AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Moto G13: ಬಂಪರ್ ಆಫರ್: ಕೇವಲ 9,999 ರೂ. ಗೆ ಸೇಲ್ ಆಗುತ್ತಿದೆ ಮೋಟೋ G13 ಸ್ಮಾರ್ಟ್​ಫೋನ್

ಮೋಟೋ ಜಿ13 (Moto G13) ಸ್ಮಾರ್ಟ್‌ಫೋನ್‌ ಅತಿ ಕಡಿಮೆ ಬೆಲೆಗೆ ಮಾರಾಟ ಆಗುತ್ತಿದೆ. ಹಾಗಾದರೆ, ಈ ಫೋನ್​ ಎಷ್ಟು ದರಕ್ಕೆ ಸೇಲ್ ಆಗುತ್ತಿದೆ?, ಏನೆಲ್ಲ ಫೀಚರ್ಸ್ ಇದೆ ಎಂಬುದನ್ನು ನೋಡೋಣ.

Moto G13: ಬಂಪರ್ ಆಫರ್: ಕೇವಲ 9,999 ರೂ. ಗೆ ಸೇಲ್ ಆಗುತ್ತಿದೆ ಮೋಟೋ G13 ಸ್ಮಾರ್ಟ್​ಫೋನ್
Moto G13 ಸ್ಮಾರ್ಟ್​ಫೋನ್
Follow us
Vinay Bhat
|

Updated on:Jun 09, 2023 | 3:34 PM

ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್​ಕಾರ್ಟ್​ನಲ್ಲಿ ಯಾವುದೇ ಮೇಳ ನಡೆಯುತ್ತಿಲ್ಲ. ನಾಳೆಯಿಂದ (ಜೂನ್ 10) ಬಿಗ್ ಸೇವಿಂಗ್ ಡೇಸ್ ಸೇಲ್ ಆಯೋಜಿಸಲಾಗಿದೆ. ಹೀಗಿದ್ದರೂ ಇಂದು ಕೆಲ ಸ್ಮಾರ್ಟ್​ಫೋನ್​ಗಳ ಮೇಲೆ ಬಂಪರ್ ಡಿಸ್ಕೌಂಟ್ ಘೋಷಣೆ ಮಾಡಲಾಗಿದೆ. ಮೊಬೈಲ್ ಮಾರುಕಟ್ಟೆಯಲ್ಲಿ ಸಾಕಷ್ಟು ಹೆಸರು ಮಾಡಿರುವ ಮೋಟೋರೊಲಾ (Motorola) ಕಂಪನಿಯ ಮೋಟೋ ಜಿ13 (Moto G13) ಸ್ಮಾರ್ಟ್‌ಫೋನ್‌ ಅತಿ ಕಡಿಮೆ ಬೆಲೆಗೆ ಮಾರಾಟ ಆಗುತ್ತಿದೆ. ಹಾಗಾದರೆ, ಈ ಫೋನ್​ ಎಷ್ಟು ದರಕ್ಕೆ ಸೇಲ್ ಆಗುತ್ತಿದೆ?, ಏನೆಲ್ಲ ಫೀಚರ್ಸ್ ಇದೆ ಎಂಬುದನ್ನು ನೋಡೋಣ.

ಆಫರ್ ಏನು?:

ಮೋಟೋ G13 ಸ್ಮಾರ್ಟ್​ಫೋನಿನ 4GB RAM + 64GB ಸ್ಟೋರೇಜ್‌ ವೇರಿಯಂಟ್‌ ಆಯ್ಕೆ ಮೇಲೆ ಶೇ. 28 ರಷ್ಟು ರಿಯಾಯಿತಿ ಘೋಷಿಸಲಾಗಿದೆ. ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್‌ಕಾರ್ಟ್​ನಲ್ಲಿ ಈ ಸ್ಮಾರ್ಟ್‌ಫೋನ್‌ ಕೇವಲ 9,999 ರೂ. ಗೆ ಮಾರಾಟ ಕಾಣುತ್ತಿದೆ. ಇದರ ಮೂಲಬೆಲೆ 13,999 ರೂ. ಆಗಿದೆ. ಜೊತೆಗೆ ಕೆಲವು ಆಯ್ದ ಬ್ಯಾಂಕ್‌ಗಳಿಂದ ಡಿಸ್ಕೌಂಟ್‌ ದೊರೆಯುತ್ತದೆ. ಎಕ್ಸ್‌ಚೇಂಜ್ ಆಫರ್ ಕೂಡ ಘೋಷಣೆ ಮಾಡಲಾಗಿದೆ.

