Nokia 8210 4G: ಧೂಳೆಬ್ಬಿಸುತ್ತಿದೆ ನೋಕಿಯಾ 8210: ಕ್ಲಾಸಿಕ್ ಫೋನ್ನೊಂದಿಗೆ ಮತ್ತೆ ಬಂದ ನೋಕಿಯಾ
ನೋಕಿಯಾ ತನ್ನ ಕ್ಲಾಸಿಕ್ ಮೊಬೈಲ್ಗಳ ಮೊರೆಹೋಗಿದೆ. ಇದೀಗ ಭಾರತದಲ್ಲಿ ನೋಕಿಯಾ ಕಂಪನಿ ಹೊಸ ಫೀಚರ್ ಫೋನ್ ನೋಕಿಯಾ 8210 4ಜಿ (Nokia 8210 4G) ಅನ್ನು ಅನಾವರಣ ಮಾಡಿದೆ.
ಒಂದು ಕಾಲದಲ್ಲಿ ಮೊಬೈಲ್ ಮಾರುಕಟ್ಟೆಯನ್ನು ಆಳುತ್ತಿದ್ದ ಪ್ರಸಿದ್ಧ ನೋಕಿಯಾ (Nokia) ಕಂಪನಿ ಈಗ ಹೇಳ ಹೆಸರಿಲ್ಲದಂತಾಗಿದೆ. ಶವೋಮಿ (Xiaomi), ಸ್ಯಾಮ್ಸಂಗ್, ರಿಯಲ್ ಮಿ, ಒಪ್ಪೋ, ಒನ್ಪ್ಲಸ್ ನಂತಹ ಘಟಾನುಘಟಿ ಕಂಪನಿಗಳ ಸ್ಮಾರ್ಟ್ಫೋನ್ ಹೊಡೆತಕ್ಕೆ ಸಿಲುಕಿರುವ ನೋಕಿಯಾ ಪಾತಾಳಕ್ಕೆ ಕುಸಿದಿದೆ. ಕೆಲ ಸ್ಮಾರ್ಟ್ಫೋನ್ಗಳನ್ನು ಬಿಡುಗಡೆ ಮಾಡಿದರೂ ಅದು ದೊಡ್ಡ ಮಟ್ಟದಲ್ಲಿ ಯಶಸ್ಸು ಕಾಣುತ್ತಿಲ್ಲ. ಹೀಗಿರುವಾಗ ನೋಕಿಯಾ ತನ್ನ ಕ್ಲಾಸಿಕ್ ಮೊಬೈಲ್ಗಳ ಮೊರೆಹೋಗಿದೆ. ಇದೀಗ ಭಾರತದಲ್ಲಿ ನೋಕಿಯಾ ಕಂಪನಿ ಹೊಸ ಫೀಚರ್ ಫೋನ್ ನೋಕಿಯಾ 8210 4ಜಿ (Nokia 8210 4G) ಅನ್ನು ಅನಾವರಣ ಮಾಡಿದೆ. ಈ ಫೋನ್ ಸಾಕಷ್ಟು ವಿಶೇಷತೆಗಳಿಂದ ಕೂಡಿದ್ದು ಟೆಕ್ ಪ್ರಿಯರಂತು ಫುಲ್ ಫಿದಾ ಆಗಿದ್ದಾರೆ. 4G ಫೀಚರ್ ಅನ್ನು ಒಳಗೊಂಡಿರುವ ಈ ಫೋನಿನ ಬೆಲೆ ಎಷ್ಟು?, ಏನು ವಿಶೇಷತೆ ಎಂಬುದನ್ನು ನೋಡೋಣ.
