AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉಡುಪಿಯ ಹಿರಿಯಡ್ಕದಲ್ಲಿ ಭೀಕರ ಅಪಘಾತ: ಸಿಸಿ ಕ್ಯಾಮರಾದಲ್ಲಿ ಎದೆ ಝಲ್​​ ಎನಿಸುವ ದೃಶ್ಯ ಸೆರೆ

ಉಡುಪಿಯ ಹಿರಿಯಡ್ಕದಲ್ಲಿ ಭೀಕರ ಅಪಘಾತ: ಸಿಸಿ ಕ್ಯಾಮರಾದಲ್ಲಿ ಎದೆ ಝಲ್​​ ಎನಿಸುವ ದೃಶ್ಯ ಸೆರೆ

ಪ್ರಜ್ವಲ್ ಅಮೀನ್​, ಉಡುಪಿ
| Edited By: |

Updated on: Feb 03, 2026 | 11:55 AM

Share

ಉಡುಪಿ ತಾಲೂಕಿನ ಮಣಿಪಾಲದ ಸಮೀಪದ ಹಿರಿಯಡ್ಕದಲ್ಲಿ ಭೀಕರ ಅಪಘಾತ ನಡೆದಿದೆ. ಘಟನೆಯಲ್ಲಿ ಸ್ಕೂಟರ್​ ಸವಾರನೋರ್ವ ಗಂಭೀರವಾಗಿ ಗಾಯಗೊಂಡಿದ್ದಾನೆ. ವೇಗವಾಗಿ ಬಂದ ಕಾರು ಸ್ಕೂಟರ್​​ ಮತ್ತು ಆಟೋಗೆ ಗುದ್ದಿದ್ದು, ಸ್ಕೂಟರ್​ ಮತ್ತೊಂದು ಬೈಕ್​​ಗೆ ಡಿಕ್ಕಿಯಾಗಿದೆ. ಘಟನೆಯ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಎದೆ ಝಲ್​​ ಎನಿಸುವಂತಿದೆ.

ಉಡುಪಿ, ಫೆಬ್ರವರಿ 03: ತಾಲೂಕಿನ ಹಿರಿಯಡ್ಕ ಪೇಟೆಯಲ್ಲಿ ಭೀಕರ ಅಪಘಾತ (Accident) ಸಂಭವಿಸಿದೆ. ವೇಗವಾಗಿ ಬಂದ ಇನ್ನೋವಾ ಕಾರೊಂದು ಎದುರಿಗೆ ತೆರಳುತ್ತಿದ್ದ ಸ್ಕೂಟರ್​​ಗೆ ಮೊದಲು ಡಿಕ್ಕಿಯಾಗಿ ಬಳಿಕ ಆಟೋಗೆ ಗುದ್ದಿದೆ. ಡಿಕ್ಕಿಯ ರಭಸಕ್ಕೆ ಸ್ಕೂಟರ್​ ಮತ್ತೊಂದು ಬೈಕ್​​ಗೆ ಡಿಕ್ಕಿಯಾಗಿದೆ. ಈ ವೇಳೆ ಸ್ಕೂಟರ್​ ಸವಾರ ರಸ್ತೆಗೆ ಹಾರಿ ಬಿದ್ದಿದ್ದು, ಪವಾಡ ಸದೃಶರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಪಘಾತದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಹಿರಿಯಡಕ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.