BGMI: ಪ್ಲೇಸ್ಟೋರ್, ಆ್ಯಪಲ್ ಸ್ಟೋರ್​ನಿಂದ ಬ್ಯಾಟಲ್​ಗ್ರೌಂಡ್ಸ್​ ಮೊಬೈಲ್ ಇಂಡಿಯಾ ಬ್ಯಾನ್: ಕಾರಣವೇನು?

Battlegrounds Mobile India: ಬ್ಯಾಟಲ್​ಗ್ರೌಂಡ್ಸ್​ ಮೊಬೈಲ್ ಇಂಡಿಯಾ ಗೇಮ್ ಗೂಗಲ್ ಪ್ಲೇಸ್ಟೋರ್ ಮತ್ತು ಆ್ಯಪಲ್​ನ ಆ್ಯಪ್ ಸ್ಟೋರ್​ನಿಂದ ತೆಗೆದು ಹಾಕಲಾಗಿದೆ. ಕೇಂದ್ರ ಸರ್ಕಾರದ ಆದೇಶದ ಮೇರೆಗೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಟೆಕ್ ಗೇಂಟ್ಸ್ ವರದಿ ಮಾಡಿದೆ.

BGMI: ಪ್ಲೇಸ್ಟೋರ್, ಆ್ಯಪಲ್ ಸ್ಟೋರ್​ನಿಂದ ಬ್ಯಾಟಲ್​ಗ್ರೌಂಡ್ಸ್​ ಮೊಬೈಲ್ ಇಂಡಿಯಾ ಬ್ಯಾನ್: ಕಾರಣವೇನು?
Battlegrounds Mobile India
Follow us
TV9 Web
| Updated By: Vinay Bhat

Updated on:Jul 29, 2022 | 12:15 PM

ಯುವಕರ ನಿದ್ದೆ ಕೆಡಿಸಿದ್ದ ಬ್ಯಾಟಲ್​ಗ್ರೌಂಡ್ಸ್​ ಮೊಬೈಲ್ ಇಂಡಿಯಾ ಗೇಮ್ ಗೂಗಲ್ ಪ್ಲೇಸ್ಟೋರ್ ಮತ್ತು ಆ್ಯಪಲ್​ನ ಆ್ಯಪ್ ಸ್ಟೋರ್​ನಿಂದ ಕಣ್ಮರೆಯಾಗಿದೆ. ಗುರುವಾರ ರಾತ್ರಿ ಈ ಎರಡೂ ಆ್ಯಪ್ ಸ್ಟೋರ್​ನಿಂದ ಪ್ರಸಿದ್ಧ ಗೇಮ್ ಅನ್ನು ತೆಗೆದು ಹಾಕಲಾಗಿದೆ. ಕೇಂದ್ರ ಸರ್ಕಾರದ ಆದೇಶದ ಮೇರೆಗೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಟೆಕ್ ಗೇಂಟ್ಸ್ ವರದಿ ಮಾಡಿದೆ. ಆದರೆ, ನಿಖರ ಕಾರಣ ಏನು ಎಂಬುದು ಇನ್ನೂ ತಿಳಿದುಬಂದಿಲ್ಲ. ಆದರೆ, ಈಗಾಗಲೇ ಈ ಗೇಮ್ ಅನ್ನು ಇನ್​ಸ್ಟಾಲ್ ಮಾಡಿ ಆಡುತ್ತಿರುವವರಿಗೆ ಯಾವುದೇ ತೊಂದರೆ ಇಲ್ಲ ಎಂದು ಹೇಳಲಾಗಿದೆ.

ಗೇಮ್ ಡೆವಲಪಿಂಗ್ ಕಂಪನಿ ಕ್ರಾಫ್ಟನ್ ಈ ಬ್ಯಾಟಲ್​ಗ್ರೌಂಡ್ಸ್​ ಮೊಬೈಲ್ ಇಂಡಿಯಾವನ್ನು ಭಾರತಕ್ಕೆ ಪರಿಚಯಿಸಿತು. ದೇಶದಲ್ಲಿ ಪಬ್ಜಿ ನಿಷೇಧವಾದ ಬಳಿಕ ಹುಟ್ಟುಕೊಂಡ ನೂತನ ವರ್ಷನ್ ಇದಾಗಿದೆ. ಜುಲೈ 2, 2021 ರಂದು ಇದು ಭಾರತದ ಆಂಡ್ರಾಯ್ಡ್ ಬಳಕೆದಾರರಿಗಾಗಿ ಬಿಡುಗಡೆ ಮಾಡಲಾಯಿತು.

