AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಮಾಧಿಗಳ ನಡುವೆ ಕುಳಿತು ಇಲ್ಲಿನ ಸ್ಪೆಷಲ್‌ ಮಸಾಲ ಟೀ ರುಚಿ ಸವಿಯುವ ಗ್ರಾಹಕರು; ಇದು ಲಕ್ಕಿ ರೆಸ್ಟೋರೆಂಟ್ ವಿಶೇಷತೆ

ಅಹಮದಾಬಾದ್‌ನಲ್ಲಿರುವ ಲಕ್ಕಿ ರೆಸ್ಟೋರೆಂಟ್ ಒಳಗೆ 26 ಸಮಾಧಿಗಳಿವೆ. ಇದು ಹಳೆಯ ಸ್ಮಶಾನದ ಜಾಗವಾಗಿದ್ದು, ಅಲ್ಲಿನ ಸಮಾಧಿಗಳನ್ನು ತೆರವುಗೊಳಿಸದೇ, ಅದರ ನಡುವೆಯೇ ರೆಸ್ಟೋರೆಂಟ್ ನಿರ್ಮಾಣ ಮಾಡಲಾಗಿರುವುದು ವಿಶೇಷ. ಮಸಾಲೆ ಟೀ ರುಚಿ ಸವಿಯಲು ಗ್ರಾಹಕರು ಇಲ್ಲಿಗೆ ಬರುತ್ತಾರೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

ಸಮಾಧಿಗಳ ನಡುವೆ ಕುಳಿತು ಇಲ್ಲಿನ ಸ್ಪೆಷಲ್‌ ಮಸಾಲ ಟೀ ರುಚಿ ಸವಿಯುವ ಗ್ರಾಹಕರು; ಇದು ಲಕ್ಕಿ ರೆಸ್ಟೋರೆಂಟ್ ವಿಶೇಷತೆ
ಲಕ್ಕಿ ರೆಸ್ಟೋರೆಂಟ್ Image Credit source: Ahmedabad Insider
ಸಾಯಿನಂದಾ
|

Updated on:Aug 05, 2026 | 1:15 PM

Share

ಮುಖ್ಯಾಂಶಗಳು

  • ಅಹಮದಾಬಾದ್‌ನ ಲಕ್ಕಿ ರೆಸ್ಟೋರೆಂಟ್ ಮಸಾಲೆ ಟೀಗೆ ಫೇಮಸ್‌
  • ಸಮಾಧಿಗಳ ನಡುವೆ ಕುಳಿತು ಇಲ್ಲಿನ ಸ್ಪೆಷಲ್‌ ಮಸಾಲೆ ಟೀ ರುಚಿ ಸವಿಯುವ ಗ್ರಾಹಕರು
  • ಸೂಫಿ ಸಂತರಿಗೆ ಸೇರಿದ 26 ಸಮಾಧಿಗಳು ಈ ರೆಸ್ಟೋರೆಂಟ್‌ನ ಒಳಗಿವೆ

ಯಾರಾದ್ರೂ ನಿಮ್ಗೆ ಸಮಾಧಿಗಳ ನಡುವೆ ಕುಳಿತು ಚಹಾ ಕುಡಿಯುವ ಚಾಲೆಂಜ್ ಕೊಟ್ರೆ ನಿಮ್ಮರಿಯಾಕ್ಷನ್‌  ಹೇಗಿರುತ್ತದೆ ಒಮ್ಮೆ ಊಹಿಸಿ. ಹಾಗೇನಾದ್ರೂ ಚಹಾ ಬಿಡಿ ಗಂಟಲಲ್ಲಿ ಒಂದು ಗುಟುಕು ನೀರು ಕೂಡ ಗಂಟಲಲ್ಲಿ ಇಳಿಯಲ್ಲ. ಆದರೆ ನೀವೇನಾದ್ರೂ ಗುಜರಾತಿನ ಅಹಮದಾಬಾದ್‌ನ ಲಾಲ್ ದರ್ವಾಜಾದಲ್ಲಿರುವ (Ahmedabad’s Lal Darwaza) ಲಕ್ಕಿ ರೆಸ್ಟೋರೆಂಟ್ ಗೆ (lucky restaurant) ಹೋದ್ರೆ ಸಮಾಧಿಗಳ ನಡುವೆ ಕುಳಿತು ಉಪಹಾರ ಸೇವಿಸಬೇಕು. ಈ ರೆಸ್ಟೋರೆಂಟ್ ಗೆ 16 ನೇ ಶತಮಾನದ ಸೂಫಿ ಸಂತರಿಗೆ ಸೇರಿದ 26 ಸಮಾಧಿಗಳಿವೆ. ಆದರೆ ಈ ರೆಸ್ಟೋರೆಂಟ್‌ಗೆ ಬರುವ ಗ್ರಾಹಕರ ಸಂಖ್ಯೆ ಮಾತ್ರ ಇವತ್ತಿಗೂ ಕಡಿಮೆಯಾಗಿಲ್ಲ.

