Moto G72: ನೀವು ಫೋಟೋಗ್ರಫಿ ಮಾಡ್ತೀರಾ?: 108MP ಕ್ಯಾಮೆರಾದ ಈ ಸ್ಮಾರ್ಟ್​ಫೋನ್ ಈಗ ಅತಿ ಕಡಿಮೆ ಬೆಲೆಗೆ ಲಭ್ಯ

|

Updated on: Mar 13, 2023 | 10:31 AM

ಕಳೆದ ವರ್ಷ ಅನಾವರಣ ಮಾಡಿದ 108 ಮೆಗಾಫಿಕ್ಸೆಲ್ ಕ್ಯಾಮೆರಾದ ಮೋಟೋ ಜಿ72 (Moto G72) ಸ್ಮಾರ್ಟ್​ಫೋನ್ ಅತ್ಯಂತ ಕಡಿಮೆ ಬೆಲೆಗೆ ಮಾರಾಟ ಆಗುತ್ತಿದೆ. ನೀವು ಫೋಟೋಗ್ರಫಿ ಪ್ರಿಯರಾಗಿದ್ದಲ್ಲಿ ಇದನ್ನು ಖರೀದಿಸಬಹುದು.

Moto G72: ನೀವು ಫೋಟೋಗ್ರಫಿ ಮಾಡ್ತೀರಾ?: 108MP ಕ್ಯಾಮೆರಾದ ಈ ಸ್ಮಾರ್ಟ್​ಫೋನ್ ಈಗ ಅತಿ ಕಡಿಮೆ ಬೆಲೆಗೆ ಲಭ್ಯ
MOTO G72
Follow us on

ಇಂದು ಫೋಟೋಗ್ರಫಿ (Photography) ಮಾಡಲು ಡಿಎಸ್​ಎಲ್​ಆರ್ ಕ್ಯಾಮೆರಾವೇ ಬೇಕು ಎಂದಿಲ್ಲ. ಯಾಕೆಂದರೆ 200 ಮೆಗಾಪಿಕ್ಸೆಲ್ ಕ್ಯಾಮೆರಾ ಇರುವ ಸ್ಮಾರ್ಟ್​ಫೋನ್​ಗಳು ಕೂಡ ಮಾರುಕಟ್ಟೆಗೆ ಇಂದು ಲಗ್ಗೆಯಿಟ್ಟಿದೆ. ಆದರೆ, ಇದರ ಬೆಲೆ ದುಬಾರಿ ಆಗಿರುತ್ತದೆ. ಇದರ ಮಧ್ಯೆ 108 ಮೆಗಾಫಿಕ್ಸೆಲ್ ಕ್ಯಾಮೆರಾದ (108MP Camera) ಫೋನ್ ಕೈಗೆಟುವ ಬೆಲೆಗೆ ಲಭ್ಯವಿರುತ್ತದೆ. ಶವೋಮಿ, ರೆಡ್ಮಿ, ರಿಯಲ್ ಮಿ, ಮೋಟೋ, ಸ್ಯಾಮ್​ಸಂಗ್ ಹೀಗೆ ಬಹುತೇಕ ಎಲ್ಲ ಮೊಬೈಲ್ ಬ್ರ್ಯಾಂಡ್​ಗಳು 108 ಮೆಗಾಫಿಕ್ಸೆಲ್ ಕ್ಯಾಮೆರಾದ ಫೋನನ್ನು ಪರಿಚಯಿಸಿವೆ. ಇದೀಗ ಮೋಟೋರೊಲಾ ಕಂಪನಿ ಕಳೆದ ವರ್ಷ ಅನಾವರಣ ಮಾಡಿದ 108 ಮೆಗಾಫಿಕ್ಸೆಲ್ ಕ್ಯಾಮೆರಾದ ಮೋಟೋ ಜಿ72 (Moto G72) ಸ್ಮಾರ್ಟ್​ಫೋನ್ ಅತ್ಯಂತ ಕಡಿಮೆ ಬೆಲೆಗೆ ಮಾರಾಟ ಆಗುತ್ತಿದೆ. ನೀವು ಫೋಟೋಗ್ರಫಿ ಪ್ರಿಯರಾಗಿದ್ದಲ್ಲಿ ಇದನ್ನು ಖರೀದಿಸಬಹುದು.

