ಇತ್ತೀಚಿನ ದಿನಗಳಲ್ಲಿ, ಫ್ಲಿಪ್ ಮತ್ತು ಫೋಲ್ಡಬಲ್ ಸ್ಮಾರ್ಟ್‌ಫೋನ್‌ಗಳ ಕ್ರೇಜ್ ಜನರಲ್ಲಿ ವೇಗವಾಗಿ ಹೆಚ್ಚುತ್ತಿದೆ. ಬಳಕೆದಾರರು ಮಾತ್ರವಲ್ಲದೆ ಸ್ಮಾರ್ಟ್‌ಫೋನ್ ಕಂಪನಿಗಳು ಕೂಡ ಫ್ಲಿಪ್ ಮತ್ತು ಫೋಲ್ಡಬಲ್ ಫೋನ್‌ಗಳ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ತೋರಿಸುತ್ತಿವೆ. ನೀವೂ ಸಹ ಫ್ಲಿಪ್ ಫೋನ್ ಖರೀದಿಸಲು ಬಯಸಿದರೆ ಆದರೆ ಬಜೆಟ್ ನಿಮಗೆ ಅಡ್ಡಿಯಾಗುತ್ತಿದ್ದರೆ, ಈಗ ನಿಮಗೊಂದು ಒಳ್ಳೆಯ ಸುದ್ದಿ ಇದೆ. ಮೊಟೊರೊಲದ ಪ್ರೀಮಿಯಂ ಮೊಟೊರೊಲ Razr 40 Ultra ಬೆಲೆಯಲ್ಲಿ ದೊಡ್ಡ ಕಡಿತ ಮಾಡಲಾಗಿದೆ. ಈಗ ನೀವು ಈ ಸ್ಮಾರ್ಟ್‌ಫೋನ್ ಅನ್ನು ಅದರ ನೈಜ ಬೆಲೆಯ ಅರ್ಧಕ್ಕಿಂತ ಕಡಿಮೆ ಬೆಲೆಗೆ ಖರೀದಿಸಬಹುದು.
ಮೊಟೊರೊಲ Razr 40 Ultra ಪ್ರೀಮಿಯಂ ವರ್ಗದ ಸ್ಮಾರ್ಟ್‌ಫೋನ್ ಆಗಿದೆ. ಇದರಲ್ಲಿ ನೀವು ಉತ್ತಮವಾದ ಆಕರ್ಷಕ ವಿನ್ಯಾಸ ಮತ್ತು ಉತ್ತಮ ವೈಶಿಷ್ಟ್ಯಗಳನ್ನು ಪಡೆಯುತ್ತೀರಿ. ಈ ಸ್ಮಾರ್ಟ್‌ಫೋನ್‌ನ ಬೆಲೆ ಇಷ್ಟೊಂದು ಕಡಿಮೆ ಆಗಿರುವುದು ಇದೇ ಮೊದಲ ಬಾರಿಗೆ. ಈಗ ಇದನ್ನು ಅಗ್ಗದ ಬೆಲೆಗೆ ಖರೀದಿಸಲು ಉತ್ತಮ ಅವಕಾಶವಾಗಿದೆ. ಮೊಟೊರೊಲ ಈ ಫೋನಿನ ಮೇಲಿನ ಬೆಲೆಯನ್ನು ಶಾಶ್ವತವಾಗಿ ಕಡಿಮೆ ಮಾಡಿದೆ. ಇ-ಕಾಮರ್ಸ್ ವೆಬ್‌ಸೈಟ್‌ಗಳಲ್ಲೂ ಗ್ರಾಹಕರಿಗೆ ಉತ್ತಮ ಕೊಡುಗೆಗಳನ್ನು ನೀಡಲಾಗುತ್ತಿದೆ.
ಮೊಟೊರೊಲ Razr 40 Ultra 256GB ಫೋನ್:
ಇ-ಕಾಮರ್ಸ್ ವೆಬ್‌ಸೈಟ್ ಫ್ಲಿಪ್‌ಕಾರ್ಟ್‌ನಲ್ಲಿ ಮೊಟೊರೊಲ Razr 40 Ultra ಫೋನಿನ ಮೂಲ ಬೆಲೆ 1,19,999 ರೂ. ಆದರೆ ಈಗ ನೀವು ಅದರ ಅರ್ಧಕ್ಕಿಂತ ಕಡಿಮೆ ಬೆಲೆಗೆ ಖರೀದಿಸಬಹುದು. ಫ್ಲಿಪ್‌ಕಾರ್ಟ್ ತನ್ನ ಬೆಲೆಯನ್ನು ಶೇ. 54 ರಷ್ಟು ಕಡಿಮೆ ಮಾಡಿದೆ. ಈ ರಿಯಾಯಿತಿಯ ನಂತರ, ವೆಬ್‌ಸೈಟ್‌ನಲ್ಲಿ ಈ ಫೋನನ್ನು ಕೇವಲ 54,999 ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಇದಲ್ಲದೆ, ನೀವು ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮೂಲಕ ಪಾವತಿಸಿದರೆ ನೀವು ಶೇ. 5 ರಷ್ಟು ಕ್ಯಾಶ್‌ಬ್ಯಾಕ್ ಪಡೆಯುತ್ತೀರಿ.
