5G Service: ಆಗಸ್ಟ್​ನಿಂದ ಭಾರತದಲ್ಲಿ ಏರ್​ಟೆಲ್ 5G ಸೇವೆ: ಮೊದಲ ಗುತ್ತಿಗೆ ಎರಿಕ್​ಸನ್ ಪಾಲು

20 ವರ್ಷಗಳ ಅವಧಿಗೆ 5ಜಿ ತರಂಗಾತರ ಪಡೆದುಕೊಂಡಿರುವ ಏರ್​ಟೆಲ್ ಈ ಗುತ್ತಿಗೆಗಾಗಿ ₹ 43,084 ಕೋಟಿ ವ್ಯಯಿಸಿದೆ.

5G Service: ಆಗಸ್ಟ್​ನಿಂದ ಭಾರತದಲ್ಲಿ ಏರ್​ಟೆಲ್ 5G ಸೇವೆ: ಮೊದಲ ಗುತ್ತಿಗೆ ಎರಿಕ್​ಸನ್ ಪಾಲು
5ಜಿ ಸೇವೆ (ಪ್ರಾತಿನಿಧಿಕ ಚಿತ್ರ)
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Aug 04, 2022 | 8:41 AM

ಮುಂಬೈ: 5G ಸೇವೆಗಳನ್ನು ಪಡೆಯಬೇಕು ಎನ್ನುವ ಭಾರತೀಯರ ಸುದೀರ್ಘ ಕನಸು ಈಡೇರುವ ಕ್ಷಣಗಳು ಹತ್ತಿರವಾಗುತ್ತಿವೆ. ಈ ಸಂಬಂಧ ಭಾರ್ತಿ ಏರ್​ಟೆಲ್ (Bharti Airtel) ಮಹತ್ವದ ಮಾಹಿತಿಯೊಂದನ್ನು ಹಂಚಿಕೊಂಡಿದೆ. ತನ್ನ ಮೊದಲ 5G ಗುತ್ತಿಗೆಯನ್ನು ಎರಿಕ್​ಸನ್ (Ericsson) ಕಂಪನಿಗೆ ನೀಡಿದ್ದು, ಇದೇ ತಿಂಗಳಲ್ಲಿ (ಆಗಸ್ಟ್ 2022) ಸೇವೆಗಳನ್ನು ಒದಗಿಸಲಾಗುವುದು ಎಂದು ಹೇಳಿದೆ. ಏರ್​ಟೆಲ್​ನೊಂದಿಗೆ 25 ವರ್ಷಗಳಿಗೂ ಹೆಚ್ಚು ಕಾಲದ ವ್ಯಾಪಾರ ಸಂಬಂಧ ಹೊಂದಿರುವ ಎರಿಕ್​ಸನ್ ಭಾರತದಾದ್ಯಂತ ಕನೆಕ್ಟಿವಿಟಿ ಸೇವೆ ಒದಗಿಸುತ್ತಿದೆ. ಜುಲೈ 26ರಂದು ಅಂತ್ಯಗೊಂಡ 5ಜಿ ತರಂಗಾಂತರ ಹರಾಜಿನ ನಂತರ ಎರಿಕ್​ಸನ್​ಗೆ ಹೊಸ ಗುತ್ತಿಗೆಯನ್ನು ಏರ್​ಟೆಲ್ ನೀಡಿದೆ.

ಎರಿಕ್​ಸನ್ ರೇಡಿಯೊ ಸಿಸ್ಟಮ್ ಮತ್ತು ಎರಿಕ್​ಸನ್ ಮೈಕ್ರೊವೈವ್ ಮೊಬೈಲ್ ಟ್ರಾನ್ಸ್​ಪೋರ್ಟ್​ ಸಲ್ಯೂಷನ್​ನಿಂದ ಪಡೆದುಕೊಂಡ 5ಜಿ ರೇಡಿಯೊ ಅಕ್ಸೆಸ್ ನೆಟ್​ವರ್ಕ್​ (5G Radio Access Network – RAN) ಉತ್ಪನ್ನಗಳನ್ನು ಏರ್​ಟೆಲ್ ಅಳವಡಿಸಲಿದೆ. ಭಾರ್ತಿ ಏರ್​ಟೆಲ್​ನ 12 ಟೆಲಿಕಾಂ ವೃತ್ತಗಳಲ್ಲಿ ಎರಿಕ್​ಸನ್ 5ಜಿ ಸಂಪರ್ಕ ಒದಗಿಸಲಿದೆ. ಅತಿವೇಗದ ಇಂಟರ್ನೆಟ್​ ಕನೆಕ್ಟಿವಿಟಿ, ದೊಡ್ಡಮಟ್ಟದ ಡೇಟಾ ನಿರ್ವಹಣಾ ಸಾಮರ್ಥ್ಯ ಮತ್ತು ವೇಗದ ದತ್ತಾಂಶ ವರ್ಗಾವಣೆ ಸೌಲಭ್ಯವನ್ನು ಈ ಸೇವೆಗಳು ಒದಗಿಸುತ್ತವೆ ಎಂದು ಭಾರ್ತಿ ಏರ್​ಟೆಲ್ ಪ್ರಕಟಣೆಯಲ್ಲಿ ತಿಳಿಸಿದೆ.

