AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿಮ್ಮ ಫೋನ್​ನಲ್ಲಿ ಸ್ಟೋರೇಜ್ ಫುಲ್ ಸಮಸ್ಯೆ ಎದುರಾಗಿದೆಯೇ?: ಹಾಗಿದ್ರೆ ಈ ಟ್ರಿಕ್ ಫಾಲೋ ಮಾಡಿ

ನಮ್ಮಲ್ಲಿ ಹಲವರು ಸ್ಮಾರ್ಟ್ ಫೋನ್ ನಲ್ಲಿ cached ಡಾಟಾ, ಅಗತ್ಯವಿಲ್ಲದ ಫೈಲ್ ಗಳು, ಫೋಲ್ಡರ್ ಗಳನ್ನು ತುಂಬಿಸಿಕೊಂಡು ಅದು ವೇಗವಾಗಿ ಕೆಲಸ ಮಾಡದಂತೆ ಮಾತ್ರವಲ್ಲದೆ ಫೋನ್ ಸ್ಟೋರೇಜ್ ಅನ್ನೂ ಫುಲ್ ಮಾಡಿಬಿಟ್ಟಿರುತ್ತದೆ. ಇಂತಹ ಕೆಲವು ಸ್ಟೊರೇಜ್ ಸಮಸ್ಯೆಗಳನ್ನು ಬಗೆಹರಿಸಲು ಸುಲಭ ಪರಿಹಾರ ಇಲ್ಲಿದೆ.

ನಿಮ್ಮ ಫೋನ್​ನಲ್ಲಿ ಸ್ಟೋರೇಜ್ ಫುಲ್ ಸಮಸ್ಯೆ ಎದುರಾಗಿದೆಯೇ?: ಹಾಗಿದ್ರೆ ಈ ಟ್ರಿಕ್ ಫಾಲೋ ಮಾಡಿ
storage full issue
TV9 Web
| Updated By: Vinay Bhat|

Updated on:Dec 13, 2021 | 1:04 PM

Share

ಕಾಲ ಬದಲಾದಂತೆ ಮೊಬೈಲ್​ಗಳು (Mobile) ಕೂಡ ಅಪ್ಡೇಟ್ ಆಗುತ್ತಿವೆ. ನಾನಾ ಬಗೆಯ ಹೊಸ ಹೊಸ ಸ್ಮಾರ್ಟ್ ಫೋನುಗಳು (Smartphone) ಮಾರುಕಟ್ಟೆಗೆ ಲಗ್ಗೆಯಿಡುತ್ತಿವೆ. ಇತ್ತೀಚೆಗೆ ಬಿಡುಗಡೆ ಆಗುತ್ತಿರುವ ಎಲ್ಲ ಆಂಡ್ರಾಯ್ಡ್ (Android), ಐಫೋನ್​ಗಳ (iPhone) ಪ್ರೊಸೆಸರ್, RAM ಮತ್ತು ಅಧಿಕ ಸ್ಟೋರೆಜ್ ಸಾಮರ್ಥ್ಯದಿಂದಾಗಿ ಅತಿ ವೇಗವಾಗಿ ಕಾರ್ಯನಿರ್ವಹಿಸುತ್ತದೆ. ಆದರೆ ನಮ್ಮಲ್ಲಿ ಹಲವರು ಸ್ಮಾರ್ಟ್ ಫೋನ್ ನಲ್ಲಿ cached ಡಾಟಾ, ಅಗತ್ಯವಿಲ್ಲದ ಫೈಲ್ ಗಳು, ಫೋಲ್ಡರ್ ಗಳನ್ನು ತುಂಬಿಸಿಕೊಂಡು ಅದು ವೇಗವಾಗಿ ಕೆಲಸ ಮಾಡದಂತೆ ಮಾತ್ರವಲ್ಲದೆ ಫೋನ್ ಸ್ಟೋರೇಜ್ (Phone Storage) ಅನ್ನೂ ಫುಲ್ ಮಾಡಿಬಿಟ್ಟಿರುತ್ತದೆ. ಇದು ಸಾಮಾನ್ಯವಾಗಿ ಹೆಚ್ಚಿನವರಿಗೆ ಅನುಭವ ಆಗಿಯೇ ಇರುತ್ತದೆ. ಮೊಬೈಲ್​ನಲ್ಲಿ ಸ್ಥಳ ಇಲ್ಲದೇ ಇದ್ದಾಗ ಮೊಬೈಲ್ ಒಂದಲ್ಲ ಒಂದು ರೀತಿ ಹಾಳಾಗುತ್ತದೆ. ಇಂತಹ ಕೆಲವು ಸ್ಟೊರೇಜ್ ಸಮಸ್ಯೆಗಳನ್ನು ಬಗೆಹರಿಸಲು ಸುಲಭ ಪರಿಹಾರ ಇಲ್ಲಿದೆ.

