ನಥಿಂಗ್ ಫೋನ್1 (Nothing Phone 1) 2022ರಲ್ಲಿ ಬಿಡುಗಡೆಯಾದ ಬಹು ನಿರೀಕ್ಷಿತ ಫೋನ್ಗಳಲ್ಲಿ ಒಂದು. ಮಾರುಕಟ್ಟೆ ಈ ಫೋನ್ ಯಾವಾಗ ಲಗ್ಗೆಯಿಟ್ಟಿತೊ ಆವಾಗ ಜನರು ಇದಕ್ಕೆ ಮಾರು ಹೋಗಿದ್ದಾರೆ. ನಥಿಂಗ್ ಫೋನ್ 1 ತನ್ನ ವಿನ್ಯಾಸ ಮತ್ತು ವೈಶಿಷ್ಟ್ಯತೆಗಳಿಂದ ಟಾಪ್ ಫೋನ್ಗಳಲ್ಲಿ ಒಂದಾಗಿದೆ. ಸದ್ಯ ಬಳಕೆದಾರರು ಈ ನಥಿಂಗ್ ಫೋನ್ 1ನ್ನು ಅತ್ಯಂತ ಕಡಿಮೆ ಬೆಲೆಗೆ ಪಡೆಯಬಹುದಾಗಿದೆ. ಅದು ಹೇಗಂದ್ರೆ ಫ್ಲಿಪ್‌ಕಾರ್ಟ್ (Flipkart) ಸದ್ಯ ಬಿಗ್ ಬಚತ್ ಧಮಾಲ್ ಸೇಲ್ ಆಫರ್‌ಗಳನ್ನು ಬಳಸಿಕೊಳ್ಳುವ ಮೂಲಕ ಬಳಕೆದಾರರು ಸ್ಮಾರ್ಟ್ಫೋನ್ನ್ನು 3,124 ರೂ.ಗೆ ಖರೀದಿಸಬಹುದಾಗಿದೆ. ಈ ನಥಿಂಗ್ ಫೋನ್ 1ನ ಆರಂಭಿಕ ಬೆಲೆಯನ್ನು 32,999 ರೂ. ಎಂದು ನಿಗದಿ ಮಾಡಲಾಗಿತ್ತು. ಆದರೆ ಬಳಿಕ ಬೆಲೆಯನ್ನು 33,999 ರೂ. ಹೆಚ್ಚಿಸಲಾಗಿದೆ. ಆದಾಗ್ಯೂ, ನೀವು ಪ್ರಸ್ತುತ ಮಾರಾಟದಲ್ಲಿ ಫ್ಲಿಪ್‌ಕಾರ್ಟ್‌ನಲ್ಲಿ ನಥಿಂಗ್ ಫೋನ್ 1ನ್ನು ಕಡಿಮೆ ಬೆಲೆಗೆ ಪಡೆಯಬಹುದಾಗಿದೆ.
ನಥಿಂಗ್ ಫೋನ್ 1, 8 ಜಿಬಿ ಮತ್ತು 128ಜಿಬಿ ಸ್ಟೋರೇಜ್ ಮಾದರಿ ಹೊಂದಿರುವ ಫ್ಲಿಪ್‌ಕಾರ್ಟ್‌ನಲ್ಲಿ 27,499 ರೂಗಳಲ್ಲಿ ಪಟ್ಟಿಮಾಡಲಾಗಿದೆ. ಹೆಚ್ಚುವರಿಯಾಗಿ, ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕಾರ್ಡ್‌ನೊಂದಿಗೆ ಮಾಡಿದ ವಹಿವಾಟಿನ ಮೇಲೆ 5% ಕ್ಯಾಶ್ಬ್ಯಾಕ್ನ್ನು ಸಹ ನೀಡಲಾಗುತ್ತಿದ್ದು, ಇದು ಮೊಬೈಲ್ ಬೆಲೆಯನ್ನು 26,124 ರೂ. ಕಡಿಮೆಯಾಗುತ್ತದೆ. ಹೆಚ್ಚುವರಿಯಾಗಿ, ಫ್ಲಿಪ್‌ಕಾರ್ಟ್ ಹಳೆಯ ಸ್ಮಾರ್ಟ್‌ಫೋನ್‌ಗೆ ಬದಲಾಗಿ 23,000 ರೂ. ನೀಡುತ್ತಿದೆ. ಈ ಎಲ್ಲಾ ಆಫರ್ಗಳೊಂದಿಗೆ ನಥಿಂಗ್ ಫೋನ್ (1) ಫ್ಲಿಪ್‌ಕಾರ್ಟ್‌ನಲ್ಲಿ 3,124 ರೂ.ಗಳಿಗೆ ಲಭ್ಯವಿದೆ.
