AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಸ್ಟಾರ್ಟ್ಅಪ್‌ ಕಂಪನಿಯ ಕೆಲಸದ ಸಂಸ್ಕೃತಿಯನ್ನು ಟೀಕಿಸಿದ ಬೆಂಗಳೂರಿನ ಯುವಕ, ಕಾರಣ ಇದೇ ನೋಡಿ

ಕೈಯಲ್ಲೊಂದು ಉದ್ಯೋಗ ಇದ್ರೆ ಮಾತ್ರ ಎಲ್ಲರೂ ಗೌರವ ಕೊಟ್ಟು ಮಾತಾಡ್ತಾರೆ. ಆದರೆ ಕಾರ್ಪೋರೇಟ್, ಖಾಸಗಿ ಕಂಪನಿಯ ಉದ್ಯೋಗಿಗಳ ಕೆಲಸಕ್ಕೆ ಗ್ಯಾರಂಟಿ ಇರಲ್ಲ. ಕಂಪನಿ ಯಾವಾಗ ಬೇಕಾದ್ರೂ ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಬಹುದು. ಇದೀಗ ಬೆಂಗಳೂರಿನ ಯುವಕನು ಸ್ಟಾರ್ಟ್ಅಪ್‌ನಿಂದ ಇದ್ದಕ್ಕಿದ್ದಂತೆ ವಜಾಗೊಳ್ಳುತ್ತಿದ್ದಂತೆ, ಈ ಬಗ್ಗೆ ಧ್ವನಿ ಎತ್ತಿದ್ದಾನೆ. ವಿಡಿಯೋ ಮಾಡಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾನೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Video: ಸ್ಟಾರ್ಟ್ಅಪ್‌ ಕಂಪನಿಯ ಕೆಲಸದ ಸಂಸ್ಕೃತಿಯನ್ನು ಟೀಕಿಸಿದ ಬೆಂಗಳೂರಿನ ಯುವಕ, ಕಾರಣ ಇದೇ ನೋಡಿ
ಸಾಂದರ್ಭಿಕ ಚಿತ್ರImage Credit source: Pinterest
ಸಾಯಿನಂದಾ
|

Updated on:Feb 03, 2026 | 12:52 PM

Share

ಬೆಂಗಳೂರು, ಫೆಬ್ರವರಿ 3: ಬಹುತೇಕ ಖಾಸಗಿ ಕಂಪನಿಗಳು(Private Company) ಏಕಾಏಕಿ ಸಂಸ್ಥೆಯಲ್ಲಿರುವ ಕೆಲಸಗಾರರನ್ನು ಅಮಾನತು ಮಾಡುವುದಿದೆ. ಕಂಪನಿಯ ಈ ರೀತಿ ನಿರ್ಧಾರಗಳಿಂದ ಉದ್ಯೋಗಸ್ಥರಲ್ಲಿ ಮುಂದೇನು ಎನ್ನುವ ಪ್ರಶ್ನೆಯೊಂದು ಕಾಡುತ್ತದೆ. ಇದೇ ರೀತಿಯ ಅನುಭವ ಬೆಂಗಳೂರಿನ (Bengaluru) ಯುವಕನಿಗೆ ಆಗಿದೆ. ತನ್ನನ್ನು ಕೆಲಸದಿಂದ ವಜಾಗೊಳಿಸಿದ ಸ್ಟಾರ್ಟ್ಅಪ್ ಕಂಪನಿಯ ಕೆಲಸದ ಸಂಸ್ಕೃತಿಯನ್ನು ಟೀಕಿಸಿದ್ದಾನೆ. ಈ ಕುರಿತಾದ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಕಾಮೆಂಟ್ ಮಾಡಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

@_.jeevan._n ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿ ಕೊಳ್ಳಲಾದ ಈ ವಿಡಿಯೋದಲ್ಲಿ ಬೆಂಗಳೂರಿನ ಯುವಕ ಸ್ಟಾರ್ಟ್ಅಪ್ ಕಂಪನಿಯ ಬಗ್ಗೆ ಮಾತನಾಡಿದ್ದು, ನನ್ನ 3 ತಿಂಗಳ ಪ್ರೊಬೇಷನರಿ ಅವಧಿ ಪೂರ್ಣಗೊಳ್ಳುವ ಕೆಲವೇ ದಿನಗಳ ಮೊದಲೇ ಅಂದರೆ ಜನವರಿ 30 ರಂದು ತನ್ನನ್ನು ಈ ಕೆಲಸದಿಂದ ವಜಾಗೊಳಿಸಲಾಗಿದೆ. ನನ್ನ ಪ್ರವೇಶವನ್ನು ರದ್ದುಪಡಿಸಲಾಯಿತು. ನಾನು ಈ ಹುದ್ದೆಗಾಗಿ ನನ್ನ ರಕ್ತ ಮತ್ತು ಬೆವರನ್ನು ಅರ್ಪಿಸಿದೆ. ನಾನು 10-7 ದಿನ ಕೆಲಸ ಮಾಡಿದೆ. ಗೊಂದಲದಲ್ಲೇ ಮುನ್ನಡೆದೆ. ಆದರೆ ನಾನು ನನ್ನ ದೃಷ್ಟಿಕೋನಕ್ಕೆ 100% ಬದ್ಧನಾಗಿದ್ದೇನೆ. ಪ್ರತಿಯೊಬ್ಬ ಉದ್ಯೋಗಾಕಾಂಕ್ಷಿಯೂ ಕೇಳಬೇಕಾದ ವಾಸ್ತವ ಪರಿಶೀಲನೆ ಇಲ್ಲಿದೆ: ನಿನ್ನೆ, ಸಂಸ್ಥಾಪಕರು ನನ್ನ ಎದುರು ಕುಳಿತು ಈ ತಂಡದಿಂದ ತೆಗೆದು ಹಾಕುವ ಚರ್ಚೆಗಳು 9 ರಿಂದ 10 ತಿಂಗಳುಗಳಿಂದ ನಡೆಯುತ್ತಿವೆ ಎಂದು ಹೇಳಿದರು ಎಂದು ಇಲ್ಲಿ ಉಲ್ಲೇಖಿಸಿರುವುದನ್ನು ನೀವು ನೋಡಬಹುದು.

