AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

BGMI: ಬ್ಯಾಟಲ್​ಗ್ರೌಂಡ್ಸ್​ ಮೊಬೈಲ್ ಇಂಡಿಯಾ ಭಾರತದಲ್ಲಿ ಬ್ಯಾನ್ ಆಗಿದೆಯೇ?: ಅನೇಕರ ಪ್ರಶ್ನೆಗೆ ಇಲ್ಲಿದೆ ಉತ್ತರ

ಥೇಟ್ ಪಬ್​ಜಿ ರೀತಿಯಲ್ಲೇ ಇರುವ ಬ್ಯಾಟಲ್​ಗ್ರೌಂಡ್ಸ್​ ಮೊಬೈಲ್ ಇಂಡಿಯಾ (Battlegrounds Mobile India) ಎಂಬ ಗೇಮ್ . ಜುಲೈ 2, 2021 ರಂದು ಇದು ಭಾರತದ ಆಂಡ್ರಾಯ್ಡ್ ಬಳಕೆದಾರರಿಗಾಗಿ ಬಿಡುಗಡೆ ಮಾಡಲಾಯಿತು. ಆದರೀಗ BGMI ಕೂಡ ಬ್ಯಾನ್ ಮಾಡಲಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ.

BGMI: ಬ್ಯಾಟಲ್​ಗ್ರೌಂಡ್ಸ್​ ಮೊಬೈಲ್ ಇಂಡಿಯಾ ಭಾರತದಲ್ಲಿ ಬ್ಯಾನ್ ಆಗಿದೆಯೇ?: ಅನೇಕರ ಪ್ರಶ್ನೆಗೆ ಇಲ್ಲಿದೆ ಉತ್ತರ
BGMI
TV9 Web
| Edited By: |

Updated on:Jul 30, 2022 | 12:56 PM

Share

ಕೋವಿಡ್-19 (Covid 19) ಲಾಕ್​ಡೌನ್ ಸಮಯದಲ್ಲಿ ಭಾರತದಲ್ಲಿ ಸಾಕಷ್ಟು ಪ್ರಸಿದ್ಧಿ ಪಡೆದ ಚೀನಾ ಮೂಲದ ಗೇಮಿಂಗ್ ಕಂಪನಿಯ ಪಬ್​ಜಿ ಆಟ ದಿಢೀರ್ ಆಗಿ ಬ್ಯಾನ್ ಆಯಿತು. ಕೇವಲ ಭಾರತದಲ್ಲೇ ತಿಂಗಳಿಗೆ 50 ಮಿಲಿಯನ್​ಗಿಂತಲೂ ಅಧಿಕ ಸಕ್ರಿಯ ಬಳಕೆದಾರರನ್ನು ಹೊಂದಿದ್ದ ಈ ಪಬ್​ಜಿ ಗೇಮ್ (PUBG) ಮಕ್ಕಳ ಮೇಲೆ ನೇರ ಪರಿಣಾಮ ಬೀರಿದ್ದು ಸುಳ್ಳಲ್ಲ. ಇದರ ಜೊತೆಗೆ ಕೇಂದ್ರ ಸರ್ಕಾರ ಚೀನಾ ಮೂಲದ ಆ್ಯಪ್​ಗಳನ್ನು ನಿಷೇಧ ಹೇರಿದ ಕಾರಣ ಪಬ್​ಜಿ ಕೂಡ ಭಾರತದಲ್ಲಿ ಕಣ್ಮರೆಯಾಯಿತು. ಇದರಿಂದ ಬೇಸತ್ತಿದ್ದ ಜನರಿಗೆ ಗೇಮ್ ಡೆವಲಪಿಂಗ್ ಕಂಪನಿ ಕ್ರಾಫ್ಟನ್, ಥೇಟ್ ಪಬ್​ಜಿ ರೀತಿಯಲ್ಲೇ ಇರುವ ಬ್ಯಾಟಲ್​ಗ್ರೌಂಡ್ಸ್​ ಮೊಬೈಲ್ ಇಂಡಿಯಾ (Battlegrounds Mobile India) ಎಂಬ ಹೊಸ ಗೇಮ್ ಅನ್ನು ಪರಿಚಯಿಸಿತು. ಜುಲೈ 2, 2021 ರಂದು ಇದು ಭಾರತದ ಆಂಡ್ರಾಯ್ಡ್ ಬಳಕೆದಾರರಿಗಾಗಿ ಬಿಡುಗಡೆ ಮಾಡಲಾಯಿತು. ಆದರೀಗ BGMI ಕೂಡ ಬ್ಯಾನ್ ಮಾಡಲಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ.

