ಪ್ರಸಿದ್ಧ ಇ ಕಾಮರ್ಸ್ ತಾಣಗಳಲ್ಲಿ ಮೇಳಗಳ ಭರಾಟೆ ಮತ್ತೆ ಶುರುವಾಗುತ್ತಿದೆ. ಅಮೆಜಾನ್ನಲ್ಲಿ ಗ್ರೇಟ್ ಫ್ರೀಡಂ ಫೆಸ್ಟಿವಲ್ ಸೇಲ್ಗೆ (Amazon Great Freedom Festival 2022 Sale) ದಿನಾಂಕ ನಿಗದಿಯಾಗಿದೆ. ಇದು ಆಗಸ್ಟ್ 6ಕ್ಕೆ ಶುರುವಾಗಲಿದ್ದು ಆಗಸ್ಟ್ 10ರ ವರೆಗೆ ನಡೆಯಲಿದೆ. ಈ ಸೇಲ್‌ನಲ್ಲಿ ಅನೇಕ ಪ್ರಾಡಕ್ಟ್‌ಗಳ ಮೇಲೆ ರಿಯಾಯಿತಿಗಳನ್ನು ನೀಡಲಿದೆ. ಅಲ್ಲದೆ ಈ ಸಮಯದಲ್ಲಿ ಹಲವು ಹೊಸ ಸ್ಮಾರ್ಟ್‌ಫೋನ್‌ಗಳು ಲಾಂಚ್ ಆಗುವ ಸಾಧ್ಯತೆ ಕೂಡ ಇದೆ. ಹೀಗಿರುವಾರ ಅಮೆಜಾನ್ ಗ್ರಾಹಕರಿಗೆ ಸರ್ಪ್ರೈಸ್ವೊಂದನ್ನು ನೀಡಿದೆ. ಗ್ರೇಟ್ ಫ್ರೀಡಂ ಫೆಸ್ಟಿವಲ್ ಸೇಲ್ಗೂ ಮುನ್ನ ಕಿಕ್ಸ್ಟಾರ್ಟರ್ ಸೇಲ್ (Kickstarter Sale) ಆರಂಭಿಸಿದೆ. ಇದರಲ್ಲಿ ಸ್ಮಾರ್ಟ್ಫೋನ್ಗಳಿಗೆ ಬಂಪರ್ ಡಿಸ್ಕೌಂಟ್ ಘೋಷಿಸಲಾಗಿದೆ. ಅತ್ಯಂತ ಕಡಿಮೆ ಬೆಲೆಗೆ ರೆಡ್ಮಿ, ಒಪ್ಪೋ, ಒನ್ಪ್ಲಸ್ (OnePlus), ರಿಯಲ್ ಮಿ, ಐಕ್ಯೂ, ಶವೋಮಿ ಸ್ಮಾರ್ಟ್‌ಫೋನ್‌ಗಳು ಮಾರಾಟ ಆಗುತ್ತಿದೆ. ಇಲ್ಲಿದೆ ನೋಡಿ ಅತಿ ಕಡಿಮೆ ಬೆಲೆಗೆ ಸೇಲ್ ಆಗಯತ್ತಿರುವ ಕೆಲ ಬೆಸ್ಟ್ ಫೋನ್ಗಳು.
ಅಮೆಜಾನ್ ಕಿಕ್ಸ್ಟಾರ್ಟರ್ ಸೇಲ್‌ನಲ್ಲಿ ರಿಯಲ್ ಮಿ ನಾರ್ಜೊ 50A ಸ್ಮಾರ್ಟ್‌ಫೋನ್ ಮೇಲೆ 2,500 ರೂ. ರಿಯಾಯಿತಿ ನೀಡಲಾಗಿದ್ದು 10,990 ರೂ. ಗೆ ಮಾರಾಟ ಆಗುತ್ತಿದೆ. ಜೊತೆಗೆ 10,350 ರೂ. ಗಳ ಎಕ್ಸ್ಚೇಂಜ್ ಆಫರ್ ಕೂಡ ನೀಡಲಾಗಿದೆ.
ಟೆಕ್ನೋ ಸ್ಪಾರ್ಕ್ 9 6GB RAM ವೇರಿಯೆಂಟ್ ಮೇಲೆ ಶೇ. 30 ರಷ್ಟು ಡಿಸ್ಕೌಂಟ್ ಇದೆ. 13,499 ರೂ. ಬೆಲೆಯ ಈ ಸ್ಮಾರ್ಟ್ಫೋನನ್ನು ನೀವು ಕೇವಲ 9,499 ರೂ. ಗೆ ಖರೀದಿಸಬಹುದು. ಅಂತೆಯೆ ರೆಡ್ಮಿ ನೋಟ್ 11T 5G ಸ್ಮಾರ್ಟ್‌ಫೋನ್ 6GB RAM ವೇರಿಯೆಂಟ್ 6,000 ರೂ. ಗಳ ರಿಯಾಯಿತಿ ನೀಡಲಾಗಿದ್ದು 14,999 ರೂ. ಗೆ ಮಾರಾಟ ಆಗುತ್ತಿದೆ.
