ಜಿಯೋ, ಏರ್ಟೆಲ್, ವೊಡಾಫೋನ್ಗೆ ಬೆಂಬಿಡದೆ ಕಾಡುತ್ತಿರುವ TRAI: ಅಗ್ಗದ ಯೋಜನೆ ತರಲು ನೇರ ಆದೇಶ
TRAI ಅಧಿಕಾರಿಗಳು ಕಳೆದ 2 ದಿನಗಳಲ್ಲಿ ಜಿಯೋ, ಏರ್ಟೆಲ್, ವೊಡಾಫೋನ್-ಐಡಿಯಾ ಮತ್ತು ಬಿ ಎಸ್ ಎನ್ ಎಲ್ ಟೆಲಿಕಾಂ ಕಂಪನಿಗಳ ಅಧಿಕಾರಿಗಳನ್ನು ಭೇಟಿ ಮಾಡಿದ್ದಾರೆ ಎಂದು ET ವರದಿ ಹೇಳುತ್ತದೆ. ಡೇಟಾ ಪ್ರಯೋಜನಗಳ ಹೊರತಾಗಿ, ಇತರೆ ಯೋಜನೆಗಳನ್ನು ತರಲು ಕಂಪನಿಗಳನ್ನು ಕೇಳಲಾಯಿತು ಮತ್ತು ಅಗ್ಗದ ಯೋಜನೆಗಳನ್ನು ತರಲು ಟ್ರಾಯ್ ಗಮನಹರಿಸಿದೆ.
ಕೆಲವು ದಿನಗಳ ಹಿಂದೆ, TRAI ಅಗ್ಗದ ಯೋಜನೆಗಳನ್ನು ತರಲು ಎಲ್ಲ ಟೆಲಿಕಾಂ ಕಂಪನಿಗಳಿಗೆ ಕೇಳಿತ್ತು. ಇದೀಗ ಮತ್ತೊಮ್ಮೆ ಟ್ರಾಯ್ ಟೆಲಿಕಾಂ ಕಂಪನಿಗಳಿಗೆ ಕಡಿಮೆ ಬೆಲೆಯ ಯೋಜನೆಗಳನ್ನು ತರುವಂತೆ ನೇರ ಆದೇಶ ಮಾಡಿದೆ. ಕಂಪನಿಗಳು ಶೂನ್ಯ ಡೇಟಾ ಯೋಜನೆಗಳನ್ನು ತರಬೇಕು ಎಂದು ಖಡಕ್ ಆಗಿ ಹೇಳಿದೆ. ಈ ಯೋಜನೆಗಳು ಅಗ್ಗವಾಗಿರಬೇಕು. ಟ್ರಾಯ್ ಹೇಳುವಂತೆ ಜಿಯೋ, ಏರ್ಟೆಲ್, ವೊಡಾಫೋನ್-ಐಡಿಯಾ ಮತ್ತು ಬಿ ಎಸ್ ಎನ್ ಎಲ್ ಅಗ್ಗದ ಯೋಜನೆಗಳನ್ನು ತರಬೇಕು ಅದರಲ್ಲಿ ಬಳಕೆದಾರರು ಕೇವಲ ಧ್ವನಿ ಅಥವಾ ಎಸ್ಎಮ್ಎಸ್ ಪ್ರಯೋಜನವನ್ನು ಮಾತ್ರ ಪಡೆಯಬೇಕು.
TRAI ಅಧಿಕಾರಿಗಳು ಕಳೆದ 2 ದಿನಗಳಲ್ಲಿ ಟೆಲಿಕಾಂ ಕಂಪನಿಗಳ ಅಧಿಕಾರಿಗಳನ್ನು ಭೇಟಿ ಮಾಡಿದ್ದಾರೆ ಎಂದು ET ವರದಿ ಹೇಳುತ್ತದೆ. ಡೇಟಾ ಪ್ರಯೋಜನಗಳ ಹೊರತಾಗಿ, ಇತರೆ ಯೋಜನೆಗಳನ್ನು ತರಲು ಕಂಪನಿಗಳನ್ನು ಕೇಳಲಾಯಿತು ಮತ್ತು ಅಗ್ಗದ ಯೋಜನೆಗಳನ್ನು ತರಲು ಟ್ರಾಯ್ ಗಮನಹರಿಸಿದೆ. ಬಳಕೆದಾರರು ಕೇವಲ ಧ್ವನಿ ಕರೆ ಅಥವಾ ಎಸ್ ಎಮ್ ಎಸ್ ಅನ್ನು ಮಾತ್ರ ಪಡೆಯುವ ಯೋಜನೆಗಳನ್ನು ಸಹ ಸೇರಿಸಬೇಕು. “ವಾಯ್ಸ್-ಓನ್ಲಿ ಯೋಜನೆಗಳ ಬೆಲೆ ಕಡಿತವು ಟೆಲಿಕಾಂಗಳು ವಿಧಿಸುವ ಡೇಟಾದ ಸರಾಸರಿ ವೆಚ್ಚವನ್ನು ಅವಲಂಬಿಸಿರುತ್ತದೆ” ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಟೆಲಿಕಾಂ ನಿಯಂತ್ರಕವು 2G ಬಳಕೆದಾರರಿಗೆ ಧ್ವನಿ ಮತ್ತು ಎಸ್ ಎಮ್ ಎಸ್ ಯೋಜನೆಗಳನ್ನು ಪ್ರಾರಂಭಿಸಲು ಟೆಲಿಕಾಂ ಆಪರೇಟರ್‌ಗಳನ್ನು ಕೇಳಿದೆ. 