ಹೌದು, ಯುವಕರ ನಿದ್ದೆ ಕೆಡಿಸಿದ್ದ ಬ್ಯಾಟಲ್​ಗ್ರೌಂಡ್ಸ್​ ಮೊಬೈಲ್ ಇಂಡಿಯಾ ಗೇಮ್ ಗೂಗಲ್ ಪ್ಲೇಸ್ಟೋರ್ ಮತ್ತು ಆ್ಯಪಲ್​ನ ಆ್ಯಪ್ ಸ್ಟೋರ್​ನಿಂದ ಕಣ್ಮರೆಯಾಗಿದೆ. ಗುರುವಾರ ರಾತ್ರಿ ಈ ಎರಡೂ ಆ್ಯಪ್ ಸ್ಟೋರ್​ನಿಂದ ಪ್ರಸಿದ್ಧ ಗೇಮ್ ಅನ್ನು ತೆಗೆದು ಹಾಕಲಾಗಿದೆ. ಕೇಂದ್ರ ಸರ್ಕಾರದ ಆದೇಶದ ಮೇರೆಗೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಟೆಕ್ ಗೇಂಟ್ಸ್ ವರದಿ ಮಾಡಿದೆ. ಆದರೆ, ನಿಖರ ಕಾರಣ ಏನು ಎಂಬುದು ಇನ್ನೂ ತಿಳಿದುಬಂದಿಲ್ಲ.

ಕ್ರಾಫ್ಟನ್ ಕೂಡ ಈ ಬಗ್ಗೆ ಮಾಹಿತಿ ನೀಡಿದ್ದು, “ಗೂಗಲ್ ಪ್ಲೇಸ್ಟೋರ್ ಮತ್ತು ಆ್ಯಪಲ್ ಸ್ಟೋರ್​ನಿಂದ BGMI ಅನ್ನು ತೆಗೆದು ಹಾಕಿದ ಬಗ್ಗೆ ಸರ್ಕಾರ ಮತ್ತು ನಮ್ಮ ನಡುವೆ ಯಾವುದೇ ಮಾತುಕತೆ ನಡೆದಿಲ್ಲ,” ಎಂದು ಹೇಳಿದೆ. ಅತ್ತ ಗೂಗಲ್, “ನಮಗೆ ಬಂದ ಆದೇಶದಂತೆ ನಾವು ಕ್ರಮ ಕೈಗೊಂಡಿದ್ದೇವೆ. ಕೆಲ ಡೆವಲಪರ್‌ಗೆ ಸೂಚನೆಯನ್ನು ಕೂಡ ನೀಡಿದ್ದೇವೆ ಮತ್ತು ಭಾರತದಲ್ಲಿ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿರುವ ಅಪ್ಲಿಕೇಶನ್‌ಗೆ ಪ್ರವೇಶವನ್ನು ನಿರ್ಬಂಧಿಸಿದ್ದೇವೆ,” ಎಂದು ಗೂಗಲ್ ವಕ್ತಾರರು ತಿಳಿಸಿದ್ದಾರೆ.

ಇದನ್ನೂ ಓದಿ
Image
Fake App: ಪ್ಲೇಸ್ಟೋರ್​​ನಲ್ಲಿ ಹಣ ಕದಿಯುವ ಫೇಕ್ ಆ್ಯಪ್ ಪತ್ತೆ: ಇನ್​ಸ್ಟಾಲ್ ಆಗಿದ್ರೆ ತಕ್ಷಣವೇ ಡಿಲೀಟ್ ಮಾಡಿ
Image
Asus Zenfone 9: ಬಲಿಷ್ಠ ಪ್ರೊಸೆಸರ್, ಅದ್ಭುತ ಕ್ಯಾಮೆರಾ: ಏಸಸ್‌ ಜೆನ್‌ಫೋನ್‌ 9 ಬಿಡುಗಡೆ, ಬೆಲೆ ಎಷ್ಟು?
Image
Amazon: ಅಮೆಜಾನ್ ಪ್ರೈಮ್‌ ಡೇ ಸೇಲ್​ನಲ್ಲಿ ಭರ್ಜರಿ ಮಾರಾಟ: ಮಂಗಳೂರಿನಿಂದ ಅತಿ ಹೆಚ್ಚು ಆರ್ಡರ್
Image
Tecno Spark 9T: 5000mAh ಬ್ಯಾಟರಿ, 50MP ಕ್ಯಾಮೆರಾ: ಕೇವಲ 9,299 ರೂ. ಗೆ ಹೊಸ ಸ್ಮಾರ್ಟ್​​ಫೋನ್ ಬಿಡುಗಡೆ