ಇದನ್ನೂ ಓದಿ
Image
ಮಗಳ ಮೊಬೈಲ್ ಗೇಮ್ ಚಟದಿಂದ ₹52 ಲಕ್ಷ ಕಳೆದುಕೊಂಡ ಅಮ್ಮ, ಬ್ಯಾಂಕ್ ಖಾತೆಯಲ್ಲಿ ಉಳಿದದ್ದು ಕೇವಲ ₹5
Image
iQOO Neo 7 Pro: ಐಕ್ಯೂ ನಿಯೋ 7 ಪ್ರೊ ಸ್ಮಾರ್ಟ್‌ಫೋನ್‌ ಬಿಡುಗಡೆಗೆ ವೇದಿಕೆ ಸಜ್ಜು: ಭಾರತದಲ್ಲಿ ಯಾವಾಗ ರಿಲೀಸ್?
Image
Tech Tips: ತಪ್ಪಿ ಬೇರೆಯವರ ನಂಬರ್​ಗೆ ರೀಚಾರ್ಜ್ ಮಾಡಿದರೆ ಹಣ ವಾಪಸ್ ಪಡೆಯುವುದು ಹೇಗೆ?
Image
Nokia C300: ಮಾರುಕಟ್ಟೆಗೆ ಬಂತು ಹೊಸ ನೋಕಿಯಾ ಮೊಬೈಲ್

Vivo V29 Lite 5G: ಸ್ನ್ಯಾಪ್​ಡ್ರ್ಯಾಗನ್ ಪ್ರೊಸೆಸರ್, 64 MP ಕ್ಯಾಮೆರಾ ಕ್ರೇಜಿ ಫೋನ್

ಫೀಚರ್ಸ್ ಏನಿದೆ?:

ಈ ಸ್ಮಾರ್ಟ್‌ಫೋನ್ 6.5 ಇಂಚಿನ ಐಪಿಎಸ್ ಎಲ್​ಸಿಡಿ ಹೆಚ್‌ಡಿ+ ರೆಸಲ್ಯೂಶನ್‌ ಡಿಸ್‌ಪ್ಲೇ ಹೊಂದಿದ್ದು, 576Hz ಟಚ್ ಸ್ಯಾಂಪ್ಲಿಂಗ್ ರೇಟ್‌ ಅನ್ನು ಪಡೆದುಕೊಂಡಿದೆ. 90Hz ರಿಫ್ರೆಶ್ ರೇಟ್‌ ಇರುವ ಪಾಂಡ ಗ್ಲಾಸ್ ರಕ್ಷಣೆಯನ್ನು ನೀಡಲಾಗಿದೆ. ಮೀಡಿಯಾ ಟೆಕ್ ಹಿಲಿಯೊ G85 SoC ಪ್ರೊಸೆಸರ್‌ನಲ್ಲಿ ಕಾರ್ಯ ನಿರ್ವಹಿಸಲಿದ್ದು, ಆಂಡ್ರಾಯ್ಡ್‌ 13 ಓಎಸ್​ನಲ್ಲಿ ರನ್ ಆಗುತ್ತದೆ. ಸ್ಟೋರೇಜ್‌ ಅನ್ನು ವಿಸ್ತರಣೆ ಮಾಡಿಕೊಳ್ಳಲು ಎಸ್‌ಡಿ ಕಾರ್ಡ್‌ ಸ್ಲಾಟ್‌ ಇದೆ.

