Infinix Note: ಇನ್ಫಿನಿಕ್ಸ್​ನಿಂದ ಎರಡು ಬಜೆಟ್ ಬೆಲೆಯ ಆಕರ್ಷಕ ಸ್ಮಾರ್ಟ್​ಫೋನ್ ಬಿಡುಗಡೆ: ಹೇಗಿದೆ?

ಇನ್ಫಿನಿಕ್ಸ್‌ ನೋಟ್‌ 11 ಸದ್ಯಕ್ಕೆ ಭಾರತದಲ್ಲಿ ಒಂದು ಮಾದರಿಯಲ್ಲಷ್ಟೆ ಮಾರಾಟ ಆಗುತ್ತಿದೆ. ಇದರ 4GB RAM ಮತ್ತು 64GB ಸ್ಟೋರೇಜ್ ಆಯ್ಕೆಯ ಬೆಲೆ 11,999 ರೂ. ಆಗಿದೆ. ಇನ್ಫಿನಿಕ್ಸ್‌ ನೋಟ್‌ 11ಎಸ್ ಎರಡು ವೇರಿಯೆಂಟ್​ನಲ್ಲಿ ಸೇಲ್ ಆಗುತ್ತಿದೆ.

Infinix Note: ಇನ್ಫಿನಿಕ್ಸ್​ನಿಂದ ಎರಡು ಬಜೆಟ್ ಬೆಲೆಯ ಆಕರ್ಷಕ ಸ್ಮಾರ್ಟ್​ಫೋನ್ ಬಿಡುಗಡೆ: ಹೇಗಿದೆ?
Infinix Note 11 and Infinix Note 11S
Follow us
TV9 Web
| Updated By: Vinay Bhat

Updated on: Dec 13, 2021 | 2:39 PM

ಸ್ಮಾರ್ಟ್​ಫೋನ್ ಮಾರುಕಟ್ಟೆಯಲ್ಲಿ ಬಜೆಟ್ ಬೆಲೆಯ ಮೊಬೈಲ್​ಗಳಿಂದಲೇ ಸಾಕಷ್ಟು ಪ್ರಸಿದ್ದಿ ಪಡೆದಿರುವ ಇನ್ಫಿನಿಕ್ಸ್‌ ಕಂಪನಿ (Infinix) ಇದೀಗ ತನ್ನ ಎರಡು ಹೊಸ ಸ್ಮಾರ್ಟ್​ಫೋನ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಇನ್ಫಿನಿಕ್ಸ್‌ ನೋಟ್‌ 11 (Infinix Note 11) ಮತ್ತು ಇನ್ಫಿನಿಕ್ಸ್‌ ನೋಟ್‌ 11ಎಸ್ (Infinix Note 11S) ಫೋನ್ ಇಂದು ದೇಶದಲ್ಲಿ ಅನಾವರಣಗೊಂಡಿದೆ. ಈ ಸ್ಮಾರ್ಟ್‌ಫೋನ್‌ (Smartphone) 5000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, ಮೀಡಿಯಾಟೆಕ್‌ ಹಿಲಿಯೋ ಪ್ರೊಸೆಸರ್‌, ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಸೇರಿದಂತೆ ಅನೇಕ ಫೀಚರ್​ಗಳಿಂದ ಕೂಡಿದೆ.

ಇನ್ಫಿನಿಕ್ಸ್‌ ನೋಟ್‌ 11 ಸದ್ಯಕ್ಕೆ ಭಾರತದಲ್ಲಿ ಒಂದು ಮಾದರಿಯಲ್ಲಷ್ಟೆ ಮಾರಾಟ ಆಗುತ್ತಿದೆ. ಇದರ 4GB RAM ಮತ್ತು 64GB ಸ್ಟೋರೇಜ್ ಆಯ್ಕೆಯ ಬೆಲೆ 11,999 ರೂ. ಆಗಿದೆ. ಈ ಫೋನ್ ಡಿಸೆಂಬರ್ 23 ರಿಂದ ಫ್ಲಿಪ್​ಕಾರ್ಟ್​ನಲ್ಲಿ ಖರೀದಿಗೆ ಸಿಗಲಿದೆ. ಇನ್ನು ಇನ್ಫಿನಿಕ್ಸ್‌ ನೋಟ್‌ 11ಎಸ್ ಎರಡು ವೇರಿಯೆಂಟ್​ನಲ್ಲಿ ಸೇಲ್ ಆಗುತ್ತಿದೆ. ಇದರ 6GB RAM ಮತ್ತು 64GB ಸ್ಟೋರೇಜ್ ಹಾಗೂ 8GB RAM ಮತ್ತು 128GB ಆಯ್ಕೆಗೆ ಕ್ರಮವಾಗಿ 12,999 ರೂ. ಮತ್ತು 14,999 ರೂ. ನಿಗದಿ ಮಾಡಲಾಗಿದೆ. ಇದು ಡಿಸೆಂಬರ್ 20 ರಿಂದ ಫ್ಲಿಪ್​ಕಾರ್ಟ್​ನಲ್ಲಿ ಖರೀದಿಗೆ ಸಿಗುತ್ತದೆ.