ಇದನ್ನೂ ಓದಿ: BIG NEWS: 5G ಸ್ಪೆಕ್ಟ್ರಮ್ ಹರಾಜು: ರಿಲಯನ್ಸ್ ಜಿಯೋ ಟಾಪ್ ಬಿಡ್ಡರ್

ಇತ್ತೀಚೆಗೆ ನಡೆದ 5ಜಿ ಹರಾಜಿನಲ್ಲಿ ಭಾರ್ತಿ ಏರ್​ಟೆಲ್ 19,800 ಮೆಗಾಹರ್ಟ್ಸ್​ (MHz) ತರಂಗಾಂತರಗಳನ್ನು ಖರೀದಿಸಿತ್ತು. ಅಖಿಲ ಭಾರತ ಮಟ್ಟದಲ್ಲಿ 3.5 ಮತ್ತು 26 ಜಿಗಾಹರ್ಟ್ಸ್​ (GHz) ಬ್ಯಾಂಡ್​ಗಳನ್ನು ಪಡೆದುಕೊಂಡಿತ್ತು. 20 ವರ್ಷಗಳ ಅವಧಿಗೆ ಪಡೆದುಕೊಂಡಿರುವ ಈ ಗುತ್ತಿಗೆಗಾಗಿ ಎರ್​ಟೆಲ್ ₹ 43,084 ಕೋಟಿ ವ್ಯಯಿಸಿದೆ. 5ಜಿ ಸೇವೆಗಳನ್ನು ಒದಗಿಸುವ ಕುರಿತು ಪ್ರತಿಕ್ರಿಯಿಸಿದ ಏರ್​ಟೆಲ್ ಸಿಇಒ ಗೋಪಾಲ್ ವಿಠ್ಠಲ್, ಹಲವು ವರ್ಷಗಳಿಂದ ನಮ್ಮ ಪಾಲುದಾರ ಕಂಪನಿಯಾಗಿರುವ ಎರಿಕ್​ಸನ್​ಗೆ 5ಜಿ ಗುತ್ತಿಗೆ ನೀಡಲು ಸಂತೋಷವಾಗುತ್ತದೆ. 5ಜಿ ತಂತ್ರಜ್ಞಾನವು ಕೈಗಾರಿಕೆಗಳು, ಉದ್ಯಮಗಳು ಮತ್ತು ಸಾಮಾಜಿಕ-ಆರ್ಥಿಕ ಅಭಿವೃದ್ಧಿಗೆ ಹಲವು ರೀತಿಯಲ್ಲಿ ನೆರವಾಗುತ್ತದೆ. 5ಜಿ ಸಂಪರ್ಕದ ಸಂಪೂರ್ಣ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸಲು ಮತ್ತು ಡಿಜಿಟಲ್ ಆರ್ಥಿಕತೆಯತ್ತ ಭಾರತದ ಪ್ರಯಾಣವನ್ನು ಬೆಂಬಲಿಸಲು ನಾವು ಉದ್ದೇಶಿಸಿದ್ದೇವೆ ಎಂದು ಹೇಳಿದರು.

ರಿಲಯನ್ಸ್​ ಜಿಯೊ 5ಜಿ

ಏರ್​ಟೆಲ್​ನ ಪ್ರಮುಖ ಪ್ರತಿಸ್ಪರ್ಧಿ ರಿಲಯನ್ಸ್ ಜಿಯೊ ಸಹ ಇದೇ ತಿಂಗಳಲ್ಲಿ 5ಜಿ ಸೇವೆ ಒದಗಿಸಲು ಮುಂದಾಗಿದೆ. ‘ದೇಶಾದ್ಯಂತ 5ಜಿ ಸೇವೆಗಳನ್ನು ಆರಂಭಿಸುವ ಮೂಲಕ ಆಜಾದಿ ಕಾ ಅಮೃತ್​ ಮಹೋತ್ಸವ್ ಆಚರಿಸುತ್ತೇವೆ’ ಎಂದು ಜಿಯೊ ಇನ್​ಫೊಕಾಮ್​ನ ಅಧ್ಯಕ್ಷ ಆಕಾಶ್ ಎಂ ಅಂಬಾನಿ ಹೇಳಿದ್ದರು. ‘ಕೈಗೆಟುಕುವ ಬೆಲೆಯಲ್ಲಿ ವಿಶ್ವಮಟ್ಟದ 5ಜಿ ಸೇವೆಗಳನ್ನು ನಾವು ಒದಗಿಸುತ್ತೇವೆ. ಸೇವೆಗಳು, ಪ್ಲಾಟ್​ಫಾರ್ಮ್​ಗಳು ಮತ್ತು ಸಲ್ಯುಷನ್​ಗಳನ್ನು ನಾವು ಒದಗಿಸುತ್ತೇವೆ. ಈ ಮೂಲಕ ಶಿಕ್ಷಣ, ಆರೋಗ್ಯ, ಕೃಷಿ, ಉತ್ಪಾದನೆ ಮತ್ತು ಇ-ಆಡಳಿತ ಕ್ಷೇತ್ರಗಳಲ್ಲಿ ಗಮನಾರ್ಹ ಬದಲಾವಣೆಗೆ ಕಾರಣರಾಗುತ್ತೇವೆ’ ಎಂದು ಅವರು ತಿಳಿಸಿದ್ದರು.

Published On - 8:41 am, Thu, 4 August 22