ಮೊಟೊ G13 ಸ್ಮಾರ್ಟ್‌ಫೋನ್ ಟ್ರಿಪಲ್‌ ರಿಯರ್‌ ಕ್ಯಾಮೆರಾ ರಚನೆ ಹೊಂದಿದೆ. ಇದರಲ್ಲಿ 50 ಮೆಗಾ ಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ, 2 ಮೆಗಾ ಪಿಕ್ಸೆಲ್ ಸೆಕೆಂಡರಿ ಸೆನ್ಸರ್‌ ಹಾಗೂ 2 ಮೆಗಾ ಪಿಕ್ಸೆಲ್ ಮ್ಯಾಕ್ರೋ ಸೆನ್ಸರ್‌ ಅನ್ನು ಪಡೆದಿದೆ. ಜೊತೆಗೆ ಸೆಲ್ಫಿ ಹಾಗೂ ವಿಡಿಯೋ ಕರೆಗಳಿಗಾಗಿ ಈ ಫೋನ್​ನಲ್ಲಿ 8 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಅಳವಡಿಸಲಾಗಿದೆ. ಕಲರ್ ಚೇಂಜಿಂಗ್ ಸೇರಿದಂತೆ ಕೆಲ ಬೇಸಿಕ್ ಆಯ್ಕೆಗಳನ್ನು ಕ್ಯಾಮೆರಾದಲ್ಲಿ ನೀಡಲಾಗಿದೆ.

ಬ್ಯಾಟರಿ ವಿಚಾರಕ್ಕೆ ಬರುವುದಾದರೆ ಈ ಫೋನ್‌ 5,000 mAh ಸಾಮರ್ಥ್ಯದ ಬ್ಯಾಟರಿಯಿಂದ ಭರ್ತಿ ಆಗಿದ್ದು, 10W ಚಾರ್ಜಿಂಗ್‌ ಬೆಂಬಲ ಪಡೆದಿದೆ. ಸೈಡ್ ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸರ್‌ ಆಯ್ಕೆ ಹೊಂದಿದ್ದು, ಚಾರ್ಜಿಂಗ್‌ ಗಾಗಿ ಯುಎಸ್‌ಬಿ ಟೈಪ್‌ ಸಿ ಚಾರ್ಜಿಂಗ್ ಪೋರ್ಟ್‌ ನೀಡಲಾಗಿದೆ. 5ಜಿ ಸಪೋರ್ಟ್ ಪಡೆದಿಲ್ಲ. 4G VoLTE, ವೈ ಫೈ 802.11 ac (2.4GHz + 5GHz), ಬ್ಲೂಟೂತ್ ಆವೃತ್ತಿ 5.1, ಜಿಪಿಎಸ್‌ ಹೊಂದಿದ್ದು, 3.5 ಎಂಎಂ ಆಡಿಯೊ ಜಾಕ್ ಇದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:33 pm, Fri, 9 June 23