2G ಫೀಚರ್ ಫೋನ್ ಬಳಕೆದಾರರಿಗೆ ಡೇಟಾ ಬೇಕಾಗಿಲ್ಲ. ಸದ್ಯ ದುಬಾರಿ ಡೇಟಾ ಯೋಜನೆಗಳೊಂದಿಗೆ ತಮ್ಮ ಸಂಖ್ಯೆಗಳನ್ನು ರೀಚಾರ್ಜ್ ಮಾಡಲು ಅವರನ್ನು ಒತ್ತಾಯಿಸಲಾಗುತ್ತದೆ. ಬಳಕೆದಾರರ ಅಗತ್ಯ ಸೇವೆಗಳಿಗೆ ಧ್ವನಿ ಕರೆಯ ಯೋಜನೆಗಳನ್ನು ಮಾತ್ರ ಪ್ರಾರಂಭಿಸಲು ಟೆಲಿಕಾಂ ಕಂಪನಿಗಳಿಗೆ TRAI ಆದೇಶಿಸಿದೆ. ಪ್ರಸ್ತುತ, ಕರೆ ಮಾಡಲು ಅಥವಾ ಸಂದೇಶಗಳನ್ನು ಕಳುಹಿಸಲು ಸಹ, ಬಳಕೆದಾರರು ಡೇಟಾದೊಂದಿಗೆ ದುಬಾರಿ ಯೋಜನೆಗಳನ್ನು ಆಯ್ಕೆ ಮಾಡಬೇಕಾಗಿದೆ.
WhatsApp Tips: ವಾಟ್ಸ್ಆ್ಯಪ್ನ ಈ 4 ಮೆಸೇಜ್ಗಳನ್ನು ತಪ್ಪಿಯೂ ಕ್ಲಿಕ್ ಮಾಡಬೇಡಿ, ಬಳಿಕ ಪಶ್ಚಾತ್ತಾಪ ಪಡಬೇಕಾಗುತ್ತೆ
ಜನವರಿ 23 ರಿಂದ ಅಗ್ಗದ ಯೋಜನೆಗಳು:
TRAI ಆದೇಶದ ನಂತರ, ಕಂಪನಿಗಳು ಇತ್ತೀಚೆಗೆ ಯೋಜನೆಗಳ ಬೆಲೆಗಳನ್ನು ಕಡಿಮೆ ಮಾಡಿದೆ. ಇದರಲ್ಲಿ ಏರ್‌ಟೆಲ್, ಜಿಯೋ ಮತ್ತು ವೊಡಾಫೋನ್-ಐಡಿಯಾ ಹೆಸರುಗಳೂ ಸೇರಿವೆ. ಏರ್‌ಟೆಲ್ ಯೋಜನೆಗಳ ಬೆಲೆಯನ್ನು ಸುಮಾರು 6 ಪ್ರತಿಶತದಷ್ಟು ಕಡಿಮೆ ಮಾಡಿದೆ. ಮೂಲ ಯೋಜನೆಗೆ ಹೋಲಿಸಿದರೆ, ಸುಂಕವು ಸುಮಾರು 8% ರಷ್ಟು ಅಗ್ಗವಾಗಿದೆ. ಇತರ ಟೆಲಿಕಾಂ ಕಂಪನಿಗಳು ಸಹ ಪ್ಲಾನ್ ಬೆಲೆಗಳನ್ನು ಕಡಿತಗೊಳಿಸಬಹುದು.
ಕಂಪನಿಗಳ ಮೇಲೆ ಆರ್ಥಿಕ ಹೊರೆ ಬೀಳಲಿದೆಯೇ?:
ಜಿಯೋ, ಏರ್ಟೆಲ್, ವೊಡಾಫೋನ್-ಐಡಿಯಾ ಮತ್ತು ಬಿ ಎಸ್ ಎನ್ ಎಲ್ ಮೇಲಿನ ಆರ್ಥಿಕ ಹೊರೆ ಪ್ರಸ್ತುತ ಎಷ್ಟು ಸಕ್ರಿಯ ಗ್ರಾಹಕರು ಇದ್ದಾರೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಇದಾದ ನಂತರವೂ ಕಂಪನಿ ಏನು ಮಾಡಬೇಕು ಎಂಬ ಬಗ್ಗೆ ನಿರ್ಧಾರ ಕೈಗೊಳ್ಳಲಾಗುತ್ತದೆ.
ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