ವೈರಲ್ ವಿಡಿಯೋ ಇಲ್ಲಿದೆ

ನೀವು ಮನುಷ್ಯರನ್ನು ಮುಳುಗುವ ಹಡಗಿಗೆ ಕೂರಿಸಿದ್ದೀರಿ. ಕೆಲವು ತಿಂಗಳುಗಳ ಶ್ರಮವನ್ನು ಬಳಸಿಕೊಂಡಿದ್ದೀರಿ. ಒಂದು ತಿಂಗಳ ಮುಂಚೆಯೇ ನಿಮಗೆ ಬೇರೆ ಕೆಲಸ ಹುಡುಕಲು ಅವಕಾಶ ನೀಡಲಾಗಿದೆ. ಅದಕ್ಕಾಗಿ ನೀವು ಕೃತಜ್ಞರಾಗಿರಬೇಕು ಎಂದು ಹೇಳಲಾಯಿತು. ಆದರೆ ಈ ವೃತ್ತಿಜೀವನದ ಅಂತರಕ್ಕೆ ಯಾರು ಉತ್ತರಿಸುತ್ತಾರೆ? ಮಾನಸಿಕ ಬಳಲಿಕೆಗೆ ಯಾರು ಉತ್ತರ ನೀಡುತ್ತಾರೆ? ಸಂದರ್ಶನದ ಸಮಯದಲ್ಲಿ ನಮಗೆ ಹೇಳಿದ ಸುಳ್ಳಿಗೆ ಯಾರು ಉತ್ತರಿಸುತ್ತಾರೆ. 2026 ರಲ್ಲಿ ಉದ್ಯೋಗ ಭದ್ರತೆ ಎನ್ನುವುದು ಕಹಿ ಸತ್ಯ. ಈ ನೇಮಕ ಪ್ರಕ್ರಿಯೆ ಹಾಗೂ ವಜಾಗೊಳಿಸುವಿಕೆಯ ವಿರುದ್ಧ ನಾವು ಧ್ವನಿ ಎತ್ತದಿದ್ದರೆ, ಏನೂ ಬದಲಾಗುವುದಿಲ್ಲ ಎಂದು ಹೇಳಿದ್ದಾನೆ.

ಇದನ್ನೂ ಓದಿ: ಕ್ಯಾಬ್ ಡ್ರೈವರ್ ಆಗಿ ಬದುಕು ಕಟ್ಟಿಕೊಂಡ ಈ ವ್ಯಕ್ತಿಯ ದಿನದ ಸಂಪಾದನೆ ಕೇಳಿದ್ರೆ ನೀವು ಶಾಕ್ ಆಗ್ತೀರಾ

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಳ್ಳುತ್ತಿದ್ದಂತೆ, ಒಬ್ಬ ಬಳಕೆದಾರ, ನಾವು ಎಷ್ಟು ಬೇಡವಾದರೂ ಎಂದು ಅರಿತುಕೊಳ್ಳುವುದು ಭಯಾನಕವಾಗಿದೆ. ನಿಮ್ಮ ಎಲ್ಲಾ ಪ್ರಯತ್ನಗಳಿಗೆ ಸಮಯ ಪ್ರತಿಫಲ ನೀಡುತ್ತದೆ ಎಂದು ಹೇಳಿದ್ದಾರೆ. ಮತ್ತೊಬ್ಬರು, ಹೆಚ್ಚು ಚಿಂತಿಸಬೇಡಿ, ನಿಮ್ಮ ಪ್ರಯತ್ನದಲ್ಲೇ ಮುಂದುವರೆಯಿರಿ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ಸ್ಟಾರ್ಟ್‌ಅಪ್‌ನಲ್ಲಿ ಕೆಲಸ ಮಾಡುವ ಹೆಚ್ಚಿನವರ ಪರಿಸ್ಥಿತಿ ಇದು ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:48 pm, Tue, 3 February 26