ಜಿಯೋ, ಏರ್‌ಟೆಲ್, ವೊಡಾಫೋನ್ಗೆ ಬೆಂಬಿಡದೆ ಕಾಡುತ್ತಿರುವ TRAI: ಅಗ್ಗದ ಯೋಜನೆ ತರಲು ನೇರ ಆದೇಶ
ಮೊಟೊರೊಲಾದ ಈ ಪ್ರೀಮಿಯಂ ಫೋನ್ ಬೆಲೆಯನ್ನು ಇಷ್ಟು ದೊಡ್ಡ ಮಟ್ಟದಲ್ಲಿ ಇಳಿಕೆ ಮಾಡಿರುವುದು ಇದೇ ಮೊದಲು. ನೀವು ಫ್ಲಿಪ್ ಫೋನ್ ಖರೀದಿಸಲು ಬಯಸಿದರೆ ಇದು ನಿಮಗೆ ಉತ್ತಮ ಅವಕಾಶವಾಗಿದೆ. ನಿಮ್ಮ ಬಜೆಟ್ ಕಡಿಮೆಯಿದ್ದರೆ ನೀವು ಅದನ್ನು EMI ನಲ್ಲಿಯೂ ಖರೀದಿಸಬಹುದು. ಫ್ಲಿಪ್‌ಕಾರ್ಟ್ ಗ್ರಾಹಕರಿಗೆ ಮೊಟೊರೊಲ Razr 40 Ultra ಅನ್ನು ರೂ. 1,934 ರ EMI ನಲ್ಲಿ ಖರೀದಿಸುವ ಅವಕಾಶವನ್ನು ನೀಡುತ್ತಿದೆ.
ಮೊಟೊರೊಲ Razr 40 Ultra ಫೀಚರ್ಸ್:
ಮೊಟೊರೊಲ Razr 40 Ultra ಅನ್ನು ಕಂಪನಿಯು 2023 ರಲ್ಲಿ ಬಿಡುಗಡೆ ಮಾಡಿತು. ಈ ಫೋನ್‌ನಲ್ಲಿ, ಕಂಪನಿಯು ಅಲ್ಯೂಮಿನಿಯಂ ಫ್ರೇಮ್‌ನೊಂದಿಗೆ ಗಾಜಿನ ಹಿಂಭಾಗದ ಫಲಕವನ್ನು ವಿನ್ಯಾಸಗೊಳಿಸಿದೆ. ಈ ಸ್ಮಾರ್ಟ್‌ಫೋನ್‌ನಲ್ಲಿ ನೀವು 6.9 ಇಂಚಿನ ಒಳಗಿನ ಡಿಸ್ಪ್ಲೇ ಯನ್ನು ಪಡೆಯುತ್ತೀರಿ. ಹೊರ ಭಾಗದಲ್ಲಿ, ನಿಮಗೆ 3.6 ಇಂಚಿನ ಡಿಸ್ಪ್ಲೇ ನೀಡಲಾಗಿದೆ. ಬಾಕ್ಸ್ ಹೊರಗೆ, ಈ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 13 ನಲ್ಲಿ ಕಾರ್ಯನಿರ್ವಹಿಸುತ್ತದೆ.
ಕಾರ್ಯಕ್ಷಮತೆಗಾಗಿ, ಈ ಫೋನ್ ನಿಮಗೆ ಸ್ನಾಪ್ಡ್ರಾಗನ್ 8+ Gen 1 ಪ್ರೊಸೆಸರ್ ಅನ್ನು ನೀಡಿದೆ. 12GB RAM ಮತ್ತು 512GB ವರೆಗಿನ ಸಂಗ್ರಹವನ್ನು ಹೊಂದಿದೆ. ಛಾಯಾಗ್ರಹಣಕ್ಕಾಗಿ, ಈ ಫೋನ್ 12+13 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಹೊಂದಿದೆ. ಈ ಫ್ಲಿಪ್ ಫೋನ್‌ನಲ್ಲಿ ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ 32 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ನೀಡಲಾಗಿದೆ. ಇದರಲ್ಲಿ 3800 mAh ಬ್ಯಾಟರಿಯನ್ನು ಒದಗಿಸಲಾಗಿದೆ, 30W ವೇಗದ ಚಾರ್ಜಿಂಗ್‌ಗೆ ಬೆಂಬಲವನ್ನು ಪಡೆದುಕೊಂಡಿದೆ.
ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