ಈ ರೆಸ್ಟೋರೆಂಟ್ ನಿರ್ಮಾಣವಾದದ್ದು ಯಾವಾಗ?

1950ರಲ್ಲಿ ಕೆ.ಎಚ್. ಮೊಹಮ್ಮದ್ ಭಾಯ್ ಎಂಬುವವರು ಸಣ್ಣ ಚಹಾ ಅಂಗಡಿಯಾಗಿ ಆರಂಭಿಸಿದ್ದರು. ಈ ಸಣ್ಣ ಚಹಾ ಅಂಗಡಿ ವಿಸ್ತರಣೆ ಮಾಡುವಾಗ ಅಲ್ಲಿ ಸೂಫಿ ಸಂತರಿಗೆ ಸೇರಿದ 26 ಸಮಾಧಿಗಳು ಇರುವುದು ತಿಳಿಯಿತು. ಆದರೆ, ಈ ಸ್ಮಶಾನವನ್ನು ತೆರವುಗೊಳಿಸದೇ, ಸಮಾಧಿಗಳ ನಡುವೆಯೇ ರೆಸ್ಟೋರೆಂಟ್ ನಿರ್ಮಾಣ ಮಾಡಲಾಯಿತು. ಈ ಸಮಾಧಿಯ ಸುತ್ತಲೂ ಕಬ್ಬಿಣದ ಸರಪಳಿಗಳು ಅಥವಾ ಗ್ರಿಲ್‌ಗಳನ್ನು ಅಳವಡಿಸಲಾಗಿದೆ. ಈ ಹಿಂದೆ ಪ್ರಸಿದ್ಧ ವರ್ಣಚಿತ್ರಕಾರ ಮಕ್ಬುಲ್ ಫಿದಾ ಹುಸೇನ್ ಈ ಹೋಟೆಲ್‌ನ ಇಲ್ಲಿನ ಗ್ರಾಹಕರಾಗಿದ್ದರು. ಇಲ್ಲೇ ಕುಳಿತು ಚಿತ್ರ ಬಿಡಿಸುತ್ತಿದ್ದ ಅವರು ಈ ರೆಸ್ಟೋರೆಂಟ್ ಗೆ ತನ್ನ ಕೈಯಾರೆ ಬಿಡಿಸಿದ ವರ್ಣ ಚಿತ್ರವನ್ನು ಉಡುಗೊರೆಯಾಗಿ ನೀಡಿದ್ದರಂತೆ.

ಇದನ್ನೂ ಓದಿ: ಬೈಕ್ ಬದಲು ಕುದುರೆ ಏರಿ ಆಹಾರ ತಲುಪಿಸಲು ಹೊರಟ ಡೆಲಿವರಿ ಬಾಯ್

ಈ ರೆಸ್ಟೋರೆಂಟ್ ಯಾವುದಕ್ಕೆ ಫೇಮಸ್?

ಇಲ್ಲಿನ ಹೋಟೆಲ್ ಸಿಬ್ಬಂದಿ ಪ್ರತಿದಿನ ಬೆಳಗ್ಗೆ ಪ್ರತಿ ಸಮಾಧಿಗೂ ಹೂವುಗಳನ್ನು ಇಟ್ಟು ಗೌರವ ಸಲ್ಲಿಸುತ್ತಾರೆ. ನೀವೇನಾದ್ರೂ ಈ ರೆಸ್ಟೋರೆಂಟ್ ಗೆ ಹೋದ್ರೆ ಸಮಾಧಿಗಳ ನಡುವೆ ಕುಳಿತು ಸ್ಪೆಷಲ್ ಮಸಾಲಾ ಟೀ ಹಾಗೂ ಮಸ್ಕಾ ಬನ್ ತಿನ್ನುವುದು ಸವಿಯಬಹುದು. ಇದರ ಜತೆಗೆ ಉತ್ತರ ಭಾರತ ಹಾಗೂ ದಕ್ಷಿಣ ಭಾರತದ ಖಾದ್ಯಗಳು ಇಲ್ಲಿ ಸಿಗುತ್ತದೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:14 pm, Wed, 5 August 26