Follow Us
Sainandha P
Sainandha P

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
ಬಿಡದಿ ಟೌನ್‌ಶಿಪ್‌ ವಿವಾದ: ಕಾನೂನಾತ್ಮಕ ಹೋರಾಟ ಮಾಡ್ತೇವೆ; ಕುಮಾರಸ್ವಾಮಿ
ಬಿಡದಿ ಟೌನ್‌ಶಿಪ್‌ ವಿವಾದ: ಕಾನೂನಾತ್ಮಕ ಹೋರಾಟ ಮಾಡ್ತೇವೆ; ಕುಮಾರಸ್ವಾಮಿ
ಅತಾವುಲ್ಲಾ ಹತ್ಯೆ ಪ್ರಕರಣದ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಪೊಲೀಸರು
ಅತಾವುಲ್ಲಾ ಹತ್ಯೆ ಪ್ರಕರಣದ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಪೊಲೀಸರು
34 ರನ್​ಗಳಿದ್ದಾಗ ಕ್ಯಾಚ್ ಬಿಟ್ಟ ಸಿರಾಜ್; 93 ರನ್ ಚಚ್ಚಿದ ಅಲೆನ್
34 ರನ್​ಗಳಿದ್ದಾಗ ಕ್ಯಾಚ್ ಬಿಟ್ಟ ಸಿರಾಜ್; 93 ರನ್ ಚಚ್ಚಿದ ಅಲೆನ್
9 ಗಂಟೆ ಕಾರ್ಯಾಚರಣೆ ಬಳಿಕ ಬೋರ್​​ವೆಲ್​ನಿಂದ 4 ವರ್ಷದ ಬಾಲಕನ ರಕ್ಷಣೆ!
9 ಗಂಟೆ ಕಾರ್ಯಾಚರಣೆ ಬಳಿಕ ಬೋರ್​​ವೆಲ್​ನಿಂದ 4 ವರ್ಷದ ಬಾಲಕನ ರಕ್ಷಣೆ!
ಬಿಸಿಸಿಐನ ರೋಬೋ ಶ್ವಾನ ಚಂಪಕ್ ಮೇಲೆ ಕೊಹ್ಲಿ ಅಸಮಾಧಾನ
ಬಿಸಿಸಿಐನ ರೋಬೋ ಶ್ವಾನ ಚಂಪಕ್ ಮೇಲೆ ಕೊಹ್ಲಿ ಅಸಮಾಧಾನ
ಲಕ್ಕುಂಡಿಯಲ್ಲಿ ಪತ್ತೆಯಾಗಿದ್ದ ನಿಧಿ ಮೌಲ್ಯ 8 ಕೋಟಿ ರೂ
ಲಕ್ಕುಂಡಿಯಲ್ಲಿ ಪತ್ತೆಯಾಗಿದ್ದ ನಿಧಿ ಮೌಲ್ಯ 8 ಕೋಟಿ ರೂ
ತಮಿಳು ನಟ ಜಯಂ ರವಿ ಕಣ್ಣೀರು, ಆಕ್ರೋಶ: ಆಗಿದ್ದೇನು? ವಿಡಿಯೋ ನೋಡಿ
ತಮಿಳು ನಟ ಜಯಂ ರವಿ ಕಣ್ಣೀರು, ಆಕ್ರೋಶ: ಆಗಿದ್ದೇನು? ವಿಡಿಯೋ ನೋಡಿ
ಝಲ್ಮುರಿ ಇಲ್ಲಿಗೂ ತಲುಪಿತೇ? ಮೋದಿ ಪ್ರಶ್ನೆಗೆ ಭಾರತೀಯ ವಲಸಿಗರ ಕರತಾಡನ
ಝಲ್ಮುರಿ ಇಲ್ಲಿಗೂ ತಲುಪಿತೇ? ಮೋದಿ ಪ್ರಶ್ನೆಗೆ ಭಾರತೀಯ ವಲಸಿಗರ ಕರತಾಡನ
ಹಾವೇರಿ: ಸಿನಿಮೀಯ ಶೈಲಿಯಲ್ಲಿ ಕಳ್ಳತನ; ಲಕ್ಷಾಂತರ ಮೌಲ್ಯದ ಚಿನ್ನಾಭರಣ ಲೂಟಿ
ಹಾವೇರಿ: ಸಿನಿಮೀಯ ಶೈಲಿಯಲ್ಲಿ ಕಳ್ಳತನ; ಲಕ್ಷಾಂತರ ಮೌಲ್ಯದ ಚಿನ್ನಾಭರಣ ಲೂಟಿ
ಪ್ರಧಾನಿ ಮೋದಿಗೆ ಹೇಗ್‌ನಲ್ಲಿ ಯುವ ಕಲಾವಿದರಿಂದ ಸಂಗೀತ, ನೃತ್ಯದ ಸ್ವಾಗತ
ಪ್ರಧಾನಿ ಮೋದಿಗೆ ಹೇಗ್‌ನಲ್ಲಿ ಯುವ ಕಲಾವಿದರಿಂದ ಸಂಗೀತ, ನೃತ್ಯದ ಸ್ವಾಗತ