ನಮಗೆ ಬಂದ ಆದೇಶದಂತೆ ನಾವು ಕ್ರಮ ಕೈಗೊಂಡಿದ್ದೇವೆ. ಕೆಲ ಡೆವಲಪರ್‌ಗೆ ಸೂಚನೆಯನ್ನು ಕೂಡ ನೀಡಿದ್ದೇವೆ ಮತ್ತು ಭಾರತದಲ್ಲಿ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿರುವ ಅಪ್ಲಿಕೇಶನ್‌ಗೆ ಪ್ರವೇಶವನ್ನು ನಿರ್ಬಂಧಿಸಿದ್ದೇವೆ,ಎಂದು ಗೂಗಲ್ ವಕ್ತಾರರು ಐಎಎನ್‌ಎಸ್‌ಗೆ ತಿಳಿಸಿದ್ದಾರೆ. ಆ್ಯಪಲ್ ಕೂಡ ತನ್ನ ಆ್ಪ್ಯ ಸ್ಟೋರ್‌ನಿಂದ ಈ ಅಪ್ಲಿಕೇಶನ್ ಅನ್ನು ತೆಗೆದುಹಾಕಿದೆ. ಆದರೆ, ಕ್ರಾಫ್ಟನ್ ಇನ್ನೂ ಈ ಬೆಳವಣಿಗೆಯ ಬಗ್ಗೆ ಪ್ರತಿಕ್ರಿಯಿಸಲಿಲ್ಲ.

ಇದನ್ನೂ ಓದಿ
Image
Google Pixel 6a: ಫ್ಲಿಪ್​ಕಾರ್ಟ್​​ನಲ್ಲಿ ಬಹುನಿರೀಕ್ಷಿತ ಗೂಗಲ್‌ ಪಿಕ್ಸೆಲ್‌ 6a ಖರೀದಿಗೆ ಲಭ್ಯ: ಭರ್ಜರಿ ಸೇಲ್ ಖಚಿತ
Image
ಉದ್ಯಮದಲ್ಲಿ ಇದೇ ಮೊದಲ ಬಾರಿ: Refyne ನಿಂದ ವಾಟ್ಸ್​ಆ್ಯಪ್​ನಲ್ಲಿ ಸ್ಯಾಲರಿ ಆನ್-ಡಿಮ್ಯಾಂಡ್
Image
Redmi 10A Sport: ಬಜೆಟ್ ಬೆಲೆ, ಬಂಪರ್ ಫೀಚರ್: ಭಾರತದಲ್ಲಿ ರೆಡ್ಮಿಯ ಹೊಸ ಸ್ಮಾರ್ಟ್​ಫೋನ್ ಬಿಡುಗಡೆ
Image
Google Meet: ಗೂಗಲ್ ಮೀಟ್​ನಲ್ಲಿ ಹೊಸ ವೈಶಿಷ್ಟ್ಯ: ಯೂಟ್ಯೂಬ್ ಮೂಲಕ ಲೈವ್​ಸ್ಟ್ರೀಮ್ ಮಾಡಿ

ಈ ತಿಂಗಳ ಆರಂಭದಲ್ಲಿ ಬ್ಯಾಟಲ್​ಗ್ರೌಂಡ್ಸ್​ ಮೊಬೈಲ್ ಇಂಡಿಯಾ ನಾವು 100 ಮಿಲಿಯನ್ ಬಳಕೆದಾರರನ್ನು ತಲುಪಿದ್ದೇವೆ ಎಂಬ ಮಾಹಿತಿ ನೀಡಿತ್ತು. ಕಳೆದ ಒಂದು ವರ್ಷದಿಂದ ಭಾರತೀಯರು ಅತಿ ಹೆಚ್ಚು ಇಷ್ಟಪಟ್ಟ ಗೇಮ್ ಇದಾಗಿದೆ ಎಂದು ಹೇಳಿತ್ತು. ಕಳೆದ ವರ್ಷ ಈ ಗೇಮ್ ಅನ್ನು ಅಭಿವೃದ್ದಿ ಪಡಿಸಲು ಕ್ರಾಫ್ಟನ್ ಕಂಪನಿ ಸಾಕಷ್ಟು ಹಣ ಸುರಿದಿತ್ತು. ಗೇಮರ್​ಗಳಿಗೆ ನೈಜ್ಯ ಅನುಭವವನ್ನ ನೀಡುವುದು ಇದರ ಉದ್ದೇಶವಾಗಿದೆ ಎಂದು ಹೇಳಿತ್ತು. ಆದರೀಗ ಪ್ರಸಿದ್ಧ ಗೇಮ್ ಗೂಗಲ್ ಪ್ಲೇ ಸ್ಟೋರ್​ನಿಂದ ಮತ್ತು ಆ್ಯಪಲ್ ಸ್ಟೋರ್​ನಿಂದ ನಿಷೇಧವಾಗಿದೆ.

Published On - 12:15 pm, Fri, 29 July 22

Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