Infinix Smart 6 Plus: 8,299 ರೂಪಾಯಿಯ ಇನ್ಫಿನಿಕ್ಸ್ ಸ್ಮಾರ್ಟ್​ 6 ಪ್ಲಸ್ ಸ್ಮಾರ್ಟ್​​ಫೋನ್ ಹೇಗಿದೆ?: ಖರೀದಿಸಬಹುದೇ?

ಇತ್ತೀಚೆಗಷ್ಟೆ ಇನ್ಫಿನಿಕ್ಸ್‌ ಸಂಸ್ಥೆ ಭಾರತದಲ್ಲಿ ಇನ್ಫಿನಿಕ್ಸ್‌ ಸ್ಮಾರ್ಟ್‌ 6 ಪ್ಲಸ್ ಸ್ಮಾರ್ಟ್‌ಫೋನ್‌ (Infinix Smart 6 Plus) ಅನ್ನು ಬಿಡುಗಡೆ ಮಾಡಿತ್ತು. ಇದು ಖರೀದಿಗೆ ಕೂಡ ಸಿಗುತ್ತಿದೆ. ಹಾಗಾದ್ರೆ ಈ ಫೋನಿನ ವಿಶೇಷತೆ ಏನು? ಬೆಲೆ ಎಷ್ಟು?, ಖರೀದಿಸಬಹುದೇ? ಎಂಬುದನ್ನು ನೋಡೋಣ.

Infinix Smart 6 Plus: 8,299 ರೂಪಾಯಿಯ ಇನ್ಫಿನಿಕ್ಸ್ ಸ್ಮಾರ್ಟ್​ 6 ಪ್ಲಸ್ ಸ್ಮಾರ್ಟ್​​ಫೋನ್ ಹೇಗಿದೆ?: ಖರೀದಿಸಬಹುದೇ?
Infinix Smart 6 Plus
Follow us
TV9 Web
| Updated By: Vinay Bhat

Updated on: Aug 05, 2022 | 6:45 AM

ಭಾರತದಲ್ಲಿ ಬಜೆಟ್ ಬೆಲೆಯ ಫೋನುಗಳಿಗೆ (Budget Smartphone) ಈಗ ಎಲ್ಲಿಲ್ಲದ ಬೇಡಿಕೆ. 15,000, 10,000 ರೂ. ಒಳಗೆ ಆಕರ್ಷಕ ಫೀಚರ್​ಗಳ ಫೋನ್ ಬಿಡುಗಡೆ ಆಯಿತು ಎಂದಾದರೆ ಅದು ಭರ್ಜರಿ ಸೇಲ್ ಕಾಣುತ್ತದೆ. ಇತ್ತೀಚೆಗಷ್ಟೆ ನಡೆದ ಸಮೀಕ್ಷೆಯೊಂದರಲ್ಲಿ ಬಹುಪಾಲು ಭಾರತೀಯರು ಒಂದು ಫೋನನ್ನು ಒಂದು ವರ್ಷ ಕೂಡ ಉಪಯೋಗಿಸುವುದಿಲ್ಲ ಎಂಬ ಮಾಹಿತಿ ಬಹಿರಂಗವಾಗಿತ್ತು. ಇದಕ್ಕೆ ಕಾರಣ ಅತ್ಯಂತ ಕಡಿಮೆ ಬೆಲೆಗೆ ಸ್ಮಾರ್ಟ್​​ಫೋನ್​ಗಳು ಕೈಗೆ ಸಿಗುತ್ತಿರುವುದು. ಈ ರೀತಿಯ ಫೋನ್​ಗಳನ್ನು ಬಿಡುಗಡೆ ಮಾಡುವುದರಲ್ಲಿ ಇನ್ಫಿನಿಕ್ಸ್ (Infinix) ಎತ್ತಿದ ಕೈ. ಈಗಾಗಲೇ ಕೈಗೆಟುವ ದರಕ್ಕೆ ಅನೇಕ ಆಕರ್ಷಕ ಫೋನ್​ಗಳನ್ನು ಬಿಡುಗಡೆ ಮಾಡಿ ಯಶಸ್ಸು ಕಂಡಿದೆ. ಇತ್ತೀಚೆಗಷ್ಟೆ ಸಂಸ್ಥೆ ಭಾರತದಲ್ಲಿ ಇನ್ಫಿನಿಕ್ಸ್‌ ಸ್ಮಾರ್ಟ್‌ 6 ಪ್ಲಸ್ ಸ್ಮಾರ್ಟ್‌ಫೋನ್‌ (Infinix Smart 6 Plus) ಅನ್ನು ಬಿಡುಗಡೆ ಮಾಡಿತ್ತು. ಇದು ಖರೀದಿಗೆ ಕೂಡ ಸಿಗುತ್ತಿದೆ. ಹಾಗಾದ್ರೆ ಈ ಫೋನಿನ ವಿಶೇಷತೆ ಏನು? ಬೆಲೆ ಎಷ್ಟು?, ಖರೀದಿಸಬಹುದೇ? ಎಂಬುದನ್ನು ನೋಡೋಣ.