ನಥಿಂಗ್ ಫೋನ್ (1) ಕಪ್ಪು ಮತ್ತು ಬಿಳಿ ಬಣ್ಣದಲ್ಲಿ ಲಭ್ಯವಿದ್ದು, ಅತ್ಯಾಧುನಿಕ ಗ್ಲಿಫ್ ಬಳಕೆದಾರ ಇಂಟರ್ಫೇಸ್ನ್ನು ಹೊಂದಿದೆ. ಇದು 6.55-ಇಂಚಿನ ಪೂರ್ಣ HD+ OLED ಪರದೆಯನ್ನು ಹೊಂದಿದೆ. ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ಲೇಯರ್ ಮತ್ತು HDR10+ ಆಗಿದೆ. ಫೋನ್‌ನ ಹಿಂಬದಿಯ ಕ್ಯಾಮೆರಾ ಡ್ಯುಯಲ್ 50 MP, ಮುಂಭಾಗದ ಕ್ಯಾಮೆರಾ 16MP ಹೊಂದಿದೆ. Sony IMX766 ಫ್ಲ್ಯಾಗ್‌ಶಿಪ್ ಕ್ಯಾಮೆರಾ ಚಾಲಿತವಾಗಿದೆ. ಇದು ರಾತ್ರಿ ಮೋಡ್ನ್ನು ಸಹ ಹೊಂದಿದೆ. ಮತ್ತು ಈ ಸ್ಮಾರ್ಟ್‌ಫೋನ್ 4,500mAh ಬ್ಯಾಟರಿಯನ್ನು ಹೊಂದಿದೆ.
ಇದನ್ನೂ ಓದಿ: Tech Tips: ಹೊಸ ವರ್ಷದ ಪ್ರಯುಕ್ತ EMI ನಲ್ಲಿ ಸ್ಮಾರ್ಟ್‌ಫೋನ್ ಖರೀದಿಸುವ ಮುನ್ನ ಈ ವಿಚಾರ ತಿಳಿದುಕೊಳ್ಳಿ
ನಥಿಂಗ್ ಫೋನ್ (1)ನ್ನು ಒಮ್ಮೆ ಚಾರ್ಜ್ ಮಾಡಿದರೆ 18ಗಂಟೆಗಳವರೆಗೆ ಬಳಕೆ ಮಾಡಬಹುದಾಗಿದೆ. ಎರಡು ದಿನಗಳವರೆಗೆ ಸ್ಟ್ಯಾಂಡ್ಬೈ ಮೋಡ್ನಲ್ಲಿ ಸಹ ಬಳಸಬಹುದಾಗಿದೆ. ಫೋನ್ ವೇಗದ ಚಾರ್ಜಿಂಗ್ ಸಾಮರ್ಥ್ಯವನ್ನು ಒಳಗೊಂಡಿದೆ. ಕೇವಲ 30 ನಿಮಿಷಗಳಲ್ಲಿ 0 ದಿಂದ 50ಗೆ ಚಾರ್ಜ್ ಮಾಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಇನ್ನು ಈ ಸ್ಮಾರ್ಟ್ಫೋನ್ನಲ್ಲಿ ಕಾಲ್ ಬರುತ್ತಿರುವಾಗ, ಮೆಸೇಜ್ ಬರುವಾಗ, ನೋಟಿಫಿಕೇಶನ್ಗಳು ಬಂದಾಗ, ಚಾರ್ಜ್ಗೆ ಅಳವಡಿಸಿದಾಗ ಗೊತ್ತಾಗುವ ಕಾರಣಕ್ಕಾಗಿ ಮೊಬೈಲ್ನ ಹಿಂಭಾಗದಲ್ಲಿ ಲೈಟ್ಗಳನ್ನು ಅಳವಡಿಸಲಾಗಿದೆ.
ಮತ್ತಷ್ಟು ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.