದ ಮೇಲೆ, ಇದು ಮೀಡಿಯಾಟೆಕ್ ಡೈಮೆನ್ಸಿಟಿ 1050 SoC ಆಗಿರಬಹುದು. ಈ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 13 ಮೂಲಕ ಕಾರ್ಯನಿರ್ವಹಿಸುತ್ತದೆ.
ಮೋಟೋ ಎಡ್ಜ್ 40 ನಿಯೋ ಸ್ಮಾರ್ಟ್‌ಫೋನ್ ಬಗ್ಗೆ ಈ ಹಿಂದೆ ವಿದೇಶದಲ್ಲಿ ಕೆಲ ಮಾಹಿತಿ ಸೋರಿಕೆ ಆಗಿದ್ದವು. ಯುಎಇಯ ಟೆಲಿಕಮ್ಯುನಿಕೇಷನ್ಸ್ ಮತ್ತು ಡಿಜಿಟಲ್ ಗವರ್ನಮೆಂಟ್ ರೆಗ್ಯುಲೇಟರಿ ಅಥಾರಿಟಿ (ಟಿಡಿಆರ್‌ಎ) ವೆಬ್‌ಸೈಟ್‌ನಲ್ಲಿ ಈ ಸ್ಮಾರ್ಟ್‌ಫೋನ್ ಇತ್ತೀಚೆಗೆ ಕಾಣಿಸಿಕೊಂಡಿದೆ. ಮೂಲಗಳ ಪ್ರಕಾರ ಮೋಟೋ ಎಡ್ಜ್ 40 ನಿಯೋ ಫೋನ್ ಸೆಪ್ಟೆಂಬರ್ 15 ರಂದು ಬಿಡುಗಡೆಯಾಗುವ ನಿರೀಕ್ಷೆಯಿದೆ. ಇದರ ಬೆಲೆ ಭಾರತದಲ್ಲಿ ಸುಮಾರು 30,000 ರೂ. ಆಸುಪಾಸಿನಲ್ಲಿ ಇರಬಹುದು.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