  1. ಇನ್ಫಿನಿಕ್ಸ್‌ ಸ್ಮಾರ್ಟ್‌ 6 ಪ್ಲಸ್ ಸ್ಮಾರ್ಟ್‌ಫೋನ್‌ ಒಂದು ಆಯ್ಕೆಯಲ್ಲಷ್ಟೆ ಅನಾವರಣಗೊಂಡಿದೆ. ಇದರ 3GB RAM + 64GB ಸ್ಟೋರೇಜ್‌ ವೇರಿಯಂಟ್‌ ಬೆಲೆಯು ಕೇವಲ 8,299 ರೂ. ಆಗಿದೆ. ಇ ಕಾಮರ್ಸ್ ತಾಣವಾದ ಫ್ಲಿಪ್‌ಕಾರ್ಟ್‌ನಲ್ಲಿ ಖರೀದಿಗೆ ಲಭ್ಯವಾಗಲಿದೆ.
  2. ಇದು 6.82 ಇಂಚಿನ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿದ್ದು, 1600 x 720 ಪಿಕ್ಸಲ್‌ ರೆಸಲ್ಯೂಶನ್ ಸಾಮರ್ಥ್ಯವನ್ನು ಹೊಂದಿದೆ.
  3. ಬೆಲೆಗೆ ತಕ್ಕಂತೆ ಮೀಡಿಯಾ ಟೆಕ್‌ ಹಿಲಿಯೋ G25 SoC ಪ್ರೊಸೆಸರ್‌ ಬಲವನ್ನು ಹೊಂದಿದ್ದು, ಆಂಡ್ರಾಯ್ಡ್‌ 12 (Go ಆವೃತ್ತಿ) ಸಪೋರ್ಟ್‌ ಪಡೆದಿದೆ.
  4. ಇನ್ಫಿನಿಕ್ಸ್‌ ಸ್ಮಾರ್ಟ್‌ 6 ಪ್ಲಸ್ ಸ್ಮಾರ್ಟ್‌ಫೋನ್‌ ಡ್ಯುಯಲ್ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 8 ಮೆಗಾ ಪಿಕ್ಸೆಲ್ ಸೆನ್ಸಾರ್‌ ಹೊಂದಿದೆ. ಜೊತೆಗೆ ಡಬಲ್ LED ಫ್ಲ್ಯಾಷ್‌ನೊಂದಿಗೆ ಒಳಗೊಂಡಿದೆ.
  5. ಇದನ್ನೂ ಓದಿ
    Image
    Google: ಜೂನ್​ನಲ್ಲಿ 11 ಲಕ್ಷಕ್ಕೂ ಅಧಿಕ ಕಂಟೆಂಟ್ ಅನ್ನು ತೆಗೆದು ಹಾಕಿದ ಗೂಗಲ್
    Image
    Nokia 8210 4G: ಧೂಳೆಬ್ಬಿಸುತ್ತಿದೆ ನೋಕಿಯಾ 8210: ಕ್ಲಾಸಿಕ್ ಫೋನ್​ನೊಂದಿಗೆ ಮತ್ತೆ ಬಂದ ನೋಕಿಯಾ
    Image
    OnePlus 10T: 150W ಫಾಸ್ಟ್ ಚಾರ್ಜರ್​ನ ಒನ್​ಪ್ಲಸ್ 10T ಸ್ಮಾರ್ಟ್​​ಫೋನ್ ಭಾರತದಲ್ಲಿ ಬಿಡುಗಡೆ: ಬೆಲೆ ಎಷ್ಟು?
    Image
    Amazon Great Freedom Festival 2022 Sale: ಅಮೆಜಾನ್​ನಿಂದ ಸರ್​ಪ್ರೈಸ್: ನೂತನ ಸೇಲ್​ಗೂ ಮುನ್ನ ನೀಡಿದೆ ಬಂಪರ್ ಆಫರ್
  6. ಇದರಲ್ಲಿರುವ ಎರಡನೇ ಕ್ಯಾಮೆರಾ ಬೇಸಿಕ್ ಸೆನ್ಸಾರ್ ಹೊಂದಿದ್ದು, ಜೊತೆಗೆ ಹಿಂಭಾಗದಲ್ಲಿ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅನ್ನು ನೀಡಲಾಗಿದೆ. 5 ಮೆಗಾ ಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ. AI ಫೇಸ್ ಅನ್‌ಲಾಕ್ ಅನ್ನು ಸಹ ಬೆಂಬಲಿಸುತ್ತದೆ.
  7. ದೀರ್ಘ ಸಮಯ ಬಾಳಿಕೆ ಬರುವ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದಕ್ಕೆ ಪೂರಕವಾಗಿ 10W ಚಾರ್ಜಿಂಗ್ ಸಪೋರ್ಟ್‌ ಪಡೆದಿದೆ. 4G LTE ಸಫೊರ್ಟ್​ ನೀಡಲಾಗಿದೆ.
  8. ಖರೀದಿಸಬಹುದ?: ನೀವು ಕೈಗೆಟಕುವ ದರಕ್ಕೆ ಒಂದೊಳ್ಳೆ ಫೋನನ್ನು ಹುಡುಕುತ್ತಿದ್ದರೆ ಇನ್ಫಿನಿಕ್ಸ್‌ ಸ್ಮಾರ್ಟ್‌ 6 ಪ್ಲಸ್ ಉತ್ತಮ ಆಯ್ಕೆ. ಇದರಲ್ಲಿ ವಾವ್ ಎನ್ನವಂತಹ ಫೀಚರ್ಸ್​ ಇಲ್ಲ. ಆದರೆ, ಉತ್ತಮ ಬ್ಯಾಟರಿ ಹಾಗೂ ಡಿಸ್ ಪ್ಲೇ, ಸಾಮಾನ್ಯ ಕ್ಯಾಮೆರಾ ನೀಡಲಾಗಿದೆ. ನೀವು ಗೇಮಿಂಗ್ ಪ್ರಿಯರಾಗಿದ್ದಲ್ಲಿ ದೊಡ್ಡ ಮಟ್ಟದ ಆಟಕ್ಕೆ ಇದು ಸಹಕರಿಸುವುದಿಲ್ಲ.