ನೋಕಿಯಾ (Nokia) ಕಂಪನಿಯ ಫೋನ್ಗಳಿಗೆ ಈಗ ಹಿಂದಿನಂತೆ ಬೇಡಿಕೆಯಿಲ್ಲ. ಶವೋಮಿ (Xiaomi), ಸ್ಯಾಮ್ಸಂಗ್, ರಿಯಲ್ ಮಿ, ಒಪ್ಪೋ, ಒನ್‌ಪ್ಲಸ್ ನಂತಹ ಘಟಾನುಘಟಿ ಕಂಪನಿಗಳ ಸ್ಮಾರ್ಟ್ಫೋನ್ ಹೊಡೆತಕ್ಕೆ ಸಿಲುಕಿರುವ ನೋಕಿಯಾ ಅಪರೂಪಕ್ಕೆ ಮೊಬೈಲ್ಗಳನ್ನು ಬಿಡುಗಡೆ ಮಾಡುತ್ತಿದೆ. ಇದೀಗ ನೋಕಿಯಾ ಕಂಪನಿ ಜಾಗತಿಕ ಮಾರುಕಟ್ಟೆಯಲ್ಲಿ ನೋಕಿಯಾ 2660 ಫ್ಲಿಪ್ (Nokia 2660 Flip) ಫೋನನ್ನು ಅನಾವರಣ ಮಾಡಿದೆ. ಡ್ಯುಯಲ್ ಸ್ಕ್ರೀನ್ ಹೊಂದಿರುವ ಈ ಫೋನ್ನಲ್ಲಿ ಬಲವಾದ ಬ್ಯಾಟರಿ ನೀಡಲಾಗಿದೆ. ಇದರ ವಿನ್ಯಾಸಕ್ಕೆ ಜನರು ಮನಸೋತಿದ್ದಾರೆ. ಹಾಗಾದರೆ ನೋಕಿಯಾ 2660 ಫ್ಲಿಪ್ ಫೋನಿನ ಬೆಲೆ ಎಷ್ಟು?, ಏನು ವಿಶೇಷತೆ ಎಂಬುದನ್ನು ನೋಡೋಣ.
ನೋಕಿಯಾ 8210 4G ಬಿಡುಗಡೆ:
ನೋಕಿಯಾ ಕಂಪನಿ ಕಳೆದ ವಾರವಷ್ಟೆ ಭಾರತದಲ್ಲಿ ನೋಕಿಯಾ 8210 4G ಫೋನನ್ನು ಅನ್ನು ಅನಾವರಣ ಮಾಡಿತ್ತು. ಇದು 2.8 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ QVGA ರೆಸಲ್ಯೂಶನ್ ಅನ್ನು ಪಡೆದುಕೊಂಡಿದ್ದು Unisoc T107 SoC ಪ್ರೊಸೆಸರ್ ಬಲದಿಂದ ಕಾರ್ಯನಿರ್ವಹಿಸುತ್ತದೆ. ಸಿಂಗಲ್ ರಿಯರ್ ಕ್ಯಾಮೆರಾ ಹೊಂದಿದೆ. ಈ ಕ್ಯಾಮರಾ 0.3-ಮೆಗಾಪಿಕ್ಸೆಲ್ ಸೆನ್ಸಾರ್ನಿಂದ ಕೂಡಿದೆ. 1,450mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 2.75 W ಚಾರ್ಜಿಂಗ್ನೊಂದಿಗೆ ಬರುತ್ತದೆ. ಈ ಫೋನ್ ಬೆಲೆ ಭಾರತದಲ್ಲಿ ಕೇವಲ 3,999 ರೂ. ಇದು ಕೆಂಪು ಮತ್ತು ಗಾಢ ನೀಲಿ ಬಣ್ಣದ ಎರಡು ಆಯ್ಕೆಗಳಲ್ಲಿ ಲಭ್ಯವಾಗಲಿದೆ.