ಇದರ ಜೊತೆಗೆ ಹೆಚ್ಪಿ, ಡೆಲ್, ಏಸಸ್ ಲ್ಯಾಪ್ಟಾಪ್ಗಳ ಮೇಲೂ ಆಕರ್ಷಕ ಆಫರ್ ನೀಡಲಾಗಿದೆ. ಏಸಸ್ ರೋಗ್ ಸ್ಟ್ರಿಕ್ಸ್ GL 10 ಲ್ಯಾಪ್ಟಾಪ್ ಮೇಲೆ ಶೇ. 50 ರಷ್ಟು ಡಿಸ್ಕೌಂಟ್ ನೀಡಲಾಗಿದೆ. 16 ಇಂಚಿನ ಎಲ್ಜಿ ಗ್ರಾಮ್ ಮೇಲೆ ಶೇ. 44 ರಷ್ಟು ರಿಯಾಯಿತಿ ಇದೆ. ಇನ್ನು ಸ್ಮಾರ್ಟ್ ವಾಚ್, ಫಿಟ್ನೆಸ್ ಬ್ರ್ಯಾಂಡ್ಗಳ ಮೇಳೆ ಶೇ. 75 ರಷ್ಟು ಡಿಸ್ಕೌಂಟ್‌ನಲ್ಲಿ ಮಾರಾಟ ಆಗುತ್ತಿದೆ.
ಆಗಸ್ಟ್ 6 ರಿಂದ ಆರಂಭವಾಗಲಿರುವ ಗ್ರೇಟ್ ಫ್ರೀಡಂ ಫೆಸ್ಟಿವಲ್ ಸೇಲ್‌ನಲ್ಲಿ ಸ್ಮಾರ್ಟ್‌ಫೋನ್‌ಗಳು, ಸ್ಮಾರ್ಟ್‌ಟಿವಿಗಳು ಮತ್ತು ಇತರ ಎಲೆಕ್ಟ್ರಾನಿಕ್ಸ್ ಪ್ರಾಡಕ್ಟ್‌ಗಳ ಮೇಲೆ ರಿಯಾಯಿತಿಗಳನ್ನು ನೀಡಲಾಗುತ್ತದೆ. ಇತ್ತೀಚೆಗಷ್ಟೆ ಬಿಡುಗಡೆಗೊಂಡು ಭರ್ಜರಿ ಸೇಲ್ ಕಾಣುತ್ತಿರುವ ರೆಡ್ಮಿ K50i 5G ಸ್ಮಾರ್ಟ್‌ಫೋನ್ ಕೇವಲ 20,999ರೂ. ಬೆಲೆಗೆ ದೊರೆಯಲಿದೆ. ಈ ಬೆಲೆ ಕಾರ್ಡ್ ರಿಯಾಯಿತಿಗಳು ಮತ್ತು ವಿನಿಮಯ ಕೊಡುಗೆಗಳ ನಂತರದ ಬೆಲೆಯಾಗಿದೆ. ಇದಲ್ಲದೆ ಸ್ಯಾಮ್‌ಸಂಗ್ ಗ್ಯಾಲಕ್ಸಿ M13, ಐಕ್ಯೂ ನಿಯೋ 6 5G, ಟೆಕ್ನೋ ಕ್ಯಾಮನ್ 19 ನಿಯೋ ಮತ್ತು ಟೆಕ್ನೋ ಸ್ಪಾರ್ಕ್ 9 ಸ್ಮಾರ್ಟ್‌ಫೋನ್‌ಗಳು ಕೂಡ ಈ ಸೇಲ್‌ನಲ್ಲಿ ಡಿಸ್ಕೌಂಟ್‌ನಲ್ಲಿ ದೊರೆಯಲಿವೆ.
ಬ್ಯಾಂಕ್ ಆಫರ್ ಕೂಡ ನಿರೀಕ್ಷಿಸಲಾಗಿದ್ದು ಖರೀದಿದಾರರು ಆಯ್ದ ಪ್ರಾಡಕ್ಟ್‌ಗಳ ಮೇಲೆ SBI ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸುವವರು ವಿಶೇಷ ಡಿಸ್ಕೌಂಟ್ ಪಡೆಯಲಿದ್ದಾರೆ. ಎಸ್‌ಬಿಐ ಕ್ರೆಡಿಟ್ ಕಾರ್ಡ್ ಬಳಸಿ ಖರೀದಿಸಿರೆ ನಿಮಗೆ 10% ಡಿಸ್ಕೌಂಟ್ ಲಭ್ಯವಾಗಲಿದೆ. ಇದಲ್ಲದೆ ಅಮೆಜಾನ್ ಪ್ಲಾಟ್‌ಫಾರ್ಮ್‌ನಲ್ಲಿ ಹೊಸದಾಗಿ ಖರೀದಿಮಾಡುವವರು ಅಂದರೆ ಮೊದಲ–ಬಾರಿ ಖರೀದಿಗೆ 10% ಕ್ಯಾಶ್‌ಬ್ಯಾಕ್ ಪಡೆಯುತ್ತಾರೆ.