ಏನಿದೆ ಆಫರ್?:

ಮೋಟೋ G72 ಸ್ಮಾರ್ಟ್‌ಫೋನಿನ 6GB RAM + 128GB ಸ್ಟೋರೇಜ್‌ ವೇರಿಯಂಟ್‌ ಬೆಲೆಯಲ್ಲಿ ಬರೋಬ್ಬರಿ 3,000ರೂ. ಇಳಿಕೆ ಮಾಡಲಾಗಿದೆ. ಇದೀಗ 6GB + 128GB ವೇರಿಯಂಟ್‌ ಕೇವಲ 15,999ರೂ. ಗಳಿಗೆ ಸೇಲ್ ಆಗುತ್ತಿದೆ. ಈ ಫೋನನ್ನು ನೀವು ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್​ಕಾರ್ಟ್ ಮೂಲಕ ಖರೀದಿಸಬಹುದು. ಇದರ ಜೊತೆಗೆ ಎಕ್ಸ್​ಚೇಂಜ್ ಆಫರ್ ಕೂಡ ಲಭ್ಯವಿದೆ. ಈ ಫೋನ್‌ ಗ್ರೇ ಮತ್ತು ಪೋಲಾರ್ ಬ್ಲೂ ಬಣ್ಣದ ಆಯ್ಕೆ ಪಡೆದಿದೆ.

ಇದನ್ನೂ ಓದಿ
Tech Tips: ಆನ್​ಲೈನ್ ಮೂಲಕ ವಿದ್ಯುತ್ ಬಿಲ್ ಪಾವತಿಸುವುದು ಹೇಗೆ?: ಇಲ್ಲಿದೆ ಟಿಪ್ಸ್
Flipkart Big Saving Days Sale: ಫ್ಲಿಪ್​ಕಾರ್ಟ್​ನಲ್ಲಿ ಶುರುವಾಯಿತು ಬಿಗ್ ಸೇವಿಂಗ್ ಡೇಸ್: ಈ ಬಾರಿಯ ಆಫರ್ ಕೇಳಿದ್ರೆ ದಂಗಾಗ್ತೀರ
Oppo Reno 7 Pro 5G: ಕ್ಯಾಮೆರಾ ಪ್ರಿಯರನ್ನು ದಂಗಾಗಿಸಿದ ಒಪ್ಪೋ ರೆನೋ 7 ಪ್ರೊ ಫೋನ್ ಬೆಲೆಯಲ್ಲಿ ಭರ್ಜರಿ ಇಳಿಕೆ: ಅತಿ ಕಡಿಮೆ ಬೆಲೆಗೆ ಲಭ್ಯ
Redmi 12C: ಶವೋಮಿಯಿಂದ ಅತಿ ಕಡಿಮೆ ಬೆಲೆಗೆ ರೆಡ್ಮಿ 12C ಸ್ಮಾರ್ಟ್‌ಫೋನ್‌ ಬಿಡುಗಡೆ: ಎಷ್ಟು ರೂ. ಗೊತ್ತೇ?

Mobile Data: ಅತಿ ಕಡಿಮೆ ಬೆಲೆಗೆ ಇಂಟರ್ನೆಟ್ ಸೇವೆ ನೀಡುತ್ತಿರುವ ದೇಶ ಯಾವುದು ಗೊತ್ತೇ?

ಫೀಚರ್ಸ್ ಏನೇನು?:

ಈ ಫೋನ್ 1080 x 2400 ಪಿಕ್ಸಲ್ ರೆಸಲ್ಯೂಶನ್ ಸಫೋರ್ಟ್‌ ಪಡೆದಿದ್ದು, 6.6 ಇಂಚಿನ ಫುಲ್​ ಹೆಚ್​ಡಿ+ pOLED ಡಿಸ್‌ಪ್ಲೇ ಹೊಂದಿದೆ. 120Hz ರಿಫ್ರೆಶ್ ರೇಟ್​ನಿಂದ ಕೂಡಿದೆ. ಮೀಡಿಯಾ ಟೆಕ್ ಹಿಲಿಯೋ G99 ಪ್ರೊಸೆಸರ್‌ ವೇಗದ ಜೊತೆ ಆಂಡ್ರಾಯ್ಡ್‌ 12 ಓಎಸ್‌ ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. 6GB RAM + 128GB ಸ್ಟೋರೇಜ್‌ ವೇರಿಯಂಟ್‌ ಆಯ್ಕೆಯೊಂದಿಗೆ ರಿಲೀಸ್ ಆಗಿದೆ. ಹಾಗೆಯೇ ಮೆಮೊರಿ ಕಾರ್ಡ್‌ ಮೂಲಕ ಸಂಗ್ರಹ ವಿಸ್ತರಣೆಗೆ ಅವಕಾಶ ಇರಲಿದೆ. IP52 ರೇಟಿಂಗ್ ಅನ್ನು ಸಹ ಹೊಂದಿದ್ದು, ವಾಟರ್ ರೆಸಿಸ್ಟೆನ್ಸ್‌ ಆಯ್ಕೆ ಪಡೆದಿದೆ. ಡಾಬ್ಲಿ ಅಟ್ಮೋಸ್‌ ಆಡಿಯೋದೊಂದಿಗೆ ಸ್ಟಿರಿಯೊ ಸ್ಪೀಕರ್ ರಚನೆಯನ್ನು ಈ ಸ್ಮಾರ್ಟ್‌ಫೋನ್‌ ಪಡೆದಿರುವುದು ವಿಶೇಷ.

ಮೋಟೋ G72 ಸ್ಮಾರ್ಟ್‌ಫೋನ್‌ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 108 ಮೆಗಾ ಪಿಕ್ಸಲ್ ಸೆನ್ಸಾರ್‌ನಲ್ಲಿದೆ. ಇದು ಫೋಟೋಗ್ರಫಿಗೆ ಹೇಳಿಮಾಡಿಸಿದಂತಿದೆ. ಸ್ಯಾಮ್​ಸಂಗ್ HM6 ಸೆನ್ಸಾರ್ ನೀಡಲಾಗಿದೆ. ಎರಡನೇ ಕ್ಯಾಮೆರಾ 8 ಮೆಗಾಫಿಕ್ಸೆಲ್​ನ ಆಲ್ಟ್ರಾ ವೈಲ್ಡ್‌ ಆಂಗಲ್ ಲೆನ್ಸ್‌ ಪಡೆದಿದೆ. ಮೂರನೇ ಕ್ಯಾಮೆರಾ 2 ಮೆಗಾಫಿಕ್ಸೆಲ್​ನ ಮೈಕ್ರೋ ಶೂಟರ್ ಸೆನ್ಸಾರ್‌ ಅನ್ನು ಹೊಂದಿದೆ. ಇದರೊಂದಿಗೆ ಸೆಲ್ಫಿ ಕ್ಯಾಮೆರಾವು 16 ಮೆಗಾ ಪಿಕ್ಸಲ್ ಸೆನ್ಸಾರ್‌ನಲ್ಲಿರಲಿದೆ.

ದೀರ್ಘ ಸಮಯ ಬಾಳಿಕೆ ಬರುವ 5,000mAh ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ಅಪ್‌ ಅನ್ನು ನೀಡಲಾಗಿದ್ದು, 33W ಸಾಮರ್ಥ್ಯದ ಫಾಸ್ಟ್‌ ಚಾರ್ಜಿಂಗ್ ಸೌಲಭ್ಯ ಕೂಡ ಇದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 5ಜಿ ಬೆಂಬಲ ಪಡೆದುಕೊಂಡಿಲ್ಲ ಎಂಬುದು ಬೇಸರದ ಸಂಗತಿ. 4 ಜಿ, ವೈ-ಫೈ, ಬ್ಲೂಟೂತ್ 5.0, ಎನ್‌ಎಫ್‌ಸಿ, ಜಿಪಿಎಸ್, 3.5 ಎಂಎಂ ಹೆಡ್‌ಫೋನ್ ಜ್ಯಾಕ್ ಮತ್ತು ಯುಎಸ್‌ಬಿ ಟೈಪ್-ಸಿ ಪೋರ್ಟ್ ನೀಡಲಾಗಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:31 am, Mon, 13 March 23