Redmi K50S Pro: 108MP ಕ್ಯಾಮೆರಾ ಮರೆತು ಬಿಡಿ: ಶವೋಮಿ ತರುತ್ತಿದೆ 200MP ಕ್ಯಾಮೆರಾ ಸ್ಮಾರ್ಟ್​​ಫೋನ್

200MP Camera Phone: ನೀವು ಈ 108 ಮೆಗಾಫಿಕ್ಸೆಲ್​ನ ಸ್ಮಾರ್ಟ್​​ಫೋನನ್ನು ಮರೆತು ಬಿಡಿ. ಯಾಕೆಂದರೆ ವಿಶ್ವ ಸ್ಮಾರ್ಟ್​​ಫೋನ್ ಮಾರುಕಟ್ಟೆಯಲ್ಲಿ ಇದೇ ಮೊದಲ ಬಾರಿಗೆ ಶವೋಮಿ ಬರೋಬ್ಬರಿ 200 ಮೆಗಾಫಿಕ್ಸೆಲ್ ಕ್ಯಾಮೆರಾದ ಫೋನನ್ನು ಪರಿಚಯಿಸಲು ಮುಂದಾಗಿದೆ.

Redmi K50S Pro: 108MP ಕ್ಯಾಮೆರಾ ಮರೆತು ಬಿಡಿ: ಶವೋಮಿ ತರುತ್ತಿದೆ 200MP ಕ್ಯಾಮೆರಾ ಸ್ಮಾರ್ಟ್​​ಫೋನ್
Redmi K50S Pro 200MP Camera Phone
Follow us
TV9 Web
| Updated By: Vinay Bhat

Updated on: Jul 30, 2022 | 2:19 PM

ಸ್ಮಾರ್ಟ್​​ಫೋನ್ (Smartphone) ಮಾರುಕಟ್ಟೆಯಲ್ಲೀಗ ಕ್ಯಾಮೆರಾ ಮೊಬೈಲ್​ಗಳ ಹಾವಳಿ ಹೆಚ್ಚಾಗಿದೆ. ಶವೋಮಿ ಮೊದಲ ಬಾರಿಗೆ ಅದುಕೂಡ ಅತ್ಯಂತ ಕಡಿಮೆ ಬೆಲೆಗೆ 108 ಮೆಗಾಫಿಕ್ಸೆಲ್ ಕ್ಯಾಮೆರಾ ಫೋನ್ ಪರಿಚಯಿಸಿದ್ದೇ ತಡ ಇತರೆ ಬಹುತೇಕ ಬ್ರ್ಯಾಂಡ್​ಗಳು ಮೊಬೈಲ್​​ನಲ್ಲಿನ ಕ್ಯಾಮೆರಾಕ್ಕೆ ಹೆಚ್ಚು ಒತ್ತು ನೀಡುತ್ತಿದೆ. ಮುಖ್ಯವಾಗಿ ಭಾರತದಲ್ಲಿ  (Xiaomi) ಶವೋಮಿ ಕಂಪನಿಯ ಫೋನ್​ಗಳಿಗೆ ಹೆಚ್ಚು ಬೇಡಿಕೆ ಇದೆ. ಅದರಲ್ಲೂ 108 ಮೆಗಾಫಿಕ್ಸೆಲ್ ಕ್ಯಾಮೆರಾದ ಫೋನ್​ಗಳು ದೇಶದಲ್ಲಿ ಎಗ್ಗಿಲ್ಲದೆ ಮಾರಾಟ ಆಗುತ್ತಿದೆ. ಆದರೆ ಇನ್ನು ನೀವು ಈ 108 ಮೆಗಾಫಿಕ್ಸೆಲ್​ನ ಸ್ಮಾರ್ಟ್​​ಫೋನನ್ನು ಮರೆತು ಬಿಡಿ. ಯಾಕೆಂದರೆ ವಿಶ್ವ ಸ್ಮಾರ್ಟ್​​ಫೋನ್ ಮಾರುಕಟ್ಟೆಯಲ್ಲಿ ಇದೇ ಮೊದಲ ಬಾರಿಗೆ ಶವೋಮಿ ಬರೋಬ್ಬರಿ 200 ಮೆಗಾಫಿಕ್ಸೆಲ್ ಕ್ಯಾಮೆರಾದ ಫೋನನ್ನು (200MP Camera Phone) ಪರಿಚಯಿಸಲು ಮುಂದಾಗಿದೆ.