ಆನ್ ಲೈನ್ ಫೋಟೋ ಮತ್ತು ವಿಡಿಯೋಗಳನ್ನು ಸೇವ್ ಮಾಡಬೇಡಿ. ಮೊಬೈಲ್ ನಲ್ಲಿ ಹೆಚ್ಚಿನ ಸ್ಥಳ ತಿನ್ನುವುದು ಫೋಟೋ ಮತ್ತು ವಿಡಿಯೋಗಳು. ಈ ತೊಂದರೆಯಿಂದ ದೂರವಾಗಲು ಫೋಟೋ ಮತ್ತು ವಿಡಿಯೋವನ್ನು ಮೊಬೈಲ್ ನಲ್ಲಿ ಸೇವ್ ಮಾಡುವ ಬದಲು ಕ್ಲೌಡ್ ಸ್ಟೊರೇಜ್ ನಲ್ಲಿ ಸೇವ್ ಮಾಡಬಹುದು. ಎಲ್ಲ ಗೂಗಲ್ ಅಕೌಂಟ್ ಜೊತೆ ಬಳಕೆದಾರರಿಗೆ 15 ಜಿಬಿ ಫ್ರೀ ಸ್ಟೊರೇಜ್ ವ್ಯವಸ್ಥೆ ಇರುತ್ತದೆ. ಹಾಗಾಗಿ ನೀವು ಅಲ್ಲಿ ಫೋಟೋ, ವಿಡಿಯೋವನ್ನು ಸೇವ್ ಮಾಡಬಹುದು.

16GB, 32GB, 128GB ಮೆಮೊರಿ ಹೊಂದಿರುವ ಸ್ಮಾರ್ಟ್ ಫೋನುಗಳು ಇಂದು ಹೆಚ್ಚು ಜನರ ಬಳಕೆಯಲ್ಲಿವೆ. ಹಾಗೆಂದು 16GB, 32GB, 128GB ಮೆಮೊರಿ ತುಂಬಿಸಿಕೊಳ್ಳಬಹುದು ಎಂದುಕೊಳ್ಳದಿರಿ. ಏಕೆಂದರೆ ಹೆಚ್ಚು ಸ್ಟೋರೇಜ್ ನಿಂದಾಗಿ ಸ್ಮಾರ್ಟ್ ಫೋನುಗಳು ನಿಧಾನವಾಗುತ್ತವೆ. ಅಂತೆಯೆ ಫೋನ್ ನಲ್ಲಿರುವ ಅಪ್ಲಿಕೇಷನ್ ಗಳನ್ನು ತೆರೆದಂತೆ ಮೊಬೈಲ್ ನಲ್ಲಿ ಅದು ಸ್ಟೋರ್ ಆಗುತ್ತಾ ಹೋಗುತ್ತದೆ. ಅದನ್ನು ನೀವು ಫೋನ್ ಸೆಟ್ಟಿಂಗ್ ನಲ್ಲಿ ಅಪ್ಲಿಕೇಶನ್ ಗೆ ಹೋಗಿ ಸುಲಭವಾಗಿ ತೆಗೆಯಬಹುದು.