ಏರ್ ಇಂಡಿಯಾ ವಿಮಾನ ಪತನವಾದ ಜಾಗದಲ್ಲಿ ಬಿದ್ದ ಪ್ರಯಾಣಿಕರ ಲಗೇಜ್ ರಾಶಿ
ಏರ್ ಇಂಡಿಯಾ ವಿಮಾನ ಪತನವಾದ ಜಾಗದಲ್ಲಿ ಬಿದ್ದ ಪ್ರಯಾಣಿಕರ ಲಗೇಜ್ ರಾಶಿ
ಚಾಲಕನ ಹುಚ್ಚು ಸಾಹಸ: ಹಳ್ಳದಲ್ಲಿ ಸಿಲುಕಿದ ಜನರಿದ್ದ ಟ್ರ್ಯಾಕ್ಟರ್
ಚಾಲಕನ ಹುಚ್ಚು ಸಾಹಸ: ಹಳ್ಳದಲ್ಲಿ ಸಿಲುಕಿದ ಜನರಿದ್ದ ಟ್ರ್ಯಾಕ್ಟರ್
ಲಂಡನ್​ಗೆ ಹೊರಟಿದ್ದ ವಿಮಾನಕ್ಕೆ ಅದರ ಸಾಮರ್ಥ್ಯದಷ್ಟು ಇಂಧನ ತುಂಬಲಾಗಿತ್ತು
ಲಂಡನ್​ಗೆ ಹೊರಟಿದ್ದ ವಿಮಾನಕ್ಕೆ ಅದರ ಸಾಮರ್ಥ್ಯದಷ್ಟು ಇಂಧನ ತುಂಬಲಾಗಿತ್ತು
ಜಾತಿಗಣತಿ ಸಮೀಕ್ಷೆಗೆ ₹200 ಕೋಟಿ ಖರ್ಚಾಗಿದೆ ಎಂದರೆ ಸಚಿವನಲ್ಲಿ ಉತ್ತರವಿಲ್ಲ
ಜಾತಿಗಣತಿ ಸಮೀಕ್ಷೆಗೆ ₹200 ಕೋಟಿ ಖರ್ಚಾಗಿದೆ ಎಂದರೆ ಸಚಿವನಲ್ಲಿ ಉತ್ತರವಿಲ್ಲ
Ahmedabad Plane Crash: ಅಹಮದಾಬಾದ್​​ನಲ್ಲಿ ಏರ್​ ಇಂಡಿಯಾ ವಿಮಾನ ಪತನ
Ahmedabad Plane Crash: ಅಹಮದಾಬಾದ್​​ನಲ್ಲಿ ಏರ್​ ಇಂಡಿಯಾ ವಿಮಾನ ಪತನ
ಗೃಹ ಸಚಿವ ಕೇವಲ ತಮ್ಮ ಗೃಹಕ್ಕೆ ಮಾತ್ರ ಸಚಿವರು: ಆರ್ ಅಶೋಕ
ಗೃಹ ಸಚಿವ ಕೇವಲ ತಮ್ಮ ಗೃಹಕ್ಕೆ ಮಾತ್ರ ಸಚಿವರು: ಆರ್ ಅಶೋಕ
ವಾಲ್ಮೀಕಿ ನಿಗಮ ಪ್ರಕರಣದಲ್ಲಿ ಸರ್ಕಾರ ಸಮಗ್ರ ತನಿಖೆ ಮಾಡಿಸಿದೆ: ಗೃಹ ಸಚಿವ
ವಾಲ್ಮೀಕಿ ನಿಗಮ ಪ್ರಕರಣದಲ್ಲಿ ಸರ್ಕಾರ ಸಮಗ್ರ ತನಿಖೆ ಮಾಡಿಸಿದೆ: ಗೃಹ ಸಚಿವ
ತುಂಬಿ ಹರಿಯುತ್ತಿರುವ ಗೊನ್ವಾರ ಗ್ರಾಮ ಹೊರವಲಯದಲ್ಲಿರುವ ಹೊಳೆ
ತುಂಬಿ ಹರಿಯುತ್ತಿರುವ ಗೊನ್ವಾರ ಗ್ರಾಮ ಹೊರವಲಯದಲ್ಲಿರುವ ಹೊಳೆ
ಹುಬ್ಬಳ್ಳಿ ಜನರ ಸಮಸ್ಯೆಗಳಿಗೆ ಜನಪ್ರತಿನಿಧಿಗಳಿಂದ ನೀರಸ ಪ್ರತಿಕ್ರಿಯೆ
ಹುಬ್ಬಳ್ಳಿ ಜನರ ಸಮಸ್ಯೆಗಳಿಗೆ ಜನಪ್ರತಿನಿಧಿಗಳಿಂದ ನೀರಸ ಪ್ರತಿಕ್ರಿಯೆ
ಬರ್ತ್​ಡೇ ಪಾರ್ಟಿಯಲ್ಲಿ ಡ್ರಗ್ಸ್, ಗಾಯಕಿ ಮಂಗ್ಲಿ ಸ್ಪಷ್ಟನೆ
ಬರ್ತ್​ಡೇ ಪಾರ್ಟಿಯಲ್ಲಿ ಡ್ರಗ್ಸ್, ಗಾಯಕಿ ಮಂಗ್ಲಿ ಸ್ಪಷ್ಟನೆ