ಹೊಸ ನೋಕಿಯಾ 8210 4G ಫೋನ್ 2.8 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ QVGA ರೆಸಲ್ಯೂಶನ್ ಅನ್ನು ಪಡೆದುಕೊಂಡಿದ್ದು Unisoc T107 SoC ಪ್ರೊಸೆಸರ್ ಬಲದಿಂದ ಕಾರ್ಯನಿರ್ವಹಿಸುತ್ತದೆ. 48 MB RAM ಜೊತೆಗೆ 128 MB ಇಂಟರ್ ಸ್ಟೋರೇಜ್ ನೀಡಲಾಗಿದೆ. ಇದು ಸಾಕಾಗಿಲ್ಲ ಎಂದಾದರೆ ನೀವು ಮೆಮೊರಿ ಕಾರ್ಡ್ ಮೂಲಕ 32GB ವರೆಗೆ ಸ್ಟೋರೇಜ್ ಅನ್ನು ವಿಸ್ತರಿಸಬಹುದು.
ಇನ್ನು ಕ್ಯಾಮೆರಾ ವಿಚಾರಕ್ಕೆ ಬರುವುದಾದರೆ ಇದು ಸಿಂಗಲ್ ರಿಯರ್ ಕ್ಯಾಮೆರಾ ಹೊಂದಿದೆ. ಈ ಕ್ಯಾಮರಾ 0.3-ಮೆಗಾಪಿಕ್ಸೆಲ್ ಸೆನ್ಸಾರ್ನಿಂದ ಕೂಡಿದೆ. FM ಸ್ಟ್ರೀಮಿಂಗ್ ಅನ್ನು ಬೆಂಬಲಿಸುತ್ತದೆ ಮತ್ತು mp3 ಮೀಡಿಯಾ ಪ್ಲೇಯರ್ ನೀಡಲಾಗಿದೆ. 1,450mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 2.75 W ಚಾರ್ಜಿಂಗ್ನೊಂದಿಗೆ ಬರುತ್ತದೆ. ಬ್ಯಾಟರಿ ಹಾಳಾದರೆ ಇದನ್ನು ತೆಗೆದುಹಾಕುವುದಕ್ಕೆ ಕೂಡ ಅವಕಾಶವಿದೆ. ಈ ಬ್ಯಾಟರಿ ನಿಮಗೆ ಒಟ್ಟು 27 ದಿನಗಳ ಬ್ಯಾಟರಿ ಸ್ಟ್ಯಾಂಡ್‌ಬೈ ಟೈಂ ಅನ್ನು ಸಮಯವನ್ನು ಒದಗಿಸುತ್ತದೆ ಎಂದು ಕಂಪನಿ ಹೇಳಿದೆ.
ನೋಕಿಯಾ 8210 4G ಫೋನ್ ನಂಬರ್ ಕೀಗಳು, ಫಂಕ್ಷನ್ ಕೀಗಳನ್ನು ಒಳಗೊಂಡಿದೆ. ಅಂದರೆ ಟಚ್ ಸ್ಕ್ರೀನ್ ಸೌಲಭ್ಯ ಇದರಲ್ಲಿಲ್ಲ. 3.5 ಎಂಎಂ ಆಡಿಯೊ ಜಾಕ್, ಬ್ಲೂಟೂತ್ ಕನೆಕ್ಟಿವಿಟಿ, ಡ್ಯುಯಲ್–ಸಿಮ್ ಸ್ಲಾಟ್, ಮೈಕ್ರೋ USB ಪೋರ್ಟ್ ಇದರಲ್ಲಿದೆ. ಈ ಫೋನ್ ಬೆಲೆ ಭಾರತದಲ್ಲಿ ಕೇವಲ 3,999 ರೂ. ಇದು ಕೆಂಪು ಮತ್ತು ಗಾಢ ನೀಲಿ ಬಣ್ಣದ ಎರಡು ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಪ್ರಸಿದ್ಧ ಇ ಕಾಮರ್ಸ್ ತಾಣವಾದ ಅಮೆಜಾನ್ ಇಂಡಿಯಾ ಮತ್ತು ನೋಕಿಯಾ ಇಂಡಿಯಾದ ಅಧಿಕೃತ ವೆಬ್ಸೈಟ್ನಲ್ಲಿ ಖರೀದಿಸಬಹುದು.
Published On - 1:28 pm, Thu, 4 August 22