ವಾಟ್ಸ್​ಆ್ಯಪ್​​ ಅತಿ ಹೆಚ್ಚು ಫೋನ್ ಸ್ಟೋರೇಜ್ ಖಾಲಿ ಮಾಡುತ್ತೆ. ಇದರಲ್ಲಿ ಶೇರ್ ಮಾಡಿದ ಫೋಟೋ, ವಿಡಿಯೋಗಳೆಲ್ಲವೂ ಗ್ಯಾಲರಿಯಲ್ಲಿ ಸೇವ್ ಆಗಿ ಫೋನ್ ಸ್ಟೋರೇಜ್ ಕಡಿಮೆಯಾಗುತ್ತೆ. ಹಾಗಾಗಿ  ವಾಟ್ಸ್​ಆ್ಯಪ್ ಸೆಟ್ಟಿಂಗ್ ಗೆ ಹೋಗಿ ಮೀಡಿಯಾ ವಿಜಿಬಲಿಟಿ ಆಪ್ಶನ್ ಅನ್ನು ಆಫ್ ಮಾಡಿ. ಹೀಗೆ ಮಾಡುವುದರಿಂದ ಫೋಟೋ, ವಿಡಿಯೋ ಫೋನ್ ನಲ್ಲಿ ಸೇವ್ ಆಗುವುದಿಲ್ಲ.

ಇನ್ನು ನಮ್ಮ ಮೊಬೈಲ್​ನಲ್ಲಿರುವ ಕೆಲವು ಅಪ್ಲಿಕೇಷನ್ ಗಳನ್ನು ನಾವು ಬಳಸುವುದೇ ಇಲ್ಲ. ಆದರೂ ಅದು ನಮ್ಮ ಮೊಬೈಲ್ ನಲ್ಲಿ ಇರುತ್ತದೆ. ಇಂತಹ ಅಪ್ಲಿಕೇಷನ್​ಗಳು ಸುಮ್ಮನೆ ಸ್ಟೋರೇಜ್ ಸಮಸ್ಯೆ ಉಂಟುಮಾಡುತ್ತವೆ. ಹಾಗಾಗಿ ಅಂತಹ ಅಪ್ಲಿಕೇಷನ್​ಗಳನ್ನು ಮೊದಲು ಅನ್ಇನ್‌ಸ್ಟಾಲ್ ಮಾಡಿ. ಅವಶ್ಯವಿದ್ದಾಗ ಮಾತ್ರ ಅವುಗಳನ್ನು ಇನ್​ಸ್ಟಾಲ್ ಮಾಡಿದರೆ ಉತ್ತಮ.

Best 5G Smartphone: ಭಾರತದಲ್ಲಿ ಅತಿ ಕಡಿಮೆ ಬೆಲೆಗೆ ಲಭ್ಯವಿದೆ 5G ಸ್ಮಾರ್ಟ್​ಫೋನ್ಸ್​: ಯಾವುವು ನೋಡಿ

(Facing iPhone Android phone storage full issue Here is the tricks to solve it)