ಕೇಂದ್ರ ಸರ್ಕಾರ ಗೂಗಲ್​ಗೆ ಮತ್ತು ಆ್ಯಪಲ್​ಗೆ ಈ ಗೇಮ್ ಅನ್ನು ತೆಗೆದುಹಾಕುವಂತೆ ಆದೇಶ ಹೊರಡಿಸಿದ್ದಲ್ಲಿ ಅಚ್ಚರಿಯೇನಿಲ್ಲ. ಯಾಕೆಂದರೆ ಇತ್ತೀಚೆಗಷ್ಟೆ ರಾಜ್ಯಸಭೆಯಲ್ಲಿ ಮಕ್ಕಳ ಮೇಳೆ ಪರಿಣಾಮ ಬೀರುವಂತಹ ಗೇಮ್​ಗಳನ್ನು ನಿಷೇಧ ಮಾಡುವ ಕುರಿತು ಚರ್ಚೆ ನಡೆದಿತ್ತು. ಅಲ್ಲದೆ ಬ್ಯಾಟರ್​ಗ್ರೌಂಡ್ ಮೊಬೈಲ್ ಆಟವನ್ನು ಆಡಬೇಡ ಎಂದಿದ್ದಕ್ಕೆ ಮಗಳು ತಾಯಿಯನ್ನೇ ಕೊಂದಿದ್ದ ಘಟನೆ ಕೂಡ ದೇಶದಲ್ಲಿ ದೊಡ್ಡ ಮಟ್ಟದ ಸದ್ದು ಮಾಡಿತ್ತು.

ಬ್ಯಾನ್ ಆಗಿದೆಯೇ?:

ಬ್ಯಾಟರ್ ಗ್ರೌಂಡ್ ಮೊಬೈಲ್ ಇಂಡಿಯಾ ಗೇಮ್ ಭಾರತದಲ್ಲಿ ನಿಷೇಧವಾಗಿಲ್ಲ. ನಿಷೇಧ ಮಾಡುವ ಕುರಿತ ಯಾವುದೇ ನಿರ್ಧಾರವನ್ನು ಕೇಂದ್ರ ಸರ್ಕಾರ ಇನ್ನೂ ಕೈಗೊಂಡಿಲ್ಲ. ಈಗಾಗಲೇ ಈ ಗೇಮ್ ಅನ್ನು ಇನ್​ಸ್ಟಾಲ್ ಮಾಡಿ ಆಡುತ್ತಿರುವವರಿಗೆ ಯಾವುದೇ ತೊಂದರೆ ಕೂಡ ಆಗಿಲ್ಲ. BGMI ರೀತಿಯಲ್ಲಿ ಪಬ್​ಜಿ ನ್ಯೂ ಸ್ಟೇಟ್, ಅಲೆಪ್ಸ್ ಲೆಜೆಂಡ್ ಮತ್ತು ಕಾಲ್ ಆಫ್ ಡ್ಯೂಟಿ ಎಂಬ ಗೇಮ್ ಕೂಡ ಇದೆ.