Follow Us
ಮೇಕೆದಾಟು ಯೋಜನೆ ವಿರುದ್ಧ ರಾಜ್ಯಸಭೆಯಲ್ಲಿ ಡಿಎಂಕೆ ನಿಲುವಳಿ ಮಂಡನೆ
ಮೇಕೆದಾಟು ಯೋಜನೆ ವಿರುದ್ಧ ರಾಜ್ಯಸಭೆಯಲ್ಲಿ ಡಿಎಂಕೆ ನಿಲುವಳಿ ಮಂಡನೆ
ಮಳೆ ಅಬ್ಬರಕ್ಕೆ ಭೋರ್ಗರೆಯುತ್ತಿರುವ ಹೊಗೇನಕಲ್ ಜಲಪಾತ
ಮಳೆ ಅಬ್ಬರಕ್ಕೆ ಭೋರ್ಗರೆಯುತ್ತಿರುವ ಹೊಗೇನಕಲ್ ಜಲಪಾತ
ಯಾದಗಿರಿ: ರಾಸಾಯನಿಕ ಸೋರಿಕೆ ದುರಂತ, ಮೂವರು ಕಾರ್ಮಿಕರ ದುರ್ಮರಣ
ಯಾದಗಿರಿ: ರಾಸಾಯನಿಕ ಸೋರಿಕೆ ದುರಂತ, ಮೂವರು ಕಾರ್ಮಿಕರ ದುರ್ಮರಣ
ಉದಯನಿಧಿ ಬಿಡುಗಡೆ; ವಿಜಯ್​​ನ ಡಮ್ಮಿ ಸಿಎಂ ಎಂದ ಸ್ಟಾಲಿನ್ ಪುತ್ರ
ಉದಯನಿಧಿ ಬಿಡುಗಡೆ; ವಿಜಯ್​​ನ ಡಮ್ಮಿ ಸಿಎಂ ಎಂದ ಸ್ಟಾಲಿನ್ ಪುತ್ರ
ಕೆಎಸ್​ಆರ್​ಟಿಸಿ ಬಸ್​ ತಡೆದು ಸುಬ್ಬಾರೆಡ್ಡಿ ಬೆಂಬಲಿಗರ ಆಕ್ರೋಶ!
ಕೆಎಸ್​ಆರ್​ಟಿಸಿ ಬಸ್​ ತಡೆದು ಸುಬ್ಬಾರೆಡ್ಡಿ ಬೆಂಬಲಿಗರ ಆಕ್ರೋಶ!
ಸುಬ್ಬಾರೆಡ್ಡಿ ಬೆಂಬಲಿಸಿ ಬಾಗೇಪಲ್ಲಿ, ಗುಡಿಬಂಡೆ, ಚೇಳೂರು ಸ್ತಬ್ಧ
ಸುಬ್ಬಾರೆಡ್ಡಿ ಬೆಂಬಲಿಸಿ ಬಾಗೇಪಲ್ಲಿ, ಗುಡಿಬಂಡೆ, ಚೇಳೂರು ಸ್ತಬ್ಧ
ಕೊಪ್ಪಳ ಜಿಲ್ಲಾ ಮಹಿಳಾ ಅಧ್ಯಕ್ಷೆ ಜ್ಯೋತಿ ಗೊಂಡಬಾಳ್ ರಾಜೀನಾಮೆ!
ಕೊಪ್ಪಳ ಜಿಲ್ಲಾ ಮಹಿಳಾ ಅಧ್ಯಕ್ಷೆ ಜ್ಯೋತಿ ಗೊಂಡಬಾಳ್ ರಾಜೀನಾಮೆ!
ಮೇಷ ರಾಶಿಯ ಅಶ್ವಿನಿ ನಕ್ಷತ್ರದಲ್ಲಿ ಚಂದ್ರನ ಸಂಚಾರ: 12 ರಾಶಿಗಳ ದಿನ ಭವಿಷ್ಯ
ಮೇಷ ರಾಶಿಯ ಅಶ್ವಿನಿ ನಕ್ಷತ್ರದಲ್ಲಿ ಚಂದ್ರನ ಸಂಚಾರ: 12 ರಾಶಿಗಳ ದಿನ ಭವಿಷ್ಯ
ಯಾರಿಗೂ ಅನುಮಾನ ಬಾರದಂತೆ ಐಫೋನ್ ಕದ್ದ ಯುವತಿ! ಕಳ್ಳತನದ ವಿಡಿಯೋ ವೈರಲ್
ಯಾರಿಗೂ ಅನುಮಾನ ಬಾರದಂತೆ ಐಫೋನ್ ಕದ್ದ ಯುವತಿ! ಕಳ್ಳತನದ ವಿಡಿಯೋ ವೈರಲ್
ಮಳೆಯಾರ್ಭಟಕ್ಕೆ ಕುಸಿದ ಖಾಸಗಿ ಶಾಲೆಯ ಗೋಡೆ: ತಪ್ಪಿದ ಭಾರೀ ಅನಾಹುತ
ಮಳೆಯಾರ್ಭಟಕ್ಕೆ ಕುಸಿದ ಖಾಸಗಿ ಶಾಲೆಯ ಗೋಡೆ: ತಪ್ಪಿದ ಭಾರೀ ಅನಾಹುತ