Published On - 1:03 pm, Mon, 13 December 21

ಬ್ಯಾಡ್ಮಿಂಟನ್ ಆಡುವಾಗಲೇ ಹೃದಯಾಘಾತದಿಂದ 25 ವರ್ಷದ ಯುವಕ ಸಾವು
ಬ್ಯಾಡ್ಮಿಂಟನ್ ಆಡುವಾಗಲೇ ಹೃದಯಾಘಾತದಿಂದ 25 ವರ್ಷದ ಯುವಕ ಸಾವು
ರಕ್ಷಿತಾ, ವಿಜಯಲಕ್ಷ್ಮಿ ದರ್ಶನ್ ಪೋಸ್ಟ್ ಬಗ್ಗೆ ನಟಿ ರಮ್ಯಾ ನೇರಮಾತು
ರಕ್ಷಿತಾ, ವಿಜಯಲಕ್ಷ್ಮಿ ದರ್ಶನ್ ಪೋಸ್ಟ್ ಬಗ್ಗೆ ನಟಿ ರಮ್ಯಾ ನೇರಮಾತು
ನನ್ನ ಹೋರಾಟದಲ್ಲಿ ಕೈಜೋಡಿಸಿದವರಿಗೆಲ್ಲ ಧನ್ಯವಾದಗಳು: ರಮ್ಯಾ, ನಟಿ
ನನ್ನ ಹೋರಾಟದಲ್ಲಿ ಕೈಜೋಡಿಸಿದವರಿಗೆಲ್ಲ ಧನ್ಯವಾದಗಳು: ರಮ್ಯಾ, ನಟಿ
ನಿಮ್ಮ ದೇಶದ ಸಚಿವರ ಮೇಲೆ ನಂಬಿಕೆಯಿಲ್ವಾ?; ಸದನದಲ್ಲಿ ಗುಡುಗಿದ ಅಮಿತ್ ಶಾ
ನಿಮ್ಮ ದೇಶದ ಸಚಿವರ ಮೇಲೆ ನಂಬಿಕೆಯಿಲ್ವಾ?; ಸದನದಲ್ಲಿ ಗುಡುಗಿದ ಅಮಿತ್ ಶಾ
ಮಗನ ಮದುವೆ ಜೊತೆಗೆ 11 ಜೋಡಿಗಳಿಗೆ ವಿವಾಹ ಮಾಡಿಸಿದ ತಂದೆ
ಮಗನ ಮದುವೆ ಜೊತೆಗೆ 11 ಜೋಡಿಗಳಿಗೆ ವಿವಾಹ ಮಾಡಿಸಿದ ತಂದೆ
ಯಶ್, ಸುದೀಪ್ ಪತ್ನಿ-ಮಕ್ಕಳ ಬಗ್ಗೆಯೂ ಕೆಟ್ಟ ಕಮೆಂಟ್; ರಮ್ಯಾ ಬೇಸರ
ಯಶ್, ಸುದೀಪ್ ಪತ್ನಿ-ಮಕ್ಕಳ ಬಗ್ಗೆಯೂ ಕೆಟ್ಟ ಕಮೆಂಟ್; ರಮ್ಯಾ ಬೇಸರ
ರಸಗೊಬ್ಬರ ಅಭಾವ ಮತ್ತು ರೈತರ ಸಮಸ್ಯೆ ಬಗ್ಗೆ ನಡ್ಡಾಗೆ ಪತ್ರ ಬರೆದಿರುವ ಸಿಎಂ
ರಸಗೊಬ್ಬರ ಅಭಾವ ಮತ್ತು ರೈತರ ಸಮಸ್ಯೆ ಬಗ್ಗೆ ನಡ್ಡಾಗೆ ಪತ್ರ ಬರೆದಿರುವ ಸಿಎಂ
ದರ್ಶನ್ ಫ್ಯಾನ್ಸ್ ವಿರುದ್ಧ ರಮ್ಯಾ ದೂರು ಕೊಟ್ಟಿದ್ದಕ್ಕೆ ಇದು ಮುಖ್ಯ ಕಾರಣ
ದರ್ಶನ್ ಫ್ಯಾನ್ಸ್ ವಿರುದ್ಧ ರಮ್ಯಾ ದೂರು ಕೊಟ್ಟಿದ್ದಕ್ಕೆ ಇದು ಮುಖ್ಯ ಕಾರಣ
ಗೊಬ್ಬರಕ್ಕಾಗಿ ಪರದಾಡುತ್ತಿರುವ ಅನ್ನದಾತರು, ಅಂಗಡಿಗಳ ಮುಂದೆ ಉದ್ದುದ್ದ ಸಾಲ
ಗೊಬ್ಬರಕ್ಕಾಗಿ ಪರದಾಡುತ್ತಿರುವ ಅನ್ನದಾತರು, ಅಂಗಡಿಗಳ ಮುಂದೆ ಉದ್ದುದ್ದ ಸಾಲ
ರಾಹುಲ್ ಗಾಂಧಿ ಪ್ರಾಮಾಣಿಕತೆಗೆ ಅಭಿನಂದನೆ ಸಲ್ಲಿಸಬೇಕು: ಈಶ್ವರಪ್ಪ
ರಾಹುಲ್ ಗಾಂಧಿ ಪ್ರಾಮಾಣಿಕತೆಗೆ ಅಭಿನಂದನೆ ಸಲ್ಲಿಸಬೇಕು: ಈಶ್ವರಪ್ಪ