Published On - 12:55 pm, Sat, 30 July 22

ಮನ್‌ ಕಿ ಬಾತ್‌ನಲ್ಲಿ ಕನ್ನಡ ಭಾಷೆ ಬಗ್ಗೆ ಪ್ರಧಾನಿ ಮೋದಿ ಶ್ಲಾಘನೆ
ಮನ್‌ ಕಿ ಬಾತ್‌ನಲ್ಲಿ ಕನ್ನಡ ಭಾಷೆ ಬಗ್ಗೆ ಪ್ರಧಾನಿ ಮೋದಿ ಶ್ಲಾಘನೆ
ಒಲಿಂಪಿಕ್ಸ್ ಹೀರೋ ನೀರಜ್ ಚೋಪ್ರಾ ಆರತಕ್ಷತೆಯಲ್ಲಿ ಪ್ರಧಾನಿ ಮೋದಿ ಭಾಗಿ
ಒಲಿಂಪಿಕ್ಸ್ ಹೀರೋ ನೀರಜ್ ಚೋಪ್ರಾ ಆರತಕ್ಷತೆಯಲ್ಲಿ ಪ್ರಧಾನಿ ಮೋದಿ ಭಾಗಿ
ಮನೆಗಳ ತೆರವು: ಹೈಕಮಾಂಡ್​​ ಲೀಡರ್ ಮಧ್ಯಪ್ರವೇಶಕ್ಕೆ ಡಿಕೆಶಿ ಹೇಳಿದ್ದಿಷ್ಟು
ಮನೆಗಳ ತೆರವು: ಹೈಕಮಾಂಡ್​​ ಲೀಡರ್ ಮಧ್ಯಪ್ರವೇಶಕ್ಕೆ ಡಿಕೆಶಿ ಹೇಳಿದ್ದಿಷ್ಟು
ಪತ್ನಿ ಕುಟುಂಬಸ್ಥರ ಸುಳ್ಳು ಆರೋಪಕ್ಕೆ ಹೋಯ್ತು ಜೀವ: ಕಣ್ಣೀರಿಟ್ಟ ಕೆಲಸಗಾರ
ಪತ್ನಿ ಕುಟುಂಬಸ್ಥರ ಸುಳ್ಳು ಆರೋಪಕ್ಕೆ ಹೋಯ್ತು ಜೀವ: ಕಣ್ಣೀರಿಟ್ಟ ಕೆಲಸಗಾರ
ಹೊಸ ವರ್ಷಕ್ಕೆ ಬೆಂಗಳೂರು ಸಜ್ಜು; ನಗರಾದ್ಯಂತ ಪೊಲೀಸ್ ಕಣ್ಗಾವಲು
ಹೊಸ ವರ್ಷಕ್ಕೆ ಬೆಂಗಳೂರು ಸಜ್ಜು; ನಗರಾದ್ಯಂತ ಪೊಲೀಸ್ ಕಣ್ಗಾವಲು
ಮಹಾರಾಷ್ಟ್ರ ಪೊಲೀಸರ ಹೇಳಿಕೆ ಸತ್ಯಕ್ಕೆ ದೂರವಾಗಿದೆ; ಜಿ ಪರಮೇಶ್ವರ್
ಮಹಾರಾಷ್ಟ್ರ ಪೊಲೀಸರ ಹೇಳಿಕೆ ಸತ್ಯಕ್ಕೆ ದೂರವಾಗಿದೆ; ಜಿ ಪರಮೇಶ್ವರ್
ಮತ್ತೊಂದು ಬಿಗ್ ಎಲಿಮಿನೇಷನ್: ಸ್ಪಂದನಾ-ಮಾಳು ನಡುವೆ ಯಾರು ಹೊರಗೆ?
ಮತ್ತೊಂದು ಬಿಗ್ ಎಲಿಮಿನೇಷನ್: ಸ್ಪಂದನಾ-ಮಾಳು ನಡುವೆ ಯಾರು ಹೊರಗೆ?
ಹಾಲು ಕುಡಿಯಬೇಕಿದ್ದ 5 ವರ್ಷದ ಮೊಮ್ಮಗನಿಗೆ ಮದ್ಯ ಕುಡಿಸಿದ ಅಜ್ಜ!
ಹಾಲು ಕುಡಿಯಬೇಕಿದ್ದ 5 ವರ್ಷದ ಮೊಮ್ಮಗನಿಗೆ ಮದ್ಯ ಕುಡಿಸಿದ ಅಜ್ಜ!
ಟಿ20 ಕ್ರಿಕೆಟ್​ನಲ್ಲಿ ಅತೀ ವೇಗದ ಅರ್ಧಶತಕ ಸಿಡಿಸಿದ ಲಾರಾ ಹ್ಯಾರಿಸ್
ಟಿ20 ಕ್ರಿಕೆಟ್​ನಲ್ಲಿ ಅತೀ ವೇಗದ ಅರ್ಧಶತಕ ಸಿಡಿಸಿದ ಲಾರಾ ಹ್ಯಾರಿಸ್
ಅಲ್ಲಾ ತೆಗೆದುಕೊಳ್ಳುವ ನಿರ್ಧಾರವೇ ಅಂತಿಮ: ಮುಫ್ತಿ
ಅಲ್ಲಾ ತೆಗೆದುಕೊಳ್ಳುವ ನಿರ್ಧಾರವೇ ಅಂತಿಮ: ಮುಫ್ತಿ