ಇನ್ಫಿನಿಕ್ಸ್‌ ನೋಟ್‌ 11 ಈ ಸ್ಮಾರ್ಟ್‌ಫೋನ್‌ 1080 x 2400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.7-ಇಂಚಿನ FHD+ ವಿವಿಡ್ AMOLED ಡಿಸ್ಪ್ಲೇಯನ್ನು ಹೊಂದಿದೆಯಂತೆ. ಈ ಡಿಸ್‌ಪ್ಲೇ 20:9 ರಚನೆಯ ಅನುಪಾತವನ್ನು ಪಡೆದಿದೆ. ಇದಲ್ಲದೆ ಈ ಡಿಸ್‌ಪ್ಲೇ 393 ppi ಸಾಂದ್ರತೆ ಹೊಂದಿದ್ದು, 60Hz ರಿಫ್ರೆಶ್ ರೇಟ್‌ ಅನ್ನು ಒಳಗೊಂಡಿದೆ. ಮೀಡಿಯಾಟೆಕ್‌ ಹಿಲಿಯೋ G88 ಪ್ರೊಸೆಸರ್‌ನಿಂದ ಚಾಲಿತವಾಗುತ್ತದೆ. ಇದು ಆಂಡ್ರಾಯ್ಡ್‌ 11 ನಲ್ಲಿ ರನ್ ಆಗುತ್ತದೆ.

ಇನ್ಫಿನಿಕ್ಸ್‌ ನೋಟ್‌ 11 ಸ್ಮಾರ್ಟ್‌ಫೋನ್‌ ಟ್ರಿಪಲ್ ರಿಯರ್‌ ಕ್ಯಾಮೆರಾ ಸೆಟಪ್ ಅನ್ನು ಒಳಗೊಂಡಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ ಕ್ವಾಡ್ LED ಜೊತೆಗೆ 50-ಮೆಗಾಪಿಕ್ಸೆಲ್ ಸೆನ್ಸಾರ್‌ ಅನ್ನು ಒಳಗೊಂಡಿದೆ. ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್‌ ಸೆನ್ಸಾರ್‌ f/2.4 ಲೆನ್ಸ್‌ ಮತ್ತು ಮೂರನೇ ಕ್ಯಾಮೆರಾ QVGA ಸೆನ್ಸಾರ್‌ ಪಡೆದುಕೊಂಡಿದೆ. ಇದಲ್ಲದೆ 16 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಅಳವಡಿಸಲಾಗಿದೆ.

ಈ ಸ್ಮಾರ್ಟ್‌ಫೋನ್‌ 5000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 33W ವೇಗದ ಚಾರ್ಜಿಂಗ್‌ ಅನ್ನು ಬೆಂಬಲಿಸುತ್ತದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಹಾಟ್‌ಸ್ಪಾಟ್‌, ಬ್ಲೂಟೂತ್‌, ವೈಫೈ USB ಟೈಪ್ C 2.0, USB ಆನ್ ದಿ ಗೋ ಅನ್ನು ಬೆಂಬಲಿಸಲಿದೆ. ಇದರೊಂದಿಗೆ ಫಿಂಗರ್‌ಪ್ರಿಂಟ್ (ಸೈಡ್-ಮೌಂಟೆಡ್), ಅಕ್ಸೆಲೆರೊಮೀಟರ್, ಗೈರೊ ಸೆನ್ಸಾರ್‌, ಪ್ರಾಕ್ಸಿಮಿಟಿ ಸೆನ್ಸಾರ್​ನಿಂದ ಆವೃತವಾಗಿದೆ.

ಇನ್ಫಿನಿಕ್ಸ್‌ ನೋಟ್‌ 11ಎಸ್ 6.95 ಇಂಚಿನ ಡಿಸ್​ ಪ್ಲೇ ಹೊಂದಿದೆ. ಇದು ಮೀಡಿಯಾಟೆಕ್‌ ಹಿಲಿಯೋ G96 ಪ್ರೊಸೆಸರ್‌ನಿಂದ ಚಾಲಿತವಾಗುತ್ತದೆ. ಇದುಕೂಡ ಟ್ರಿಪಲ್ ರಿಯರ್‌ ಕ್ಯಾಮೆರಾ ಸೆಟಪ್ ಅನ್ನು ಒಳಗೊಂಡಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ ಕ್ವಾಡ್ LED ಜೊತೆಗೆ 50-ಮೆಗಾಪಿಕ್ಸೆಲ್ ಸೆನ್ಸಾರ್‌ ಅನ್ನು ಒಳಗೊಂಡಿದೆ. ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್‌ ಸೆನ್ಸಾರ್‌ f/2.4 ಲೆನ್ಸ್‌ ಮತ್ತು ಮೂರನೇ ಕ್ಯಾಮೆರಾ 2 ಮೇಗಾಫಿಕ್ಸೆಲ್ ಸೆನ್ಸಾರ್‌ ಪಡೆದುಕೊಂಡಿದೆ. ಇದಲ್ಲದೆ 16 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಅಳವಡಿಸಲಾಗಿದೆ. 5000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 33W ವೇಗದ ಚಾರ್ಜಿಂಗ್‌ ಅನ್ನು ಬೆಂಬಲಿಸುತ್ತದೆ.

ನಿಮ್ಮ ಫೋನ್​ನಲ್ಲಿ ಸ್ಟೋರೇಜ್ ಫುಲ್ ಸಮಸ್ಯೆ ಎದುರಾಗಿದೆಯೇ?: ಹಾಗಿದ್ರೆ ಈ ಟ್ರಿಕ್ ಫಾಲೋ ಮಾಡಿ

(Infinix Note 11 and Infinix Note 11S launched in India Here is the Price and specs)