ಹೌದು, ಶವೋಮಿ ಕಂಪನಿ ತನ್ನ ರೆಡ್ಮಿ ಬ್ರ್ಯಾಂಡ್​ನ ಅಡಿಯಲ್ಲಿ 200 ಮೆಗಾಫಿಕ್ಸೆಲ್ ಕ್ಯಾಮೆರಾ ಇರುವ ಫೋನನ್ನು ಬಿಡುಗಡೆ ಮಾಡಲು ತಯಾರಿ ನಡೆಸುತ್ತಿದೆ. ಈ ಫೋನಿನ ಹೆಸರು ರೆಡ್ಮಿ K50S ಪ್ರೊ ಆಗಿರಲಿದೆಯಂತೆ. ಪ್ರಸಿದ್ಧ ಟೆಕ್ ಮಾಹಿತಿಗಾರ ಯೋಗೇಶ್ ಬ್ರಾರ್ ಈ ಬಗ್ಗೆ ಖಚಿತ ಪಡಿಸಿದ್ದು, ರೆಡ್ಮಿ K50S ಪ್ರೊ ಸ್ಮಾರ್ಟ್​​ಫೋನ್​ನ ಮುಖ್ಯ ಕ್ಯಾಮೆರಾ 200 ಮೆಗಾಫಿಕ್ಸೆಲ್​ನಿಂದ ಕೂಡಿರಲಿದೆ ಎಂದು ಹೇಳಿದ್ದಾರೆ. ಈ ಕ್ಯಾಮೆರಾ ಮೂಲಕ ಲೋ ಲೈಟ್ ಇರುವ ಜಾಗದಲ್ಲಿ ತೆಗೆದ ಫೋಟೋ ಕೂಡ ಅದ್ಭುವಾಗಿ ಮೂಡಿಬರುತ್ತಂತೆ.

ರೆಡ್ಮಿ K50S ಪ್ರೊ ಸ್ಮಾರ್ಟ್​​ಫೋನ್​ನಲ್ಲಿ ಅತ್ಯಂತ ಬಲಿಷ್ಠವಾದ ಸ್ನಾಪ್​ಡ್ರಾಗನ್ 8+ Gen 1 ಪ್ರೊಸೆಸರ್ ಇರಲಿದೆಯಂತೆ. 200MP ಮೈನ್ ಕ್ಯಾಮೆರಾದೊಂದಿಗೆ 8 ಮೆಗಾಫಿಕ್ಸೆಲ್ ವೈಡ್ ಆ್ಯಂಗಲ್ ಕ್ಯಾಮೆರಾ ಹಾಗೂ 2 ಮೆಗಾಫಿಕ್ಸೆಲ್ ಮ್ಯಾಕ್ರೊ ಸೆನ್ಸಾರ್ ಕ್ಯಾಮೆರಾ ಅಳವಡಿಸಲಾಗಿದೆಂತೆ. 6.67 ಇಂಚಿನ ಫುಲ್ ಹೆಚ್​ಡಿ+ ಅಮೋಲೆಡ್ ಡಿಸ್​ಪ್ಲೇ ಇರಲಿದೆ ಎಂಬ ಮಾತುಕೂಡ ಇದೆ.

ಇದನ್ನೂ ಓದಿ
Image
BGMI: ಬ್ಯಾಟಲ್​ಗ್ರೌಂಡ್ಸ್​ ಮೊಬೈಲ್ ಇಂಡಿಯಾ ಭಾರತದಲ್ಲಿ ಬ್ಯಾನ್ ಆಗಿದೆಯೇ?: ಅನೇಕರ ಪ್ರಶ್ನೆಗೆ ಇಲ್ಲಿದೆ ಉತ್ತರ
Image
Fake App: ಪ್ಲೇಸ್ಟೋರ್​​ನಲ್ಲಿ ಹಣ ಕದಿಯುವ ಫೇಕ್ ಆ್ಯಪ್ ಪತ್ತೆ: ಇನ್​ಸ್ಟಾಲ್ ಆಗಿದ್ರೆ ತಕ್ಷಣವೇ ಡಿಲೀಟ್ ಮಾಡಿ
Image
Asus Zenfone 9: ಬಲಿಷ್ಠ ಪ್ರೊಸೆಸರ್, ಅದ್ಭುತ ಕ್ಯಾಮೆರಾ: ಏಸಸ್‌ ಜೆನ್‌ಫೋನ್‌ 9 ಬಿಡುಗಡೆ, ಬೆಲೆ ಎಷ್ಟು?
Image
Amazon: ಅಮೆಜಾನ್ ಪ್ರೈಮ್‌ ಡೇ ಸೇಲ್​ನಲ್ಲಿ ಭರ್ಜರಿ ಮಾರಾಟ: ಮಂಗಳೂರಿನಿಂದ ಅತಿ ಹೆಚ್ಚು ಆರ್ಡರ್

MIUI 13 ಮೂಲಕ ಆಂಡ್ರಾಯ್ಡ್ 12 ನಲ್ಲಿ ಈ ಫೋನ್ ಕಾರ್ಯನಿರ್ವಹಿಸಲಿದೆಯಂತೆ. 12GB RAM ಮತ್ತು 128GB ಸ್ಟೋರೇಜ್ ಸಾಮರ್ಥ್ಯ ಇರಲಿದೆ. ಮೂಲಗಳ ಪ್ರಕಾರ ಇದು 5000mAh ನ ದೀರ್ಘ ಸಮಯ ಬಾಳಿಕೆ ಬರುವ ಬ್ಯಾಟರಿ ಹೊಂದಿರಲಿದೆ. ಇದಕ್ಕೆ ಪೂರಕವಾಗಿ 120W ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಕೂಡ ಇರಲಿದೆ. ಇನ್​ಡಿಸ್​ಪ್ಲೇ ಫಿಂಗರ್ ಪ್ರಿಂಟ್ ಅಳವಡಿಸಲಾಗಿದೆಯಂತೆ. ಇದರ ಬೆಲೆ ಎಷ್ಟಿರಬಹುದು ಎಂಬ ಮಾಹಿತಿ ಇನ್ನೂ ತಿಳಿದುಬಂದಿಲ್ಲ.